Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
2023-24ನೇ ಆರ್ಥಿಕ ವರ್ಷ ಕಳೆದು 2024-25 ನೇ ಸಾಲಿನ ಕೇಂದ್ರದ ಬಜೆಟ್ ಮಂಡನೆಗೆ ಸಿದ್ಧತೆ ತಯಾರಾಗಿದೆ. ಇದರ ನಡುವೆ ಈ ಆರ್ಥಿಕ ವರ್ಷದ ಆಯವ್ಯಯ ಆಧಾರದ ಮೇಲೆ ಯಾವೆಲ್ಲ ಬದಲಾವಣೆಗಳನ್ನು ತರಬಹುದು ಎನ್ನುವುದರ ಲೆಕ್ಕಾಚಾರವು ನಡೆದಿದ್ದು, ಆ ಪ್ರಕಾರವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಸಾಮಾನ್ಯವಾಗಿ ಜನರು ಬ್ಯಾಂಕ್ ಗಳಲ್ಲಿ ಹಣ ಉಳಿಸುವುದು ಮಾತ್ರವಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಕೂಡ ಅವಲಂಬಿಸುತ್ತಾರೆ, ಬ್ಯಾಂಕ್ ಗಳಲ್ಲಿ ಕೃಷಿ ಸಾಲ, ಗೃಹ ಸಾಲ, ಚಿನ್ನದ ಮೇಲೆ ಸಾಲ, ಶಿಕ್ಷಣ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳು ಸಿಗುತ್ತವೆ. ಇದರ ಜೊತೆಗೆ ವೈಯಕ್ತಿಕ ಸಾಲ ಕೂಡ ಸೇರಿದೆ.
ಈ ರೀತಿ ಯಾವುದೇ ರೂಪದ ಸಾಲ ಪಡೆದುಕೊಳ್ಳುವುದಕ್ಕಾಗಿ ಬ್ಯಾಂಕ್ ಗಳನ್ನು ಸಂಪರ್ಕಿಸಬೇಕು ಎಂದುಕೊಂಡಿರುವವರಿಗೆ ಮತ್ತು ಈಗಾಗಲೇ ಬ್ಯಾಂಕ್ ಗಳಲ್ಲಿ ಸಾಲ ಪಡೆದುಕೊಂಡಿರುವ ಗ್ರಾಹಕರಿಗೆ RBI ನಿಂದ ಒಂದು ಶಾ’ಕಿಂ’ಗ್ ನ್ಯೂಸ್ ಇದೆ.
ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ.!
RBI ಬ್ಯಾಂಕ್ ನಿಯಮಗಳ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ ಮತ್ತು ಪ್ರತಿ ಆರ್ಥಿಕ ವರ್ಷದ ಅಂತ್ಯ ಅಥವಾ ಆರಂಭದಲ್ಲಿ ಸಾಕಷ್ಟು ನಿಯಮ ಬದಲಾವಣೆ ಬಗ್ಗೆ ಮತ್ತು ಬ್ಯಾಂಕ್ ಗಳ ಉಳಿತಾಯ ಯೋಜನೆಗಳು ಮತ್ತು ಸಾಲ ಯೋಜನೆಗಳ ಬಡ್ಡಿದರದ ಮೇಲಿನ ವ್ಯತ್ಯಾಸಗಳು ನಿರೀಕ್ಷಿತ.
ಇವು RBI ರೆಪೋದರವನ್ನು ಕೂಡ ಅವಲಂಬಿಸಿರುತ್ತವೆ ಅಥವಾ ಬ್ಯಾಂಕ್ ಗಳಿಗೆ RBI ಕೊಡುವ ಸೂಚನೆಯನ್ನು ಅನುಸರಿಸಿ ಕೂಡ ವ್ಯತ್ಯಾಸವಾಗಬಹುದು. ಅದೇ ರೀತಿಯಾಗಿ ಏಪ್ರಿಲ್ 2024 ರ ವೇಳೆಗೆ ಸಾಲದ ಮೇಲಿನ ಬಡ್ಡಿದರ ವ್ಯತ್ಯಾಸವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಬ್ಯಾಂಕ್ ಗಳಲ್ಲಿ ನೀಡುವ ಸಾಲವನ್ನು ಸೆಕ್ಯೂರ್ಡ್ ಹಾಗೂ ಅನ್ ಸೆಕ್ಯೂರ್ಡ್ ಸಾಲಗಳು ಎಂದು ಎರಡು ರೀತಿ ವಿಭಾಗಿಸಲಾಗುತ್ತದೆ. ಇದರಲ್ಲಿ ಸೆಕ್ಯೂರ್ಡ್ ಸಾಲಗಳು ನಾವು ಆಸ್ತಿಯನ್ನು ಅಡಮಾನ ಇಟ್ಟು ತೆಗೆದುಕೊಳ್ಳುವ ಸಾಲಗಳು ಎಂದು ಹೇಳಬಹುದು ಉದಾಹರಣೆಗೆ ಕೃಷಿ ಸಾಲಕ್ಕಾಗಿ ರೈತ ತನ್ನ ಜಮೀನನ್ನು ಅಡ ಇಟ್ಟಿರುತ್ತಾನೆ.
ಈ ವಾಹನಗಳ ಫಾಸ್ಟ್ ಟ್ಯಾಗ್ ಬಂದ್ ಆಗಲಿದೆ ಕೆಂದ್ರ ಸರ್ಕಾರದ ಆದೇಶ.!
ಬಂಗಾರದ ಮೇಲೆ ಸಾಲ ಪಡೆದುಕೊಳ್ಳುವವರು ತಮ್ಮ ಒಡವೆಗಳನ್ನು ಅಡ ಇಟ್ಟಿರುತ್ತಾರೆ ಅಥವಾ ವ್ಯಾಪಾರ ವ್ಯವಹಾರಕ್ಕಾಗಿ ಸೈಟು ಮನೆ ಇತ್ಯಾದಿಗಳನ್ನು, ವಾಹನಗಳ ಮೇಲಿನ ಸಾಲ ಇವುಗಳು ಸೇರುತ್ತವೆ, ಇವೆಲ್ಲವೂ ಸೆಕ್ಯೂರ್ಡ್ ಸಾಲಗಳು ಎನಿಸಿಕೊಳ್ಳುತ್ತವೆ.
ಈ ಸೆಕ್ಯೂರ್ಡ್ ಸಾಲಗಳನ್ನು ಹೊರತು ಪಡಿಸಿ ಅನ್ ಸೆಕ್ಯೂರ್ಡ್ ಸಾಲದ ಪಟ್ಟಿಗೆ ವೈಯಕ್ತಿಕ ಸಾಲಗಳು ಸೇರುತ್ತವೆ, ಯಾಕೆಂದರೆ ವೈಯಕ್ತಿಕ ಸಾಲ ತೆಗೆದುಕೊಳ್ಳುವವರಿಗೆ ಯಾವುದೇ ಆಧಾರ ಇಲ್ಲದೆ ಇದ್ದರೂ ಕೂಡ ಸಾಲ ನೀಡಲಾಗುತ್ತದೆ ಹಾಗಾಗಿ ಇವುಗಳನ್ನು ಬಹಳ ರಿಸ್ಕ್ ಫ್ಯಾಕ್ಟರ್ ಇರುವ ಸಾಲಗಳು ಎನ್ನಲಾಗುತ್ತದೆ.
ಸೆಕ್ಯೂರ್ಡ್ ಸಾಲಗಳ ರಿಸ್ಕ್ ಪರ್ಸೆಂಟೇಜ್ 100% ಆದರೆ ಅನ್ ಸೆಕ್ಯೂರ್ಡ್ ರಿಸ್ಕ್ ಸಾಲಗಳ ಪರ್ಸೆಂಟೇಜ್ 125% ಎಂದು ಹೇಳಲಾಗುತ್ತದೆ. ಹಾಗಾಗಿ ಈ ರೀತಿ ಅನ್ ಸೆಕ್ಯೂರ್ಡ್ ಸಾಲಗಳ ಬಡ್ಡಿ ದರದ ಹೆಚ್ಚಳ ಮಾಡುವಂತೆ ಸೂಚನೆ ನೀಡಿದೆ.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಮೊಬೈಲ್ ಫೋನ್
ಅದರ ಪ್ರಕಾರವಾಗಿ ದೇಶದ ವಿವಿಧ ಬ್ಯಾಂಕ್ಗಳು ಮುಂದಿನ ಆರ್ಥಿಕ ವರ್ಷದಿಂದ ಪರ್ಸನಲ್ ಲೋನ್ ಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಿದೆ. ಹಾಗಾಗಿ ಬ್ಯಾಂಕ್ ಗಳ ಸಾಲ ಪಡೆದ ಗ್ರಾಹಕನಿಗೆ ಸ್ವಲ್ಪ ಹೆಚ್ಚಿನ ಮೊತ್ತದ ಹೊರೆ ಆಗಲಿದೆ ಈ ಬಗ್ಗೆ ಶೀಘ್ರದಲ್ಲಿ RBI ಅಧಿಕೃತವಾಗಿ ಘೋಷಣೆ ಮಾಡಿ ತಿಳಿಸಲಿದೆ.