ದೇಶದಲ್ಲಿ ಹಣದುಬ್ಬರವನ್ನು (Inflation control) ನಿಯಂತ್ರಿಸಲು ಸರ್ಕಾರಗಳು (government) ಅನೇಕ ರೀತಿಯಲ್ಲಿ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ LPG ಗ್ಯಾಸ್ ಸಿಲೆಂಡರ್ ಗಳ ಬೆಲೆ ಇಳಿಸಿ (LPG Gas Cylinder Price) ದೇಶದ ಜನರಿಗೆ ಅನುಕೂಲತೆ ಮಾಡಿಕೊಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ನಮ್ಮ ರಾಜ್ಯದಲ್ಲೀಗ ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಕಾರ್ಡ್ (Karnata state government Guarantee Schemes) ಯೋಜನೆಗಳು ಹೆಚ್ಚು ಪ್ರಚಾರದಲ್ಲಿದೆ.
ಇವುಗಳನ್ನು ಕೂಡ ಜಾರಿಗೆ ತರುವ ಮುನ್ನ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು (C.M Siddaramaih) ಕಾಂಗ್ರೆಸ್ ಸರ್ಕಾರವು ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಗ್ಗಿಸಲು ಈ ಯೋಜನೆ ಜಾರಿಗೆ ತಂದಿರುವುದಾಗಿ ಹೇಳಿದ್ದರು. ಅದೇ ರೀತಿಯಲ್ಲಿ ಈಗ ಕೇಂದ್ರ ಸರ್ಕಾರವು ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
LIC ಕಟ್ಟುತ್ತಿದ್ದವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆ ಇಳಿಸಿರುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಮಂಗಳವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Minister Anuragh Takoor ) ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿಯೇ ದೇಶದಲ್ಲಿ ಲೋಕಸಭಾ ಚುನಾವಣೆ (Parliment election) ಇದೆ ಹಾಗಾಗಿ ಆ ಚುನಾವಣೆ ಲೆಕ್ಕಾಚಾರದಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನುವ ಆರೋಪವು ಪ್ರತಿಪಕ್ಷಗಳಿಂದ ಕೇಳಿಬರುತ್ತದೆ. ಇದನ್ನು ಸಂಪೂರ್ಣವಾಗಿ ನಿರಾಕರಿಸರುವ ಠಾಕೂರ್ ಅವರು ದೇಶದ ಮಹಿಳೆಯರು ಈಗ ಓಣಂ ಹಾಗೂ ರಕ್ಷಾಬಂಧನ ಹಬ್ಬದ ಸಂತಸದಲ್ಲಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಅನುಕೂಲತೆ ಮಾಡಿಕೊಡುವ ಉಡುಗೊರೆ ರೂಪದಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಇರುವ ಮತ್ತೊಂದು ಗುಡ್ ನ್ಯೂಸ್ ಏನೆಂದರೆ ಈ ವರ್ಷ ಕೂಡ 2023-24 ನೇ ಸಾಲಿನಲ್ಲಿ 75 ಲಕ್ಷ ಕುಟುಂಬಗಳಿಗೆ ಉಜ್ವಲ್ ಯೋಜನೆ (Ujwal Scheme ) ಮೂಲಕ ಉಚಿತವಾಗಿ ಗ್ಯಾಸ್ ಕಲೆಕ್ಷನ್ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವುದು. ಈ ಮಾಹಿತಿಯನ್ನು ಕೂಡ ಸಚಿವರು ಹಂಚಿಕೊಂಡಿದ್ದಾರೆ. ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಕಲೆಕ್ಷನ್ ಪಡೆದಿರುವವರಿಗೆ ಈಗಾಗಲೇ ಪ್ರತಿ ಸಿಲಿಂಡರ್ ಗೆ 200 ರೂಪಾಯಿವರೆಗೆ ಸಬ್ಸಿಡಿ (Subsidy) ಸಿಗುತ್ತಿದೆ.
ಈಗ ಸರ್ಕಾರ ಎಲ್ಲಾ ಸಿಲಿಂಡರ್ ಬಳಕೆದಾರರಿಗೂ 200 ರೂಪಾಯಿ ಇಳಿಸಿರುವುದರಿಂದ ಉಜ್ವಲ್ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಒಟ್ಟು 400 ಹಾಗೂ ಉಳಿದ ಬಳಕೆದಾರರಿಗೆ 200 ರೂಪಾಯಿ ಗ್ಯಾಸ್ ಬೆಲೆ ಕಡಿತಗೊಳ್ಳಲಿದೆ. ಈಗ ಹೊಸದಾಗಿ ಸೇರ್ಪಡೆಯಾಗುವ 75 ಲಕ್ಷ ಬಳಕೆದಾರರು ಸೇರಿ ಉಜ್ವಲ ಯೋಜನೆಯಡಿ 10.35 ಕೋಟಿ ಫಲಾನುಭವಿಗಳಾಗಲಿದ್ದಾರೆ ಎನ್ನುವ ಅಂಕಿ ಅಂಶವನ್ನು ಕೂಡ ಸಚಿವರು ತಿಳಿಸಿದ್ದಾರೆ.
SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್ ಇಂದಿನಿಂದ ಹೊಸ ಸೇವೆ ಜಾರಿ.!
ಒಂದು ವರ್ಷದಲ್ಲಿ 12 ಸಿಲಿಂಡರ್ ಬಳಸುವ Bharath, Indian, HP ಯಾವುದೇ ಕಂಪನಿಯಿಂದ ಗ್ಯಾಸ್ ಸಂಪರ್ಕ ಪಡೆದಿರುವ ಕುಟುಂಬಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಹಿಂದೆ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು LPG ಬಳಕೆದಾರರಿಗೆ ಅದರ ಬೆಲೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ನೇರವಾಗೆ ಗ್ರಾಹಕರ ಖಾತೆಗಳಿಗೆ ಪ್ರತಿ ಖರೀದಿ ಮೇಲೆ ಸಬ್ಸಿಡಿ ಹಣವನ್ನು ಜಮೆ ಮಾಡುತ್ತಿತ್ತು.
ಆದರೆ ಕೊರನ ಲಾಕ್ಡೌನ್ ಸಂದರ್ಭದಲ್ಲಿ ಆದ ಆರ್ಥಿಕ ಹೊಡೆತದ ಕಾರಣದಿಂದಾಗಿ ಇದನ್ನು ಸ್ಥಗಿತಗೊಳಿಸಲಾಗಿತ್ತು. ಪದೇ ಪದೇ ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಿರುವುದರ ಮೇಲೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿ ಬೆಲೆ ಇಳಿಸುವಂತೆ ಸರ್ಕಾರವನ್ನು ಕೋರುತ್ತಿದ್ದರು. ಅಂತಿಮವಾಗಿ ಸರ್ಕಾರ ಇದಕ್ಕೆ ಸ್ಪಂದಿಸುವ ಮನಸ್ಸು ಮಾಡಿದೆ.
SSC ಬೃಹತ್ ನೇಮಕಾತಿ, 7547 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.! ವೇತನ 69,100/-