ಟಾಟಾ ಸ್ಟೀಲ್ ಕಂಪನಿಯು ಭಾರತದ ಹೆಸರಾಂತ ಇಂಡಸ್ಟ್ರಿಗಳಲ್ಲಿ ಒಂದು. ಸದಾ ಕಾಲ ತನ್ನ ಗ್ರಾಹಕರ ಆಸಕ್ತಿ ಹಾಗೂ ಅವಶ್ಯಕತೆಗೆ ತಕ್ಕನಾದ ಪ್ರಾಡಕ್ಟ್ ಗಳನ್ನು ಒದಗಿಸುತ್ತಾ ದೇಶದಲ್ಲಿ ನಂಬಿಕಸ್ಥ ಬ್ರಾಂಡ್ ಗಳಲ್ಲಿ ಒಂದಾಗಿರುವ ಟಾಟಾ ಸ್ಟೀಲ್ ಈಗ ಕಾಲಕ್ಕೆ ತಕ್ಕ ಹಾಗೆ ಬದಲಾಗಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ.
ಅದೇನೆಂದರೆ, ಈಗಿನ ಕಾಲದ ಫಾಸ್ಟೆಸ್ಟ್ ಜಗತ್ತಿನಲ್ಲಿ ಯಾರಿಗೂ ಯಾವುದಕ್ಕೂ ಕಾಯಲು ಸಮಯವಿಲ್ಲ, ಕೆಲವು ತಕ್ಷಣಕ್ಕೆ ಸ್ಪಾಂಟೇನಿಯಸ್ ಆಗಿ ಆಗಬೇಕು ಎಂದುಕೊಳ್ಳುವವರಿಗೆ ಸಾಂಪ್ರದಾಯಿಕವಾಗಿ ವರ್ಷಗಳ ವರೆಗೆ ಸಮಯ ತೆಗೆದುಕೊಂಡು ಮನೆ ನಿರ್ಮಾಣ ಮಾಡುವ ಸಾವದಾನವೂ ಇರುವುದಿಲ್ಲ.
ಇಂತಹವರಿಗೆ ಟಾಟಾ ಸ್ಟೀಲ್ ಕಂಪನಿಯಿಂದ ಒಂದು ಗುಡ್ ನ್ಯೂಸ್ ಇದೆ. ಅದೇನೆಂದರೆ, ಟಾಟಾ ಕಡೆಯಿಂದ ಫ್ರೀ ಫ್ಯಾಬ್ರಿಕೇಟೆಡ್ ನಿರ್ಮಾಣ ಮಾಡುತ್ತಿದೆ ಇದರ ಕುರಿತ ಮಾಹಿತಿ ಹೀಗಿದೆ ನೋಡಿ. ಈ ಟಾಟಾ ಸಂಸ್ಥೆಯಲ್ಲಿ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ಎರಡು ರೀತಿಯ ಮನೆಗಳನ್ನು ಕೂಡ ನಿರ್ಮಾಣ ಮಾಡಿಕೊಡುತ್ತಿದ್ದಾರೆ.
ಈ ಸುದ್ದಿ ಓದಿ:- 1 ಮರದಲ್ಲಿ 300 ಕಾಯಿವರೆಗೂ ಫಲ ಸಿಗುತ್ತೆ.! ತೆಂಗಿನ ಮರ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ಅಧಿಕ ಲಾಭ ಪಡೆಯಬಹುದು.!
ರೆಸಿಡೆನ್ಸಿಯಲ್ ಮನೆಗಳ ಬಗ್ಗೆ ಹೇಳುವುದಾದರೆ ಟಾಟಾ ಸ್ಟೀಲ್ ಅವರು ನೆಸ್ಟ್ ಇನ್ (nest in) ಎನ್ನುವ ಹೊಸ ಬ್ರಾಂಡ್ ಮೂಲಕ ಇದನ್ನು ಪರಿಚಯ ಮಾಡುತ್ತಿದ್ದಾರೆ. ಇದು ರೊಬೋಸ್ಟ್ ಕ್ವಾಲಿಟಿ ಮನೆಯಾಗಿದ್ದು, ತುಂಬ ವರ್ಷಗಳವರೆಗೆ ಬಾಳಿಕೆ ಬರುವಂತಹ ಮನೆಯಾಗಿದೆ.
6 ವಾರಗಳ ಕಾಲದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಿದ್ದಾರೆ. ಟರ್ನ್ ಕೀ ಸ್ಟ್ರಕ್ಚರ್, ಬೇಸ್, ಸ್ಟ್ರಕ್ಚರ್, ವಾಲಿಂಗ್, ರೂಫಿಂಗ್, ಫ್ಲೋರಿಂಗ್ ಈ ರೀತಿ ಎಲ್ಲಾ ವ್ಯವಸ್ಥೆ ಮಾಡಲು ಕೇವಲ 6 ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಟಾಟಾ ಸಂಸ್ಥೆಯವರ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಮನೆ ನಿರ್ಮಾಣ ಯೋಜನೆಯು ಎಷ್ಟು ಅದ್ಭುತವಾಗಿದೆ ಎಂದರೆ ಎಂತಹದೇ ಭೂಕಂಪ ಮತ್ತು ಸುನಾಮಿಯಾಗುವ ಸಂದರ್ಭ ಬಂದರೂ ಈ ಮನೆಗಳಿಗೆ ಏನು ಆಗುವುದಿಲ್ಲ.
ಇವರ ಹಬಿನೆಸ್ಟ್ ಹೌಸ್ ಮನೆ ನಿರ್ಮಾಣದ ಬಗ್ಗೆ ಹೇಳುವುದಾದರೆ ಲೈಟ್ ವೇಟ್ ಸ್ಟೀಲ್ ಬಳಕೆ ಮಾಡಿ ನಿರ್ಮಿಸುತ್ತಾರೆ. ಮನೆ ಮಾತ್ರವಲ್ಲದೇ ಪ್ಲಾಂಟ್ ಆಫೀಸ್, ಇಂಡಸ್ಟ್ರಿಯಲ್ ಬಿಲ್ಡಿಂಗ್, ಇನ್ಸ್ಟಿಟ್ಯೂಷನಲ್ ಬಿಲ್ಡಿಂಗ್, ಕಮರ್ಷಿಯಲ್ ಬಿಲ್ಡಿಂಗ್, ಕಮ್ಯುನಿಟಿ ಸೆಂಟರ್, ಮಾಸ್ ಹೌಸಿಂಗ್ ಇತ್ಯಾದಿ ವಿನ್ಯಾಸದ ಮನೆಗಳ ನಿರ್ಮಾಣ ಕೂಡ ಮಾಡಿಕೊಡುತ್ತಾರೆ.
ಈ ಸುದ್ದಿ ಓದಿ:- ದಾನವಾಗಿ ಕೊಟ್ಟ ಆಸ್ತಿಯನ್ನು ಮರಳಿ ಪಡೆಯಲು ಅವಕಾಶ ಇದೆಯೇ.? ಇದರ ಬಗ್ಗೆ ಕಾನೂನು ಹೇಳುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಪ್ರಿ ಫ್ಯಾಬ್ರಿಕೆಟಡ್ ಸ್ಟ್ರಕ್ಚರ್ ಆಗಿರುವ ಕಾರಣ ಜಾಗದ ಉಳಿತಾಯವೂ ಆಗುತ್ತದೆ, ಇದರ ಬಗ್ಗೆ ಅಲ್ಲಗಳೆಯುವಂತಿಲ್ಲ. ಬಿಲ್ಡಿಂಗ್ ಅನುಸಾರ 6 – 8 ವಾರಗಳ ವ್ಯತ್ಯಾಸದ ಸಮಯದಲ್ಲಿ ಈ ಮನೆ ನಿರ್ಮಾಣ ಮಾಡುತ್ತಾರೆ, ಗ್ರೌಂಡ್ ಫ್ಲೋರ್ ಜೊತೆಗೆ 3 ಫ್ಲೋರ್ ವರೆಗೂ ನಿರ್ಮಾಣ ಮಾಡಿ ಕನ್ಸ್ಟ್ರಕ್ಷನ್ ಮಾಡಿ ಕೊಡುತ್ತಾರೆ.
ಇವರು S.N ಬೋರ್ಡ್ ಬಳಕೆ ಮಾಡಿರುವ ಕಾರಣ ಹುಳ ಬೀಳುತ್ತದೆ ಎನ್ನುವ ಭಯವೂ ಇರುವುದಿಲ್ಲ. ಈ ಮನೆಗಳು ತುಂಬಾ ಲೈಟ್ ವೇಟ್ ಆಗಿದ್ದು, ಇದಕ್ಕೆ ಬಳಸಿರುವ 75% ಮೆಟೀರಿಯಲ್ ಗಳನ್ನು ರೀ ಯೂಸ್ ಮಾಡಬಹುದು. ಕಾಂಕ್ರೀಟ್ ಫೌಂಡೇಶನ್ ಜೊತೆಗೆ ಫ್ಲೋರ್ ಫಿನಿಷಿಂಗ್ ಇರುತ್ತದೆ, 0.8mm ಸ್ಟೀಲ್ ಮತ್ತು 250m ಸ್ಟೀಲ್ ಕೂಡ ಬಳಕೆ ಮಾಡುವರು, ಸ್ಟ್ರಕ್ಚರ್’ಗೆ ತಕ್ಕಂತೆ ಹೆಚ್. ಆರ್. ಸ್ಟೀಲ್ ಬಳಕೆ ಮಾಡಲಾಗುತ್ತದೆ.
ಎಲ್.ಜಿ. ಎಸ್. ಎಫ್. ಫ್ಲೋರ್ ಜಾಯಿಂಟ್, ಫ್ಲೋರಿಂಗ್ ಬೋರ್ಡ್’ಸ್ ಆಂಡ್ ಟೈಲ್ಸ್ ಬಳಕೆ ಮಾಡಲಾಗುತ್ತದೆ, ಡೇಕಿಂಗ್ ಕಿಂಗ್ ವಿಥ್ ಕಾಂಕ್ರೀಟ್ ಅಂಡ್ ಟೈಲ್ಸ್, ಡೇಕಿಂಗ್ ಕಿಂಗ್ ವಿಥ್ ಕಾಂಕ್ರೀಟ್ ಅಂಡ್ ಲ್ಯಮಿನೆಟೆಡ್ ವುಡನ್ ಫ್ಲೋರ್ ಬಳಸಿ ಫ್ಲೋರಿಂಗ್ ಮಾಡಲಾಗುತ್ತದೆ. ಜಿಪ್ಸಮ್ ಬೋರ್ಡ್ ಟಾಪ್ ಲೆಯರ್ ನಲ್ಲಿ ಬಳಸಿ, F.C.P ಬೋರ್ಡ್ಸ್, ಎಕ್ಸ್ಟಿರಿಯರ್ ವಾಲ್ ಪೇಪರ್ ಬಳಕೆ ಮಾಡಲಾಗುತ್ತದೆ.
ಈ ಸುದ್ದಿ ಓದಿ:- ಕಡಿಮೆ ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು, ಕನಿಷ್ಠ ಒಂದು ಲಕ್ಷ ಆದಾಯ ಗ್ಯಾರಂಟಿ.!
ರೂಫ್ ಗೆ ಕಲರ್ ಕೋಟೆಡ್ ಶೀಟ್ ಹಾಕಿ, ರೂಫ್ ಸಿಂಗಲ್ ಕ್ಲೇ ಟೈಲ್ಸ್ ಕೂಡ ಹಾಕುತ್ತಾರೆ. ಇದಾದ ನಂತರ ಡಿಸೈನ್ ಇಂಟೀರಿಯರ್ ಜನರ ಆಯ್ಕೆಯದ್ದೇ ಆರಿಸಿಕೊಳ್ಳಬಹುದು. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಟಾಟಾ ಕಂಪನಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ ಅಥವಾ https://www.nestin.co.in/habinest ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.