ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!

 

WhatsApp Group Join Now
Telegram Group Join Now

ಫೆಬ್ರವರಿ 13, 2024ರಂದು ಕರ್ನಾಟಕ ರಾಜ್ಯ ಸರ್ಕಾರವು 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ (Gruhalakshmi Amount) ಹಣ ಮಂಜೂರು ಮಾಡಿದ್ದು ಅಂದಿನಿಂದ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೂ DBT ಮೂಲಕ ಹಣ ತಲುಪಿದೆ. ಈಗಾಗಲೇ ನಾವು ಮಾರ್ಚ್ ತಿಂಗಳಿನಲ್ಲಿದ್ದೇವೆ ಹಾಗೂ ಗೃಹಿಣಿಯರು 7ನೇ ಕಂತಿನ ಗೃಹಲಕ್ಷ್ಮಿ ಹಣಕ್ಕಾಗಿ ನಿರೀಕ್ಷಿಸುತ್ತಿದ್ದಾರೆ ಇವರಿಗೆಲ್ಲ ಸಿಹಿ ಸುದ್ದಿ ಇದೆ.

ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಮಾರ್ಚ್ ತಿಂಗಳ ಮೂರನೇ ವಾರದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣ ತಲುಪಲಿದೆ ಮತ್ತು ಈಗಾಗಲೇ ಮಾರ್ಚ್ 17ನೇ 2024 ರಿಂದ ಕೆಲವು ಜಿಲ್ಲೆಗಳಿಗೆ ಹಣ ವರ್ಗಾವಣೆ ಪ್ರಾರಂಭವಾಗಿದೆ. ಯಾವ ಜಿಲ್ಲೆಯ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಹಣ ವರ್ಗಾವಣೆ ಆಗುತ್ತಿದೆ, 7ನೇ ಕಂತಿನ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎನ್ನುವುದನ್ನು ಮೊಬೈಲ್ನಲ್ಲಿಯೇ ಚೆಕ್ ಮಾಡುವುದು ಹೇಗೆ ಮತ್ತು ಒಂದು ವೇಳೆ ಹಣ ಬರದೆ ಇದ್ದಲ್ಲಿ ಏನು ಮಾಡಬೇಕು ಮತ್ತು ಇತ್ಯಾದಿ ವಿವರ ಇಲ್ಲಿದೆ ನೋಡಿ.

ಈ ಸುದ್ದಿ ಓದಿ:- ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!
7ನೇ ಕಂತಿನ ಹಣವು ಮೊದಲ ಹಂತದಲ್ಲಿ ಹಣ ಬಿಡುಗಡೆಯಾದ ಜಿಲ್ಲೆಗಳ ಲಿಸ್ಟ್ ಇಲ್ಲಿದೆ ನೋಡಿ:-

* ಶಿವಮೊಗ್ಗ
* ಧಾರವಾಡ
* ತುಮಕೂರು
* ಚಾಮರಾಜನಗರ
* ವಿಜಯಪುರ
* ಬೆಳಗಾವಿ
* ಬೆಂಗಳೂರು ಗ್ರಾಮಾಂತರ
* ಬೆಂಗಳೂರು ನಗರ
* ರಾಮನಗರ
* ಕೊಪ್ಪಳ
* ದಕ್ಷಿಣ ಕನ್ನಡ
* ತುಮಕೂರು
* ಹಾವೇರಿ
* ಉತ್ತರ ಕನ್ನಡ
* ಕೋಲಾರ
* ಗದಗ
* ವಿಜಯನಗರ
* ಬೀದರ್
* ರಾಯಚೂರು
* ಮೈಸೂರು
* ಚಿತ್ರದುರ್ಗ
* ಹಾಸನ
* ಬಳ್ಳಾರಿ
* ಯಾದಗಿರಿ

ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡುವ ವಿಧಾನ:-

* ಮೊದಲು ಮಾಹಿತಿ ಕಣಜ ವೆಬ್ಸೈಟ್ ಗೆ https://mahitikanaja.karnataka.gov.in/department ಭೇಟಿ ಕೊಟ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಗೃಹಲಕ್ಷ್ಮೀ ಯೋಜನೆ ವಿಭಾಗ ತಲುಪಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ (RD No.) ನಮೂದಿಸುವ ಮೂಲಕ ನೇರವಾಗಿ ಪೂರ್ತಿ ಮಾಹಿತಿ ಪಡೆಯಬಹುದು. ಎಷ್ಟು ತಿಂಗಳ ಹಣ ಜಮೆ ಆಗಿದೆ, ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ, ಎಷ್ಟು ಹಣ ಜಮೆ ಆಗಿದೆ ಮತ್ತು 7ನೇ ಕಂತಿನ ಸ್ಟೇಟಸ್ ಏನು ಇತ್ಯಾದಿ ಪೂರ್ತಿ ಮಾಹಿತಿ ಸಿಗುತ್ತದೆ.

* ಕರ್ನಾಟಕ ಸರ್ಕಾರದ ಡಿಬಿಟಿ ಕರ್ನಾಟಕ ಆಪ್ (DBT Karnataka app) ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಸರಳ ಹಂತಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿರುವ ವಿವರ ತಿಳಿದುಕೊಳ್ಳಬಹುದು. ಗೃಹಲಕ್ಷ್ಮಿ ಮಾತ್ರವಲ್ಲದೆ ಅನ್ನಭಾಗ್ಯ ಮತ್ತು ಸರ್ಕಾರದಿಂದ ಯಾವುದೇ ಯೋಜನೆಗಳ ಹಣ ಬಂದಿದ್ದರು ಕೂಡ ಅದರ ಮಾಹಿತಿಯು ಈ ವಿಧಾನದಲ್ಲಿ ತಿಳಿಯುತ್ತದೆ.

ಈ ಸುದ್ದಿ ಓದಿ:-ಕುರಿ, ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.!

ಹಣ ಬರದೆ ಇದ್ದರೆ ಪರಿಹಾರ:-

* ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ ಇರುವುದು ಕಾರಣವಾಗಿರುತ್ತದೆ ಇದನ್ನು ಸರಿಪಡಿಸಿಕೊಳ್ಳಿ * ರೇಷನ್ ಕಾರ್ಡ್ ಇ-ಕೆವೈಸಿ ಆಗದೆ ಇದ್ದರೂ ಅಥವಾ ಇನ್ಯಾವುದೇ ಕಾರಣದಿಂದ ರೇಷನ್ ಕಾರ್ಡ್ ಸ್ಥಗಿತಗೊಂಡಿದ್ದರು ಹಣ ಬರುವುದಿಲ್ಲ ಇದನ್ನು ಸರಿಪಡಿಸಿಕೊಳ್ಳಿ.

* ಬ್ಯಾಂಕ್ ಖಾತೆಗಳ ಸಮಸ್ಯೆ ಇದ್ದರೆ ಹತ್ತಿರದ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಿರಿ. ಇದೇ ಪ್ರೈಮರಿ ಅಕೌಂಟ್ ಆಗಿರುವುದರಿಂದ ಈ ಖಾತೆಗೆ ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರುತ್ತದೆ.
* ಒಂದು ವೇಳೆ ಎಲ್ಲಾ ಮಾಹಿತಿ ಸರಿ ಇದ್ದು ಹಣ ಬರುತ್ತಿಲ್ಲ ಎಂದರೆ ಕೂಡಲೇ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಇರುವ CDPO ಅಧಿಕಾರಿಗಳಿಗೆ ಈ ದಾಖಲೆಗಳೊಂದಿಗೆ ಹೋಗಿ ಅರ್ಜಿ ಸಲ್ಲಿಸಿ.

ಈ ಸುದ್ದಿ ಓದಿ:- ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000

* ಆಧಾರ್ ಕಾರ್ಡ್ ಪ್ರತಿ
* ರೇಷನ್ ಕಾರ್ಡ್ ಪ್ರತಿ
* ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
* ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now