ಶಕ್ತಿ ಯೋಜನೆ (Shakthi Scheme) ಮತ್ತು ಗೃಹಲಕ್ಷ್ಮಿ (Gruhalakshmi Scheme) ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಮಹಿಳೆಯರಿಗೆ ಅನುಕೂಲತೆ ಮಾಡಿಕೊಟ್ಟಿರುವ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರವು (Government) ಈಗ ವರಮಹಾಲಕ್ಷ್ಮಿ (Varamahalakshmi festival) ಹಬ್ಬದ ಪ್ರಯುಕ್ತ ಮಹಿಳೆಯರಿಗಾಗಿ ಮುತ್ತೈದೆ ಕಿಟ್ (Muththaide kit) ವಿತರಣೆ ಮಾಡಲು ಮುಂದಾಗಿದೆ.
25.08.2023 ರಂದು ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಮಸ್ತ ಜನರು ಸಾಕಷ್ಟು ಸಡಗರ, ಸಂಭ್ರಮ ಹಾಗೂ ಸಂಪ್ರದಾಯ ಬದ್ಧವಾಗಿ ಭಕ್ತಿಯಿಂದ ಆಚರಿಸುತ್ತಾರೆ. ತಾಯಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ, ತಾಯಿ ಕೃಪಾಕಟಾಕ್ಷಕ್ಕೆ ಪ್ರಾರ್ಥಿಸುತ್ತಾರೆ. ಕುಟುಂಬದಲ್ಲಿ ಲಕ್ಷ್ಮಿ ಸ್ವರೂಪವಾದ ಕಳಶವನ್ನು ಪ್ರತಿಷ್ಠಾಪನೆ ಮಾಡಿ ಅಲಂಕಾರ ಮಾಡುತ್ತಾ ಮಹಾಲಕ್ಷ್ಮಿಗೆ ಇಷ್ಟವಾಗುವ ನೈವೇದ್ಯಗಳನ್ನು ಮಾಡಿ ಮನೆಗೆ ಮುತ್ತೈದೆಯರನ್ನು ಕರೆಸಿ, ಅರಿಶಿನ ಕುಂಕುಮ ನೀಡುವುದರ ಜೊತೆಗೆ ಕೈಲಾದಷ್ಟು ಉಡುಗೊರೆ ಸಹಾ ಕೊಟ್ಟು ಕಳುಹಿಸುವ ಮೂಲಕ ಹಬ್ಬದ ಆಚರಣೆ ಮಾಡುತ್ತಾರೆ.
ಈಗ ಜನಸಾಮಾನ್ಯರ ಜೊತೆ ರಾಜ್ಯ ಸರ್ಕಾರವು ಕೂಡ ವಿಶೇಷ ರೀತಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಮುಂದಾಗಿದೆ ಈಗಾಗಲೇ ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮನೆ ಮನೆಗಳಲ್ಲಿ ಕೂಡ ವರಮಹಾಲಕ್ಷ್ಮಿ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಮನೆ ಶುದ್ಧೀಕರಣ ಕಾರ್ಯದ ಜೊತೆಗೆ ಭರ್ಜರಿ ಶಾಪಿಂಗ್ ಕೂಡ ನಡೆಸುತ್ತಿದ್ದಾರೆ. ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಪ್ರಾರ್ಥಿಸುವ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ರಾಜ್ಯದ ಹೆಣ್ಣು ಮಕ್ಕಳಿಗೆ ಈ ವಿಚಾರವಾಗಿ ಮತ್ತೊಂದು ಸಿಹಿ ಸುದ್ದಿ ಇದೆ.
ನಾಡಿನ ಮಹಿಳೆಯರಿಗೆ ಗೌರವ ಸೂಚಿಸುವ ಸಲುವಾಗಿ ಮತ್ತು ಸಂಪ್ರದಾಯ ಆಚರಣೆಗಳಿಗೆ ಮತ್ತಷ್ಟು ಮಹತ್ವ ಕೊಡುವ ಸಲುವಾಗಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ (Mujarayi department temples) ವರಮಹಾಲಕ್ಷ್ಮಿ ಹಬ್ಬದ ವಿಶೇಷತೆಯ ಕಾರಣ ಮುತ್ತೆದೆ ಸೂಚಕವಾದ ಅರಶಿಣ ಕುಂಕುಮ ಬಳೆ ಇರುಲ ಮುತ್ತೈದೆ ಕಿಟ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಈ ಹಿಂದೆ ಕೂಡ ಕಳೆದ ವರ್ಷ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ಈ ಕ್ರಮ ಕೈಗೊಂಡು ನಡೆದುಕೊಂಡಿತ್ತು. ನೂತನ ಸರ್ಕಾರವು ಕೂಡ ಅದನ್ನೇ ಮುಂದುವರಿಸಿಕೊಂಡು ಹೋಗಲು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಈ ವರ್ಷ ಕೂಡ ವರಮಹಾಲಕ್ಷ್ಮಿ ಹಬ್ಬದಂದು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಬರುವ ಎಲ್ಲಾ ಮುತೈದೆಯರಿಗೆ ಮತ್ತು ಇತರೆ ಹೆಣ್ಣು ಮಕ್ಕಳಿಗೆ ಎಂದಿನಂತೆ ಅರಿಶಿನ, ಕುಂಕುಮ, ಹಸಿರು ಬಳೆ ಹಾಗೂ ಹೂವು ನೀಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಆಯಾ ದೇವಾಲಯಗಳ ವತಿಯಿಂದ ಗುಣಮಟ್ಟದ ಕಸ್ತೂರಿ ಅರಿಶಿನ ಕುಂಕುಮವನ್ನು ಕಾಗದ ಲಕ್ಕೋಟೆಯಲ್ಲಿ ಹಾಕಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ ವಿತರಿಸಬೇಕು, ಇದರ ಜೊತೆಗೆ ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡಬೇಕು ಎಂದು ತಿಳಿಸಿದೆ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆಡಳಿತ ಮಂಡಳಿಗೆ ಸರ್ಕಾರ ಸೂಚನೆ ನೀಡಿದೆ.
ಜಿಮ್ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಧನ ಆಸಕ್ತರು ಈ ಕಛೇರಿಗೆ ಭೇಟಿ ನೀಡಿ.!
ಈ ಮೂಲಕ ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಸಂಪ್ರದಾಯವನ್ನು ಕಾಂಗ್ರೆಸ್ ಸರ್ಕಾರವು ಮುಂದುವರಿಸುತ್ತಿದ್ದು ಇನ್ನು ಮುಂದೆ ಇದೇ ಪದ್ಧತಿಯಾಗಿ ಬದಲಾಗುವ ಲಕ್ಷಣಗಳು ಕೂಡ ಕಾಣುತ್ತಿದೆ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಹೇಳುತ್ತಾ ನಾಡಿನ ಸಮಸ್ತ ಜನತೆಗೂ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಲಭಿಸಲಿ ಎಂದು ಕೇಳಿಕೊಳ್ಳೋಣ.