ಪದೇ ಬದಲಾಗುತ್ತಿರುವ ಸಂಚಾರ ನಿಯಮಗಳು ಹಾಗೂ ಮೋಟಾರ್ ವಾಹನ ಕಾಯ್ದೆ ನಿಯಮಗಳಿಂದ ವಾಹನ ಸವಾರರು ಹಾಗೂ ಮಾಲೀಕರುಗಳು ಸಾಕಾಗಿ ಹೋಗಿದ್ದಾರೆ ಆದರೆ ಸರ್ಕಾರ ಜಾರಿಗೆ (Government new rule for Vehicle Owners) ತರುವ ಇಂತಹ ನಿಯಮಗಳ ಹಿಂದೆ ಒಂದು ಸದ್ದುದ್ದೇಶ ಖಂಡಿತ ಇರುತ್ತದೆ. ವಾಹನ ಸವಾರರು ಮತ್ತು ವಾಹನ ಮಾಲೀಕರ ಸುರಕ್ಷತೆ, ರಕ್ಷಣೆ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಾಲೋಚನೆಯಿಂದ ಸರ್ಕಾರ ಈ ರೀತಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತದೆ.
ಈಗ ಅದೇ ರೀತಿ ಮತ್ತೊಂದು ಹೊಸ ನಿಯಮವನ್ನು ಎಲ್ಲಾ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನದ ಮಾಲೀಕರಿಗೆ (both two wheeler and four wheeler vehicle owners) ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ವಿಷಯದ ಕುರಿತ ನಿಯಮ ಹಾಗೂ ಎಚ್ಚರಿಕೆಯನ್ನು ರಾಜ್ಯ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ನೀಡಿದೆ ಸರ್ಕಾರದ ಈ ಹೊಸ ಆದೇಶದ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯ (transport department higher officer) ಅಧಿಕಾರಿಗಳೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿರುವ ಪ್ರಮುಖ ಅಂಶ ಈ ರೀತಿ ಇದೆ. 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(High Security Registration Plate)ಅನ್ನು ನವೆಂಬರ್ 17ರೊಳಗೆ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಶಾಶ್ವತ ಗುರುತಿನ ಸಂಖ್ಯೆ, ಹಾಲೋಗ್ರಾಮ್ ಸೇರಿದಂತೆ ಇನ್ನು ಹಲವು ಹೊಸ ವೈಶಿಷ್ಟ್ಯಗೊಂದಿಗೆ ಈ HSRP ಸಿದ್ದಪಡಿಸಲಾಗಿತ್ತಿದೆ. ಇದನ್ನು ಟ್ಯಾಂಪರ್ ಮಾಡಲು ಸಾಧ್ಯವಾಗುವುದಿಲ್ಲ. ನವೆಂಬರ್ 17ರ ಒಳಗಾಗಿ ಕಡ್ಡಾಯವಾಗಿ (compulsory) ಎಲ್ಲಾ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಈ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ಕಟ್ಟ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನಂಬರ್ ಪ್ಲೇಟ್ಗಳಲ್ಲಿ ಏಕತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ, ಅದಕ್ಕಾಗಿ ಈ HSRP ರೂಲ್ಸ್ ಕಡ್ಡಾಯ ಮಾಡಲಾಗಿದೆ. ಈ ಹಿಂದೆಯೇ ಆಗಸ್ಟ್ 17ರಂದು ಇದರ ಕುರಿತು ಆದೇಶ ಹೊರಡಿಸಲಾಗಿತ್ತು, ಈಗ ಅಂತಿಮವಾಗಿ ನವೆಂಬರ್ 17ರವರೆಗೆ ಗಡುವನ್ನು ನೀಡಲಾಗಿದೆ.
ಒಂದು ವೇಳೆ ಈ ಗಡುವಿನೊಳಗೆ ಮಾಲೀಕರು ಹೊಸ ನಂಬರ್ ಪ್ಲೇಟ್ ಅಳವಡಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ (action) ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. HSRP ರೂಲ್ಸ್ ಉಲ್ಲಂಘಿಸುವ ವಾಹನ ಮಾಲೀಕರಿಗೆ 500 ರಿಂದ 1,000 ರೂಪಾಯಿ ದಂಡ ಬೀಳುತ್ತದೆ. ಏಪ್ರಿಲ್ 1, 2019ರಿಂದ ಜಾರಿಗೆ ಬರುವಂತೆ HSRP ನಂಬರ್ಪ್ಲೇಟ್ಗಳನ್ನು ಕಡ್ಡಾಯ ಮಾಡಲಾಯಿತು,ಏಪ್ರಿಲ್ 1, 2019ಕ್ಕೂ ಮುನ್ನವೇ 2 ಕೋಟಿ ವಾಹನಗಳು ಇದನ್ನು ಅಳವಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ತಯಾರಕರೇ ಈ ಪ್ಲೇಟ್‌ಗಳನ್ನು ವಿತರಕರಿಗೆ ಪೂರೈಸಲು ಅಧಿಕೃತ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. HSRP ತಯಾರಕರು ಹಳೆಯ ವಾಹನಗಳಿಗೂ ಸಹ ಪ್ಲೇಟ್‌ಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದ್ದಾರೆ. ಹಳೆಯ ವಾಹನಗಳ ಮಾಲೀಕರು ಅಧಿಕೃತ ಡೀಲರ್‌ಗಳ ಮೂಲಕ HSRP ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬಹುದು. 4 ಚಕ್ರದ ವಾಹನಗಳಿಗೆ 400-500 ರೂ., ದ್ವಿಚಕ್ರ ವಾಹನಗಳಿಗೆ 250-300 ರೂ. ಚಾರ್ಜ್ ಆಗಲಿದೆ. 12 ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.