ಪಟ್ಟಣಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಆ ಭಾಗದ ಜನರ ಅತೀ ದೊಡ್ಡ ಆದಾಯ ಮನೆ ಬಾಡಿಗೆ (rent house) ಎಂದರೆ ತಪ್ಪಾಗಲಾರದು. ಹೌದು, ಈಗ ನಾವು ನೋಡಬಹುದು ಹಳ್ಳಿಗಳಿಂದ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸ ಅಥವಾ ಉದ್ಯೋಗದ ಕಾರಣಕ್ಕಾಗಿ ವಲಸೆ ಹೋಗುವ ಜನರಿಗೆ ವಾಸಿಸಲು ಮನೆ ಕೊಡುವ ಮನೆ ಮಾಲೀಕರು ಮನೆ ಬಾಡಿಗೆ ರೂಪದಲ್ಲಿ ಅತಿ ಹೆಚ್ಚು ಆದಾಯವನ್ನು ಪಡೆಯುತ್ತಾರೆ.
ಹಾಗಾಗಿ ಇದು ಕೂಡ ಸಮಾಜದಲ್ಲಿ ಒಂದು ಪ್ರಮುಖ ಅಂಶ ಆದ ಕಾರಣ ಕಾನೂನಿನಲ್ಲಿ ಇದಕ್ಕೂ ಸಹ ನಿಯಮ ಇದೆ. ಮನೆ ಬಾಡಿಗೆ ಕೊಡುವ ಮಾಲೀಕ (Owner) ಹಾಗೂ ಮನೆಯಲ್ಲಿ ವಾಸ ಮಾಡುವ ಬಾಡಿಗೆದಾರ (tenant) ಇಬ್ಬರ ನಡುವೆ ಇಬ್ಬರಿಗೂ ಪಾಲಿಸಲೇಬೇಕಾದ ಕೆಲವೊಂದು ಕರ್ತವ್ಯಗಳು ಮತ್ತು ಇಬ್ಬರಿಗೂ ತಮ್ಮದೇ ಆದ ಹಕ್ಕುಗಳು ಇರುತ್ತವೆ.
ಗೃಹಲಕ್ಷ್ಮಿ ಮೊದಲ ಕಂತಿನ 2,000ರೂ. ಇನ್ನೂ ಬಂದಿಲ್ವಾ.? ಎರಡು ಕಂತಿನ ಹಣ ಒಟ್ಟಿಗೆ ಬರಲು ಈ ರೀತಿ ಮಾಡಿ.!
ಇವುಗಳನ್ನು ಪುಷ್ಟೀಕರಿಸುವುದು ಒಪ್ಪಂದದ ಪತ್ರ (Rent agreement). ಪ್ರತಿಯೊಬ್ಬ ಮನೆ ಮಾಲೀಕನು ಕೂಡ ಮನೆ ಬಾಡಿಗೆಗೆ ಕೊಡುವ ಮುಂಚೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿರಬೇಕು. ತಪ್ಪದೇ ಬಾಡಿಗೆದಾರ ಹಾಗೂ ಮಾಲೀಕ ಇಬ್ಬರ ನಡುವೆ ಒಪ್ಪಂದ ಮಾಡಿಕೊಂಡರೆ ಮುಂದೆ ಒಂದು ದಿನ ಇಬ್ಬರ ನಡುವೆ ಯಾವುದಾದರೂ ವಿಚಾರಕ್ಕೆ ಮನಸ್ತಾಪ ಆದರೆ ಸಾಕ್ಷಿಯಾಗಿ ಅನುಕೂಲಕ್ಕೆ ಬರುತ್ತದೆ.
ಹಾಗಾಗಿ ಬಾಯಿ ಮಾತಿನ ಹೇಳಿಕೆಗಳು ಬಿಟ್ಟು ಅದಕ್ಕೆ ಕಾನೂನು ರೂಪ ಕೊಟ್ಟು ಒಪ್ಪಂದ ಪತ್ರ ಮಾಡಿ ಪರಿಚಯ ಇರುವ ಲಾಯರ್ ಮುಖಾಂತರ ಅದನ್ನು ನೋಟರಿ ಮಾಡಿಸಿಕೊಂಡರೆ, ಅನೇಕ ಕಡೆ ಈ ರೆಂಟ್ ಅಗ್ರಿಮೆಂಟ್ ಒಂದು ಅಗತ್ಯ ದಾಖಲೆಯಾಗಿ ಕೂಡ ಉಪಯೋಗಕ್ಕೆ ಬರುತ್ತದೆ. ಈ ಬಾಡಿಗೆ ಪತ್ರದಲ್ಲಿ ಯಾವೆಲ್ಲಾ ಅಂಶಗಳು ಒಳಗೊಂಡಿರಬೇಕು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್.! ಸರ್ಕಾರದಿಂದ ಹೊಸ ಆದೇಶ.!
ನಮ್ಮ ದೇಶದಲ್ಲಿ ಬಾಡಿಗೆ ಒಪ್ಪಂದಗಳು 11 ತಿಂಗಳಿಗೆ ತಯಾರಾಗುತ್ತವೆ. 11 ತಿಂಗಳ ನಂತರವೂ ಕೂಡ ಅದೇ ಮನೆಗಳಲ್ಲಿ ವಾಸಿಸಲು ಇಚ್ಛಿಸಿದ್ದಲ್ಲಿ ಮತ್ತೊಮ್ಮೆ ಆ ಅಗ್ರಿಮೆಂಟ್ ರಿನಿವಲ್ ಮಾಡಿಸಿಕೊಳ್ಳಬೇಕು, ಕಂಡಿಷನ್ ಬದಲಾಗಿದ್ದರೆ ಮತ್ತೊಂದು ಪತ್ರ ಮಾಡಿಸಿಕೊಳ್ಳಬೇಕು. ಈ ಒಪ್ಪಂದ ಪತ್ರದಲ್ಲಿ ಮನೆಗೆ ಅಡ್ವಾನ್ಸ್ ಎಷ್ಟು ಕೊಟ್ಟಿರುತ್ತಾರೆ.
ಪ್ರತಿ ತಿಂಗಳ ಬಾಡಿಗೆ ಎಷ್ಟು, ವಿದ್ಯುತ್ ಮತ್ತು ನೀರಿನ ಶುಲ್ಕ ಬಾಡಿಗೆದಾರನೇ ಪಾವತಿ ಮಾಡಬೇಕು, ಮನೆಯಲ್ಲಿರುವ ಯಾವುದೇ ವಸ್ತುಗಳನ್ನು ಡ್ಯಾಮೇಜ್ ಮಾಡಿದ ಪಕ್ಷದಲ್ಲಿ ಮನೆ ಖಾಲಿ ಮಾಡಿಸುವಾಗ ಹಣ ಹಿಡಿದುಕೊಳ್ಳಬಹುದು ಮತ್ತು ಪೇಂಟಿಂಗ್ ಚಾರ್ಜ್ ತೆಗೆದುಕೊಳ್ಳಲಾಗುವುದು ಎಂಬೆಲ್ಲಾ ವಿವರಗಳು ಮತ್ತು ಬಾಡಿಗೆದಾರರ ಹೆಸರು, ವಿಳಾಸ ಮತ್ತು ಮಾಲೀಕರ ಹೆಸರು ಹಾಗೂ ಆ ಮನೆಯ ವಿಳಾಸ ಸೇರಿದಂತೆ ಎಲ್ಲ ವಿವರಗಳು ಇರಬೇಕು.
9 ಲಕ್ಷದವರೆಗೆ ಯಾವುದೇ ಬಡ್ಡಿ ಕಟ್ಟುವ ಅಗತ್ಯ ಇಲ್ಲ, ಗೃಹ ಸಾಲ ಮಾಡುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್.!
ಇದಕ್ಕೆ ಬಾಡಿಗೆದಾರನ ಪರವಾಗಿ ಇಬ್ಬರು ಮತ್ತು ಮಾಲೀಕರ ಪರವಾಗಿ ಇಬ್ಬರು ಸಾಕ್ಷಿಗಳು ಸಹಿ ಹಾಕಬೇಕು. ಈ ಒಪ್ಪಂದ ದಲ್ಲಿ ತಪ್ಪದೇ ಪ್ರತಿ ವರ್ಷ ಹೆಚ್ಚಿಸಲಾಗುವ ಮನೆ ಬಾಡಿಗೆ ಶುಲ್ಕದ ಬಗ್ಗೆಯೂ ಕೂಡ ತಿಳಿಸಿರಬೇಕು. ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡ 5-10% ಮನೆ ಬಾಡಿಗೆ ಹೆಚ್ಚಳ ಮಾಡಲಾಗುತ್ತದೆ.
ಹಾಗಾಗಿ ಈಗಾಗಲೇ ವಾಸ ಮಾಡುತ್ತಿರುವವರು ಮತ್ತೊಂದು ವರ್ಷ ಅಥವಾ ಇನ್ನು ಹೆಚ್ಚಿನ ವರ್ಷಕ್ಕೆ ಇರಲು ಇಚ್ಚೆ ಪಟ್ಟಲ್ಲಿ ತಪ್ಪದೆ ಒಪ್ಪಂದೇ ಪತ್ರದಲ್ಲಿ ಮುಂದೆ ಏರಿಸಲಾಗುವ ಬಾಡಿಗೆ ಶುಲ್ಕದ ಬಗ್ಗೆ ಕೂಡ ವಿವರ ಬರೆದರೆ ಒಳ್ಳೆಯದು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.