ಶುಗರ್ ಎನ್ನುವುದು ಈಗ ಮನೆ ಮನೆ ಮಾತಾಗಿ ಹೋಗಿದೆ. ಮೊದಲೆಲ್ಲ ವಯೋ ಸಹಜ ಖಾಯಿಲೆ ಎನ್ನಲಾಗುತ್ತಿತ್ತು. ಆದರೀಗ 30ರ ಹರೆಯದವರಿಗೂ ಕೂಡ ಶುಗರ್ ಬಾಧಿಸುತ್ತಿದೆ. ಈ ಮಧುಮೇಹ ಎನ್ನುವುದು ಅನುವಂಶಿಯ ಕಾಯಿಲೆಯು ನಿಜ, ಆದರೆ ಈ ರೀತಿ ಕುಟುಂಬದ ಇತಿಹಾಸದಲ್ಲಿ ಶುಗರ್ ಇಲ್ಲದವರ ಕುಟುಂಬದಲ್ಲೂ ಕೂಡ ಯುವಕರು ಶುಗರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಇದಕ್ಕೆ ಕಾರಣವೇನು? ತಡೆಗಟ್ಟುವುದು ಹೇಗೆ? ಉಪವಾಸ ಮಾಡುವುದರಿಂದ ಹೇಗೆ ಶುಗರ್ ಕಡಿಮೆ ಆಗುತ್ತದೆ ಮತ್ತು ಶುಗರ್ ಬರುವ ಮುಂಚೆ ಅದು ತೋರ್ಪಡಿಸುವ ಲಕ್ಷಣಗಳು ಏನು? ಎಚ್ಚರಿಕೆ ಹೇಗೆ ವಹಿಸಬೇಕು ಮತ್ತು ಕಾರಣಗಳೇನು ಎನ್ನುವುದರ ಬಗ್ಗೆ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಗ್ಲುಕೋಸ್ ಗ್ಲೈಕೋಸ್ ಆಗಿ ಕನ್ವರ್ಟ್ ಆಗದೆ ಹೋದರೆ ಅದನ್ನು ದೇಹ ಸ್ವೀಕರಿಸಿ ಇಟ್ಟುಕೊಂಡು ಈ ರೀತಿ ಮಧುಮೇಹ ಕಾಯಿಲೆ ಬರುವ ರೀತಿ ಮಾಡುತ್ತದೆ. ಈಗಿನ ಕಾಲದ ಆಹಾರ ಪದ್ಧತಿಯಲ್ಲಿ ಈ ರೀತಿಯಾಗಿ ಇನ್ಸುಲಿನ್ ರೆಝಿಸ್ಟೆನ್ಸ್ ಹೆಚ್ಚಾಗುವ ಅಂಶ ಇರುವುದರಿಂದ ಸಹಜವಾಗಿ ಎಲ್ಲರಿಗೂ ಸಕ್ಕರೆ ಖಾಯಿಲೆ ಬರುತ್ತಿದೆ.
ಸಕ್ಕರೆ ಕಾಈಯಿಲೆ ಬರುವ ಮುನ್ನವೇ ಎಚ್ಚರಿಕೆಯಿಂದ ಇರಬೇಕು ಎಂದರೆ ಸರಿಯಾದ ಆಹಾರ ಪದಾರ್ಥಗಳನ್ನು ರೂಢಿಸಿಕೊಳ್ಳಬೇಕು, ತಪ್ಪದೇ ವ್ಯಾಯಾಮ ಮಾಡಬೇಕು, ಊಟ ನಿದ್ರೆ ಇವುಗಳನ್ನು ಅಚ್ಚುಕಟ್ಟಾಗಿ ಪಾಲಿಸಿದರೆ ಶುಗರ್ ಬಂತು ಎಂದು ದಿನ ಮಾತ್ರೆ ತಿನ್ನುವ ಕಷ್ಟದಿಂದ ದೂರ ಉಳಿಯಬಹುದು.
ಸಕ್ಕರೆ ಕಾಯಿಲೆಯಿಂದ ಹೇಗೆ ಬರುತ್ತದೆ ಎಂಬುದನ್ನು ತೋರ್ಪಡಿಸುವ ಲಕ್ಷಣಗಳೇನೆಂದರೆ. ಇವರಿಗೆ ಸಹಜ ಹಸಿವಿಗಿಂತ ಹಸಿವು ಹೆಚ್ಚಾಗಿರುತ್ತದೆ, ರಾತ್ರಿ ಹೊತ್ತು ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗುತ್ತಾರೆ ಮತ್ತು ಅತಿಯಾದ ನೀರಿನ ದಾಹ ಇರುತ್ತದೆ, ಊಟ ತಿಂದ ನಂತರ ಸಿಹಿ ಪದಾರ್ಥಗಳನ್ನು ತಿನ್ನಬೇಕು ಎನಿಸುತ್ತದೆ.
ವಿಪರೀತವಾದ ಸುಸ್ತು, ಯಾವುದರಲ್ಲಿ ಉತ್ಸಾಹ ಇಲ್ಲದಂತೆ ಇರುವುದು, ಗಾಯ ಆದಾಗ ವಾಸಿ ಆಗದೆ ಇರುವುದು, ಕುತ್ತಿಗೆ ಭಾಗದಲ್ಲಿ ನರಗುಳ್ಳೆ ಕಾಣಿಸುವುದು ಅಥವಾ ಕಪ್ಪು ಬಣ್ಣದಲ್ಲಿ ಕುತ್ತಿಗೆ ಸುತ್ತ ಮಾರ್ಕ್ ಆಗುವುದು, ಬೊಜ್ಜು ಹೆಚ್ಚಾಗುವುದು, ವಿಪರೀತವಾಗಿ ದಪ್ಪ ಆಗುವುದು ಅಥವಾ ಕಡಿಮೆ ಆಗುವುದು, ಯೂರಿನರಿ ಇನ್ಫೆಕ್ಷನ್ ಗಳು ಇನ್ನಿತ್ಯಾದ ಲಕ್ಷಣಗಳು ಕೂಡ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದನ್ನು ಸೂಚಿಸುತ್ತದೆ.
ಆ ಸಮಯದಲ್ಲೇ ಎಚ್ಚೆತ್ತುಕೊಳ್ಳಬೇಕು. ಇನ್ನು ಒಂದು ಮುಖ್ಯವಾದ ಸಲಹೆ ಏನೆಂದರೆ ಉಪವಾಸ ಮಾಡುವುದರಿಂದ ಆದಷ್ಟು ಸಕ್ಕರೆ ಕಾಯಿಲೆಯನ್ನು ದೂರ ಇಡಬಹುದು. ಹೇಗೆಂದರೆ ನಾವು ತಿಂದ ಆಹಾರದಲ್ಲಿರುವ ಸಕ್ಕರೆ ಅಂಶವು ಶಕ್ತಿಯಾಗಿ ರಕ್ತಕ್ಕೆ ಸೇರುತ್ತದೆ, ನಾವು ಉಪವಾಸ ಮಾಡಿದ ದಿನ ಆಹಾರ ದೇಹಕ್ಕೆ ಸೇರಿದ ಕಾರಣ ಈ ಸಮಯದಲ್ಲಿ ದೇಹದಲ್ಲಿರುವ ಸಕ್ಕರೆ ಅಂಶವನ್ನು ರಕ್ತವು ಸ್ವೀಕರಿಸುತ್ತದೆ.
ಹಾಗಾಗಿ ಅಷ್ಟು ದಿನ ವರೆಗೆ ಸ್ಟೋರ್ ಆಗಿದ್ದ ಕೊಲೆಸ್ಟ್ರಾಲ್ ಇರಬಹುದು ಅಥವಾ ಸಕ್ಕರೆ ಅಂಶ ಇರಬಹುದು ಆಗ ಬ್ಯಾಲೆನ್ಸ್ ಆಗುತ್ತದೆ ಹೀಗಾಗಿ ಕನಿಷ್ಠ 15 ದಿನಗಳಿಗೊಮ್ಮೆ ಉಪವಾಸ ಮಾಡಬೇಕು ಮತ್ತು ಇದು ನಿರಂತರವಾಗಿ ನಡೆದಾಗ ದೇಹಕ್ಕೆ ಆ ರಿದಂ ಗೊತ್ತಾಗುತ್ತದೆ. ಅದನ್ನು ಬ್ರೇಕ್ ಮಾಡುವ ಕಾರಣಕ್ಕಾಗಿ ಏಕಾದಶಿ ದಿನಗಳಂದು ಅಥವಾ ಚೌತಿ ದಿನಗಳಂದು ಉಪವಾಸ ಮಾಡಿದರೆ ಪ್ರತಿ ತಿಂಗಳು ಆ ದಿನಾಂಕ ವ್ಯತ್ಯಾಸ ಆಗುವುದರಿಂದ ದೇಹ ಅದನ್ನು ಗುರುತಿಸಲು ಅಸಾಧ್ಯವಾಗುತ್ತದೆ ಆಗ ದೇಹವನ್ನು ಸರಿಯಾದ ರೀತಿಯಲ್ಲಿ ದಂಡಿಸಿದ ಹಾಗಾಗುತ್ತದೆ.