ಮನುಷ್ಯ ಮಾನವನಾಗಿ ಹುಟ್ಟಬಹುದು ಆದರೆ ಮನುಷ್ಯನಾಗುವುದಕ್ಕೆ ಬಹಳ ವ್ಯತ್ಯಾಸವಿದೆ. ಯಾಕೆಂದರೆ ಒಬ್ಬ ಮನುಷ್ಯ ಎಲ್ಲರಂತೆ ತಾನು ಮಾನವನಾಗಿ ಜನ್ಮ ತಾಳಿದರೂ ಕೂಡ ಆತನಲ್ಲಿ ರಾಕ್ಷಸತ್ವ, ಮೃಗತ್ವ, ಮನುಷ್ಯತ್ವ ಹಾಗೂ ದೈವತ್ವ ಎನ್ನುವ ನಾಲ್ಕು ಅಂಶಗಳು ಇರುತ್ತವೆ. ಹಂತ ಹಂತವಾಗಿ ಮನುಷ್ಯ ಇವುಗಳನ್ನು ದಾಟಿ ದೈವತ್ವ ತಲುಪಿದಾಗ ಜೀವನ ಸಾರ್ಥಕ ಆಗುತ್ತದೆ.
ನಮ್ಮ ಸುತ್ತಮುತ್ತಲಿರುವ ಜನರನ್ನು ಗಮನಿಸಿದರೆ ಯಾರು ರಾಕ್ಷಸ ಗುಣ ಹೊಂದಿದ್ದಾರೆ, ಯಾರು ಮೃಗಗಳ ತರ ವರ್ತಿಸುತ್ತಾರೆ ಮತ್ತು ಯಾರು ನಿಜವಾದ ಮನುಷ್ಯರಾಗಿದ್ದರೆ ಮತ್ತು ಯಾರು ದೇವತಾ ಮನುಷ್ಯರಾಗಿದ್ದಾರೆ ಎನ್ನುವುದರ ವ್ಯತ್ಯಾಸ ನಮಗೆ ಗೊತ್ತಾಗುತ್ತದೆ. ದೈವತ್ವದ ಗುಣ ಹೊಂದಬೇಕು ಎಂದರೆ ಅವರು ಆಧ್ಯಾತ್ಮದಲ್ಲಿ ಸಾಕಷ್ಟು ಸಾಧನೆ ಮಾಡಲೇಬೇಕು ಅದು ಅಷ್ಟು ಸುಲಭದ ಮಾತಲ್ಲ.
ಕೆಲವರಿಗೆ ಪೂರ್ವ ಜನ್ಮದ ಪುಣ್ಯದಿಂದಲೇ ಈ ರೀತಿ ಗುಣ ಬಂದಿರುತ್ತದೆ. ಇದನ್ನು ನ್ಯಾಚುರಲ್ ಸೈಕಾಲಜಿ ಎಂದು ಕೂಡ ಕರೆಯುತ್ತಾರೆ ಅವರನ್ನು ದೈವ ಕಳೆ ಹೊಂದಿದ್ದಾರೆ, ಅವರಲ್ಲಿ ದೈವಶಕ್ತಿ ಇದೆ ಎಂದು ಗುರುತಿಸಲಾಗುತ್ತದೆ. ಇನ್ನು ಕೆಲವರು ತಮ್ಮ ಜೀವನದಲ್ಲಿ ಬಂದ ಕಷ್ಟದ ಪರಿಸ್ಥಿತಿಯಲ್ಲಿ ಬದುಕನ್ನು ಅರ್ಥ ಮಾಡಿಕೊಂಡು ಅಥವಾ ಸಜ್ಜನರ ಸಹವಾಸ ಮಾಡಿದ ನಂತರ ಮನ ಪರಿವರ್ತನೆಯಾಗಿ ಈ ರೀತಿ ಮನುಷ್ಯತ್ವದ ಹಂತದಾಟಿ ದೈವತ್ವವನ್ನು ಬೆಳಸಿಕೊಳ್ಳುತ್ತಾರೆ.
ಈಗ ನಾವು ಆ ರೀತಿ ದೈವ ಗುಣ ಹೊಂದಿರುವ ಮನುಷ್ಯರ ಲಕ್ಷಣಗಳು ಯಾವುದು ಮತ್ತು ಅವರ ವಿಶೇಷತೆ ಏನು ಎನ್ನುವುದನ್ನು ತಿಳಿಸುತ್ತಿದ್ದೇನೆ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಇದು ಸಾಧ್ಯವಾದರೆ ಬದುಕು ನಿಜವಾಗಲೂ ಸಾರ್ಥಕವಾಗುತ್ತದೆ.
ಸ.ತ್ತ ಮೇಲೆ ಸ್ವರ್ಗ, ನರಕ, ಪಾಪ, ಪುಣ್ಯ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ವಾಸ್ತವವಾಗಿ ಬದುಕಿರೋ ಜೀವನವಂತೂ ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರುತ್ತದೆ. ಎಲ್ಲರೂ ಅನುಸರಿಸಬಹುದಾದ ಅನುಭವಿಸಬಹುದಾದಂತಹ ಅನುಭವ ಇದಾಗಿದೆ, ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ.
● ದೈವತ್ವ ಹೊಂದಿರುವವರ ಒಂದು ಪ್ರಮುಖ ಲಕ್ಷಣವೇನೆಂದರೆ, ಇವರಿಗೆ ಯಾವುದೇ ಕೆಲಸ ಮಾಡಿದರೂ ಅದರ ರಿಸಲ್ಟ್ ಏನಾಗುತ್ತದೆ ಎಂದು ಮೊದಲೇ ಗೊತ್ತಾಗುತ್ತದೆ. ಒಂದು ಅರ್ಥದಲ್ಲಿ ಮಾಡುವ ಕೆಲಸವನ್ನು ನೋಡಿ ಅದರ ಪರಿಣಾಮ ಏನಾಗುತ್ತದೆ ಎಂದು ಇವರು ಹೇಳಿಬಿಡುತ್ತಾರೆ. ಇವರು ಹೇಳಿದಂತೆ ಅದೆಲ್ಲ ಸತ್ಯವಾಗುತ್ತದೆ.
● ಇವರು ಹೆಚ್ಚು ನಂಬಿಕಸ್ಥರಾಗಿರುತ್ತಾರೆ ಮತ್ತು ಹಸನ್ಮುಖಿಗಳಾಗಿರುತ್ತಾರೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ ತಮಗೆ ಕೆಟ್ಟದ್ದನ್ನು ಬಯಸಿದವರಿಗೂ ಕೂಡ ಒಳ್ಳೆಯದನ್ನು ಬಯಸುವ ಮತ್ತು ಕ್ಷಮೆ ಕೇಳದಿದ್ದರೂ ಕೂಡ ಅವರನ್ನು ಕ್ಷಮಿಸುವ ಉದಾರ ಗುಣ ಇವರಿಗೆ ಇರುತ್ತದೆ. ಒಟ್ಟಿನಲ್ಲಿ ಇವರು ಬದುಕಿನ ಸಾರವನ್ಪು ಚೆನ್ನಾಗಿ ಅರಿತಿರುತ್ತಾರೆ.
● ಇವರು ಯಾರಿಗಾದರೂ ಆಶೀರ್ವಾದ ಮಾಡಿದರೆ ಖಂಡಿತವಾಗಿಯೂ ಆಶೀರ್ವಾದ ಪಡೆದುಕೊಂಡವರ ಕಾರ್ಯ ಗೆಲ್ಲುತ್ತದೆ. ಯಾಕೆಂದರೆ ಇವರು ತಮ್ಮ ಒಳ್ಳೆಯ ಗುಣದಿಂದ ಅಂತಹ ಒಂದು ಪ್ರಭೆಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಅವರಿಗೆ ಶಕ್ತಿ ಇದೆ ಎಂದು ಅವರಿಗೆ ಅಹಂಕಾರ ಇರುವುದಿಲ್ಲ.
● ಇವರು ಪ್ರಕೃತಿಯೊಂದಿಗೆರ ಮುಗ್ಧ ಪ್ರಾಣಿಗಳೊಂದಿಗೆ, ಅಸಹಾಯಕರೊಂದಿಗೆ, ಮಕ್ಕಳೊಂದಿಗೆ ಹಾಗೂ ವಯಸ್ಸಾದವರೊಂದಿಗೆ ಅತಿಹೆಚ್ಚಿನ ಕನೆಕ್ಷನ್ ಹೊಂದಿರುತ್ತಾರೆ. ಎಲ್ಲರಿಗೂ ದಯೆ ತೋರಿಸುವ ಎಲ್ಲರೂ ನಗಿಸುವ ಶಕ್ತಿಯು ಇವರಿಗೆ ಇರುತ್ತದೆ. ಇವರ ಜೊತೆ ಮಾತನಾಡಿದರು ಕೂಡ ಮನಸಿಗೆ ಏನೋ ಒಂದು ರೀತಿ ಸಮಾಧಾನ ಸಿಗುತ್ತದೆ.
● ಇವರು ಯಾರನ್ನಾದರೂ ನೋಡಿದರೂ ಸಾಕು ಅವರ ಮುಖ ನೋಡಿ ಅವರು ಇಂಥವರೇ ಎಂದು ಅವರ ಫುಲ್ ಬಯೋಡೇಟಾ ಹೇಳುವಷ್ಟು ಪವರ್ಫುಲ್ ಆಗಿರುತ್ತಾರೆ. ಒಳ್ಳೆತನದ ಹಿಂದೆ ಇರುವ ಮುಖವಾಡಗಳು ಒರಟು ಮುಖದ ಹಿಂದೆ ಇರುವ ಮುಗ್ಧ ಮನಸ್ಸನ್ನು ಸರಿಯಾಗಿ ಇವರು ಗುರುತಿಸುತ್ತಾರೆ.
● ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಲೋಕ ಕಲ್ಯಾಣಕ್ಕಾಗಿ ಬಯಸುವ ಮನಸ್ಸು ಇವರದ್ದಾಗಿರುತ್ತದೆ.