ಜನರು ಈಗ ಹಣ ಉಳಿತಾಯ ಮಾಡಲು ಉಳಿತಾಯ ಖಾತೆಯಲ್ಲಿ ಹಣ ಉಳಿಸುವುದರ ಬದಲು ತಮಗೆ ಆದಾಯ ತರುವ ಯೋಜನೆಗಳಲ್ಲಿ ಹಣ ಹೂಡಲು ಬಯಸುತ್ತಾರೆ. ಕೆಲವು ಯೋಜನೆಗಳನ್ನು ಸರ್ಕಾರವೇ ಪರಿಚಯಿಸುತ್ತದೆ ಈ ರೀತಿ ಯೋಜನೆಗಳಿಗೆ ಅಂಚೆ ಕಚೇರಿ ಹಾಗೂ ರಾಷ್ಟ್ರೀಯ ಕಚೇರಿಯಲ್ಲಿ ಖಾತೆ ತೆರೆಯುವ ಅನುಕೂಲ ಇದ್ದು ನೂರಕ್ಕೆ ನೂರರಷ್ಟು ಸರ್ಖಾರವೇ ಗ್ಯಾರಂಟಿ ಆಗಿರುವುದರಿಂದ ಕನರು ನಿಶ್ಚಿತ ಆದಾಯದ ಮತ್ತು ಹಣದ ಉಳಿತಾಯದ ಜೊತೆಗೆ ಅದಕ್ಕೆ ಭದ್ರತೆಯನ್ನು ಪಡೆದುಕೊಳ್ಳಬಹುದು.
ಇಂತಹ ಯೋಜನೆಗಳಲ್ಲಿ PPF ಕೂಡ ಒಂದು. ಇದನ್ನು ಫ್ರಾವಿಡೆಂಟ್ ಫಂಡ್ (Public provident fund) ಎಂದು ಕೂಡ ಕರೆಯುತ್ತಾರೆ. ಇದೊಂದು ದೀರ್ಘಕಾಲದ ಉಳಿತಾಯ ಯೋಜನೆ ಆಗಿದ್ದು ಈ ಯೋಜನೆಯಿಂದ ಗ್ರಾಹಕರಿಗೆ ಏನೆಲ್ಲ ಲಾಭ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಹೆಚ್ಚಿನ ಬಡ್ಡಿದರ ಸಿಗುತ್ತದೆ. ಸದ್ಯಕ್ಕೆ ಪ್ರಸ್ತುತವಾಗಿ 7.1% ಬಡ್ಡಿದರ ಸಿಗುತ್ತಿದೆ. ಈ ಯೋಜನೆಯಲ್ಲಿ ನಿಮ್ಮ ಹೂಡಿಕೆಗೆ ಸಿಗುವ ಬಡ್ಡಿದರದ ಆದಾಯಕ್ಕೆ ಯೃವುದೇ ಟ್ಯಾಕ್ಸ್ ಇರುವುದಿಲ್ಲ. ಹಾಗಾಗಿ ತೆರಿಗೆ ವಿನಾಯಿತಿಯನ್ನು ಕೂಡ ಒಳಗೊಂಡಿದೆ ನೀವು ಹೂಡಿಕೆ ಮಾಡಿದ ಹಣವನ್ನು ಕಷ್ಟ ಕಾಲಕ್ಕೆ ಉಪಯೋಗಿಸಬಹುದು.
ನೀವು ಹೂಡಿಕೆ ಮಾಡಿದ ಹಣದ ಮೇಲೆ ಲೋನ್ ಕೂಡ ಪಡೆಯಬಹುದು. ಈ ರೀತಿ ಪಡೆದುಕೊಳ್ಳುವ ಲೋನ್ ಗೆ 8.1% ಬಡ್ಡಿದರ ಅನ್ವಯಿಸುತ್ತದೆ ಮತ್ತೊಂದು ವಿಚಾರವೇನೆಂದರೆ ಒಮ್ಮೆ ನೀವು PPF ಅಕೌಂಟ್ ಓಪನ್ ಮಾಡಿ 5 ವರ್ಷಗಳು ತುಂಬಿದರೆ ನಿಮಗೆ ಯಾವುದೇ ಪರ್ಸನಲ್ ಲೋನ್ ಸಿಗುವುದಿಲ್ಲ. ಯಾಕೆಂದರೆ ಐದು ವರ್ಷಗಳು ತುಂಬಿದ ಬಳಿಕ ನಿಮ್ಮ PPF ಹೂಡಿಕೆ ಮೇಲೆಯೇ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆದುಕೊಳ್ಳುವ ಬಹುದಾಗಿರುವ ಕಾರಣ ಇದನ್ನೇ ಸೂಚಿಸಲಾಗುತ್ತದೆ.
ಯೋಜನೆಯ ಕುರಿತ ಇನ್ನಷ್ಟು ಪ್ರಮುಖ ಮಾಹಿತಿಗಳು:-
● ಭಾರತೀಯ ಪ್ರಜೆಗಳು ಮಾತ್ರ PPF ಯೋಜನೆಯಲ್ಲಿಹೂಡಿಕೆ ಮಾಡಲು ಅವಕಾಶ. NRI ಅಥವಾ HUF ಗಳಿಗೆ PPF ನಲ್ಲಿ ಹೂಡಿಕೆ ಮಾಡಲು ಅನುಮತಿ ಇಲ್ಲ.
● ಕೇವಲ ಒಂದು PPF ಖಾತೆಯನ್ನು ಮಾತ್ರ ತೆರೆಯಬಹುದು, ಒಂದು ವೇಳೆ ಅಪ್ರಾಪ್ತರ ಹೆಸರಿನಲ್ಲಿ ತೆರೆದಿರುವ PPF ಗೆ ನೀವು ಜಂಟಿ ಆಗಿದ್ದರೆ ಮಾತ್ರ ಎರಡು ಖಾತೆ ತೆರೆಯಬಹುದು.
● PPF ಯೋಜನೆಯ ಮೆಚ್ಯುರಿಟಿ ಅವಧಿಯು 15 ವರ್ಷಗಳು. ಯೋಜನೆ ಮುಗಿಯುವ ಸಮಯದಲ್ಲಿ ನಂತರ ಖಾತೆಯನ್ನು 5 ವರ್ಷಗಳವರೆಗೆ ಮುಂದುವರಿಸಲು ಬಯಸಿದರೆ ಅದಕ್ಕೂ ಅವಕಾಶವಿದೆ. ಹೆಚ್ಚುವರಿಯಾಗಿ ಠೇವಣಿ ಮಾಡಬಹುದು ಅಥವಾ ಹಾಗೆಯೇ ಮುಂದುವರಿಸಬಹುದು.
● PPF ಖಾತೆಯಲ್ಲಿ ವಾರ್ಷಿಕ ಕನಿಷ್ಠ 500 ರೂ. ನಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದು. ಒಂದೇ ಬಾರಿಗೆ ಈ ಹಣವನ್ನು ಹೂಡಿಕೆ ಮಾಡಲು ಅಥವಾ ಕಂತುಗಳಲ್ಲಿ ಹೂಡಿಕೆ ಮಾಡಲು ಕೂಡ ಆಯ್ಕೆಗಳಿವೆ. ನಿಮ್ಮ ಅನುಕೂಲತೆ ಆಧಾರದ ಮೇಲೆ ಆರಿಸಿಕೊಳ್ಳಬಹುದು.
● ಆದಾಯ ತೆರಿಗೆ ಕಾಯಿದೆಯ ವಿಭಾಗ 80C ಅಡಿ ತೆರಿಗೆ ವಿನಾಯಿತಿಗೆ ಕ್ಲೈಮ್ ಮಾಡಬಹುದು. ಆ ಪ್ರಕಾರ ಗರಿಷ್ಠ ಆದಾಯ 1.50,000 ರೂ. ವರೆಗೆ ತೆರಿಗೆ ಕಡಿತ ಸೌಲಭ್ಯವಿದೆ.
● ಆನ್ಲೈನ್ ಮುಖಾಂತರ ಈ ಯೋಜನೆ ಖರೀದಿಸುವುದಾದರೆ ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಆಪ್ ಗಳನ್ನು ಅನುಸರಿಸಬಹುದು. ಆಫ್ ಲೈನ್ ನಲ್ಲಿ ಖರೀದಿಸುವುದಾದರೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಟ್ಟು PPF ಖಾತೆ ಹೊಂದಬಹುದು.