ಕರ್ನಾಟಕ ರಾಜ್ಯ ಸರ್ಕಾರವು (Government) ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಜಾರಿಗೊಳಿಸಿದೆ. ಚುನಾವಣೆ ಪೂರ್ವವಾಗಿ ಕಾಂಗ್ರೆಸ್ ಪಕ್ಷ (Congress party) ಪ್ರಣಾಳಿಕೆಯಲ್ಲಿ (Manifesto) ಇಂತಹದೊಂದು ಭರವಸೆ ನೀಡಿತ್ತು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವವಾದದ್ದು ಅವರು ಆರ್ಥಿಕವಾಗಿ ಸಬಲರಾಗಿದ್ದರೆ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂದು ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯರಿಗೂ (head of the family ) ಕೂಡ ಮಾಸಿಕವಾಗಿ 2000 ಸಹಾಯಧನವನ್ನು ನೀಡುವುದಾಗಿ ಹೇಳಿಕೆ ನೀಡಿತ್ತು.
ಅದೇ ರೀತಿಯಾಗಿ ಬಹುಮತದೊಂದಿಗೆ ಸ್ಥಾಪನೆಯಾಗಿರುವ ನೂತನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಪಂಚಖಾತ್ರಿ ಯೋಜನೆಗಳ ಜಾರಿಗೆ ತಯಾರಾಗಿದೆ. ಈ ಗ್ಯಾರೆಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಜುಲೈ ತಿಂಗಳಿಂದ ನಾಡಿನ ಜನತೆ ಪಡೆಯುತ್ತಿದ್ದಾರೆ.
ಆಸ್ತಿ ಖರೀದಿ & ಮಾರಾಟ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!
ಕರ್ನಾಟಕ ಮಹಿಳೆಯರೆಲ್ಲರೂ ಕಾಯುತ್ತಿರುವ ಮಹತ್ವಕಾಂಕ್ಷೆ ಯೋಜನೆಯ ಗೃಹಲಕ್ಷ್ಮಿ ಯೋಜನೆ ಲಾಂಚ್ (launch) ಆಗುವ ದಿನಾಂಕದ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ. ಯೋಜನೆ ಆರಂಭವಾದ ದಿನದಿಂದಲೂ ಕೂಡ ಪದೇ ಪದೇ ಖಾತೆಗೆ ಹಣ ವರ್ಗಾವಣೆ ಆಗುವ ದಿನಾಂಕ ಮುಂದೂಡುತ್ತಲೇ ಇದೆ. ಆರಂಭದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಕೂಡ ಇದೇ ರೀತಿಯ ಗೊಂದಲಗಳಾಗಿತ್ತು.
ಅಂತಿಮವಾಗಿ ಜುಲೈ 19ನೇ ತಾರೀಕಿನಿಂದ ಮಹಿಳೆಯರಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಈವರೆಗೂ ಕೂಡ 1.05 ಲಕ್ಷಕ್ಕೂ ಹೆಚ್ಚು ಮಹಿಳೆಯರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿದೆ ಹಾಗೆ ಇವರಿಗೆ ಹಣ ವರ್ಗಾವಣೆ ಆಗುವ ದಿನಾಂಕದ ಕುರಿತು ಒಂದು ವಿಶೇಷ ಮಾಹಿತಿಯನ್ನು ನೀಡಿದೆ.
ರೇಷನ್ ಕಾರ್ಡ್ ಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡುವುದು ಕಡ್ಡಾಯ. ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!
ಅಂತಿಮವಾಗಿ ಆಗಸ್ಟ್ 30ರಂದು ಮೈಸೂರಿನಲ್ಲಿ (Mysore Gruhalakshmi launching program) ಗೃಹಲಕ್ಷ್ಮಿ ಯೋಜನೆ ಲಾಂಚಿಂಗ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರು (Rahul Gandi) ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುತ್ತಾರೆ ಆಯಾ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಈ ಸಂಭ್ರಮವನ್ನು ಆಚರಿಸಿ.
ಈ ಯೋಜನೆಯನ್ನು ರೂಪಿಸುವ ಉದ್ದೇಶವನ್ನು ಒಂದು ಸಂದೇಶವಾಗಿ ಎಲ್ಲರಿಗೂ ತಿಳಿಸಲು ಸರ್ಕಾರ ನಿರ್ಧಾರ ಮಾಡಿದೆ. ಆಗಸ್ಟ್ 30ನೇ ತಾರೀಕಿನಂದು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಲಿದೆ ಎನ್ನುವ ಮಾಹಿತಿ ನೀಡುವ ಇಲಾಖೆಯು ಇದರ ಜೊತೆಗೆ ಇನ್ನೊಂದು ಶಾ’ಕಿಂ’ಗ್ ನ್ಯೂಸ್ ನೀಡಿದೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿರುವ ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಅಂದರೆ ಆಗಸ್ಟ್ ತಿಂಗಳನ್ನು ಸಹಾಯಧನವನ್ನು ಪಡೆಯಲಿದ್ದಾರೆ.
ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!
ಆಗಸ್ಟ್ 25ರ ಬಳಿಕ ಅರ್ಜಿ ಸಲ್ಲಿಸಿದವರಿಗೆ ಸೆಪ್ಟೆಂಬರ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಸಹಾಯದಿಂದ ಸಿಗಲಿದೆ ಎನ್ನುವ ಮಾಹಿತಿಯನ್ನು ಇಲಾಖೆ ಹಂಚಿಕೊಂಡಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯರ ಹೆಸರು ಇರದೇ ಇರುವ ಕಾರಣ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿರುವ ಕಾರಣ, ಬ್ಯಾಂಕ್ ಅಕೌಂಟ್ ಹಾಗೂ ಪಡಿತರ ಚೀಟಿಯಲ್ಲಿರುವ ಹೆಸರು ಹೊಂದಾಣಿಕೆ ಆಗದ ಕಾರಣ ಇನ್ನಿತರ ಕಾರಣಗಳಿಂದಾಗಿ ಅನೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಇವುಗಳನ್ನು ಸರಿಪಡಿಸಿಕೊಂಡು ಶೀಘ್ರವಾಗಿ ಅರ್ಜಿ ಸಲ್ಲಿಸಿದವರು ಮುಂದಿನ ತಿಂಗಳಿನಿಂದ ಸಹಾಯಧನ ಪಡೆಯಲಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಡೆಯ ದಿನಾಂಕ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ತಿಳಿಸಿದ್ದಾರೆ.