ಈ ಜಿಲ್ಲೆಯವರಿಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಫಲಾನುಭವಿಗಳಾಗಿರುವ ಎಲ್ಲಾ ಮಹಿಳೆಯರಿಗೂ ಕೂಡ ಈ ಕುರಿತು ಇನ್ನೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಸೆಪ್ಟೆಂಬರ್ ತಿಂಗಳ (September month amount) ಅದರೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ.

ಆದರೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುವ ವಿಚಾರದಲ್ಲಿ ಅನೇಕ ಮಹಿಳೆಯರು ಇನ್ನೂ ಸಹ ಗೊಂದಲದಲ್ಲಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಮಾಹಿತಿ ಪ್ರಕಾರ ಮೊದಲನೇ ಕಂತಿನ ಹಣ ಪಡೆಯಲು 1.10 ಕೋಟಿ ಮಹಿಳೆಯರು ಅರ್ಹರಾಗಿದ್ದರು, ಇದರಲ್ಲಿ 70% ಮಹಿಳೆಯರಿಗೆ ಮಾತ್ರ ಹಣ ತಲುಪಿದೆ, ಉಳಿದ 30% ಮಹಿಳೆಯರಿಗೆ ಇನ್ನೂ ಸಹ ಹಣ ವರ್ಗಾವಣೆಯಾಗಿಲ್ಲ.

ತಲೆದಿಂಬು ಇಟ್ಕೊಂಡು ಮಲಗ್ತೀರಾ.? ಆಗಿದ್ರೆ ತಪ್ಪದೆ ಇದನ್ನ ನೋಡಿ.!

ಇದರಲ್ಲಿ 6-7 ಲಕ್ಷ ಮಹಿಳೆಯರ ಖಾತೆಗಳು ಇನ್ ಆಕ್ಟಿವ್ ಆಗಿರುವ (Bank account inactive) ಮತ್ತು ಕೆಲವರ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮತ್ತು NPCI ಮಾಪಿಂಗ್ ಆಗಿರದ (Aadhar Seeding NPCI Mapping) ಜೊತೆಗೆ ನೀಡಿರುವ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿಗಳಲ್ಲಿ ಹೆಸರು ಒಂದೇ ರೀತಿ ಇರದ ಕಾರಣ (documents mismatch) ಇಂತಹ ಸಮಸ್ಯೆಗಳಿಂದ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ.

ಆದರೆ ಉಳಿದ ಫಲಾನುಭವಿಗಳ ಖಾತೆಗೆ ಖಂಡಿತವಾಗಿಯೂ ಸೆಪ್ಟೆಂಬರ್ ಅಂತ್ಯದೊಳಗೆ ಹಣ ವರ್ಗಾವಣೆ ಮಾಡಲಾಗುವುದು ಎನ್ನುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು (Women and child welfare department) ನೀಡುತ್ತಿದ್ದಾರೆ. ಸರ್ಕಾರವು RBI ಸೂತ್ರಗಳ ಪ್ರಕಾರವೇ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ ಹಾಗಾಗಿ ಪ್ರತಿಯೊಂದು ಖಾತೆಯನ್ನು ಪರಿಶೀಲಿಸಿ, ನಂತರ ಹಣ ತುಂಬಿಸಲು ಸಮಯ ಹಿಡಿಯುತ್ತದೆ.

ಸೆಪ್ಟೆಂಬರ್ 26ಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ, ಈ ಮಹಿಳೆಯರಿಗೆ ಮಾತ್ರ.!

ದಿನಕ್ಕೆ ಇಂತಿಷ್ಟೇ ಖಾತೆಗಳು ಎನ್ನುವ ಮಿತಿ ಇರುವುದರಿಂದ ಹಂತ ಹಂತವಾಗಿ ಸರ್ಕಾರವು ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆ ಮಾಡುತ್ತಿದೆ, ಫಲಾನುಭವಿಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ ಕೂಡ ಮಹಿಳೆಯರಿಗೆ ಹಣ ತಲುಪಲು ತಡವಾಗುತ್ತಿದೆ ಇದರ ನಡುವೆ ಎರಡನೇ ಕಂತಿನ ಹಣ ವರ್ಗಾವಣೆ ಕುರಿತು ಕೂಡ ಸುದ್ದಿ ಹರಿದಾಡುತ್ತಿದೆ.

ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಎರಡು ತಿಂಗಳ ಸಹಾಯಧನಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,600 ಕೋಟಿ ಹಣ ಮಂಜೂರು ಮಾಡಿದೆ. ಆದ್ದರಿಂದ ಎರಡನೇ ಕಂತಿನ ಹಣವನ್ನು ನೀಡಲು ಇಲಾಖೆ ಸಜ್ಜಾಗಿದೆ. ಮೋದಲ ಕಂತಿನ ಹಣವನ್ನು ಇನ್ನೂ ಪಡೆಯದವರು ತಮಗೆ ಆಗಸ್ಟ್ ಮಾಸದ ಹಣ ಬರುವುದಿಲ್ಲವೇ? ಎರಡನೇ ಕಂತಿನ ಹಣ ಮಾತ್ರ ಬರುತ್ತದೆಯೇ ಎನ್ನುವ ಗೊಂದಲಕ್ಕೊಳಗಾಗಿದ್ದಾರೆ.

ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!

ಆದರೆ ಈ ರೀತಿ ಏನು ಇಲ್ಲ ಈಗಾಗಲೇ ಹಣ ಪಡೆದಿರುವ ಮಹಿಳೆಯರಿಗೆ ಎರಡನೇ ಕಂತಿನ 2,000ರೂ., ಹಣ ಪಡೆಯಲು ಸಾಧ್ಯವಾಗದೇ ಇರುವ ಅರ್ಹ ಫಲಾನುಭವಿಗಳಿಗೆ ಒಟ್ಟಿಗೆ ಎರಡು ತಿಂಗಳ 4,000ರೂ. ಒಟ್ಟಿಗೆ ಜಮೆ ಆಗುತ್ತಿದೆ. ಜೊತೆಗೆ ಈ ಮೇಲೆ ತಿಳಿಸಿದಂತೆ ಖಾತೆಯಲ್ಲಿ ಸಮಸ್ಯೆ ಆಗಿರುವವರು ಆ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಿಕೊಂಡರೆ ಅವರಿಗೂ ಕೂಡ ಹಣ ವರ್ಗಾವಣೆ ಆಗಲಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ.

ಯಾವೆಲ್ಲಾ ಜಿಲ್ಲೆಗಳಿಗೆ ಎರಡನೇ ಕಂತಿನ ಹಣ ಮೊದಲು ಬಿಡುಗಡೆ ಆಗಿಲಿದೆ ಎಂದು ನೋಡುವುದಾದರೆ ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೊಡಗು, ವಿಜಯನಗರ, ಬಳ್ಳಾರಿ, ರಾಯಚೂರು, ಬೀದರ್ ಕಲ್ಬುರ್ಗಿ, ಯಾದಗಿರಿ ಜಿಲ್ಲೆಗೆ ಸೆಪ್ಟೆಂಬರ್ 26ರಂದು ಎರಡನೇ ಕಂತಿನ ಹಣ ಸಿಗಲಿದೆ, ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಫಲಾನುಭವಿಗಳು ಖಾತೆಗೆ ಈ ಹಣ ತಲುಪಲಿದೆ ಎನ್ನುವ ಮಾಹಿತಿಯನ್ನು ಇಲಾಖೆ ಮೂಲಗಳು ತಿಳಿಸಿವೆ.

ರೈತರ ಜಮೀನಿನಲ್ಲಿ ಇರುವ ಅಕ್ರಮ ಪಂಪ್ ಸೆಟ್ ಗಳಿಗೆ ಸಕ್ರಮ ಭಾಗ್ಯ ನೀಡಲು ಮುಂದಾದ ಸರ್ಕಾರ ಯಾವ ರೀತಿಯ ಪಂಪ್ ಸೆಟ್ ಗಳು ಸಕ್ರಮವಾಗಲಿದೆ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now