ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ.! ಇನ್ಮುಂದೆ RC ಮತ್ತು DL ಗಾಗಿ ಅಲೆದಾಡಬೇಕಿಲ್ಲ. ಮನೆ ಬಾಗಿಲಿದೆ ಪೋಸ್ಟಲ್ ಮೂಲಕ ಬರಲಿದೆ.!

ವಾಹನ ಖರೀದಿಸುವುದು ಮಾತ್ರವಲ್ಲದೆ ಖರೀದಿಸಿದ ಮೇಲೆ ವಾಹನವನ್ನು ರಿಜಿಸ್ಟರ್ ಮಾಡಿಸಿಕೊಂಡು ದಾಖಲೆ ಪತ್ರ ಪಡೆಯುವುದು (RC Card) ಕೂಡ ಜವಾಬ್ದಾರಿ ಮತ್ತು ಡ್ರೈವಿಂಗ್ ಲೈಸೆನ್ಸ್ (Driving License) ಅರ್ಹತಾ ಪರೀಕ್ಷೆಗಳನ್ನು ಎದುರಿಸುವುದು ಮಾತ್ರವಲ್ಲದೆ ಭೌತಿಕ ಕಾರ್ಡ್ ನ್ನು ಸಂಬಂಧಪಟ್ಟ RTO ಕಚೇರಿಯಿಂದ ಪಡೆಯಬೇಕು.

WhatsApp Group Join Now
Telegram Group Join Now

ಇದಕ್ಕಾಗಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಂಡು ಪದೇಪದೇ RTO ಕಛೇರಿಗೆ ಅಲೆದಾಡುವುದು ವಾಹನ ಮಾಲೀಕರರ ಪಾಡಗಿತ್ತು. ಇದರಿಂದ ಸಾಕಷ್ಟು ಮಂದಿ ಬೇಸತ್ತು ಹೋಗಿದ್ದರು. ಇದನ್ನು ಅರಿತು ವಾಹನ ಮಾಲೀಕರು ಮತ್ತು ಸವಾರರಿಗೆ ಅನುಕೂಲವಾಗುವಂತಹ ಒಂದು ಮಹತ್ವದ ನಿರ್ಧಾರಕ್ಕೆ ಕರ್ನಾಟಕ ಸಾರಿಗೆ ಇಲಾಖೆ (Karnataka transport department) ಬಂದಿದೆ.

ಇನ್ಮುಂದೆ ಕೈ ಬರಹದ ಅರ್ಜಿ ಬಂದ್, ಇ-ಸ್ವತ್ತು, ಖಾತೆ ಬದಲಾವಣೆಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ.! ಈ ಸೇವೆ ಆರಂಭ ಯಾವಾಗ ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇನ್ನು ಮುಂದೆ ವಾಹನ ಮಾಲೀಕರು ಅಥವಾ ವಾಹನ ಸವಾರರು (Vehicle owners and drivers) ತಮ್ಮ ದಾಖಲೆಗಳನ್ನು ಪಡೆಯುವುದಕ್ಕೆ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಈ ಕುರಿತು ಸಾರಿಗೆ ಇಲಾಖೆ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. DL, RC ಕಾರ್ಡ್​ಗಳನ್ನು ಇನ್ನು ಮುಂದೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿ ಕೊಡುತ್ತಿದೆ.

ಇದುವರೆಗೂ ಕೂಡ ವಾಹನ ಮಾಲೀಕರು ಅಥವಾ ವಾಹನ ಸವಾರರು ತಮ್ಮ RC ಕಾರ್ಡ್ ಮತ್ತು DL ಗಳನ್ನು ಪಡೆಯಬೇಕು ಎಂದರೆ RTO ಕಚೇರಿಗಳಿಗೆ ಭೇಟಿ ಕೊಡಬೇಕಿತ್ತು, ಅಲ್ಲಿ ಅಧಿಕಾರಿಗಳಿಗೆ ತಿಳಿಸಿ ನಂತರ ಅವರು ಪರಿಶೀಲನೆ ನಡೆಸಿ ಅವರ ಹೆಸರಿನಲ್ಲಿರುವ ದಾಖಲೆಗಳನ್ನು ಹುಡುಕಿ ಸಹಿ ಪಡಿದು ವ್ಯಕ್ತಿಯ ಕೈಗೆ ಕೊಟ್ಟು ಕಳುಹಿಸುತ್ತಿದ್ದರು. ಇದು ಬಹಳ ಹಳೆಯ ವಿಧಾನವಾಯಿತು.

ನಾರ್ಮಲ್ ಡೆಲಿವರಿ ಅಪರೂಪ ಆಗಿರುವುದು ಯಾಕೆ ಗೊತ್ತಾ.? ನಿಮಗೂ ನಾರ್ಮಲ್ ಡೆಲಿವರಿ ಆಗಬೇಕಾ ವೈದ್ಯರ ಈ ಸಲಹೆ ಪಾಲಿಸಿ ಸಾಕು.!

ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಎಲ್ಲಾ ಕ್ಷೇತ್ರದ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ಕಚೇರಿಗಳಿಗೆ ಹೋಗಿ ಕೆಲಸಗಳನ್ನು ಪಡೆದುಕೊಳ್ಳುವ ಮನೋವೃತ್ತಿ ಕಡಿಮೆಯಾಗುತ್ತಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂತಹ ದಾಖಲೆಗಳು ಕೂಡ ನೇರವಾಗಿ ಮನೆ ವಿಳಾಸಕ್ಕೆ ಬಂದು ತಲುಪುತ್ತವೆ ಹಾಗಾಗಿ ಈ ನಿಟ್ಟಿನಲ್ಲಿ ಸಾರಿಗೆ ಕೂಡ ಮುಂದೆ ಸಾಗಿದೆ.

ಇನ್ನು ಮುಂದೆ RC ಕಾರ್ಡ್ ಮತ್ತು DL ಗಳನ್ನು ಪೋಸ್ಟಲ್ (through post) ಮೂಲಕವೇ ಸಾರಿಗೆ ಇಲಾಖೆ ಮನೆಗಳಿಗೆ ಕೊರಿಯರ್ (corier) ಮಾಡಲಿದೆ. ಎನ್ವಲಪ್ ಆದ ಕವರ್​ನಲ್ಲಿ ಸೂಚನಾ ಫಲಕಗಳೊಂದಿಗೆ (envelop cover with details) ಕೊರಿಯರ್ ವ್ಯವಸ್ಥೆಯಲ್ಲಿ ದಾಖಲೆ ನಿಮ್ಮ ಮನೆಗೆ ಬರಲಿದೆ. ಈ ಸಂಬಂಧ ಅಂಚೆ ಇಲಾಖೆಯೊಂದಿಗೆ RTO ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಇಂತವರಿಗೆ ಒಂದು ಲಕ್ಷದವರೆಗಿನ ಸಾಲ ಮನ್ನಾ.! ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಜಾರಿ.! ಸಾಲ ಪಡೆದಿರುವವರು ಈ ಸುದ್ದಿ ನೋಡಿ.!

ಈ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪ ಮಾಡಿ ಸರ್ಕಾರದಿಂದಲೂ ಅನುಮೋದನೆ ಪಡೆದುಕೊಂಡಿದ್ದಾಗಿದೆ. ಸಾರಿಗೆ ಸಚಿವರ‌ ನೇತೃತ್ವದಲ್ಲಿ ಸಭೆ ನಡೆಸಿ ಈಗ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಈ ಸಭೆಗೆ ಮುಖ್ಯ ಅಂಚೆ ಕಚೇರಿ ಆಯುಕ್ತ, ಸಾರಿಗೆ ಮುಖ್ಯ ಆಯುಕ್ತರು ಕೂಡ ಭಾಗಿಯಾಗಿ ನೂತನ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಆದಕಾರಣ ಸಾರಿಗೆ ಇಲಾಖೆಯಿಂದ ಹೊರ ಬಿದ್ದಿರುವ ಆದೇಶ ಪತ್ರದ ಪತ್ರಿಕ ಪ್ರಕಟಣೆಯು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದಿನಾಂಕ 18 ಆಗಸ್ಟ್ 2023 ರಂದು ಸಾರಿಗೆ ಇಲಾಖೆ ವತಿಯಿಂದ ಎಲ್ಲಾ ವಾಹನ ಸವಾರರಿಗೂ ಹಾಗೂ ಮಾಲೀಕರಿಗೂ ಈ ಸಿಹಿ ಸುದ್ದಿ ನೀಡಲಾಗಿದೆ.

ಬೆಳ್ಳಂ ಬೆಳಗ್ಗೆ SBI ಬ್ಯಾಂಕ್ ಗ್ರಾಹಕರಿಗೆ ಶಾ’ಕ್ ಇಂದಿನಿಂದಲೇ 5 ಹೊಸ ರೂಲ್ಸ್ ಜಾರಿ.! SBI ಬ್ಯಾಂಕ್ ನಾ ಪ್ರತಿಯೊಬ್ಬ ಗ್ರಾಹಕರು ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

ಇನ್ಮುಂದೆ ಸ್ಪೀಡ್ ಪೋಸ್ಟ್ ಮೂಲಕವೇ RC, DL ಕಾರ್ಡ್​ಗಳು ಮನೆ ಹುಡುಕಿ ಬರಲಿವೆ. ಅರ್ಜಿದಾರರು ಆನ್​ಲೈನ್​ ಮೂಲಕವೂ ತಮ್ಮ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now