ಲೋಕಸಭಾ ಚುನಾವಣೆ 2024 ರಂಗೇರಿದೆ. ಮತದಾನದ ದಿನಾಂಕ ಕೂಡ ಘೋಷಣೆಯಾಗಿ ಭಾರತದಲ್ಲಿ ಏಳು ಹಂತದಲ್ಲಿ ಹಾಗೂ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದಕ್ಕೆ ತಿಳಿದು ಬಂದಿದೆ. ಈ ಮಧ್ಯೆ ಇಂದು ನಾವು ಈ ಅಂಕಣದಲ್ಲಿ ನಿಮಗೆ ಮತದಾರರ ಪಟ್ಟಿ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.
ನೀವು ಈಗ ನಾವು ಹೇಳಿರುವ ವಿಧಾನದ ಮೂಲಕ ಈ ವರ್ಷ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದೀರಿಯೇ? ಎನ್ನುವುದನ್ನು ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ ಕನ್ಫರ್ಮ್ ಮಾಡಿಕೊಳ್ಳಬಹುದು. ಹಾಗೆ ಏನಾದರೂ ಒಂದು ವೇಳೆ ನಿಮ್ಮ ಹೆಸರು ಮಿಸ್ ಆಗಿದ್ದರೆ ಏನು ಮಾಡಬೇಕು? ಎನ್ನುವುದನ್ನು ಕೂಡ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!
* ಮೊದಲಿಗೆ ಗೂಗಲ್ ನಲ್ಲಿ ECO ಎಂದು ಟೈಪ್ ಮಾಡಿ ಮುಖ್ಯ ಚುನಾವಣಾ ಅಧಿಕಾರಿ ಕರ್ನಾಟಕ ಎನ್ನುವ ಲಿಂಕ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
* ಮುಖ್ಯ ಚುನಾವಣಾ ಅಧಿಕಾರಿ ಕರ್ನಾಟಕ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ. ಇದರಲ್ಲಿ ನಿಮ್ಮ ವೋಟರ್ ಐಡಿ ಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಪಡೆಯಬಹುದು.
* ಪೇಜ್ ಸ್ಕೋಲ್ ಮಾಡಿದರೆ ನನ್ನ ಅಗತ್ಯತೆ ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ಮತದಾರರ ಪಟ್ಟಿ ವೀಕ್ಷಣೆ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕೆಲವು ಆಯ್ಕೆಗಳು ಇರುತ್ತದೆ ಮೊದಲನೇಯದಾಗಿ ಇರುವ ಅಂತಿಮ ಮತದಾರರ ಪಟ್ಟಿ – 2024 ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಈ ಸುದ್ದಿ ಓದಿ:- ಮನೆ ಕಟ್ಟಿಸುವಾಗ ಸೈಟ್ ನಲ್ಲಿ ಮರ ಗಿಡ ಬಂಡೆ ಬಂದರೆ ಏನು ಮಾಡಬೇಕು.? ಪರಿಹಾರವೇನು ನೋಡಿ.!
* ವೋಟರ್ ಸರ್ವೀಸ್ ಪೋರ್ಟಲ್ (Voter Service Portal) ಎನ್ನುವ ಆಕ್ಷನ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ನಿಮ್ಮ ಆಯ್ಕೆಯ ಭಾಷೆಯನ್ನು ಸೆಲೆಕ್ಟ್ ಮಾಡಿ ನೀಡಿರುವ ಕ್ಯಾಪ್ಚಾ ಕೋಡ್ ಸರಿಯಾಗಿ ಎಂಟ್ರಿ ಮಾಡಿ
* ಇಷ್ಟಾದ ಕೂಡಲೇ ಸಾಕಷ್ಟು ಆಪ್ಷನ್ ಗಳು ಸಿಗುತ್ತವೆ, ಅದರಲ್ಲಿ ಹುಡುಕುವುದು ಕಷ್ಟವಾದರೆ ಸರ್ಚ್ ಬಾರ್ (Search) ನಲ್ಲಿ ನಿಮ್ಮ ಊರಿನ ಹೆಸರನ್ನು ಟೈಪ್ ಮಾಡಿ ಆಗ ನೀವು ಸೆಲೆಕ್ಟ್ ಮಾಡಿದ ಗ್ರಾಮ ಪಂಚಾಯಿತಿ ಲಿಸ್ಟ್ ಶೋ ಆಗುತ್ತದೆ.
ಈ ಸುದ್ದಿ ಓದಿ:- ಇದೊಂದು ಕಾರ್ಡ್ ಇದ್ರೆ ಸಾಕು, 3 ಲಕ್ಷ ಸಾಲ ಸಿಗುತ್ತೆ ರೈತರಿಗಾಗಿ ಇರುವ ವಿಶೇಷ ಯೋಜನೆ.!
* 2024ರ ಎನ್ರೋಲ್ ಮೇಲೆ ಕ್ಲಿಕ್ ಮಾಡಿದರೆ ಒಂದು ಫೈಲ್ ಡೌನ್ಲೋಡ್ ಆಗುತ್ತದೆ ಅದನ್ನು ಓಪನ್ ಮಾಡಿ ಸ್ಕ್ರೋಲ್ ಮಾಡುತ್ತಾ ಹೋದರೆ ನೀವು ಸರ್ಚ್ ಮಾಡಿದ ಆಪ್ಷನ್ ನಲ್ಲಿ ಇರುವ ವಾರ್ಡ್ ನ ಸಂಪೂರ್ಣ ಡೀಟೇಲ್ಸ್, ಪೂರ್ತಿ ಮತದಾರರ ಪಟ್ಟಿ, ಮತದಾನ ಕ್ಷೇತ್ರ ಅದರ ಮ್ಯಾಪ್, ಮತದಾನ ಮಾಡುವ ಸ್ಥಳದ ವಿವರ ಇತ್ಯಾದಿ ಮಾಹಿತಿ ಸಿಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ನೀವು ಚೆಕ್ ಮಾಡಿ ತಿಳಿದುಕೊಳ್ಳಬಹುದು.
* ಒಂದು ವೇಳೆ ಏನಾದರೂ ಇದರಲ್ಲಿ ನಿಮ್ಮ ಹೆಸರು ಮಿಸ್ ಆಗಿದ್ದರೆ ಅಥವಾ ನೀವು ಹೊಸದಾಗಿ ಈಗಷ್ಟೇ 18 ವರ್ಷ ಪೂರೈಸಿ ನೋಂದಾಯಿಸಿಕೊಳ್ಳಬೇಕು ಎನ್ನುವುದಿದ್ದರೆ, ತಿದ್ದುಪಡಿ ಮಾಡಿಸಬೇಕಿದ್ದರೆ ಈ ಮೆನು ಇಂದ ಬ್ಯಾಕ್ ಗೆ ಹೋದರೆ ಆಪ್ಷನ್ ಗಳು ಸಿಗುತ್ತವೆ. ಅದನ್ನು ಕ್ಲಿಕ್ ಮಾಡಿ ನೀಡಿರುವ ಕಂಡೀಷನ್ ಗಳನ್ನು ಪೂರೈಸಿ ಪೂರಕ ದಾಖಲೆಗಳನ್ನು ಒದಗಿಸುವ ಮೂಲಕ ಉಚಿತವಾಗಿ ನೋಂದಾಯಿಸಿಕೊಂಡು ನಿಮ್ಮ ವೋಟರ್ ಐಡಿ ಪಡೆದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.