ಮನೆ ಕಟ್ಟಿಸುವುದು ಎಂದ ಮೇಲೆ ಪ್ರತಿಯೊಂದು ವಿಚಾರವೂ ಕೂಡ ಬಹಳ ಇಂಪಾರ್ಟೆಂಟ್. ಮನೆಗೆ ಬಳಸುವ ಸಿಮೆಂಟ್, ಕಬ್ಬಿಣ, ಲ್ಯಾಮಿನೇಟ್ ಗಳು ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್ ಫಿಟ್ಟಿಂಗ್ ಗಳು ಎಷ್ಟು ಮುಖ್ಯವೋ ಹಾಗೆಯೇ ಗ್ರಾನೈಟ್ ಗಳು, ವಿಂಡೋ, ಡೋರ್, ಕಮೋಡ್ ಕೂಡ ಅಷ್ಟೇ ಮುಖ್ಯ.
ಮನೆ ಕಟ್ಟಿ ಫಿನಿಷ್ ಆದಮೇಲೆ ಹೀಗೆ ಮಾಡಬಾರದಿತ್ತು ಬೇರೆಯದು ಹಾಕಬೇಕಿತ್ತು ಎನ್ನುವ ಬೇಜಾರು ಇರಬಾರದು ಹಾಗಾಗಿ ಮನೆ ಕಟ್ಟುವಾಗಲೇ ಎಲ್ಲದರ ಬಗ್ಗೆ ಪ್ಲಾನಿಂಗ್ ಮಾಡಿಕೊಂಡು ಡಿಸೈಡ್ ಆಗಬೇಕು. ಕಿಚನ್ ಹಾಲ್ ಬೆಡ್ರೂಮ್ ಮಾತ್ರವಲ್ಲ ಬಾತ್ ರೂಮ್ನಲ್ಲೂ ಕೂಡ ಎಲ್ಲ ವಿಷಯಗಳ ಬಗ್ಗೆ ಸರಿಯಾಗಿ ಡಿಸೈಡ್ ಮಾಡಬೇಕು.
ಹಾಗಾಗಿ ಇಂದು ಈ ಅಂಕಣದಲ್ಲಿ ಮನೆಗಳಿಗೆ ಯಾವ ಕಮೋಡ್ ಸೂಕ್ತ ಎಷ್ಟೆಲ್ಲ ವಿಧದ ಕಮೋಡ್ ಗಳು ಸಿಗುತ್ತವೆ? ಹೇಗೆ ಸೆಲೆಕ್ಟ್ ಮಾಡುವುದು? ಎನ್ನುವುದನ್ನು ತಿಳಿಸುತ್ತಿದ್ದೇವೆ. ವಾಲ್ ಮೌಂಟೆಡ್ ಮತ್ತು ಫ್ಲೋರ್ ಮೌಂಟೆಡ್ ಎರಡು ರೀತಿಯ ಕಮೋಡ್ ಗಳು ಸಿಗುತ್ತವೆ ಹಾಗೆಯೇ ಸಿಂಗಲ್ ಪೀಸ್ ಮತ್ತು ಟೂ ಪೀಸ್ ಕೂಡ ಸಿಗುತ್ತದೆ.
ಈ ಸುದ್ದಿ ಓದಿ:- ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಉಚಿತ, ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗಾಗಿ ಮತ್ತೆ 5 ಹೊಸ ಗ್ಯಾರಂಟಿ ಯೋಜನೆಗಳ ಘೋಷಣೆ.!
ಅನುಕೂಲತೆ ಅನಾನುಕೂಲತೆ ಬಗ್ಗೆ ವಿಚಾರ ಮಾಡುವುದಾದರೆ ವಾಲ್ ಮೌಂಟೆಡ್ ಹಾಕಿಸುವುದರಿಂದ ಲುಕ್ ಚೆನ್ನಾಗಿರುತ್ತದೆ, ಫ್ಲಶ್ ಟ್ಯಾಂಕ್ ಕೂಡ ವಾಲ್ ಒಳಗಡೆ ಕನ್ಸ್ಟ್ರಕ್ಷನ್ ಮಾಡಿಸಬಹುದು ಬೇಡ ಎಂದರೆ ವಾಲ್ ಗೆ ಮೌಂಟ್ ಮಾಡಿ ಕೊಡುತ್ತಾರೆ, ಸ್ಪೇಸ್ ಕಡಿಮೆ ಇದ್ದರೂ ಆಗುತ್ತದೆ.
ಇದರಲ್ಲಿ ಫೀಸ್ ಟ್ಯಾಂಕ್ ಎಲ್ಲವನ್ನು ಸಪರೇಟ್ ಆಗಿ ಖರೀದಿಸಬೇಕು ಬೆಲೆ ವಿಚಾರದಲ್ಲೂ ಕೂಡ ದುಬಾರಿ. ಆರಂಭಿಕ ಬೆಲೆಯೇ 10k – 11k ಇರುತ್ತದೆ. ಬಾಳಿಕೆಯು ನಾಲ್ಕೈದು ವರ್ಷ ಗ್ಯಾರಂಟಿ ನಂತರ ಒಂದು ವೇಳೆ ರಿಪೇರಿಗೆ ಬಂದರೆ ಬಹಳ ಕಷ್ಟ. ಟೈಲ್ಸ್ ಕೂಡ ರಿಮೂವ್ ಮಾಡಿ ರಿಪೇರಿ ಮಾಡಬೇಕಾಗುತ್ತದೆ.ಸೀಟ್ ಪೀಸ್ ಅಟ್ಯಾಚ್ ಇರುವ ಕಮೋಡ್ ಕೂಡ (5-6k) ಸಿಗುತ್ತದೆ, ಆದರೆ ಹೇರ್ ಕ್ರಾಕ್ ಆದರೆ ಫುಲ್ ಸೆಟ್ ಚೇಂಜ್ ಮಾಡಬೇಕು.
ಫ್ಲೋರ್ ಮೌಂಟೆಡ್ ಕಮೋಡ್ ಗಳಾದರೆ ರಿಪೇರಿ ಬಂದರೆ ಸುಲಭವಾಗಿ ಮಾಡಿಕೊಡುತ್ತಾರೆ, ಫ್ಲೋರ್ ಕ್ಲೀನಿಂಗ್ ಮಾಡಲು ಸ್ವಲ್ಪ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಈ ರೀತಿ ಸೆಟ್ಗಳಲ್ಲಿ ವೈಟ್ ಕಡಿಮೆ ರೇಟ್ ಎಂದು ಎಲ್ಲರೂ ಹಾಕಿಸುತ್ತಾರೆ ಇದರ ಬದಲು ಬೇರೆ ಕಲರ್ ಚೂಸ್ ಮಾಡುವ ಆಪ್ಷನ್ ಇದ್ದರೆ ಒಳ್ಳೆಯದು.
ಈ ಸುದ್ದಿ ಓದಿ:- ಟಾಟಾ ನ್ಯಾನೋ ಎಲೆಕ್ಟ್ರಿಕ್ ಬಿಡುಗಡೆ ಬಡವರಿಗೆ ಸಿಹಿ ಸುದ್ದಿ, ಬೆಲೆ ಎಷ್ಟು ಗೊತ್ತಾ.?
ಸೆರಾಮಿಕ್ ಸೀಟ್ ಪ್ಲಾಸ್ಟಿಕ್ ಟ್ಯಾಂಕ್ ಕಮೋಡ್ ಇಲ್ಲದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ, ರೂ.2000 ಆರಂಭಿಕ ಬೆಲೆಗೆ ಸಿಗುತ್ತದೆ ಆದರೆ ರಿಪೇರಿ ಬರುವ ಚಾನ್ಸಸ್ ಹೆಚ್ಚು ಹಾಗಾಗಿ ಸರಿಯಾಗಿ ಮೆಂಟೇನ್ ಮಾಡಿಕೊಳ್ಳಬೇಕು. ಟ್ಯಾಂಕ್ ಹಾಗೂ ಸೀಟ್ ಸೆಪರೇಟ್ ಇರುತ್ತದೆ, ಯಾವುದಾದರೂ ಪಾರ್ಟ್ ಹಾಳಾದರೂ ಕಡಿಮೆ ಬೆಲೆಗೆ ಸಿಗುವುದರಿಂದ ಟೆನ್ಶನ್ ಇರುವುದಿಲ್ಲ.
ನಾವು ಅಂಗಡಿ ಗೆ ಹೋಗಿ ನೋಡಿದಾಗ ಹತ್ತಾರು ವೆರೈಟಿ ನೋಡಿ ಕನ್ಫ್ಯೂಸ್ ಆಗುತ್ತದೆ ಆತರ ನಮ್ಮ ಬಜೆಟ್ ನೋಡಿಕೊಂಡು ಮತ್ತು ಮೇಂಟೈನ್ಸ್ ಬಗ್ಗೆ ಗಮನ ಕೊಟ್ಟು ರಿಪೇರಿ ಬಂದರೆ ಎನ್ನುವುದನ್ನು ಕೂಡ ಯೋಚನೆ ಮಾಡಿ ಡಿಸೈಡ್ ಮಾಡಬೇಕು.
ರೌಂಡ್ ಓವರ್ ಸ್ಕ್ವಯರ್ ಶೇಪ್ ಸಿಗುತ್ತದೆ, ಬಹಳ ದೊಡ್ಡದಾದ ಕಮೋಡ್ ಹಾಕಿಸುವ ಅವಶ್ಯಕತೆ ಇರುವುದಿಲ್ಲ ನಿಮ್ಮ ಬಾತ್ರೂಮ್ ಸ್ಪೇಸ್ ಮೇಲೆ ಡಿಸೈಡ್ ಮಾಡಿ ಹಾಕಿಸುವಾಗ ಕೂಡ ಹೆಚ್ಚು ಹೈಟ್ ಅಥವಾ ಕಡಿಮೆ ಹೈಟ್ ಹಾಕಿಸಿದರು ಕಂಫರ್ಟೆಬಲ್ ಇರುವುದಿಲ್ಲ ಇದೆಲ್ಲವನ್ನು ನೋಡಿ ಡಿಸೈಡ್ ಮಾಡಿ.