ಗಂಡನ ಮನೆಯವರ ಮೇಲೆ ಹೆಂಡ್ತಿ ಸುಳ್ಳು ಕೇಸ್ ಹಾಕಿದ್ರೆ ಹೆದರುವ ಅವಶ್ಯಕತೆ ಇಲ್ಲ.! ಈ ಬಗ್ಗೆ ಕಾನೂನು ಏನು ಹೇಳುತ್ತದೆ ಗೊತ್ತಾ.?

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳನ್ನು ಹಾಗೂ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ಕೌಟುಂಬಿಕ ದೌರ್ಜನ್ಯಗಳ ಕೇಸ್ ಗಳು ಫೈಲ್ ಆಗುತ್ತಿವೆ. ಸೆಕ್ಷನ್ 499A ಕೆಳಗಡೆ ಪತಿ ಹಾಗೂ ಪತಿಯವರ ಮನೆಯವರಿಂದ ಕಿರುಕುಳ (Harrasment) ಆಗುತ್ತಿದೆ ಎಂದು ಹೆಣ್ಣು ಮಕ್ಕಳು, ಕೇಸ್ (case) ದಾಖಲಿಸುತ್ತಿದ್ದಾರೆ. ಈ ರೀತಿ ದಾಖಲಾಗುತ್ತಿರುವ ಕೇಸ್ ಗಳಲ್ಲಿ 60% – 70% ಎಲ್ಲವೂ ಫೇ’ಕ್ ಕೇಸ್ (fake case) ಗಳಾಗಿವೆ ಎನ್ನುವುದು ಸಮೀಕ್ಷೆಯೊಂದರಲ್ಲಿ ಬಯಲಾಗಿದೆ.

WhatsApp Group Join Now
Telegram Group Join Now

ಆದರೆ ಕೂಡ ಈ ಕೇಸ್ ಗಳು ದಾಖಲಾದ ತಕ್ಷಣ ಪತಿ ಹಾಗೂ ಪತಿಯವರ ಮನೆಯವರು ತಮ್ಮನ್ನು ಪೊಲೀಸರು ಅರೆಸ್ಟ್ ಮಾಡಿಬಿಡುತ್ತಾರೆ ಜೈಲಿಗೆ ಹಾಕುತ್ತಾರೆ ಎಂದು ಬಯಕ್ಕೆ ಒಳಗಾಗುತ್ತಾರೆ ಕೆಲವರು ತಲೆಮರೆಸಿಕೊಳ್ಳುವ ಪ್ರಯತ್ನವನ್ನು ಕೂಡ ಪಡುತ್ತಾರೆ. ಆದರೆ ಕಾನೂನಿನಲ್ಲಿ ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಯಲ್ಲಿ ಗಮನಿಸಿ ಈ ರೀತಿ ಕೇಸ್ ಗಳಲ್ಲಿ ತಕ್ಷಣವೇ ಯಾರನ್ನು ಅರೆಸ್ಟ್ ಮಾಡುವಂತಿಲ್ಲ ಅವರಿಗೆ ಎರಡು ತಿಂಗಳ ಸಮಯವಕಾಶ ನೀಡಿ ನೋಟಿಸ್ ನೀಡಬೇಕು ಎಂದು ಕೋರ್ಟ್ ಹೇಳಿದೆ.

LIC ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗಲಿದೆ 12,500/-

ಈ ರೀತಿ 498A ಸೆಕ್ಷನ್ ಅಡಿ ಹಾಕುವ ಕೇಸ್ ಗಳಲ್ಲಿ ಕುಟುಂಬಗಳಿಗೆ ಎದುರಾಗುವ ಅತಿ ದೊಡ್ಡ ತೊಂದರೆ ಏನು ಎಂದರೆ ಆ ಕುಟುಂಬಕ್ಕೆ ಸಂಬಂಧಪಟ್ಟ ಒಬ್ಬ ವ್ಯಕ್ತಿಯು ವಿದೇಶದಲ್ಲಿ ಸೆಟಲ್ ಆಗಿದ್ದರೂ ಕೂಡ ಅವರನ್ನು ಸೇರಿಸಿ ಕಂಪ್ಲೇಂಟ್ ಕೊಟ್ಟಿರುತ್ತಾರೆ. ಫೇಕ್ ಕೇಸ್ ಗಳಾಗಿದ್ದ ಸಂದರ್ಭದಲ್ಲಿ ತಪ್ಪು ಮಾಡರುವ ಪತಿ ಹಾಗೂ ಪತಿಮನೆಯವರು ಅನೇಕ ತೊಂದರೆಗಳಿಗೆ ಒಳಗಾಗುತ್ತಾರೆ.

ಇಂತಹ ಸಮಸ್ಯೆಗಳಿಂದ ತಕ್ಷಣ ಹೊರಬರಲು ಇರುವ ಮಾರ್ಗಗಳನ್ನು ಅವರು ನೋಡುತ್ತಾರೆ. ಬಹುತೇಕ ಈ ರೀತಿ ಹೂಡಲ್ಪಡುವ ಎಲ್ಲಾ ದಾವೆಗಳು ಕೂಡ ಅಂತಿಮವಾಗಿ ವಿ’ಚ್ಛೇ’ದ’ನದೊಂದಿಗೆ (Divorce) ಕೊನೆಗೊಳ್ಳುವ ಸಾಕಷ್ಟು ಉದಾಹರಣೆಗಳು ಇವೆ. ವಿಚ್ಛೇದನದ ಒಪ್ಪಂದಕ್ಕೆ ಬಂದಾಗ ಜೀವನಾಂಶದ (alimony) ಬಗ್ಗೆ ಕಾಂಟ್ರಾಕ್ಟ್ ಮಾಡಿಕೊಂಡು ಜೀವನಾಂಶವನ್ನು ನೀಡಿ ಕೊಟ್ಟಿರುವ ಎಲ್ಲಾ ಕ್ರಿಮಿನಲ್ ಕೇಸ್ ಗಳನ್ನು ವಾಪಸ್ ಪಡೆದುಕೊಳ್ಳುವಂತಹ ನಿರ್ಣಯಕ್ಕೆ ಬರುತ್ತಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ಮೊಬೈಲ್ ಮೂಲಕವೇ ನಿಮ್ಮ ಅರ್ಜಿ ಅಪ್ರೂವ್ ಆಗಿದಿಯೇ ಅಥವಾ ರಿಜೆಕ್ಟ್ ಆಗಿದಿಯೋ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಆ ಮೂಲಕ ಕೇಸ್ ಕ್ಲೋಸ್ ಆಗಿ ರಿಲೀಫ್ ಆಗಬಹುದು ಎನ್ನುವ ಕಾರಣಕ್ಕೆ ವಿಚ್ಛೇದನವಾಗುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಅತಿ ಹೆಚ್ಚಿನ ಪ್ರಕರಣಗಳಲ್ಲಿ ಇದೇ ರೀತಿ ಆಗುವುದರಿಂದ ಸ್ನೇಹಿತರು ಅಥವಾ ಸಂಬಂಧಿಕರ ಪ್ರಕರಣಗಳಲ್ಲಿ ಈ ರೀತಿ ಆಗಿರುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತಕ್ಷಣವೇ ಇಂತಹ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಅನೇಕ ಹೆಣ್ಣು ಮಕ್ಕಳು ಈ ರೀತಿ ಸುಳ್ಳು ಕೇಸ್ ಗಳನ್ನು ಹಾಕುತ್ತಾರೆ.

ಆದರೆ ನೀವು ನಿಜವಾಗಿಯೂ ಏನು ತಪ್ಪು ಮಾಡದೆ ಇದ್ದಾಗ ಅದು ಸುಳ್ಳು ಕೇಸ್ ಆಗಿದ್ದರೆ ನೀವು ಈ ರೀತಿ ಒಪ್ಪಂದಕ್ಕೆ ಬರುವ ಅವಶ್ಯಕತೆಯೇ ಇರುವುದಿಲ್ಲ. ನಿಮ್ಮ ಮೇಲೆ ದೂರು ಕೊಟ್ಟವರು ನ್ಯಾಯಾಲಯಗಳಲ್ಲಿ ಸಾಕ್ಷಿ ಒದಗಿಸಬೇಕಾದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಒಂದು ವೇಳೆ ಅವರು ಸಾಕ್ಷಿ ನೀಡುವಲ್ಲಿ ವಿಫಲ ಆದರೆ ಕೋರ್ಟ್ (Court) ಕೇಸ್ ಅನ್ನು ಖುಲಾಸೆ (Aquittal) ಮಾಡುತ್ತದೆ ಅಥವಾ ಅವರು ನೀಡಿದ ಸಾಕ್ಷಿ ನ್ಯಾಯಯುತವಾಗಿದ್ದರೆ ಅಪರಾಧ ನಿರ್ಣಯಕ್ಕೆ (Conviction) ಬರುತ್ತದೆ ಆನಂತರ ನೀವು ಮುಂದಿನ ನಿರ್ಧಾರವನ್ನು ಕೈಗೊಳ್ಳಬಹುದು.

ಸ್ವಂತ ಕಾರು ಇದ್ದವರಿಗೆ ಮಾತ್ರವಲ್ಲ, ಇನ್ಮುಂದೆ ಇಂಥವರಿಗೂ ಕೂಡ ರೇಷನ್ ಕಾರ್ಡ್ ಸಿಗುವುದಿಲ್ಲ ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

ಆದರೆ ಈ ಪ್ರೋಸೆಸ್ ಹೆಚ್ಚು ಸಮಯ ನೀಡುತ್ತದೆ ಟ್ರಯಲ್ ಗಳು ನಾಲ್ಕರಿಂದ ಐದು ವರ್ಷಗಳ ಕಾಲ ಮುಂದೂಡುತ್ತದೆ ಎನ್ನುವ ಕಾರಣಕ್ಕಾಗಿ ತಕ್ಷಣವೇ ಮ್ಯೂಚುವಲ್ ಕನ್ಸೆಂಟ್ ಡಿ’ವೋ’ರ್ಸ್ ಗೆ ಒಪ್ಪಿಕೊಂಡು ಬಿಡುತ್ತಾರೆ. ಇದಕ್ಕಿಂತ ನೀವು ನಿರಪರಾಧಿಗಳಾಗಿದ್ದ ಪಕ್ಷದಲ್ಲಿ ಕೋರ್ಟ್ ತೀರ್ಮಾನಕ್ಕೆ ಕಾಯುವುದೇ ಉತ್ತಮ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now