9 ಲಕ್ಷದವರೆಗೆ ಯಾವುದೇ ಬಡ್ಡಿ ಕಟ್ಟುವ ಅಗತ್ಯ ಇಲ್ಲ, ಗೃಹ ಸಾಲ ಮಾಡುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್.!

 

WhatsApp Group Join Now
Telegram Group Join Now

ಪ್ರತಿ ಮನುಷ್ಯನಿಗೂ ಮನೆ ಎನ್ನುವುದು ಮೂಲಭೂತ ಅವಶ್ಯಕತೆ. ಮನೆ ಎನ್ನುವುದು ನೆಮ್ಮದಿಯ ತಾಣ, ದಿನಪೂರ್ತಿ ಹೊರಗೆ ದುಡಿದು, ಅಳೆದು ಸುಸ್ತಾದ ಮನಸ್ಸು ಮರಳಿ ಹೋಗಲು ಹಾತೊರೆಯುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಒಂದು ಗೂಡು ಬೇಕೇ ಬೇಕು. ಆದರೆ ನಾವು ಬೆಳೆಯುತ್ತಾ ಹೋದಂತೆ ನಮ್ಮ ಮನೆ ಹೀಗೆ ಇರಬೇಕು ಹಾಗೆ ಇರಬೇಕು ಎನ್ನುವ ಆಸೆಗಳು ಕೂಡ ಉಂಟಾಗುತ್ತವೆ.

ಕೆಲವರಿಗೆ ಇರಲು ಬೆಚ್ಚಗಿನ ಗೂಡಾದರೆ ಸಾಕು ಎನಿಸಿದರೆ ಇನ್ನೂ ಕೆಲವರಿಗೆ ತಮ್ಮ ಕನಸಿನಂತಹ ಅರಮನೆಯೇ ಬೇಕು. ಹೀಗಾಗಿ ಮನೆ ಕಟ್ಟುಕೊಳ್ಳುವವರಿಗೆ ಸರ್ಕಾರವು ಕೂಡ ಕೆಲ ಯೋಜನೆಗಳನ್ನು ರೂಪಿಸಿ ನೆರವಾಗುತ್ತಿದೆ. ಇದರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಇತ್ಯಾದಿಗಳನ್ನು ಹೆಸರಿಸಬಹುದು. ಇವುಗಳನ್ನು ಹೊರತು ಪಡಿಸಿ ಸರ್ಕಾರೇತರವಾಗಿ ಕೂಡ ಅನೇಕರು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

2023-24 ನೇ ಸಾಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳನ್ನು ಗೊತ್ತಾ.?

ಬ್ಯಾಂಕ್ ಗಳು ಕೂಡ ಗೃಹ ಸಾಲಗಳನ್ನು ನೀಡಿ ಮನೆ ಕಟ್ಟುವವರಿಗೆ ಅಥವಾ ಕೊಂಡುಕೊಳ್ಳುವ ಆಸೆ ಇರುವವರಿಗೆ ನೀರೆರೆಯುತ್ತಿವೆ. ಈಗ ಇದೇ ರೀತಿ ಮನೆ ಖರೀದಿಸಬೇಕು ಅಥವಾ ಮನೆ ಕಟ್ಟಬೇಕು ಎಂದು ಆಸೆ ಹೊಂದಿರುವವರಿಗೆ ಕೇಂದ್ರ ಸರ್ಕಾರದ (Central government) ವತಿಯಿಂದ ಸಿಹಿ ಸುದ್ದಿ ಇದೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಈ ರೀತಿ ಸ್ವಂತ ಮನೆ ಕನಸು ಹೊಂದಿರುವವರಿಗೆ ಆ ಕನಸನ್ನು ನೆರವೇರಿಸಿಕೊಳ್ಳುವುದಕ್ಕೆ ನೆರವಾಗುವಂತಹ ಯೋಜನೆ ಜಾರಿಗೆ ತರುವ ಸುಳಿವು ನೀಡಿದ್ದರು. ಅದಕ್ಕೆ ಈಗ ಸಕಾಲ ಕೂಡಿ ಬಂದಿದೆ. ಕೇಂದ್ರ ಸರ್ಕಾರದ ವತಿಯಿಂದ ಗೃಹ ಸಾಲ (Home loan) ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು.

2023-24 ನೇ ಸಾಲಿನ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಏನೆಲ್ಲಾ ದಾಖಲೆಗಳು ಬೇಕು.? ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

ಇದದಿಂದ ಶೀಘ್ರವಾಗಿ ನಿಮ್ಮ ಮನೆ ಕನಸನ್ನು ಮಾಡಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶ ಸಿಕ್ಕಿದಂತಾಗಿದೆ. ಮನೆ ನಿರ್ಮಾಣ ಮಾಡುವ ಪ್ರಯತ್ನದಲ್ಲಿರುವವರಿಗೆ ಈ ಯೋಜನೆಯ ಅನುಕೂಲ ಸಿಗುತ್ತದೆ ಅವರು ಪಡೆದುಕೊಳ್ಳುವ ಬ್ಯಾಂಕ್ ಲೋನ್ ಬಡ್ಡಿ ದರದ ಹೊರೆ ಕಡಿಮೆಯಾಗುವಂತಹ ಯೋಜನೆಯನ್ನು ಸರ್ಕಾರ ಘೋಷಿಸಿದೆ.

ಈ ಹೊಸ ಗೃಹ ಸಾಲ ಸಬ್ಸಿಡಿ ಯೋಜನೆಯು ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬವು ಪಡೆದುಕೊಳ್ಳ ಬಹುದಾಗಿದೆ. ಈ ಮೂಲಕ ಯೋಜನೆಯು ತನ್ನ ಅವಧಿಯೊಳಗೆ 25 ಲಕ್ಷಕ್ಕೂ ಹೆಚ್ಚು ಗೃಹ ಸಾಲಗಾರರಿಗೆ ಸಹಾಯವಾಗಬಹುದು ಎಂದು ಊಹಿಸಲಾಗಿದೆ. ಈ ಹೊಸ ಗೃಹಸಾಲದ ಯೋಜನೆಯು ಸುಮಾರು 60,000 ಕೋಟಿ ರೂಪಾಯಿಗಳ ಬಜೆಟ್ ನ್ನು ಹೊಂದಿದ್ದು, ಇದು ಮುಂದಿನ ಐದು ವರ್ಷಗಳವರೆಗೆ ಅಂದರೆ 2028 ರ ವರೆಗೂ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ.! ಮೊದಲನೇ ಕಂತಿನ ಹಣ ಬಂದಿದೆಯೋ, ಇಲ್ಲವೋ ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿ.!

ಈ ಅಗ್ಗದ ಗೃಹ ಸಾಲಗಳ ಹೊಸ ಯೋಜನೆಯ ಮೂಲಕ ಹೊಸ ಮನೆ ಖರೀದಿ ಅಥವಾ ನಿರ್ಮಾಣ ಮಾಡುವವರಿಗೆ ಸರ್ಕಾರವು ರೂ. 9 ಲಕ್ಷದವರೆಗಿನ ಗೃಹ ಸಾಲಗಳ ಮೇಲೆ ಶೇಕಡಾ 3% ರಿಂದ 6.5% ರಷ್ಟು ಬಡ್ಡಿ ಸಬ್ಸಿಡಿಯನ್ನು ನೀಡುತ್ತಿದೆ. 20 ವರ್ಷಗಳ ಅವಧಿಗೆ ರೂ. 50 ಲಕ್ಷಕ್ಕಿಂತ ಕಡಿಮೆ ಗೃಹ ಸಾಲ ಪಡೆಯುವ ಗ್ರಾಹಕರಿಗೂ ಈ ಯೋಜನೆ ಲಭ್ಯವಿರುತ್ತವೆ ಎಂದು ಹೇಳಲಾಗಿದೆ.

ಈ ರೀತಿ ಪಡೆಯಲಾಗುವ  ಬಡ್ಡಿ ಸಹಾಯಧನವನ್ನು ಫಲಾನುಭವಿಯ ಗೃಹ ಸಾಲದ ಖಾತೆಗೆ ನೇರವಾಗಿ ಜಮಾ ಮಾಡುವ ನಿರೀಕ್ಷೆಯಿದೆ.  ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ವಿಚಾರಿಸಿ.

ನಿಮಗೆ ಇನ್ನು ಸ್ಕಾಲರ್ಶಿಪ್ ಹಣ ರೂ.10,000 ಬಂದಿಲ್ವಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now