ಸದ್ಯಕ್ಕೆ ಈಗ ಪ್ರತಿಯೊಬ್ಬರಿಗೂ ಕೂಡ ರೇಷನ್ ಕಾರ್ಡ್ (Ration card) ಒಂದು ಅತ್ಯಗತ್ಯ ದಾಖಲೆಯಾಗಿ ಬೇಕೇ ಬೇಕು. ಇದನ್ನು ಗುರುತಿನ ಚೀಟಿಯಾಗಿ (POI) ಮತ್ತು ವಿಳಾಸದ ಪುರಾವೆಯಾಗಿ (POA) ಬಳಸಬಹುದು.
ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ನೀಡಲಾಗುವ ಯಾವುದೇ ಯೋಜನೆಯ ಅನುದಾನ ಸಿಗಬೇಕು ಎಂದರೆ ರೇಷನ್ ಕಾರ್ಡ್ ನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ ಮತ್ತು ರೇಷನ್ ಕಾರ್ಡ್ ಆಧಾರಿತವಾದ ಅನೇಕ ಜನಪರ ಯೋಜನೆಗಳು ಜಾರಿಯಲ್ಲಿದೆ.
ಈ ಸುದ್ದಿ ಓದಿ:- ನಾಳೆ ಏಪ್ರಿಲ್ 1 ರಿಂದ 4 ಹೊಸ ರೂಲ್ಸ್ ಜಾರಿ.!
ರಾಜ್ಯದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದಲ್ಲಿರುವ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಈ ಎರಡು ಗ್ಯಾರಂಟಿ (Gruhalakshmi & Annabhagya Gyaranty Schemes) ಯೋಜನೆಗಳು ಕೂಡ ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ ಎಂದು ಹೇಳಬಹುದು. ಈ ರೀತಿಯಾಗಿ ರೇಷನ್ ಕಾರ್ಡ್ ಆಧಾರವಾಗಿಟ್ಟುಕೊಂಡು ನೀಡಲಾಗಿರುವ ಯಾವುದೇ ವಿನಾಯಿತಿ ಪಡೆಯಬೇಕು ಎಂದರೂ ರೇಷನ್ ಕಾರ್ಡ್ ಬೇಕೇ ಬೇಕು.
ರೇಷನ್ ಕಾರ್ಡ್ ಇಲ್ಲದವರು ಹಾಗೂ ತಿದ್ದುಪಡಿ ಇರುವವರು ಆನ್ಲೈನ್ ನಲ್ಲಿ ಅಥವಾ ಕಚೇರಿಗಳಿಗೆ ಭೇಟಿ ಕೊಟ್ಟು ಇದನ್ನು ಸರಿಪಡಿಸಿಕೊಂಡು ಇದರ ಪ್ರಯೋಜನ ಪಡೆದಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಇದಕ್ಕೂ ಕೂಡ ಸಮಸ್ಯೆ ಆಗಿದೆ.
ಈ ಸುದ್ದಿ ಓದಿ:- ಈ ತಳಿ ಸೀಬೆ ಬೆಳೆದರೆ ಖರ್ಚು ಕಡಿಮೆ, 6 ಲಕ್ಷ ಆದಾಯ ಖಚಿತ.!
ಸರ್ಕಾರದ ಕಡೆಯಿಂದ ಆಗಾಗ ರೇಷನ್ ಕಾರ್ಡಿಗೆ ತಿದ್ದುಪಡಿಗೆ ಅನುಮತಿ ನೀಡಲಾಗುತ್ತಿದೆ ಹೊರತು ಕರ್ನಾಟಕ ವಿಧಾನಸಭಾ ಚುನಾವಣೆ – 2023 ಕಾರಣದಿಂದ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮವಾಗಲಿ ಅಥವಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸ್ವೀಕಾರ ಮಾಡುವ ಕಾರ್ಯಕ್ರಮವಾಗಲಿ ಆರಂಭವಾಗಿಲ್ಲ.
ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಜನ ಸಾಮಾನ್ಯರಿಂದ ಪ್ರಶ್ನೆ ಎದುರಾಗಿದೆ ಅಂತಿಮವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪನವರೇ (K.H Muniyappa) ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸ್ವೀಕಾರ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಏನೆಲ್ಲಾ ದಾಖಲೆಗಳು ಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ವಿವರ ಹೀಗಿದೆ ನೋಡಿ.
ಬೇಕಾಗುವ ದಾಖಲೆಗಳು:-
* ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ
* ನಿಮ್ಮ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ
* ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದರೆ ಅದರ ಜನನ ಪ್ರಮಾಣ ಪತ್ರ
* ಮೊಬೈಲ್ ಸಂಖ್ಯೆ
ಯಾರು ಅರ್ಜಿ ಸಲ್ಲಿಸಬಹುದು:-
* ಅರ್ಜಿ ಸಲ್ಲಿಸುವವರು ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು
* ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ (ration card) ಚೀಟಿಗೆ ಅರ್ಜಿ ಸಲ್ಲಿಸಬಹುದ
* ರಾಜ್ಯದಲ್ಲಿದ್ದು ಪಡಿತರ ಚೀಟಿ ಹೊಂದಿರದ ಕುಟುಂಬಗಳು ಅರ್ಹರಾಗಿರುತ್ತಾರೆ
* BPL ಕಾರ್ಡ್ ಪಡೆದುಕೊಳ್ಳುವುದಕ್ಕೆ ಬಡತನ ರೇಖೆಗಿಂತ (below poverty line)ಕೆಳಗಿನವರು ಮಾತ್ರ ಅರ್ಹರು (ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವವರು ಅರ್ಹರಾಗುತ್ತಾರೆ).
ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು:-
* ಆನ್ಲೈನ್ ನಲ್ಲಿ ಮಾತ್ರ ನಿರ್ದಿಷ್ಟ ಪೋರ್ಟಲ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು
* ಪತ್ರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಯಾವುದೇ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು, ಖಾಸಗಿಯವರಿಗೆ ಅವಕಾಶ ಇರುವುದಿಲ್ಲ.