ಈ ರೈತರಿಗೆ ಇನ್ನೂ 8 ತಿಂಗಳಲ್ಲಿ ಸರ್ಕಾರದಿಂದ ಉಚಿತ ಜಮೀನು ಮಂಜೂರು.! ಯಾರಿಗೆಲ್ಲಾ ಸಿಗಲಿದೆ ಈ ಹಕ್ಕು ಪತ್ರ ನೋಡಿ.!

 

WhatsApp Group Join Now
Telegram Group Join Now

ಬಗರ್ ಹುಕುಂ (Bagar hukum) ಭೂಮಿ ಉಳಿಮೆ ಮಾಡುತ್ತಿದ್ದ ರೈತರಿಗೆ ತಮ್ಮ ಹೆಸರಿಗೆ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಸರ್ಕಾರದಲ್ಲಿ ಇದೇ ವಿಚಾರ ಹೆಚ್ಚು ಚರ್ಚೆ ಆಗುತ್ತಿತ್ತು ಅಂತಿಮವಾಗಿ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ (Minister Krishna Bairegowda) ಅವರು ನೆನ್ನೆ ನಡೆದ ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ 8 ತಿಂಗಳೊಳಗೆ ಅರ್ಹ ರೈತರಿಗೆ ಡಿಜಿಟಲ್ ಹಕ್ಕುಪತ್ರ ಹಸ್ತಾಂತರ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮೀಸಲು ಅರಣ್ಯ, ಕಿರು ಅರಣ್ಯ, ಸಾಮಾಜಿಕ ಅರಣ್ಯ, ಕಂದಾಯ, ಜಾನುವಾರು ಮುಫತ್ತು ಹುಲ್ಲು ಬಿನ್ನಿ, ಗೋಮಾಳ ಕಾಫಿಕಾನು ಇನಾಂ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಮುಂದಿನ 8 ತಿಂಗಳ ಒಳಗೆ ಈ ಸಾಗುವಳಿ ಪತ್ರ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಾಗುವಳಿ ಚೀಟಿ ಜೊತೆಗೆ ಸರ್ಕಾರವೇ ನೋಂದಾಯಿಸಿ ಪೋಡಿ ಮಾಡಿ ಹೊಸ ಸರ್ವೆ ಸಂಖ್ಯೆ ನೀಡಲು ನಿರ್ಧರಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964 (Karnataka land revenue act 1964) ಅನ್ವಯ ಫಾರಂ ನಂ.50 (1991), ಫಾರಂ ನಂ. 53 (1999) ಫಾರಂ ನಂ 57 (2018)ರ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಭೂ ರಹಿತ ರೈತರು ಹಾಗೂ ಕಡಿಮೆ ಹಿಡುವಳಿ ಹೊಂದಿರುವ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು ಆದರೆ ಈಗ ಒಟ್ಟು 9,56,512 ಅರ್ಜಿಗಳು ಸಲ್ಲಿಕೆ ಆಗಿದೆ ಎಂದು ತಿಳಿದು ಬಂದಿದೆ.

ಈ ಎಲ್ಲಾ ಅರ್ಜಿದಾರರಿಗೂ ಭೂಮಿ ಹಂಚಿಕೆ ಮಾಡಬೇಕಾದರೆ 50 ಲಕ್ಷ ಹೆಕ್ಟರ್ ನಷ್ಟು, ಭೂಮಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇದರಲ್ಲಿ ಬೆಳಕಿಗೆ ಬಂದಿರೋ ಶಾ’ಕಿಂ’ಗ್ ಅಂಶ ಏನೆಂದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅನರ್ಹರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ಸಂಬಂಧ ಪಡದ ಜಿಲ್ಲೆ, ತಾಲೂಕುಗಳಿಂದ ಕೂಡ ಅರ್ಜಿ ಸಲ್ಲಿಸಿದರೆ.

ಇನ್ನು ಕೆಲವರು ಆ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿಲ್ಲದಿದ್ದರೂ ಕೂಡ ಅರ್ಜಿ ಸಲ್ಲಿಸಿದ್ದಾರೆ ಮತ್ತು 18 ವರ್ಷ ತುಂಬಿದ ರೈತರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ನಿಯಮ ಇತ್ತು ಆದರೂ 18 ತುಂಬದವರು ಕೂಡ ಅರ್ಜಿ ಸಲ್ಲಿಸಿರುವುದು, ಒಬ್ಬನೇ ವ್ಯಕ್ತಿ 25 ಅರ್ಜಿ ಸಲ್ಲಿಸಿರುವುದು ಮತ್ತು ಈಗಾಗಲೇ ಭೂಮಿ ಹೊಂದಿರುವವರು ಅರ್ಜಿ ಸಲ್ಲಿಸಿರುವುದು ಇದೆಲ್ಲಾ ಕಂಡು ಬಂದಿದೆ.

ಎಲ್ಲವನ್ನು ಕೂಡ ಕುಲಂಕುಶವಾಗಿ ಪರಿಶೀಲನೆ ಮಾಡಿ ಬಗರ್ ಹುಕುಂ ಕಮಿಟಿಯು (Bagar Hukum committee) ಪ್ರಕ್ರಿಯೆ ಎಂಟು ತಿಂಗಳ ಒಳಗೆ ಮುಗಿಯಬೇಕು ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ಸಚಿವರು ನೀಡಿದ್ದಾರೆ.

ಅರ್ಜಿದಾರರ ಆಧಾರ್ ಕಾರ್ಡ್ ಆಧರಿಸಿ ಅವರ ಕುಟುಂಬದಲ್ಲಿ ಇತರರು ಎಷ್ಟು ಭೂಮಿ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ಕಲೆಹಾಕಿ, 2004 ಕ್ಕೂ ಮೊದಲೇ ಸಾಗುವಳಿ ಆರಂಭಿಸಲಾಗಿದೆ ಎನ್ನುವುದನ್ನು ಆಧುನಿಕ ತಂತ್ರಜ್ಞಾನದ ಸ್ಯಾಟಲೈಟ್ ಫೂಟೇಜ್ ಸಹಾಯದಿಂದ ಪರಿಶೀಲಿಸಿ.

18 ವರ್ಷ ತುಂಬಿದೆ ಎನ್ನುವುದನ್ನು ನೋಡಿ ಹೀಗೆ ಎಲ್ಲಾ ರೀತಿಯಿಂದಲೂ ಪರಿಶೀಲನೆ ಮಾಡಿ ಸಮಿತಿಯ ಕೊನೆಯಲ್ಲಿ ಅರ್ಹರಿಗೆ ಕ್ಯೂಆರ್ ಕೋಡ್ ಹೊಂದಿರುವ ಡಿಸೈನರ್ ರೂಪದ ಈ ಸಾಗುವಳಿ ಚೀಟಿ ನೀಡಲಿದ್ದಾರೆ, ಜೊತೆಗೆ ಈ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎನ್ನುವುದನ್ನು ಸಹ ಸಚಿವರು ಹೇಳಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now