ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ದಾಂತದ ಬಗ್ಗೆ ಲೋಕ ವಿಖ್ಯಾತಿಯಾಗಿದೆ, ಇದರ ಜೊತೆಗೆ ಅವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅದರಲ್ಲಿ ಶಂಕರ ವಿಜಯ, ಸೌಂದರ್ಯ ಲಹರಿ ಇತ್ಯಾದಿಗಳನ್ನು ವಿವರಿಸಬಹುದು. ತಾಯಿ ಆದಿಶಕ್ತಿ ಹಾಗೂ ಶಿವನ ಪರಮಭಕ್ತರಾಗಿದ್ದ ಶ್ರೀ ಶಂಕರಾಚಾರ್ಯರು ಚಿಕ್ಕವಯಸ್ಸಿನಲ್ಲಿ ಅಪರ ಪಾಂಡಿತ್ಯ ಉಳ್ಳವರಾಗಿದ್ದರು ಅತಿ ಚಿಕ್ಕ ವಯಸ್ಸಿನಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಆ ಹಾದಿಯನ್ನು ಇತರರಿಗೂ ತಿಳಿಸಿ ಅಜರಾಮರಾದರು.
ಶಂಕರಾಚಾರ್ಯರು ರಚಿಸಿರುವ ಸೌಂದರ್ಯ ಲಹರಿ ಗ್ರಂಥದ ಒಂದು ಮಂತ್ರವನ್ನು ನೀವು ಪಠಿಸುವ ಮೂಲಕ ನಿಮ್ಮ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈಗಿನ ಕಾಲದಲ್ಲೂ ಕೂಡ ವೈದ್ಯಲೋಕವೇ ಅಚ್ಚರಿ ಪಡುವಂತೆ ಈ ಮಂತ್ರಗಳು ಕಾರ್ಯನಿರ್ವಹಿಸುತ್ತವೆ. ಸೌಂದರ್ಯ ಲಹರಿಯನ್ನು ಪಠಿಸಲು ಸಾಧ್ಯವಾಗದೆ ಇದ್ದವರು ಅದನ್ನು ಕೇಳುವುದರಿಂದ ಕೂಡ ಫಲ ಸಿಗುತ್ತದೆ.
ಹೆಣ್ಣು ಮಕ್ಕಳಿಗೆ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು, ದಂಪತಿಗಳಿಗೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ತೊಂದರೆಗಳು ಇವೆಲ್ಲವೂ ಕೂಡ ಕ್ಲಿಯರ್ ಆಗುತ್ತದೆ. ಇದರೊಂದಿಗೆ ಹೆಸರೇ ಹೇಳುವಂತೆ ಸೌಂದರ್ಯಹರಿಯು ಮುಖದ ಕಾಂತಿಯನ್ನು ಹೆಚ್ಚು ಮಾಡುತ್ತದೆ, ಮುಖವು ಹೆಚ್ಚು ಸೌಂದರ್ಯದಿಂದ ಕೂಡಿರುವಂತೆ ಆಗುತ್ತದೆ, ಮುಖದಲ್ಲಿ ತೇಜಸ್ಸು ಬರುತ್ತದೆ.
ಸೌಂದರ್ಯ ಲಹರಿಯನ್ನು ಪಠಿಸುವುದರಿಂದ ಅಥವಾ ಶ್ರವಣ ಮಾಡುವುದರಿಂದ ನಮ್ಮ ಸುತ್ತ ಇರುವ ಪ್ರಭೆಯು ಸಕಾರಾತ್ಮಕ ದಿಂದ ಕೂಡಿರುತ್ತದೆ ಮತ್ತು ಅದರ ಶಕ್ತಿ ಹೆಚ್ಚಾಗುತ್ತದೆ, ಸೌಂದರ್ಯ ಲಹರಿಯಿಂದ ಆತ್ಮ ಜ್ಞಾನದ ಅರಿವಾಗುತ್ತದೆ, ಆತ್ಮಜ್ಯೋತಿ ಬೆಳಗುತ್ತದೆ. ಮನಸ್ಸಿನಲ್ಲಿ ಶಾಂತಿ ಹಾಗೂ ಮುಖದಲ್ಲಿ ಸಮಾಧಾನದ ಭಾವ ತುಂಬುತ್ತದೆ.
ಈ ರೀತಿ ಅನೇಕ ದೈಹಿಕ ಹಾಗು ಮಾನಸಿಕ ಸಮಸ್ಯೆಗಳಿಗೆ ಸೌಂದರ್ಯ ಲಹರಿಯನ್ನು ಪಠಿಸುವುದರಿಂದ ಉತ್ತಮ ಚಿಕಿತ್ಸೆಯಾಗುತ್ತದೆ. ಎಂದು ಹೇಳಬಹುದು. ಇದು ಮಾತ್ರವಲ್ಲದೆ ಸೌಂದರ್ಯ ಲಹರಿಯ ಶ್ಲೋಕಗಳನ್ನು ಪಠಿಸುವುದರಿಂದ ಮಂತ್ರಗಳನ್ನು ಹೇಳುವುದರಿಂದ ಜ್ಞಾಪಕಶಕ್ತಿ ಕೂಡ ವೃದ್ಧಿಸುತ್ತದೆ. ಮಕ್ಕಳು ಪಠಿಸುವುದರಿಂದ ಬಹಳ ಚುರುಕಾಗುತ್ತಾರೆ ಮತ್ತು ಅವರ ಜ್ಞಾನದ ಮಟ್ಟ ಹೆಚ್ಚಾಗುತ್ತದೆ.
ಮತ್ತು ಸೌಂದರ್ಯ ಲಹರಿಯನ್ನು ಪಠಿಸಿದ, ಕೇಳಿದ ಪುಣ್ಯಫಲದಿಂದ ಭಗವಂತ ಪಾವತಿ ಪರಮೇಶ್ವರ ಆಶೀರ್ವಾದ ಲಭಿಸಿ ಅವರಿಗೆ ಮನುಷ್ಯ ಸಹಜ ಕಾಯಿಲೆ ಕ’ಷ್ಟಗಳು ಆರ್ಥಿಕ ಸಮಸ್ಯೆಗಳು ಎಲ್ಲವೂ ಕೂಡ ಪರಿಹಾರ ಆಗುತ್ತದೆ. ಈಗ ನಾವು ಹೇಳುವ ವಿಧಾನದ ಮೂಲಕ ನೀವು ಕೂಡ ಒಮ್ಮೆ ಈ ಮಂತ್ರವನ್ನು ಪಠಿಸಿ ಪ್ರಯೋಜನ ಪಡೆದುಕೊಳ್ಳಿ.
ಮಂತ್ರ:-
ಅವಿದ್ಯಾ ನಾಮಂತ ಸ್ತಿಮಿರ ಮಿಹಿರ ದ್ವೀಪನಗರಿ|
ಜಡಾನಾಂ ಚೈತನ್ಯಸ್ತಬಕ ಮಕರಂದ ಸ್ರುತಿ ಝರೀ|
ದರಿದ್ರಾಣಾಂ ಚಿಂತಾಮಣಿ ಗುಣನಿಕಾ ಜನ್ಮ ಜಲಧೌ|
ನಿಮಗ್ನಾನಂ ದಂಷ್ಟ್ರಾ ಮುರರಿಪುವರಾಹಸ್ಯ ಭವತಿ||
ವಿಧಾನ:-
ಸ್ನಾನ ಮಾಡಿ ಮಡಿ ಉಟ್ಟು ದೇವರ ಕೊನೆಯಲ್ಲಿ ಈಶಾನ್ಯ ದಿಕ್ಕಿನ ಕಡೆಗೆ ಮುಖ ಮಾಡಿ ಒಂದು ಮರದ ಮಣೆಯ ಮೇಲೆ ಅಥವಾ ಚಿನ್ನದ ರೇಖಿನಲ್ಲಿ ಅಷ್ಟ ತ್ರಿಭುಜಾಕೃತಿಯಲ್ಲಿ ಚಕ್ರವನ್ನು ಬರೆದು ಎಲ್ಲ ತುದಿಗಳಲ್ಲೂ ತ್ರಿಶೂಲಾಕೃತಿ ಬರೆದು ಮಧ್ಯದಲ್ಲಿ ಶ್ರೀಂ ಎನ್ನುವ ಬೀಜಾಕ್ಷರವನ್ನು ಬರೆದು ಈ ಮೇಲೆ ತಿಳಿಸಿದ ಮಂತ್ರವನ್ನು 101 ಬಾರಿ ಹೇಳಬೇಕು ಸಾಧ್ಯವಾದವರು 1001 ಬಾರಿ ಹೇಳಿದರೂ ಕೂಡ ಉತ್ತಮ ಫಲ ಸಿಗುತ್ತದೆ. ಸೌಂದರ್ಯ ಲಹರಿಯಲ್ಲಿ ಬರುವ ವಿಶೇಷವಾದ ಈ ಭಾಗವನ್ನು ವಿದ್ಯಾರ್ಥಿಗಳು ಪಠಿಸುವುದರಿಂದ ಅವರ ಜ್ಞಾನಾರ್ಜನೆಗೆ ಸಂಬಂಧಿಸಿದ ಶಕ್ತಿಯು ಉಂಟಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.