ಈಗ ಎಲ್ಲೆಡೆ ಎಲೆಕ್ಟ್ರಿಕಲ್ ವಾಹನಗಳ (Electrical Vehicle) ಕ್ರಾಂತಿ ಶುರುವಾಗಿದೆ. ಇದರಿಂದ ಪೆಟ್ರೋಲ್ ಚಾರ್ಜ್ ಉಳಿಸಬಹುದು, ಇಂಧನ ಕೊರತೆ ತಗ್ಗುತ್ತದೆ ಮತ್ತು ನಮ್ಮ ಮೂಲಕ ಪರಿಸರಕ್ಕೆ ಆಗುವ ಹಾನಿಯೂ ಕೂಡ ಕಂಟ್ರೋಲ್ ಗೆ ಬರುತ್ತದೆ. ಈ ಉದ್ದೇಶದಿಂದ ಆಟೋಮೊಬೈಲ್ಸ್ ನಷ್ಟೇ ಸರ್ಕಾರಗಳು ಕೂಡ ಆಸಕ್ತಿ ವಹಿಸಿ ಎಲೆಕ್ಟ್ರಿಕಲ್ ವೆಹಿಕಲ್ ಗಳ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುತ್ತಿದೆ.
ಆದರೆ ಈಗಾಗಲೇ ನಿಮ್ಮ ಬಳಿ ಪೆಟ್ರೋಲ್ ಬೈಕ್ ಇದ್ದರೆ ಅದನ್ನು ಕೊಟ್ಟು ಎಲೆಕ್ಟ್ರಿಕಲ್ ಬೈಕ್ ಕೊಂಡುಕೊಳ್ಳಬೇಕು ಎಂದರೆ ಮಧ್ಯಮ ವರ್ಗದ ಜನರಿಗೆ ಸ್ವಲ್ಪ ಇರಿಸು ಮುರಿಸಾಗುತ್ತದೆ. ಇದರ ಬದಲು ಇದನ್ನೇ ಕನ್ವರ್ಟ್ (Convert Petrol Vehicle to EV) ಮಾಡಿಕೊಳ್ಳುವ ಆಪ್ಷನ್ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವೇ?
ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಇಂಥದೊಂದು ಅವಕಾಶವನ್ನು ಬೆಂಗಳೂರಿನ ಜೆಪಿ ನಗರದಲ್ಲಿರುವ ಗ್ರೀನ್ ಟೈಗರ್ ಮೊಬೈಲಿಟಿ ಪ್ರೈವೇಟ್ ಲಿಮಿಟೆಡ್ (Green Tiger Mobility Private Limited) ಎನ್ನುವ ಕಂಪನಿ. ಈ ಕಂಪನಿಯಲ್ಲಿ ಪೆಟ್ರೋಲ್ ಸ್ಕೂಟರ್ ಗಳನ್ನು ಇವಿ ಸ್ಕೂಟರ್ ಆಗಿ ಕನ್ವರ್ಟ್ ಮಾಡಿಕೊಡುತ್ತದೆ.
ಇದರ ಪ್ಲಸ್ ಪಾಯಿಂಟ್ ಗಳ ಬಗ್ಗೆ ಹೇಳುವುದಾದರೆ ಸದ್ಯಕ್ಕೆ ನೀವು ಹೊಸ ಸ್ಕೂಟರ್ ಖರೀದಿಸಿದರೆ ಹಳೆ ಸ್ಕೂಟರ್ ವೇಸ್ಟ್ ಆಗುತ್ತದೆ ಎನ್ನುವುದೇ ಬೇಜಾರು ಮತ್ತು ಹೊಸದಕ್ಕೆ ಹೆಚ್ಚಿನ ಹಣವನ್ನು ಕೊಡಬೇಕು ಎನ್ನುವುದು ಹೊರೆ. ಇದರ ಬದಲು ಅದಕ್ಕಿಂತ ಕಡಿಮೆ ಹಣಕ್ಕೆ ನಿಮ್ಮ ಪೆಟ್ರೋಲ್ ವಾಹನವನ್ನು ಎಲೆಕ್ಟ್ರಿಕಲ್ ವಾಹನವಾಗಿ ಬದಲಾಯಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಜೊತೆಗೆ ಪೂರ್ತಿ ಎಲೆಕ್ಟ್ರಿಕಲ್ ವಾಹನವೇ ಆದರೂ ಸದ್ಯಕ್ಕೆ ಬ್ಯಾಟರಿ ಡೆಡ್ ಆದರೆ ಹತ್ತಿರದಲ್ಲಿ ಚಾರ್ಜಿಂಗ್ ಪಾಯಿಂಟ್ ಎಲ್ಲೆಡೆ ಸಿಗುತ್ತದೆ ಎಂದು ಅಂದುಕೊಳ್ಳುವುದಕ್ಕೆ ಆಗುವುದಿಲ್ಲ. ಹಾಗಾಗಿ ಪೆಟ್ರೋಲ್ ನಲ್ಲಿ ಕೂಡ ಓಡಿಸಬಹುದಾದ ಆಪ್ಷನ್ ಸಿಕ್ಕರೆ ಈ ರೀತಿ ಆದಾಗ ಮತ್ತು ಅಥವಾ ಲಾಂಗ್ ಡ್ರೈವ್ ಹೋದಾಗ ಬ್ಯಾಟರಿ ಡೆಡ್ ಆಗಿ ಸಮಸ್ಯೆ ಆಗುವುದೇ ತಪ್ಪುತ್ತದೆ.
ಒಂದು ಲೀಟರ್ ಪೆಟ್ರೋಲ್ ಗೆ 30km ಆದರೂ ಮೈಲೇಜ್ ಬರುತ್ತದೆ, ಪೆಟ್ರೋಲ್ ಬಂಕ್ ಅಂತೂ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಿಕ್ಕೇ ಸಿಗುತ್ತದೆ. ಹಾಗಾಗಿ ಎರಡು ಕೂಡ ಇರುವುದು ಬೆಸ್ಟ್ ಮತ್ತು ಬ್ಯಾಟರಿ ಒಮ್ಮೆ ಚಾರ್ಜ್ 200-250km ವರೆಗೆ ರನ್ ಆಗುವ ಸಾಮರ್ಥ್ಯ ಹೊಂದಿದೆ.
ಈ ಸುದ್ದಿ ಓದಿ:- ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!
ಮನೆಯಲ್ಲಿರುವ ಮಾಮೂಲಿ ಮೂರು ಪಿನ್ನಿನ ಸಾಕೆಟ್ ನಲ್ಲಿ ಚಾರ್ಜ್ ಮಾಡಬಹುದು. ಡಿಟಾಚೆಬಲ್ ಬ್ಯಾಟರಿ ಆಗಿದ್ದು ಸ್ಕೂಟರ್ ಗಳಲ್ಲಿ ಇಟ್ಟುಕೊಂಡೇ ಓಡಾಡಬಹುದು ಚಾರ್ಜ್ ಹಾಕುವಾಗ ಬೈಕ್ ನಲ್ಲಿಯೇ ಇಟ್ಟು ಹಾಕಬಹುದು ಅಥವಾ ಮನೆಗೆ ತೆಗೆದುಕೊಂಡು ಹೋಗಿ ಹಾಕಬಹುದು.
ಮಾರ್ಕೆಟ್ ಗಳಿಗೆ ಹೆಚ್ಚಿನ ಸಾಮಾನು ತರಲು ಹೋಗುವಾಗ ಜಾಗ ಕಡಿಮೆ ಇದೆ ಎನಿಸಿದರೆ ಬ್ಯಾಟರಿ ಮನೆಯಲ್ಲಿ ಇಟ್ಟು ಪೆಟ್ರೋಲ್ ಬೈಕ್ ನಲ್ಲಿ ಹೋಗಿ ತರಬಹುದು. ಈ ಡಿಟಾಚೆಬಲ್ ಬ್ಯಾಟರಿ ಇಷ್ಟೆಲ್ಲಾ ಅನುಕೂಲತೆ ಮಾಡಿಕೊಡುತ್ತದೆ. ನಿಮ್ಮ ವೆಹಿಕಲ್ ನಲ್ಲಿ ಯಾವುದೇ ಪಾರ್ಟ್ ತೆಗೆಯದೇ ಯಾವುದು ಇಂಪಾರ್ಟೆಂಟ್ ಆಗಿ ಅವಶ್ಯಕತೆ ಇದೆ ಅದನ್ನಷ್ಟೇ ಸರಿಮಾಡಿ ಕನ್ವರ್ಟ್ ಮಾಡಿಕೊಡಲಾಗುತ್ತದೆ.
ಈ ಸುದ್ದಿ ಓದಿ:- ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!
ಸ್ಕೂಟರ್ ಟ್ರ್ಯಾಕ್ ಮಾಡುವುದಕ್ಕೆ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆ ಕೂಡ ಇದೆ ಮತ್ತು ಪೆಟ್ರೋಲ್ ನಿಂದ ಎಲೆಕ್ಟ್ರಿಕಲ್ ಗೆ ಎಲೆಕ್ಟ್ರಿಕಲ್ ನಿಂದ ಪೆಟ್ರೋಲ್ ಗೆ ಸ್ವಿಚ್ ಮಾಡುವುದು ಬಹಳ ಸುಲಭ. ಜುಪಿಟರ್, ಟಿವಿಎಸ್ ಹೋಂಡಾ ಆಕ್ಟಿವಾ, ಡಿಯೋ ಇನ್ನು ಮುಂತಾದ ಎಲ್ಲಾ ರೀತಿಯ ಸ್ಕೂಟರ್ ಗಳಿಗೂ ಮಾಡಿಕೊಡುತ್ತಾರೆ, ಮುಂದಿನ ದಿನಗಳಲ್ಲಿ ಬೈಕ್ ಗೂ ಕೂಡ ಈ ಟೆಕ್ನಾಲಜಿ ಅಪ್ಲೈ ಮಾಡುವ ಪ್ಲಾನ್ ಕೂಡ ಹೊಂದಿದೆ ಕಂಪನಿ.
ಇದು ಕರ್ನಾಟಕ ಸ್ಟೇಟ್ RTO ಕಡೆಯಿಂದ ಮತ್ತು ARAI ನಿಂದ ಕೂಡ ಅಪ್ರುವಲ್ ಆಗಿದೆ. ಈ ಕಾನ್ಸೆಪ್ಟ್ ಭಾರತದಲ್ಲಿ ಮೊದಲ ಬಾರಿಗೆ ಇದೇ ಕಂಪನಿ ಅಪ್ರೋಚ್ ಮಾಡಿದ್ದು ನೀವು ಈ ಶೋರೂಮ್ ಗೆ ಭೇಟಿ ಕೊಟ್ಟರೆ ಟೆಸ್ಟ್ ಡ್ರೈವ್ ಕೂಡ ನೋಡಬಹುದು. ಈ ವಿಚಾರದ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.