ಈಗಿನ ಕಾಲದಲ್ಲಿ ಅವಕಾಶಗಳಿಗೆ ಏನು ಕೊರತೆ ಇಲ್ಲ. ಮನುಷ್ಯ ಮನಸ್ಸು ಮಾಡಿ ಶ್ರಮ ಪಟ್ಟರೆ ಹತ್ತಾರು ಐಡಿಯಾಗಳು ಬರುತ್ತವೆ, ಅದನ್ನು ಕಾರ್ಯರೂಪಕ್ಕೆ ತಂದು ಕೈ ತುಂಬಾ ಹಣ ಸಂಪಾದನೆ ಮಾಡಬಹುದು ಅದರೆ ಸಮಸ್ಯೆ ಏನು ಎಂದರೆ ಪ್ರತಿ ಕ್ಷೇತ್ರದಲ್ಲೂ ಕೂಡ ಕಾಂಪಿಟೇಶನ್ ಜೋರಾಗಿದೆ.
ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಕೂಡ ಒಬ್ಬರನೊಬ್ಬರು ಅನುಕರಿಸಿ ಸೆಡ್ಡು ಹೊಡೆಯುತ್ತಿದ್ದಾರೆ. ಆದರೂ ಈ ಪರಿಸ್ಥಿತಿಯಲ್ಲಿ ಈಗಿನ ಕಾಲಕ್ಕೆ ಬಹಳ ಉಪಯುಕ್ತವಾಗಿರುವ ಅತ್ಯಂತ ಕಡಿಮೆ ಕಾಂಪಿಟೇಶನ್ ಇರುವ ಒಂದು ಬ್ಯುಸಿನೆಸ್ ಐಡಿಯಾವನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
ಹಳ್ಳಿಯಲ್ಲಿ ಇರಲಿ ಸಿಟಿಯಲ್ಲಿ ಇರಲಿ ಯಾವುದೇ ಮಹಿಳೆ ಅಥವಾ ಪುರುಷ ಈ ಬಿಸಿನೆಸ್ ಆರಂಭಿಸಿ ಆರಂಭದಲ್ಲಿ ಎರಡು ಲಕ್ಷ ಬಂಡವಾಳ ಹಾಕಿದರೆ ಸಾಕು ತಿಂಗಳಿಗೆ 50,000 ಕ್ಕಿಂತ ಹೆಚ್ಚು ಹಣ ಮಾಡಬಹುದು. ಇದು ಯಾವ ಬಿಸಿನೆಸ್ ಎಂದರೆ ಗಾಜಿನ ಶೀಶೆಗಳಿಂದ ಕುಲ್ಲೆಟ್ ತಯಾರಿಸುವ ವಿಧಾನ ಇದನ್ನು ಹೇಗೆ ತಯಾರಿಸುವುದು ಎಂದರೆ ಮೊದಲಿಗೆ ನೀವು ಇದಕ್ಕೆ ಜಾಗ ರೆಡಿ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಸೈಟ್, ಜಮೀನು ವ್ಯಾಜ್ಯ ಕೋರ್ಟ್ ನಲ್ಲಿ ಇದ್ದಾಗ ಕಟ್ಟಡ ಕಾಮಗಾರಿ ಮಾಡಬಹುದ.?
ನಿಮಗೆ 10*10 ಒಂದು ಚಿಕ್ಕ ಶೆಡ್ ಸಿಕ್ಕರೆ ಸಾಕು. ಅದಕ್ಕೆ ಕಮರ್ಷಿಯಲ್ ಕರೆಂಟ್ ಸಪ್ಲೈ ಇರಬೇಕು ಆದರೆ ನೀವು ಈ ಬಿಸಿನೆಸ್ ಮಾಡಲು ಯಾವುದೇ ರೀತಿಯ ರಿಜಿಸ್ಟ್ರೇಷನ್ ಮಾಡಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಒಂದು ಮಿಷನ್ ಖರೀದಿಸಬೇಕು ಅಷ್ಟೇ, ಇದು ಯಾವ ಮಿಷನ್ ಗ್ಲಾಸ್ ಶೆಡ್ಡಿಂಗ್ ಮಿಷನ್. ಇದರಲ್ಲಿ ಗ್ಲಾಸ್ ಹಾಕಿದರೆ ಅದು ಕುಲ್ಲೆಟ್ ಆಗಿ ಹೊರ ಬರುತ್ತದೆ.
ಯಾವ ರೀತಿಯ ಗ್ಲಾಸ್ ಹಾಕಬೇಕು ಎಂದರೆ ಕೋಕೋ ಕೋಲಾ ಪೆಪ್ಸಿ ಈ ರೀತಿ ಕೂಲ್ ಡ್ರಿಂಕ್ ಗಳು ಬರುವ ಶೀಷೆಗಳು, ಕ್ವಾಟರ್ ಶೀಷೆಗಳು, ಬಿಯರ್ ಬಾಟಲ್ ಮೆಡಿಸನ್ ಗಳು ಈ ರೀತಿಯ ಗಾಜಿನ ಶೀಷೆಗಳನ್ನು ಹಾಕಬೇಕು. ಸಾಮಾನ್ಯವಾಗಿ ಇದನ್ನು ಹಳ್ಳಿಗಳ ಕಡೆಯಲ್ಲಿ ಒಂದೆರಡು ರುಪಾಯಿಗೆ ಮಾರಿಬಿಡುತ್ತಾರೆ ಮತ್ತು ಕೂಲ್ ಡ್ರಿಂಕ್ ಮೆಡಿಕಲ್ ಶೀಷೆಗಳನ್ನು ರಿಸೈಕಲಿಂಗ್ ಮಾಡಿ ಮತ್ತೆ ಫ್ಯಾಕ್ಟರಿಗಳಿಗೆ ಕಳುಹಿಸಲಾಗುತ್ತದೆ.
ಆದರೆ ಹೊರಗಡೆ ಇದನ್ನು ಬಿಸಾಕುವವರು ಕೂಡ ಇದ್ದಾರೆ ನೀವು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಅಥವಾ ಪೇಪರ್ ಶೀಷೆ ಮಾರುವವರ ಬಳಿ ಹೀಗೆ ಎಲ್ಲಾದರೂ ಇಂತಹವುಗಳನ್ನು ಕಲೆಕ್ಟ್ ಮಾಡಿ ಅದನ್ನು ಮಿಷನ್ ಗೆ ಹಾಕಿ ಸ್ಮ್ಯಾಶ್ ಮಾಡಿಕೊಳ್ಳಬೇಕು. ಮಿಷನ್ ಗೆ ಹಾಕಿದರೆ ಕ್ರಿಸ್ಟಲ್ ರೂಪದಲ್ಲಿ ಕುಲ್ಲೆಟ್ ನಿಮಗೆ ಸಿಗುತ್ತದೆ.
ಈ ಸುದ್ದಿ ಓದಿ:- ಕೇವಲ 45 ಸಾವಿರದ ಈ ಮಿಷನ್ ನಿಂದ ತಿಂಗಳಿಗೆ ಒಂದು ಲಕ್ಷ ದುಡಿಯಬಹುದು ಯಾವುದೇ ಅನುಭವ ಬೇಕಾಗಿಲ್ಲ.!
ಇದನ್ನು ಹಾಕುವಾಗ ಒಂದು ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು. ಏನೆಂದರೆ ಮುಚ್ಚುಳ ಮೇಲೆ ಅಂಟಿಸಿರುವ ಸ್ಟಿಕ್ಕರ್ ಇವುಗಳನ್ನು ತೆರೆದು ಹಾಕಬೇಕು ಮತ್ತು ಇದು ಬೇರೆ ಬೇರೆ ಬಣ್ಣದಲ್ಲಿ ಇರುತ್ತದೆ ಹಾಗಾಗಿ ಒಂದೇ ಬಣ್ಣದ ಶೀಷೆಗಳನ್ನು ಒಂದು ಬಾರಿಗೆ ಹಾಕಿ ನಿಮ್ಮ ಬಳಿ ಸ್ಟೋರ್ ಮಾಡಿ ಇಟ್ಟುಕೊಳ್ಳಬೇಕು.
ಈ ಗ್ಲಾಸ್ ಶೆಡ್ಡಿಂಗ್ ಮಿಷನ್ ನ್ನು ಆನ್ಲೈನ್ ನಲ್ಲಿ ಇಂಡಿಯಾ ಮಾರ್ಟ್ ಮೂಲಕ ನೀವು ಖರೀದಿಸಬಹುದು. ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತದೆ. ಇದಕ್ಕೆ ಒಂದುವರೆ ಲಕ್ಷದವರೆಗೂ ಬೆಲೆ ಇರಬಹುದು. ಶೀಷೆಗಳು, ಕರೆಂಟ್ ಸಪ್ಲೈ, ಜಾಗ ಇದೆಲ್ಲದರಿಂದ ರೂ.50,000 ಬಂಡವಾಳ ಹಾಕಿದರೂ ಒಟ್ಟು ಎರಡು ಲಕ್ಷ ಆಗುತ್ತದೆ.
ನೀವು ಈ ಗ್ಲಾಸ್ ಶೆಡ್ಡಿಂಗ್ ಮಿಷನ್ ನಲ್ಲಿ ಎರಡು ಮೂರು ದಿನಕ್ಕೆ ಒಂದು ಟನ್ ನಷ್ಟು ಗ್ಲಾಸ್ ಕುಲ್ಲೆಟ್ ತಯಾರಿಸಬಹುದು. ಇದಕ್ಕೆ ಒಂದು ಟನ್ ಗೆ ರೂ.8,000 ವರೆಗೂ ಕೂಡ ರೇಟ್ ಬರುತ್ತದೆ ಮತ್ತು ಯಾರ ಸಹಾಯವಿಲ್ಲದೆ ಒಬ್ಬರೇ ಈ ಬಿಸಿನೆಸ್ ರನ್ ಮಾಡಬಹುದು.
ಈ ಸುದ್ದಿ ಓದಿ:- ಮನೆ ಕಟ್ಟಿಸುವಾಗ ಈ ವಿಚಾರಗಳು ತಿಳಿದಿದ್ದರೆ 4-5 ಲಕ್ಷ ಹಣ ಉಳಿಸಬಹುದು, ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ.!
ಇದನ್ನು ರಿಸೈಕಲಿಂಗ್ ಮಾಡಿ ಮತ್ತೆ ಗಾಜಿನ ಶೀಷೆ ಮಾಡಲು ಮತ್ತು ಮನೆ ಕಟ್ಟುವಾಗ ಡಸ್ಟ್ ಆಗಿ ಬಳಸಲು ಇನ್ನು ಮುಂತಾದ ರೀಸನ್ ಗಳಿಗೆ ಕಂಪನಿಗಳು ಖರೀದಿಸುತ್ತವೆ. ಇಂಡಿಯಾ ಮಾರ್ಟ್. ಕಂನಲ್ಲಿ (india mart.com) ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡು ಪ್ರಾಡಕ್ಟ್ ಬಗ್ಗೆ ವಿವರಣೆ ಕೊಟ್ಟರೆ ನಿಮ್ಮ ಬಳಿಗೆ ಬಂದು ಖರೀದಿಸಿ ಹೋಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿಯಾಗಿ ನೋಡಿ.