ಬೆನ್ನು ನೋವು ಎನ್ನುವುದು ವಯೋಸಹಜ ಕಾಯಿಲೆ ಆಗಿರದೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ಕೂಡ ಕಾಡುತ್ತಿರುವ ಸಮಸ್ಯೆಯಾಗಿಬಿಟ್ಟಿದೆ. ಬೆನ್ನು ನೋವು ಅನೇಕ ಕಾರಣಗಳಿಂದ ಬರುತ್ತದೆ. ಅತಿಯಾದ ಒತ್ತಡದಿಂದಲೂ ಕೂಡ ಬೆನ್ನು ನೋವು ಬರುತ್ತದೆ, ತಪ್ಪಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯು ಕೂಡ ಇದಕ್ಕೆ ಕಾರಣವಾಗಿದೆ.
ಕಶೇರುಕಗಳಾದ ನಮಗೆ ಬೆನ್ನು ಮೂಳೆಯೇ ಆಧಾರವಾಗಿದೆ. ಈ ಬೆನ್ನು ಮೂಳೆಯಲ್ಲಿ ಸ್ಪಂಜಿನ ರೀತಿಯಾದ ಜೆಲ್ ಎನ್ನುವ ಲಿಕ್ವಿಡ್ ಇರುತ್ತದೆ. ಬೆನ್ನಿನ ಮೂಳೆಗಳ ಚಲನೆಗೆ ಇದು ಸಹಕಾರಿಯಾಗಿದೆ. ಈ ಜೆಲ್ ಖಾಲಿಯಾದಾಗ ಮೂಳೆಗಳ ನಡುವೆ ಘರ್ಷಣೆ ಆರಂಭವಾಗಿ ಆ ಸಮೂಹದಲ್ಲಿರುವ ನರಗಳ ಕೂಡ ಸಮಸ್ಯೆ ಆಗುತ್ತದೆ. ಆಗ ನಮಗೆ ಬೆನ್ನು ನಾವು ಬೆನ್ನಿನ ನರಗಳ ಸೆಳೆತ ಕಾಡುತ್ತದೆ.
ಬಹಳ ತೂಕವನ್ನು ನಾವು ಎತ್ತಿದಾಗ ಬೆನ್ನಿನ ಮೂಳೆ ಜರುಗುತ್ತದೆ ಆಗಲು ಕೂಡ ವಿಪರೀತವಾದ ನೋ’ವು ಕಾಣಿಸಿಕೊಳ್ಳುತ್ತದೆ, ಯಾವಾಗಲೂ ಕುಳಿತು ಕೆಲಸ ಮಾಡುವವರು ಒಂದೇ ಭಂಗಿಯಲ್ಲಿ ಇರುವುದರಿಂದ ಕೂಡ ಅದರ ಮೇಲೆ ಒತ್ತಡವಾಗಿ ಆಗಲು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.
ಸರ್ವೇಕಲ್ ಪಾರ್ಟ್ ನಲ್ಲಿ ಮೊದಲಿಗೆ ಈ ನೋ’ವು ಶುರುವಾಗುತ್ತದೆ ಇದನ್ನು ಸರ್ವೈಕಲ್ ಸ್ಪಾಂಡಿನೇಯಸ್ ಎಂದು ಸಹ ಕರೆಯುತ್ತಾರೆ ನಂತರ L4, L5 ನಲ್ಲಿ ಕೂಡ ಈ ನೋವು ಶುರು ಆಗುತ್ತದೆ. ಕೆಲವರಿಗೆ ಆಗಾಗ ಕಾಣಿಸಿಕೊಂಡರೆ ಕೆಲವರಿಗೆ ಶಾಶ್ವತವಾಗಿ ಇದು ಕಾಡುತ್ತದೆ. ದು’ರಂ’ತವೇನೆಂದರೆ ನಮ್ಮ ವಿಜ್ಞಾನ ಎಷ್ಟು ಮುಂದುವರೆದಿದ್ದರೂ ಕೂಡ ಈ ಸಮಸ್ಯೆಗೆ ಪರ್ಮನೆಂಟ್ ಸೊಲ್ಯೂಷನ್ ಕಂಡುಹಿಡಿಯಲು ಆಗಿಲ್ಲ ತಾತ್ಕಾಲಿಕವಾಗಿ ನೋವನ್ನು ನಿವಾರಣೆ ಮಾಡುವಂತಹ ಮೆಡಿಸನ್ ಇದೆ ಅಷ್ಟೇ.
ಆದರೆ ಮುದ್ರಾ ಶಾಸ್ತ್ರದಲ್ಲಿ ಇದಕ್ಕೆ ಶಾಶ್ವತವಾದ ಪರಿಹಾರ ಇದೆ. ಕೆಲ ಮುದ್ರೆಗಳನ್ನು ಹಾಕುವ ಮೂಲಕವೇ ಬೆನ್ನು ಮೂಳೆಗಳ ನೋವನ್ನು ನಿವಾರಣೆ ಮಾಡಬಹುದು ಎಂದು ಮುದ್ರ ಶಾಸ್ತ್ರ ಹೇಳುತ್ತದೆ. ಮೇರು ದಂಡ ಮುದ್ರೆ ಎನ್ನುವ ಈ ಮುದ್ರೆಯನ್ನು ಬೆನ್ನು ನೋವು ಕಡಿಮೆ ಆಗುತ್ತದೆ.
ಇದನ್ನು ಹೇಗೆ ಹಾಕುವುದೆಂದರೆ ಮೊದಲು ಬಲಗೈನ ಮಧ್ಯದ ಬೆರಳನ್ನು ತಾಗಿಸಿ ಆಮೇಲೆ ಕಿರುಬೆರಳನ್ನು ತಾಗಿಸಬೇಕು, ಎಡಗೈಯಲ್ಲಿ ಚಿನ್ಮುದ್ರ ಅಂದರೆ ಹೆಬ್ಬೆರಳು ಹಾಗೂ ತೋರುಬೆರಳುಗಳನ್ನು ಮಾತ್ರ ಸೇರಿಸಿ ಚಿನ್ಮುದ್ರೆ ಮಾಡಬೇಕು. ಹೀಗೆ ಬಲಗೈನಿಂದ ಮೇರು ದಂಡ ಮುದ್ರ ಹಾಕುವುದರಿಂದ ಬಹಳ ಪರಿಣಾಮಕಾರಿಯಾಗಿ ಬೆನ್ನು ನೋವು ಗುಣವಾಗುತ್ತದೆ.
ಪ್ರತಿನಿತ್ಯವೂ ಕೂಡ ತಪ್ಪದೆ ಬೆಳಗಿನ ಜಾವದಲ್ಲಿ ಈ ಮುದ್ರೆಯನ್ನು ಮಾಡುವುದು ಇನ್ನು ಉತ್ತಮ. ಯಾಕೆಂದರೆ ಬೆಳಗ್ಗೆ ಸಮಯದಲ್ಲಿ ವಾತಾವರಣ ಸಕರಾತ್ಮಕವಾಗಿರುತ್ತದೆ. ಇಂಥ ಸಮಯದಲ್ಲಿ ಎದ್ದು ಒಳ್ಳೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೀಲಿಂಗ್ ಪವರ್ ಹೆಚ್ಚಾಗುತ್ತದೆ. ಸಾಧ್ಯವಾಗದೆ ಇದ್ದವರು ಸಂಜೆ ಸಮಯ ಅಥವಾ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಈ ಮುದ್ರೆಯನ್ನು ಮಾಡಬಹುದು.
ಒಂದೇ ಸ್ಟ್ರೆಚ್ಚಿನಲ್ಲಿ ಕನಿಷ್ಠ 35 ನಿಮಿಷಗಳವರೆಗೆ ಈ ಮುದ್ರೆಯನ್ನು ಮಾಡಬೇಕು. ಸಮಯ ಇಲ್ಲದೆ ಇದ್ದವರು ಬೆಳಗ್ಗೆ 20 ನಿಮಿಷ ಅಥವಾ ಸಂಜೆ 15 ನಿಮಿಷ ಮಾಡಿದರು ಆಗುತ್ತದೆ. ಈ ಮುದ್ರೆ ಮಾಡುವುದರ ಜೊತೆಗೆ ಪಾಸಿಟಿವ್ ಅಫರ್ಮೇಷನ್ ಮಾಡಿಕೊಳ್ಳಬೇಕು. ನಾನು ಈ ಮುದ್ರೆ ಮಾಡಿ ಹುಷಾರಾಗಿದ್ದೇನೆ.
ಈಗ ನನ್ನ ಬೆನ್ನು ನೋವು ಸಂಪೂರ್ಣವಾಗಿ ಗುಣವಾಗಿದೆ, ನನ್ನ ಆರೋಗ್ಯ ಉತ್ತಮವಾಗಿದೆ, ನನ್ನ ಬೆನ್ನು ಮೂಳೆಗಳು ಈಗ ಸ್ಟ್ರಾಂಗ್ ಆಗಿದೆ ಎಂದು ಸಕರಾತ್ಮಕವಾಗಿ ಹೇಳಿಕೊಳ್ಳುತ್ತಿರಬೇಕು. ಈ ರೀತಿ ಮಾತನಾಡಿದಾಗ ಯುನಿವರ್ಸಿಗೆ ಪಾಸಿಟಿವ್ ಸಂದೇಶ ಹೋಗುತ್ತದೆ ಆ ಪಾಸಿಟಿವ್ ವೈಬ್ರೇಶನ್ ಇಂದ ನೀವು ಬಹಳ ಬೇಗ ಸಂಪೂರ್ಣವಾಗಿ ಈ ಸಮಸ್ಯೆಯಿಂದ ಗುಣವಾಗುತ್ತೀರಿ.