ಹಳದಿ ಹಲ್ಲುಗಳನ್ನು 5 ನಿಮಿಷಗಳಲ್ಲಿ ಪಳಪಳ ಹೊಡೆಯುವಂತೆ ಮಾಡುವ ಸುಲಭ ಟೆಕ್ನಿಕ್ ಇದು.!

 

WhatsApp Group Join Now
Telegram Group Join Now

ಹಲ್ಲುಗಳು ನಮ್ಮ ಸೌಂದರ್ಯದ ಸಂಕೇತ ಜೊತೆಗೆ ಬಿಳಿಯಾದ ಅಚ್ಚುಕಟ್ಟಾದ ಹಲ್ಲುಗಳ ಜೋಡಣೆ ನಮ್ಮ ಕಾಂಫಿಡೆನ್ಸ್ ಲೆವೆಲ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು. ಒಂದು ವೇಳೆ ನಮ್ಮ ಹಲ್ಲು ಗಲೀಜಾಗಿದ್ದರೆ ಹಳದಿಯಾಗಿದ್ದರೆ ಮತ್ತೊಬ್ಬರ ಎದುರು ನಮಗೆ ಮಾತನಾಡುವುದಕ್ಕೆ ಮುಜುಗರವಾಗುತ್ತದೆ.

ಹಾಗಾಗಿ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಜೊತೆಗೆ ಹಲ್ಲುಗಳು ಗಲೀಜಾಗಿ ಇದ್ದರೆ ಅದರಲ್ಲಿ ಕಲೆಗಳು ಅಥವಾ ಹಳದಿ ಕಟ್ಟಿದ್ದರೆ ನಿಧಾನವಾಗಿ ಅದೇ ಇನ್ಫೆಕ್ಷನ್ ಆಗಿ ಹಲ್ಲು ಹುಳಕಾಗಲು ಕಾರಣ ಆಗಬಹುದು. ಆದ್ದರಿಂದ ಹಲ್ಲುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ಈ ಅಂಕಣದಲ್ಲಿ ನಾವು ಇದರ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ನಿಮ್ಮ ಹಲ್ಲು ಗಟ್ಟಿಮುಟ್ಟಾಗಿ ಮತ್ತು ಪಳಪಳ ಹೊಳೆಯುವಂತೆ ಮಾಡಲು ಒಂದು ಉಪಾಯ ಇದೆ ಇದನ್ನು ನೀವು ಮಾಡಿದರೆ ಐದು ನಿಮಿಷದಲ್ಲಿ ಎಷ್ಟೇ ಹಳದಿಯಾಗಿ‌ದ್ದರೂ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈಗಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ವಿಧವಿಧವಾದ ಬ್ರಾಂಡೆಡ್ ರಾಸಾಯನಿಕಗಳು ಸಿಗುತ್ತವೆ.

ಟೂತ್ ಬ್ರಷ್, ಟೂತ್ ಪೇಸ್ಟ್, ಮೌತ್ ವಾಷರ್ ಇನ್ನು ಹತ್ತು ಹಲವು ಇದ್ದರೂ ಕೂಡ ಇವುಗಳಿಗಿಂತ ಪವರ್ ಫುಲ್ ಎಂದರೆ ನಮ್ಮ ಮನೆ ಮದ್ದುಗಳು ಎಂದೇ ಹೇಳಬಹುದು. ಯಾಕೆಂದರೆ ಈಗಿನ ಕಾಲದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಕೂಡ ಹಲ್ಲು ನೋವು, ಹಲ್ಲು ಹುಳಕಾಗಿರುವ ಹಲ್ಲಿಗೆ ಸಂಬಂಧಿತ ಸಮಸ್ಯೆಯಿಂದ ನರಳುತ್ತಿರುವವರು ಸಿಗುತ್ತಾರೆ.

ಆದರೆ ಆಗಿನ ಕಾಲದಲ್ಲಿ ಇದು ಬಹಳ ಅಪರೂಪ ಆಗಿರುತ್ತಿತ್ತು. ಅದರಲ್ಲೂ ಆಗಿನ ಕಾಲದಲ್ಲಿ ಟೂತ್ ಬ್ರಷ್ ಟೂತ್ಪೇಸ್ಟ್ ಏನು ಇರಲಿಲ್ಲ ಆದರೂ ಅವರ ಹಲ್ಲು ಅಷ್ಟು ಗಟ್ಟಿ ಮುಟ್ಟಾಗಿತ್ತು ಎಂದರೆ ಆಶ್ಚರ್ಯವಾಗದೆ ಇರದು. ಇದಕ್ಕೆ ಕಾರಣ ಏನೆಂದರೆ ಅವರು ಹಲ್ಲು ಕ್ಲೀನ್ ಮಾಡಲು ಬಯಸುತ್ತಿದ್ದ ಸಾಧನಗಳು ಬೇವಿನ ಕಡ್ಡಿ, ಹೊಂಗೆ ಮರದ ಕಡ್ಡಿ ಅಥವಾ ಇದ್ದಲಿನ ಪುಡಿ ಇತ್ಯಾದಿ ಇತ್ಯಾದಿಗಳು ಹಲ್ಲುಗಳ ಆರೋಗ್ಯವನ್ನು ರಕ್ಷಿಸುತ್ತಿದ್ದವು.

ಈಗಲೂ ಕೂಡ ನಾವು ಹಲ್ಲು ಹಳದಿ ಆದಾಗ ಅದೇ ರೀತಿಯ ಹಳೆ ಕಾಲದ ಒಂದು ಟೆಕ್ನಿಕ್ ಮಾಡಿದರೆ ಸಾಕು ಐದು ನಿಮಿಷಗಳಲ್ಲಿ ಪಳಪಳ ಹೊಳೆಯುವಂತೆ ಆಗುತ್ತದೆ. ಇದನ್ನು ಮಾಡಲು ಬೇಕಾಗಿರುವುದು ಕೇವಲ ಮೂರೇ ವಸ್ತುಗಳು. ಅದು ಕೂಡ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ಇದನ್ನು ದುಬಾರಿಯಾಗದಂತೆ ಮಾಡಬಹುದು.

ಮೊದಲಿಗೆ ಮನೆಯಲ್ಲಿ ಅಡುಗೆಗಳಿಗೆ ಬಳಸುವ ಅಡುಗೆ ಸೋಡವನ್ನು 3 ಗ್ರಾಂ ನಷ್ಟು ತೆಗೆದುಕೊಳ್ಳಿ ಇದಕ್ಕೆ ಒಂದು ಚಮಚ ನಿಂಬೆರಸ ಹಾಕಿ ಮತ್ತು ಮನೆಯಲ್ಲಿ ಸಾಕಿದ ನಾಡು ಹಸುವಿನ ಸೆಗಣಿಯಲ್ಲಿ ಮಾಡಿದ ಬೆರಣಿಯನ್ನು ಸುಟ್ಟಿ ಪುಡಿ ಮಾಡಿದ ಬೂದಿ ತೆಗೆದುಕೊಂಡು ಅದನ್ನು ಸಹ ಇದಕ್ಕೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.

ಇದನ್ನು ಕೈ ಬೆರಳಿಗೆ ಹಾಕಿಕೊಂಡು ಚೆನ್ನಾಗಿ ಎಲ್ಲಾ ಹಲ್ಲುಗಳನ್ನು ಉಜ್ಜಬೇಕು. ಐದು ನಿಮಿಷ ಆದ ನಂತರ ತಣ್ಣೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು. ಈ ರೀತಿಯಾಗಿ ಮಾಡಿದ ಐದೇ ನಿಮಿಷಗಳಲ್ಲಿ ನಿಮ್ಮ ಹಲ್ಲುಗಳು ಆಶ್ಚರ್ಯ ಪಡುವ ರೀತಿಯಲ್ಲಿ ಬದಲಾಗಿರುತ್ತದೆ. ಬಹಳ ಕ್ಲೀನ್ ಆಗಿ ಯಾವುದೇ ಹಳೆ ಕಲೆ ಇರದಂತೆ ಹಳದಿ ಕಲೆ ಇಲ್ಲದಂತೆ ಪಳಪಳ ಹೊಳೆಯುತ್ತವೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಈ ಮನೆಮದ್ದನ್ನು ನೀವು ಪ್ರಯತ್ನಿಸಿ ಮತ್ತು ನಿಮ್ಮ ಕುಟುಂಬದವರಿಗೂ ತಿಳಿಸಿ.

https://youtu.be/AwmDPSpdMfk?si=tH1SNaTDkoCFxznn

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now