ಕೇವಲ 10 ನಿಮಿಷಗಳಲ್ಲಿ ಬ್ಲೌಸ್ ಕಟಿಂಗ್ ಕಲಿಯುವ ಸುಲಭ ವಿಧಾನ ಇದು.!

 

WhatsApp Group Join Now
Telegram Group Join Now

ಶಾಲಾ ಕಾಲೇಜಿಗೆ ಹೋಗದೆ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳು, ಉದ್ಯೋಗಕ್ಕೆ ಹೋಗದೆ ಮನೆಯಲ್ಲಿರುವ ಗೃಹಿಣಿಯರು ಮತ್ತು ಆಸಕ್ತಿ ಇರುವ ಯಾರು ಬೇಕಾದರೂ ಟೈಲರಿಂಗ್ ಕಲಿಯಬಹುದು. ಟೈಲರಿಂಗ್ ಎನ್ನುವುದು ಎಂದು ಬರಿ ಆಸಕ್ತಿಯಾಗಿ, ಹವ್ಯಾಸವಾಗಿ ಉಳಿದಿಲ್ಲ. ಅದೊಂದು ದೊಡ್ಡ ಉದ್ಯಮವಾಗಿ ಬೆಳದಿದೆ.

ಯಾಕೆಂದರೆ ರೆಡಿಮೇಡ್ ಬಟ್ಟೆ ಗಳಿಗಿಂತ ಟೈಲರ್ ಬಳಿ ಹೊಲಿಸಿ ಹಾಕಿಕೊಳ್ಳುವ ಬಟ್ಟೆಗಳು ಹೆಚ್ಚು ಲುಕ್ ಕೊಡುವುದರಿಂದ l ಹೆಚ್ಚು ಇಷ್ಟಪಡುತ್ತಾರೆ ಮತ್ತು ನಮ್ಮ ಭಾರತದ ಸಂಸ್ಕೃತಿ ಪ್ರಕಾರ ಸೀರೆ ಉಡುವವರು ಅದಕ್ಕೆ ಮ್ಯಾಚಿಂಗ್ ಆಗಿ ಹಾಕಿಕೊಳ್ಳಲು ಸೀರೆಯ ಬಟ್ಟೆಯ ಬ್ಲೌಸ್ ಹೆಚ್ಚು ಸೂಕ್ತವಾಗುವ ಕಾರಣ ಇದನ್ನು ಹೊಲಿದು ಕೊಡುವ ಟೈಲರ್ ಗಳಿಗೆ ಬೇಡಿಕೆ ಹೆಚ್ಚು.

ನಾವು ಎಷ್ಟೇ ಮುಂಚಿತವಾಗಿಯೂ ಆರ್ಡರ್ ಕೊಟ್ಟಿದ್ದರು ಕೂಡ ನಾವು ಕೇಳಿದ ದಿನಕ್ಕೆ ಟೈಲರ್ ಬಟ್ಟೆ ಹೊಲಿದು ಕೊಟ್ಟಿಲ್ಲ ಎನ್ನುವ ಕಂಪ್ಲೇಂಟ್ ಗಳನ್ನು ಕೇಳಿದ್ದೇವೆ. ಆದ್ದರಿಂದ ನಾವೇ ನಮ್ಮ ಮನೆಯಲ್ಲಿ ನಮ್ಮ ಬಟ್ಟೆಯನ್ನು ಹೊಲಿದುಕೊಳ್ಳುವುದು ಒಳ್ಳೆಯದು. ಇದರ ಬಗ್ಗೆ ಹೆಚ್ಚಿಗೆ ತರಬೇತಿ ಏನು ಬೇಡ ನಮ್ಮ ಮನೆಯಲ್ಲಿ ಅಥವಾ ಮನೆ ಅಕ್ಕ ಪಕ್ಕ ಅಥವಾ ಸಂಬಂಧಿಕರಲ್ಲಿ ಯಾರಾದರೂ ಟೈಲರ್ ಗಳು ಇದ್ದರೆ ಅವರು ಕಟ್ ಮಾಡುವುದನ್ನು ಮತ್ತು ಹೊಲಿಗೆ ಮಾಡುವುದನ್ನು ನೋಡಿ, ಕೇಳಿ ತಿಳಿದುಕೊಂಡು ನಾವು ಸಹ ಶುರು ಮಾಡಬಹುದು.

ಹಾಗೂ ಸಹಾ ಅರ್ಥ ಆಗಿಲ್ಲ ಎಂದರೆ ಕಡಿಮೆ ದಿನಗಳ ತರಬೇತಿ ಕೂಡ ಸಿಗುತ್ತದೆ. ಒಂದು ವಾರದಲ್ಲಿಯೇ ಅಚ್ಚುಕಟ್ಟಾಗಿ ಬ್ಲೌಸ್ ಗಳು ಹೊಲಿಯುವುದನ್ನು ಕಲಿಯಬಹುದು ಅದು ಕೂಡ ಸಾಧ್ಯವಾಗಿಲ್ಲ ಎಂದರೆ ಯೂಟ್ಯೂಬ್ ವಿಡಿಯೋಗಳನ್ನು ನೋಡುವ ಮೂಲಕ ಟೈಲರಿಂಗ್ ಅನ್ನು ಆರಾಮಾಗಿ ಕಲಿಯಬಹುದು. ಈಗ ಅಡುಗೆ, ಯೋಗ ಮುಂತಾದವುಗಳನ್ನೆಲ್ಲವನ್ನು ಕೂಡ ಯೂಟ್ಯೂಬ್ ನೋಡಿ ಕಲಿಯುವಂತೆ ಟೈಲರಿಂಗ್ ಅನ್ನು ಕೂಡ ಯೂಟ್ಯೂಬ್ ನೋಡಿ ಕಲಿಯಬಹುದು.

ಒಬ್ಬರಿಗಿಂತ ಒಬ್ಬರು ಹೇಳುವ ವಿಧಾನ ಬೇರೆ ಇರುತ್ತದೆ ನಿಧಾನವಾಗಿ ಅರ್ಥೈಸಿಕೊಂಡು ಮತ್ತು ಪ್ರಯೋಗ ಮಾಡುವ ಮೂಲಕ ನಾವು ಸುಲಭವಾಗಿ ಇವುಗಳನ್ನು ಕಲಿತುಬಿಡಬಹುದು ಹಾಗೆ ಮನೆಯಲ್ಲಿಯೇ ಒಂದು ಟೈಲರಿಂಗ್ ಮಷೀನ್ ಇದ್ದರೆ ಹೊಲಿದು ಕೂಡ ನೋಡಿ ಚೆಕ್ ಮಾಡಿಕೊಳ್ಳಬಹುದು. ಅದೇನು ಬ್ರಹ್ಮ ವಿದ್ಯೆಯೂ ಅಲ್ಲ, ರಾಕೆಟ್ ಸೈನ್ಸ್ ಕೂಡ ಅಲ್ಲ.

ಶಾಲಾ ಕಾಲೇಜು ವಿದ್ಯಾಭ್ಯಾಸವನ್ನೇ ಮಕ್ಕಳು ಆನ್ಲೈನಲ್ಲಿ ಓದಿ ಪಾಸ್ ಮಾಡುವ ಈ ಕಾಲದಲ್ಲಿ ಟೈಲರಿಂಗ್ ಅನ್ನು ಆನ್ಲೈನ್ನಲ್ಲಿ ನೋಡಿ ಕಲಿಯಲು ಸಾಧ್ಯವಾಗದೇ ಇರುವ ಮಾತು ಇಲ್ಲ. ಯಾವುದಾದರು ಒಂದು ವಿಡಿಯೋವನ್ನು ನೋಡಿ ಅರ್ಥವಾಗದೆ ಇದ್ದ ಪಕ್ಷದಲ್ಲಿ ಅದನ್ನೇ ಪದೇ ಪದೇ ನೋಡಿ ತಪ್ಪಾಗಿದ್ದರೂ ಸರಿ ಮಾಡಿಕೊಂಡು ಗಾಢವಾದ ಆಸಕ್ತಿ ತೋರಿಸಿದರೆ ಏಕಲವ್ಯನ ರೀತಿ ಗುರು ಇಲ್ಲದೆಯೇ ಇದನ್ನು ಕಲಿತುಬಿಡಬಹುದು.

ಮನೆಯಲ್ಲಿ ಇರುವವರಿಗೆ ಸಮಯ ಕಳೆಯಲು ಹವ್ಯಾಸವಾಗಿ, ಹೊರಗೆ ಹೋಗಿ ದುಡಿಯಲು ವಿದ್ಯಾಭ್ಯಾಸ ಇಲ್ಲ ಎಂದು ಕೊರಗುವ ಗೃಹಿಣಿಯರಿಗೆ ದುಡಿಮೆಯಾಗಿ ಈ ಟೈಲರಿಂಗ್ ಅನುಕೂಲಕ್ಕೆ ಬರುತ್ತದೆ. ಇದರಲ್ಲೂ ಸಹ ಹೆಚ್ಚು ಆಸಕ್ತಿ ಇದ್ದವರು ಹೊಸ ಹೊಸ ಡಿಸೈನ್ ಅಥವಾ ವಿಧಾನಗಳನ್ನು ಕಲಿತರೆ ಅವರಿಗೆ ಇರುವಷ್ಟು ಬೇಡಿಕೆ ಮತ್ತೆ ಯಾರಿಗೂ ಇರುವುದಿಲ್ಲ. ಎಂದಿಗೂ ಕೂಡ ಬೇಡಿಕೆ ಕಡಿಮೆ ಆಗದ ಮತ್ತು ಉದ್ಯೋಗ ಕಡಿಮೆ ಆಗದ ಕೆಲಸ ಎಂದರೆ ಅದು ಟೈಲರಿಂಗ್. ನಿಮಗೂ ಸಹ ಇದರಲ್ಲಿ ಆಸಕ್ತಿ ಇದ್ದರೆ ಈ ವಿಡಿಯೋವನ್ನು ನೋಡಿ ಬ್ಲೌಸ್ ಕಟಿಂಗ್ ಮತ್ತು ಸ್ಟಿಚಿಂಗ್ ಅನ್ನು ಕಲಿತುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now