ರಾಜ್ಯದಲ್ಲಿ ಮನೆ ಸೈಟು ಜಮೀನು ಹೊಂದಿರುವ ಪ್ರತಿಯೊಬ್ಬ ಆಸ್ತಿಯ ಮಾಲೀಕ ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದಾಗಿದೆ. ಯಾಕೆಂದರೆ ರಾಜ್ಯದಲ್ಲಿ ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರ ಹೊಸ ನಿಯಮವನ್ನು ತಂದಿದೆ. ಇದರ ಕುರಿತು ಪ್ರತಿಯೊಬ್ಬರಿಗೂ ಕೂಡ ಕನಿಷ್ಠ ಮಾಹಿತಿ ಇರಲೇಬೇಕು. ನಮ್ಮ ದೇಶದಲ್ಲಿ ಮೂರು ರೀತಿಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತದೆ.
ಕೃಷಿ ಭೂಮಿ, ವಸತಿ ಭೂಮಿ, ಕೈಗಾರಿಕಾ ಭೂಮಿ ಜೊತೆಗೆ ಮನೆ ಮಾರಾಟ. ಇವುಗಳಲ್ಲಿ ಯಾವುದನ್ನೇ ಖರೀದಿ ಮಾಡುವಾಗ ಕೂಡ ಖರೀದಿಸುವವರು ಆಸ್ತಿಯ ಹಿನ್ನೆಲೆ ಬಗ್ಗೆ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ನಂತರ ಅಸ್ತಿ ಖರೀದಿ ವ್ಯವಹಾರಕ್ಕೆ ಕೈ ಹಾಕಬೇಕು. ಅಲ್ಲದೆ ಆಸ್ತಿ ಖರೀದಿಸಿದ ನಂತರ ಮುಂದಿನ ಪ್ರಕ್ರಿಯೆಗಳನ್ನು ಕೂಡ ಸರಿಯಾದ ರೀತಿಯಲ್ಲಿ ಕಾನೂನು ಪ್ರಕಾರವಾಗಿ ಪೂರೈಸಬೇಕು ಇಲ್ಲವಾದಲ್ಲಿ ಭವಿಷ್ಯದಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ.
ಸಾಮಾನ್ಯವಾಗಿ ಎಲ್ಲರೂ ಡೀಲರ್ ಇಂದ ಆಸ್ತಿ ಖರೀಸಿದ ಮೇಲೆ ಆ ಆಸ್ತಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡರೆ ಆಸ್ತಿ ತನ್ನದಾಯಿತು ಇನ್ನು ಮೇಲೆ ಇನ್ನು ಮುಂದೆ ತನ್ನದೇ ಒಡೆತನ ಎಂದು ತಿಳಿದುಕೊಂಡಿರುತ್ತಾರೆ, ಆದರೆ ಈ ವಿಚಾರ ತಪ್ಪು. ಆಸ್ತಿ ಖರೀದಿಸಿ ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡ ನಂತರ ಈ ಪ್ರಕ್ರಿಯೆ ಪೂರ್ತಿಗೊಳ್ಳುವುದಿಲ್ಲ.
ಅದನ್ನು ತಪ್ಪದೆ ನೋಂದಣಿ ಮಾಡಿಸಬೇಕು ನಿಮಗೆ ಸಂಬಂಧಪಟ್ಟ ಸಬ್ ರಿಜಿಸ್ಟರ್ ಆಫೀಸ್ ಅಲ್ಲಿ ಇದಕ್ಕಾಗಿ ಇರುವ ಪ್ರಕ್ರಿಯೆಗಳನ್ನು ಪೂರಕ ದಾಖಲೆಗಳನ್ನು ಒದಗಿಸುವ ಮೂಲಕ ಪೂರ್ತಿಗೊಳಿಸಬೇಕು. ಈ ರೀತಿ ಹೆಸರಿಗೆ ಆ ಆಸ್ತಿಯು ರಿಜಿಸ್ಟರ್ ಆಗಿದ್ದರೆ ಅದು ನಿಮ್ಮ ಹೆಸರಿಗೆ ಆಗಿದೆ ಎಂದು ಅರ್ಥ, ಇಷ್ಟಾದರೆ ಈ ಪ್ರಕ್ರಿಯೆ ಪೂರ್ತಿಗೊಳ್ಳುವುದಿಲ್ಲ ಇದಾದ ಬಳಿಕ ಇನ್ನು ಕೆಲ ಕ್ರಮಗಳನ್ನು ಪೂರೈಸಬೇಕು.
ಆಸ್ತಿ ಹಕ್ಕಿನ ಹೆಸರು ಒಬ್ಬರಿಂದ ಮತ್ತೊಬ್ಬ ಹೆಸರಿಗೆ ಬದಲಾಗುವುದು ಮಾತ್ರ ಅಲ್ಲದೆ ಸೇಲ್ಸ್ ಡೀಡ್ ಕೂಡ ಮಾಡಿಸಬೇಕು. ಆಗ ಮಾತ್ರ ನೀವು ಕಾನೂನು ರೀತಿಯಾಗಿ ಆ ಆಸ್ತಿಯನ್ನು ಖರೀದೀಸಿದ್ದೀರಿ ಎಂದಾಗುತ್ತದೆ. ಈ ರೀತಿ ರಿಜಿಸ್ಟರ್ ಕಾರ್ಯ ಮುಗಿದ ಮೇಲೆ ನೀವು ಸಂಬಂಧ ಪಟ್ಟ ಕಚೇರಿಗೆ ಹೋಗಿ ಈಗ ಆ ಆಸ್ತಿಯ ದಾಖಲೆಗಳೆಲ್ಲ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು.
ಇಷ್ಟಾಗದೆ ಕೇವಲ ಕಾಗದ ಪತ್ರದಲ್ಲಿ ಮಾತ್ರ ನಿಮ್ಮ ಹೆಸರು ಬದಲಾಯಿಸಿಕೊಂಡು ಸುಮ್ಮನಾದರೆ ಭವಿಷ್ಯದಲ್ಲಿ ಇದನ್ನು ಮಾರಾಟ ಮಾಡಿದ ಮಾಲೀಕರಿಂದಲೇ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಕೂಡ ಇರುತ್ತವೆ. ಆದ್ದರಿಂದ ಇನ್ನು ಮುಂದೆ ಈ ರೀತಿ ವಿಚಾರಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ ಮತ್ತು ಈ ಪ್ರಕ್ರಿಯೆಯನ್ನು ತಪ್ಪದೆ ಪೂರೈಸಿ.
ಆಸ್ತಿ ಖರೀದಿಗೂ ಮುನ್ನ ಆಸ್ತಿ ಮಾರಾಟ ಮಾಡುತ್ತಿರುವ ವ್ಯಕ್ತಿಗೆ ಆಸ್ತಿಯು ಯಾವ ಮೂಲದಿಂದ ಬಂದಿದ್ದು ಎನ್ನುವುದರ ಬಗ್ಗೆ ಕೂಡ ನೀವು ಗಮನ ಕೊಡಬೇಕು. ಜೊತೆಗೆ ಆಸ್ತಿ ಖರೀದಿಸಿ ರಿಜಿಸ್ಟ್ರೇಷನ್ ಆಗುವ ಮುನ್ನವೇ ದಾಖಲೆಗಳಲ್ಲಿ ಇರುವ ಮಾಹಿತಿಯಂತೆ ಅದೇ ವಿಸ್ತೀರ್ಣದಲ್ಲಿ ಮತ್ತು ಅದೇ ಸಂಖ್ಯೆಗಳಲ್ಲಿ ಆ ಆಸ್ತಿಯೂ ಇದೆಯೇ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕು.
ಈ ವಿಷಯಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಸಂಬಂಧಿಸಿದ ಕಛೇರಿಗಳಲ್ಲಿ ಕೇಳಿ ಪಡೆಯಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ಇತರರ ಜೊತೆಗೂ ಕೂಡ ಹಂಚಿಕೊಂಡು ಈ ವಿಷಯದ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಯುವಂತೆ ಮಾಡಿ.