ಪ್ರಪಂಚದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಜನರು ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿಸಲು ಇಷ್ಟಪಡುತ್ತಿದ್ದಾರೆ. ಇದಕ್ಕೆ ಕಾರಣಗಳು ಸಾಕಷ್ಟು ಇದೆ. ಯಾಕೆಂದರೆ ನವೀಕರಿಸಲಾಗದ ಮೂಲದ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್ಗಳು ಇನ್ನು ಕೆಲವೇ ವರ್ಷಗಳಲ್ಲಿ ಮುಗಿದು ಹೋಗುವುದರಿಂದ ಇದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಕಂಡುಹಿಡಿದುಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಎಲ್ಲರೂ ಸಹ ಎಲೆಕ್ಟ್ರಿಕ್ ಬೈಕ್ ಗಳ ಬಳಕೆಯನ್ನು ಶುರು ಮಾಡಿದ್ದಾರೆ.
ದ್ವಿಚಕ್ರ ವಾಹನ ತಯಾರಿಕೆಗಳ ಎಲ್ಲಾ ಕಂಪನಿಗಳು ಕೂಡ ತಮ್ಮ ಕಂಪನಿಯ ಎಲೆಕ್ಟ್ರಿಕಲ್ ಬೈಕ್ ಅನ್ನು ಲಾಂಚ್ ಮಾಡಲು ಕಾಯುತ್ತಿವೆ. ಒಂದಕ್ಕಿಂತ ಒಂದು ಬಹಳ ವಿಶೇಷವಾಗಿ ತನ್ನ ಗುಣದಿಂದ ಸ್ಟೈಲಿಂದ ಲುಕ್ ಇಂದ ಹಾಗೂ ಸಾಮರ್ಥ್ಯದಿಂದ ಗ್ರಾಹಕರನ್ನು ಸೆಳೆಯುತ್ತಾ ಇವೆ ಭಾರತ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯ ವಾಹನಗಳು ತನ್ನ ಸ್ಟೈಲಿಶ್ ಇಂದ ಗ್ರಾಹಕರನ್ನು ಸೆಳೆದಿವೆ ಯಮಹಾ ಕಂಪನಿಯ ಬೈಕ್ ಹಾಗು ಕಾರುಗಳು ಹಲವು ಕಾರಣಗಳಿಂದ ಜನರಿಗೆ ಇಷ್ಟ ಆಗಿವೆ.
ಈಗ ಮಾರ್ಕೆಟ್ ಅಲ್ಲಿ ಎಲೆಕ್ಟ್ರಿಕಲ್ ವಾಹನಗಳ ತಯಾರಿಕೆ ಕಾಂಪಿಟೇಶನ್ ಇರುವುದರಿಂದ ಯಮಹ ಕೂಡ ಹೊಸ ರೀತಿಯ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಲಾಂಚ್ ಮಾಡಲು ಹಾತೊರೆಯುತ್ತಿದೆ. ಮೊದಲ ಬಾರಿಗೆ ಎಲೆಕ್ಟ್ರಿಕಲ್ ಕಮ್ ಪೆಟ್ರೋಲ್ ಎರಡು ರೀತಿಯಲ್ಲೂ ಕೂಡ ಓಡಿಸಬಹುದಾದಂತ ವಿಶಿಷ್ಟ ರೀತಿಯ ಬೈಕ್ ಒಂದನ್ನು ಕಂಡುಹಿಡಿದಿದೆ.
ಆಧುನಿಕ ಶೈಲಿಯ ಈ ಹೈಬ್ರಿಡ್ ಬೈಕ್ ನ ಈ ಅನುಕೂಲತೆಗೆ ಯಮಹಾ ಎಲೆಕ್ಟ್ರಿಕಲ್ ಬೈಕಿನ ವಿಶೇಷ ಆಗಿದ್ದು ಇದರ ಜೊತೆಗೆ ಗುಡ್ ಲುಕ್ ಮತ್ತು ಸ್ಮಾರ್ಟ್ ಟೆಕ್ನೋಲಜಿಯನ್ನು ಅನ್ನು ಕೂಡ ಒಳಗೊಂಡಿದೆ. ಯಮಹ ಎಲೆಕ್ಟ್ರಿಕಲ್ ಬೈಕ್ ಎಲೆಕ್ಟ್ರಿಕಲ್ ಶ್ರೇಣಿಯ ವಾಹನಗಳಲ್ಲಿ ಅತ್ಯುತ್ತಮ ವಾದ ವಾಹನ ಎಂದು ಕರೆಸಿಕೊಳ್ಳಲಿದ್ದು 12ಸಿ.ಸಿ ಆರು ಇಂಜಿನ್ ಇಂದ ಚಲಿಸಲಿದೆ.
ಈ ಎಲೆಕ್ಟ್ರಿಕಲ್ ಸ್ಕೂಟರ್ ಅಲ್ಲಿ 8.4 ಬಿಎಚ್ ಎನರ್ಜಿ ಉತ್ಪಾದಿಸುವ ಎಂಜಿನ್ ಅನ್ನು ಕೂಡ ಮೌಲ್ಡ್ ಮಾಡಲಾಗಿದ್ದು ಲುಕ್ ವಿಚಾರದಲ್ಲಿ ಕೂಡ ಬಹಳ ಸ್ಮಾರ್ಟ್ ಆಗಿ ಇರಲಿದೆ. ಹೆಡ್ ಲೈಟ್, ಬ್ಲೂಟೂತ್, ಕಲೆಕ್ಟಿವಿಟಿ, ಸ್ಟೆಪ್ ಆಫ್ ವೈಶಿಷ್ಟಗಳು ಜನರನ್ನು ಆಕರ್ಷಿಸುತ್ತಿದೆ. ಸದ್ಯದಲ್ಲೇ ಮಾರ್ಕೆಟ್ಗೆ ಲಗ್ಗೆ ಇಟ್ಟು ಮನಸೂರೆ ಗೊಳ್ಳಲಿರುವ ಇದರ ಬೆಲೆಯು ಕೂಡ ಬಹಳ ಕಡಿಮೆ ಇದ್ದು, ಈ ವಿಚಾರದಲ್ಲಿ ಕೂಡ ಗ್ರಾಹಕರ ಸ್ನೇಹಿ ಆಗಿದೆ.
ಬಹಳ ಇಂಪಾರ್ಟೆಂಟ್ ಆದ ಇದರ ಪೆಟ್ರೋಲ್ ಕಮ್ ಎಲೆಕ್ಟ್ರಿಕಲ್ ಅಡ್ಜಸ್ಟ್ಮೆಂಟ್ ಅನುಕೂಲತೆ ಬಗ್ಗೆ ಮತ್ತಷ್ಟು ಹೇಳುವುದಾದರೆ ಒಂದು ಲೀಟರ್ ಪೆಟ್ರೋಲ್ ಗೆ 70 ಕಿಲೋಮೀಟರ್ ಮೈಲೇಜ್ ಅನ್ನು ಈ ಬೈಕ್ ನೀಡುತ್ತದೆ. ಮಾರ್ಗಮಧ್ಯೆ ಎಲ್ಲಾದರೂ ಪೆಟ್ರೋಲ್ ಕೈ ಕೊಟ್ಟರೆ ನೀವು ಬ್ಯಾಟರಿ ಉಪಯೋಗಿಸಿಕೊಂಡು ಗಾಡಿ ರನ್ ಮಾಡಿಸಬಹುದು, ನೀವು ಬ್ಯಾಟರಿನ್ನೆ ಉಪಯೋಗಿಸಿಕೊಂಡು ಗಾಡಿ ಓಡಿಸಲು ಶುರುಮಾಡಿದರೆ ಮಧ್ಯೆ ಎಲ್ಲಾದರೂ ಬ್ಯಾಟರಿ ಚಾರ್ಜ್ ಮುಗಿದಾಗ ಚಿಂತೆ ಪಡುವ ಅಗತ್ಯ ಇಲ್ಲ.
ಯಾಕೆಂದರೆ ಅಗತ್ಯಕ್ಕೆ ಬೇಕಾದಷ್ಟು ಎಮರ್ಜೆನ್ಸಿಗೆ ಪೆಟ್ರೋಲ್ ಅನ್ನು ತುಂಬಿಸಿಕೊಂಡಿದ್ದರೆ ಆ ಸಮಯದಲ್ಲಿ ಆ ಪೆಟ್ರೋಲ್ ಮೂಲಕ ಗಾಡಿಯನ್ನು ಚಾಲನೆ ಮಾಡಿಕೊಂಡು ನಿಮ್ಮ ಗಮ್ಯ ಸ್ಥಳ ತಲುಪಬಹುದು. ಇಂತಹ ಒಂದು ವೈಶಿಷ್ಟ್ಯ ಜನರಿಗೆ ಬಹಳ ಅನುಕೂಲತೆ ಮಾಡಿಕೊಡಲಿದೆ ಜೊತೆಗೆ ಗ್ರಾಹಕರು ಕೂಡ ಇದನ್ನು ಬಹಳ ಮೆಚ್ಚಿಕೊಂಡಿದ್ದಾರೆ.