ಸಾಹಸ ಸಿಂಹ ವಿಷ್ಣುವರ್ಧನ್ 1974 ರಿಂದ 2010 ರವರೆಗೆ ಸತತವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ರಾಜ ನರಸಿಂಹ. ಇಂತಹ ಅಭಿನಯ ಭಾರ್ಗವ ಕನ್ನಡದ ಕೋಟ್ಯಾಂತರ ಹೃದಯಗಳನ್ನು ಗೆದ್ದ ಸಿರಿವಂತ ಹಾಗೂ ಗುಣದಲ್ಲಿ ಈತ ಕೋಟಿಗೊಬ್ಬ. ಇಂತಹ ಸಿನಿಮಾ ಇಂಡಸ್ಟ್ರಿಯ ಯಜಮಾನನ ಗತ್ತು ಗಾಂಭೀರ್ಯ ಅವರ ಮುಖದ ಲಕ್ಷಣದಲ್ಲಿ ತಿಳಿಯುತ್ತಿತ್ತು. ಸಿನಿಮಾ ಇಂಡಸ್ಟ್ರಿಯ ಕರ್ಣನಾಗಿ ಗೆಳೆಯರ ಪಾಲಿನ ಆಪ್ತರಕ್ಷಕ ಹಾಗೂ ಆಪ್ತಮಿತ್ರನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಹೃದಯವಂತನಾಗಿ ಈ ಸಾಮ್ರಾಟ ಕನ್ನಡದ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ಜಯಸಿಂಹ. ವಿಷ್ಣುವರ್ಧನ್ ಅವರು ಮೂಲತಃ ಮೈಸೂರಿನವರಾಗಿದ್ದು ಇವರ ಮೂಲ ಹೆಸರು ಸಂಪತ್ ಕುಮಾರ್ ಆಗಿತ್ತು ಆದರೆ ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಇವರ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಾಯಿಸಲಾಯಿತು.
ನಾಗರಹಾವು ಎನ್ನುವ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಸಿನಿಮಾದಲ್ಲಿ ಕುಡಿ ಮೀಸೆಯ ಬಿಸಿ ರಕ್ತದ ಯುವಕನಂತೆ ತೆರೆ ಮೇಲೆ ಘರ್ಜಿಸಿದ್ದ ಚಾಮಯ್ಯ ಮೇಷ್ಟ್ರ ಮುದ್ದಿನ ಶಿಷ್ಯನಾದ ಇವರು ನಂತರ ಸಿನಿಮಾ ಇಂಡಸ್ಟ್ರಿಯಲ್ಲಿ ಬದುಕಿದ್ದೆಲ್ಲ ಇತಿಹಾಸವೇ ಆಯಿತು. ಆದರೆ ಅವರ ಸಿನಿಮಾಗಳು ಬಹುಮಟ್ಟಿಗೆ ಗೆಲ್ಲುತ್ತಿದ್ದರು ಕೂಡ ಅವರ ಯಶಸ್ಸು ತುಳಿಯಲು ಸಾವಿರಾರು ಕಾಣದ ಕೈಗಳು ಅವರ ಬದುಕಿನಲ್ಲಿ ಬಹಳ ಆಟ ಆಡಿದ್ದವು. ಸಿನಿಮಾಗಳಲ್ಲಿ ಅಬ್ಬರಿಸಿ ಬೊಬ್ಬಿರುತ್ತಿದ್ದ ಡಾಕ್ಟರ್ ವಿಷ್ಣುವರ್ಧನ್ ಅವರ ಘರ್ಜನೆ ಹಾಗೂ ಅವರ ಸಿನಿಮಾಗಳು ಗೆಲ್ಲುತ್ತಿದ್ದನ್ನು ಸಹಿಸದ ಸಾವಿರಾರು ಜನರು ಅವರ ಯಶಸ್ಸನ್ನು ತುಳಿಯಲು ಪಿತೂರಿ ಹೂಡಿದ್ದರು. ಅವರೆಲ್ಲರ ಆಟಕ್ಕೆ ಸಿಲುಕಿದ ಡಾಕ್ಟರ್ ವಿಷ್ಣುವರ್ಧನ್ ಅವರ ನತದಷ್ಟ ನಾಯಕ ಆದರು. ಡಾಕ್ಟರ್ ವಿಷ್ಣುವರ್ಧನ್ ಅವರ ಬದುಕನ್ನು ಒಮ್ಮೆ ಸಂಪೂರ್ಣವಾಗಿ ತಿಳಿದರೆ ಎಂತಹ ಕರುಳು ಕೂಡ ಚುರುಕ್ ಎನ್ನುತ್ತದೆ.
ಇಂತಹ ಕನ್ನಡದ ಒಬ್ಬ ಶ್ರೇಷ್ಠ ನಟರಿಗೆ ಅವರ ಬಾಳಿನಲ್ಲಿ ಆಗಿರುವ ಅನ್ಯಾಯಕ್ಕೆ ಎಂಥವರ ಕಲ್ಲು ಹೃದಯವೇ ಆದರೂ ಕರಗದೇ ಇರದು. ಸಿನಿಮಾ ಪ್ರಪಂಚದಲ್ಲಿ ಅವರನ್ನು ತುಳಿಯಲು ಅವರ ಸಿನಿಮಾ ರಿಲೀಸ್ ಆಗಲು ಕರ್ನಾಟಕದಲ್ಲಿ ಅವಕಾಶವನ್ನು ಕೊಡದೆ ಹಿಂ.ಸಿಸುತ್ತಿದ್ದರು. ಅಲ್ಲದೆ ಸಿನಿಮಾ ನೋಡಲು ಬಂದವರ ಮೇಲೆ ಹ.ಲ್ಲೆಗಳನ್ನು ಮಾಡಿ ಯಾರು ಇವರ ಸಿನಿಮಾಗಳನ್ನು ನೋಡದಂತೆ ತಡೆಯುತ್ತಿದ್ದರು. ಸ್ವತಃ ವಿಷ್ಣುವರ್ಧನ್ ಅವರನ್ನೇ ಎಷ್ಟೋ ಬಾರಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಹಾಗೂ ಅಡ್ಡಗಟ್ಟಿ ಅವರಿಗೂ ತೊಂದರೆಗಳನ್ನು ನೀಡಿದ್ದಾರೆ. ಇದರಿಂದ ಬೇಸತ್ತು ಹೋಗಿದ್ದ ವಿಷ್ಣುವರ್ಧನ್ ಅವರು ಒಮ್ಮೆ ಪ್ರೆಸ್ ಮೀಟ್ ಕರೆಸಿ ನಾನು ಇನ್ನು ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲ ನನಗೆ ಚಿತ್ರರಂಗದ ಸಹವಾಸವೇ ಬೇಡ ಎಂದು ಹೇಳಿ ಚೆನ್ನೈ ಗೆ ಹೋಗಿ ನೆಲೆಸಿ ಬಿಟ್ಟಿದ್ದರು. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಡಾ. ವಿಷ್ಣುವರ್ಧನ್ ಅವರು ಅಭಿಮಾನಿಗಳಿಗೋಸ್ಕರ ಬಂಧನ ಸಿನಿಮಾದ ಭರ್ಜರಿ ಯಶಸ್ಸನ್ನು ಸಂಭ್ರಮಿಸಲು ಮತ್ತೆ ಬೆಂಗಳೂರಿಗೆ ಬಂದವರು ಇಲ್ಲಿ ಅಭಿಮಾನಿಗಳ ಕಣ್ಣಲ್ಲಿ ಅವರ ಮೇಲಿಟ್ಟಿರುವ ಪ್ರೀತಿಯನ್ನು ಕಂಡು ಇಲ್ಲೇ ಉಳಿಯುವ ನಿರ್ಧಾರ ಮಾಡಿದರು.
ಭಾರತದ ಸಿನಿಮಾ ಇಂಡಸ್ಟ್ರಿಗಳಲ್ಲಿ ಅತಿ ಹೆಚ್ಚು ಬಾರಿ ಡಬಲ್ ರೋಲ್ಗಳಲ್ಲಿ ಅಭಿನಯಿಸಿರುವ ಖ್ಯಾತಿ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ. ಡಾಕ್ಟರ್ ವಿಷ್ಣುವರ್ಧನ್ ಅವರು ಕನ್ನಡ ಭಾಷೆಯಲ್ಲಿ ಎಷ್ಟು ದೊಡ್ಡ ಸ್ಟಾರ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಇಂದಿಗೂ ಕೂಡ ಕರ್ನಾಟಕದ ಹೆಣ್ಣು ಮಕ್ಕಳ ಬಳಿ ಹೋಗಿ ನಿಮ್ಮ ಫೇವರೆಟ್ ಹೀರೋ ಎಂದು ಯಾರು ಎಂದು ಕೇಳಿದರೆ ಇಲ್ಲಿ ಬಹುತೇಕ ಶೇಕಡವಾರು 75% ಗಿಂತಲೂ ಹೆಚ್ಚು ಜನ ವಿಷ್ಣುವರ್ಧನ್ ಅವರ ಹೆಸರನ್ನೇ ಹೇಳುತ್ತಾರೆ. ಯಾಕೆಂದರೆ ವಿಷ್ಣುವರ್ಧನ್ ಅವರು ಬದುಕಿನಲ್ಲಿ ಹಾಗೂ ಸಿನಿಮಾಗಳಲ್ಲಿ ಹೆಣ್ಣು ಮಕ್ಕಳಿಗೆ ಅಷ್ಟು ಗೌರವ ಕೊಡುತ್ತಿದ್ದರು. ಹಾಗಾಗಿ ವಿಷ್ಣುವರ್ಧನ್ ಅವರ ವ್ಯಕ್ತಿತ್ವವೇ ಒಂದು ಆದರ್ಶಮಯ ಎನ್ನಬಹುದು. ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಸಿನಿಮಾಗಳಲ್ಲೂ ಕೂಡ ಗುರುತಿಸಿಕೊಂಡಿದ್ದರು. ವಿಷ್ಣುವರ್ಧನ್ ಅವರು ತಮ್ಮ ಕೊನೆಯ ದಿನಗಳಲ್ಲಿ ತುಂಬಾ ಬದಲಾಗಿ ಹೋದರು.
ಮೊದಲೆಲ್ಲಾ ಬಹಳ ಚುರುಕಾಗಿರುತ್ತಿದ್ದ ಚೂಟಿ ಆಗಿರುತ್ತಿದ್ದ ಮತ್ತು ತುಂಟಾಟ ಮಾಡುತ್ತಿದ್ದ ವಿಷ್ಣುವರ್ಧನ್ ಅವರು ಕೊನೆ ದಿನಗಳಲ್ಲಿ ಆಧ್ಯಾತ್ಮದತ್ತ ಒಲಿದು ಬಿಟ್ಟಿದ್ದರು. ಯಾವಾಗ ಅವರ ಬದುಕಿನಲ್ಲಿ ಬನ್ನಂಜೆ ಗೋವಿಂದಾಚಾರ್ಯ ಅವರ ಪರಿಚಯವಾಯಿತು ಅಂದಿನಿಂದ ಇವರು ಜೀವನದ ಮತ್ತೊಂದು ಮುಖವನ್ನು ನೋಡಲು ಶುರು ಮಾಡಿದರು ಎನ್ನಬಹುದು. ಹಾಗೂ ಯಾವಾಗಲೂ ಫ್ಯಾಷನ್ ಅನ್ನು ಇಷ್ಟ ಪಡುತ್ತಿದ್ದ ಸ್ಟೈಲ್ ಮಾಡಲು ಬಯಸುತ್ತಿದ್ದ ವಿಷ್ಣುವರ್ಧನ್ ಅವರ ಬಳಿ ಲೆದರ್ ಶೂ ಜಾಕೆಟ್ ಟಿ-ಶರ್ಟ್ ಜೀನ್ಸ್ ಈ ರೀತಿಯ ದೊಡ್ಡ ಕಲೆಕ್ಷನ್ ಇತ್ತು. ಆದರೆ ಕೊನೆ ಕೊನೇ ದಿನಗಳಲ್ಲಿ ಅವರು ಎಲ್ಲದರ ಬಗ್ಗೆಯೂ ಆಸಕ್ತಿ ಕಳೆದುಕೊಂಡು ಕೇವಲ ಬಿಳಿ ಜುಬ್ಬ ಮತ್ತು ಅದಕ್ಕೆ ಮ್ಯಾಚ್ ಆಗುವ ಪ್ಯಾಂಟ್ ಹಾಗು ತಲೆಗೆ ಒಂದು ಸ್ಕ್ರಾಪ್ ಕಟ್ಟಿಕೊಳ್ಳುವ ಮೂಲಕ ಸಾಕ್ಷಾತ್ ಸಾಯಿಬಾಬಾ ಅವರ ಭಕ್ತನಂತೆ ಕಾಣುತ್ತಿದ್ದರು.
ಹಾಗೂ ಅವರ ನಡವಳಿಕೆ ಮಾತುಗಳು ಎಲ್ಲವೂ ಕೂಡ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಅಭಿನವ ಸಂತ ಎಂದು ಕರೆಸಿಕೊಳ್ಳುತ್ತಿದ್ದ ಇವರು ಕೊನೆಕೊನೆಗೆ ಲೌಕಿಕ ಜೀವನದ ಬಗ್ಗೆ ಆಸಕ್ತಿ ಕಳೆದುಕೊಂಡು ತಮ್ಮದೇ ಆದ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡು ಬಿಟ್ಟಿದ್ದರು ಎಂದು ಹೇಳಬಹುದು. ಕನ್ನಡದಲ್ಲಿ ಇವರು ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಹೀಗಾಗಿ ವಿಷ್ಣುವರ್ಧನ್ ಅವರು ಸಾಕಷ್ಟು ಹಣಗಳಿಸಿದ್ದಾರೆ ಆಸ್ತಿ ಮಾಡಿದ್ದಾರೆ ಎನ್ನುವುದು ಎಲ್ಲರ ಲೆಕ್ಕಾಚಾರ ಆದರೆ ನಿಜವಾಗಿಯೂ ಹೇಳಬೇಕು ಎಂದರೆ ಕೊನೆ ಕೊನೆ ದಿನಗಳಲ್ಲಿ ವಿಷ್ಣುವರ್ಧನ್ ಅವರು ನಟಿಸಿದ್ದ ಎಷ್ಟೋ ಸಿನಿಮಾಗಳಿಗೆ ಸಂಭಾವನೆ ನೀಡಲಾಗಿರಲ್ಲ ಯಾಕೆಂದರೆ ವಿಷ್ಣುವರ್ಧನ್ ಅವರು ಹತ್ತಿರದವರನ್ನು ತುಂಬಾ ನಂಬುತ್ತಿದ್ದರು. ಹೀಗಾಗಿ ತುಂಬಾ ಹತ್ತಿರದವರೆ ಇವರನ್ನು ನಂಬಿಸಿ ಸಂಭಾವನೆ ಕೊಡದೆ ಮೋಸ ಮಾಡಿದ್ದಾರೆ.
ಆದರೆ ಎಲ್ಲೂ ಕೂಡ ಇದನ್ನು ವಿಷ್ಣುವರ್ಧನ್ ಅವರು ಬಹಿರಂಗವಾಗಿ ಹೇಳಲೇ ಇಲ್ಲ ಮತ್ತು ಫ್ಯಾಕ್ಟರಿ ಒಂದನ್ನು ಶುರು ಮಾಡಿ ಅದರಲ್ಲಿ ಲಾಸ್ ಮಾಡಿಕೊಂಡರು ಎನ್ನುವ ಮಾತುಗಳು ಇದೆ ಹೀಗಾಗಿ ಇವರು ಇ.ಹ.ಲೋಕ ತ್ಯಜಿಸಿದ ಮೇಲೆ ಇವರ ಕುಟುಂಬ ತುಂಬಾ ಆರ್ಥಿಕ ಸಂಕಷ್ಟಕ್ಕೆ ಈಡಾಗಿತ್ತು. ನಿಜವಾಗಿಯೂ ಹೇಳಬೇಕು ಎಂದರೆ ವಿಷ್ಣುವರ್ಧನ್ ಅವರು ತಾವು ಸಂಪಾದಿಸುವ ಸಮಯದಲ್ಲಿ ಹೂಡಿಕೆ ಬಗ್ಗೆ ಆಗಲಿ ಉಳಿಕೆ ಬಗ್ಗೆ ಆಗಲಿ ಸರಿಯಾಗಿ ಗಮನ ನೀಡಲಿಲ್ಲ. ಅವರ ಹೆಸರಿನಲ್ಲಿ ಜಯನಗರದಲ್ಲಿ ಒಂದು ನಿವಾಸ ಇದೆ ಅದನ್ನು ಬಿಟ್ಟರೆ ಬೇರೆ ಯಾವುದೇ ಆಸ್ತಿ ಮಾಡಿಲ್ಲವಂತೆ. ವಿಷ್ಣು ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.