ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಮದುವೆ ಅನ್ನುವುದು ಅತ್ಯಂತ ಸಡಗರದ ಸಂಭ್ರಮದ ಕ್ಷಣ. ಬಂಧು ಬಾಂಧವರು, ಸ್ನೇಹಿತರು, ಕುಟುಂಬಸ್ಥರು ಇವರುಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ತಾವು ಆಸೆ ಪಟ್ಟ ರೀತಿ ತಮ್ಮ ಮದುವೆಯನ್ನು ಆಗಬೇಕು ಎಂದು ಪ್ರತಿಯೊಬ್ಬ ಯುವಕ ಹಾಗೂ ಯುವತಿ ಆಸೆ ಪಡುತ್ತಾರೆ.
ಆದರೆ ಗಾದೆ ಮಾತು ಹೇಳುವಂತೆ ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂದು ಮದುವೆಗೆ ಆಗುವ ಖರ್ಚು ವೆಚ್ಚಗಳನ್ನೆಲ್ಲ ಲೆಕ್ಕ ಹಾಕಿದರೆ ಈ ರೀತಿ ಬಡವರು ಹಾಗೂ ಮಾಧ್ಯಮ ವರ್ಗದವರು ಅದ್ದೂರಿಯಾಗಿ ಮದುವೆ ಆಗಲು ಸಾಧ್ಯವೇ ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತುಕೊಳ್ಳುವಂತೆ ಆಗುತ್ತದೆ. ಆದರೆ ಇನ್ನು ಮುಂದೆ ಆ ರೀತಿ ಮದುವೆ ತಯಾರಿಗಿ ಮದುವೆಗೆ ಆಗುವ ಖರ್ಚಿನ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ.
ಸರ್ಕಾರ ನಿಮಗಾಗಿ ಹೊಸ ಯೋಜನೆಯನ್ನು ತಂದಿದೆ ಇದರ ಪಲಾನುಭವಿಗಳಾಗುವ ಮೂಲಕ ಬಹಳ ಗ್ರಾಂಡ್ ಆಗಿ ನಿಮ್ಮ ಮದುವೆ ಮಾಡಿಕೊಳ್ಳಬಹುದು. ಹಿಂದೆಲ್ಲ ಶಾಸ್ತ್ರೋಕ್ತವಾಗಿ ಮನೆಮಂದಿಯೆಲ್ಲಾ ಸೇರಿ ಶಾಸ್ತ್ರ ಮಾಡುತ್ತಾ ಹಟ್ಟಿ ಮುಂದೆ ಚಪ್ಪರ ಹಾಕಿ ಮದುವೆ ಮುಗಿಸಿ ಬಿಡುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ಮದುವೆ ಎನ್ನುವುದು ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.
ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಹಾಗೂ ಜನರೇಶನ್ ಚೇಂಜ್ ಆಗುತ್ತಿದ್ದಂತೆ ಮದುವೆ ವಿಚಾರದಲ್ಲೂ ಸಾಕಷ್ಟು ಟ್ರೆಂಡ್ ಸೃಷ್ಟಿ ಆಗಿದ್ದು, ಇಂದು ಮದುವೆ ಅನ್ನೋದು ಅಂತಿಂಥ ಕಡಿಮೆ ಬಜೆಟ್ ಗೆ ಆಗುವಂಥದ್ದು ಅಲ್ಲ. ಮದುವೆ ಮುನ್ನವೇ ಶುರು ಆಗುವ ಪ್ರಿ ವೆಡ್ಡಿಂಗ್ ಶೂಟ್ ಇಂದ ಹಿಡಿದು ಹನಿಮೂನ್ ತನಕ ದೊಡ್ಡ ಪ್ಲಾನಿಂಗ್ ಪಟ್ಟಿಯೇ ಬೆಳೆದಿರುತ್ತದೆ.
ಒಡವೆ, ವಸ್ತ್ರ, ಉಡುಗೊರೆ, ಹೂವು ಹಣ್ಣು, ಮಂಟಪ, ಫೋಟೋ ವಿಡಿಯೋ, ಊಟ ಹೀಗೆ ಒಂದಾ ಎರಡಾ ಮದುವೆಗೆ ಆಗುವ ಖರ್ಚು. ಆದರೆ ಇನ್ನು ಮುಂದೆ ಆ ಖರ್ಚಿನ ಬಗ್ಗೆ ಹೆಣ್ಣು ಹೆತ್ತ ತಂದೆಯಾಗಲಿ ಅಥವಾ ಮದುವೆ ಆಗುವ ಮಧು ಮಕ್ಕಳೇ ಆಗಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ನಿಮಗಾಗಿ ಬ್ಯಾಂಕಿನಲ್ಲಿ 50 ಲಕ್ಷದವರೆಗೂ ಕೂಡ ಸಾಲ ದೊರೆಯಲಿದೆ.
ಆದರೆ ಆ ಸಾಲ ನಿಮಗೆ ಸಿಗಬೇಕು ಎಂದರೆ ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು. ಈ ಮದುವೆ ಆಗುತ್ತಿರುವ ಯುವಕ ಅಥವಾ ಯುವತಿ ಕನಿಷ್ಠ 21 ರಿಂದ 23 ವರ್ಷ ವಯಸ್ಸಾಗಿರಬೇಕು, ಗರಿಷ್ಠ 58 ವರ್ಷಗಳನ್ನು ಮೀರಿರಬಾರದು. ಮತ್ತು ನೀವು ಯಾವುದಾದರೂ ಕಚೇರಿಯಲ್ಲಿ ಅಥವಾ ಕಂಪನಿಯಲ್ಲಿ ಹದಿನೈದು ಸಾವಿರದಿಂದ 25,000 ಸಂಬಳ ತೆಗೆದುಕೊಳ್ಳುವ ಕೆಲಸದಲ್ಲಿ ಇರಬೇಕು.
ಇಷ್ಟಿದ್ದರೆ ಬ್ಯಾಂಕ್ ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಿ ನೀವು ಸಾಲ ತೆಗೆದುಕೊಂಡು ಮದುವೆ ಆಗಬಹುದು. ಆದರೆ ಈ ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವುದು ಮುಖ್ಯ ಮತ್ತು ದಾಖಲೆಯಾಗಿ ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಒಂದು ವರ್ಷದಿಂದ ಆರು ವರ್ಷದವರೆಗೆ ನೀವು ತೆಗೆದುಕೊಂಡಿರುವ ವೇತನದ ಮಾಹಿತಿಗಳನ್ನು ನೀಡಬೇಕು ಎನ್ನುವ ನಿಯಮವೂ ಇದೆ.
ಈ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಯಾವುದೇ ಬ್ಯಾಂಕ್ ಬೇಕಾದರೂ ನಿಮಗೆ ಮದುವೆಗಾಗಿ ಸಾಲ ಕೊಡಲು ಸಿದ್ಧವಾಗಿದೆ. ಖರ್ಚಿನ ಚಿಂತೆ ಬಿಟ್ಟು ಮದುವೆ ಆಗಿ ಬಿಡಿ. ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಸ್ನೇಹಿತರೆ.