EC ಎಂದರೇನು.? ಆಸ್ತಿ ಖರೀದಿಸಲು EC ಏಕೆ ಮುಖ್ಯ ಇಲ್ಲಿದೆ ನೋಡಿ ಪೂರ್ತಿ ಡೀಟೇಲ್ಸ್.!

 

WhatsApp Group Join Now
Telegram Group Join Now

ಮನೆ ಸೈಟು ಜಮೀನು ಕಟ್ಟಡ ಇತ್ಯಾದಿ ಯಾವುದೇ ಒಂದು ಆಸ್ತಿಯನ್ನು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿ ಖರೀದಿ ಮಾಡುವಾಗ EC (Encumbrance Certificate) ಎನ್ನುವ ದಾಖಲೆಯನ್ನು ಕೇಳಲಾಗುತ್ತದೆ ಮತ್ತು ಕೆಲವೊಮ್ಮೆ ಐದು ವರ್ಷದ EC ಬೇಕು, 30 ವರ್ಷದ EC ಬೇಕು, 50 ವರ್ಷದ EC ಬೇಕು ಈ ರೀತಿ ಹೇಳಿರುವುದನ್ನು ಕೂಡ ಕೇಳಿರಬಹುದು.

ಕೆಲವು ಪ್ರಾಪರ್ಟಿಗಳಿಗೆ 100 ವರ್ಷದ EC ಕೇಳಿದರೂ ದಾಖಲೆ ಇರುತ್ತದೆ, ಕೆಲವರ ಬಳಿ ಇರುವುದೇ ಇಲ್ಲ ಹಾಗಾದರೆ ಇಂತಹ ಪ್ರಾಪರ್ಟಿಗಳನ್ನು ತೆಗೆದುಕೊಳ್ಳುವುದು ಅಪಾಯವೇ? ಅಸಲಿಗೆ EC ಎಂದರೇನು? ಇದು ಯಾಕೆ ಇಷ್ಟು ಮುಖ್ಯ ಇದರ ಅರ್ಥ ಏನು? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ…

ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

ಈ ವಿಚಾರವನ್ನು ಸುಲಭವಾಗಿ ಅರ್ಥೈಸಲು ನಾವು ಬ್ಯಾಂಕ್ ಪಾಸ್ ಬುಕ್ ಉದಾಹರಣೆ ಕೊಡಬಹುದು. ನಮ್ಮ ಪಾಸ್ ಬುಕ್ ತೆರೆದು ನೋಡಿದರೆ ನಮ್ಮ ಖಾತೆಗೆ ಎಷ್ಟು ಹಣ ಜಮೆ ಆಗಿದೆ ಮತ್ತು ಎಷ್ಟು ಹಣವನ್ನು ನಾವು ವಿಥ್ ಡ್ರಾ ಮಾಡಿದ್ದೇವೆ ಕ್ರೆಡಿಟ್ ಡೆಬಿಟ್ ಲೆಕ್ಕಾಚಾರ ಸಿಗುತ್ತದೆ ಅಲ್ಲವೇ ಇದೆ ರೀತಿ ಯಾವ ಆಸ್ತಿಗೆ EC ಕೇಳುತ್ತಿದ್ದೆವೋ ಆ ಆಸ್ತಿ EC ಸರ್ಟಿಫಿಕೇಟ್ ನಲ್ಲಿ ಆಸ್ತಿ ಯಾರಿಂದ ಯಾರಿಗೇ ವರ್ಗಾವಣೆ ಆಗಿದೆ ಖರೀದಿದಾರರು ಯಾರು ಮಾರಾಟಗಾರರು ಯಾರು ಎನ್ನುವ ದಾಖಲೆ ಇರುತ್ತದೆ.

ಈ ಸುದ್ದಿ ಓದಿ:- 1 BHK 3.5 ಲಕ್ಷದಲ್ಲಿ, 2BHK 6 ಲಕ್ಷದಲ್ಲಿ ಕೇವಲ 7 ದಿನಕ್ಕೆ ರೆಡಿ ಆಗುತ್ತದೆ ನಿಮ್ಮ ಕನಸಿನ ಸ್ವಂತ ಮನೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

5 ವರ್ಷಗಳ EC ಎಂದರೆ ಐದು ವರ್ಷಗಳಿಂದ ಪರಭಾರೆ ಆಗಿರುವ ಮಾಹಿತಿ, 50 ವರ್ಷದ EC ಎಂದರೆ 50 ವರ್ಷದಲ್ಲಿ ಎಷ್ಟು ಸಲ ಯಾರಿಂದ ಯಾರಿಗೇ ಮಾರಾಟವಾಗಿದೆ ಎನ್ನುವುದನ್ನು ತಿಳಿಸುತ್ತದೆ ಎಂದು ಅರ್ಥ. ಹಾಗಾದರೆ ಎಲ್ಲಾ ಪ್ರಾಪರ್ಟಿಗಳಿಗೂ ಈ ರೀತಿ 50 ವರ್ಷಗಳ ನೂರು ವರ್ಷಗಳ EC ಸಿಗುತ್ತದೆಯೇ ಎಂದರೆ ಸಿಗುವುದಿಲ್ಲ. ಹಾಗಾದರೆ ಇಂತಹ ಪ್ರಾಪರ್ಟಿಗಳನ್ನು ತೆಗೆದುಕೊಳ್ಳುವುದು ಅಪಾಯವೇ ಎಂದು ಕೇಳಿದರೆ ಹಾಗೆಂದು ಹೇಳಲು ಆಗುವುದಿಲ್ಲ.

ಉದಾಹರಣೆಗೆ ಬೆಂಗಳೂರಿನಲ್ಲಿ ಯಾವುದೋ ಒಂದು ಲೇಔಟ್ ತಕರಾರಿನಲ್ಲಿ ಇರುತ್ತದೆ ಎಂದುಕೊಳ್ಳೋಣ. 5 ವರ್ಷಗಳ ಹಿಂದೆಯಷ್ಟೇ ಸರ್ಕಾರ ಪ್ರಕರಣ ಇತ್ಯರ್ಥ ಮಾಡಿ ಎಲ್ಲರಿಗೂ ಸೈಟ್ ಹಂಚಿಕೆ ಮಾಡಿರುತ್ತದೆ. ಈಗ 5 ವರ್ಷದ ECಯಲ್ಲಿ BDA ಇಂದ ಯಾವ ವ್ಯಕ್ತಿ ಸೈಟ್ ಆಗಿದೆ ಆತನ ಹೆಸರಿಗೆ 5 ವರ್ಷದ EC ಮಾತ್ರ ಸಿಗುತ್ತದೆ.

ಅದಕ್ಕೂ ಹಿಂದೆ ಏನಾಗಿತ್ತು ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಯಾಕೆಂದರೆ ಯಾವುದೇ ಪ್ರಾಪರ್ಟಿ ಆದರೂ ಒಮ್ಮೆ ಸರ್ಕಾರದಿಂದ ಒಬ್ಬ ವ್ಯಕ್ತಿಗೆ ಆಗಿದೆ ಎಂದರೆ ಆ ಹಿಂದಿನ ಎಲ್ಲಾ ತಕರಾರುಗಳು ಇತ್ಯರ್ಥ ಆಗಿದೆ ಎಂದೇ ಅರ್ಥ. ಇಂತಹ ಪ್ರಾಪರ್ಟಿ ಗಳಿಗೆ ಬಹಳ ಹಳೆಯ EC ಕೇಳುವುದೇ ಇಲ್ಲ.

ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600

EC ಯನ್ನು ಯಾಕೆ 50-60 ವರ್ಷಗಳ ಹಿಂದಿನದ್ದು ಕೇಳಲಾಗುತ್ತದೆ ಎಂದರೆ ಕೆಲವು ಪ್ರಾಪರ್ಟಿ ಗಳಿಗೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 15 ವರ್ಷ ಪ್ರಾಪರ್ಟಿ ಇದ್ದರೆ ಕೆಲವು ಹಕ್ಕುಗಳಿರುತ್ತದೆ 30 ವರ್ಷಗಳು ಆ ವ್ಯಕ್ತಿ ಹೆಸರಿನಲ್ಲಿ ಪ್ರಾಪರ್ಟಿ ಇದ್ದರೆ ಆಸ್ತಿ ಮೇಲೆ ಕೆಲ ಹಕ್ಕುಗಳು ಇರುತ್ತದೆ ಎನ್ನುವ ಕಾನೂನು ಇದೆ ಈ ಕಾರಣಕ್ಕಾಗಿ ಗ್ಯಾರಂಟಿಗಾಗಿ ಈ ರೀತಿ ಕೇಳಲಾಗುತ್ತದೆ.

ಕೆಲವೊಂದು ಪ್ರಕರಣಗಳಲ್ಲಿ ಹೇಗಾಗಿರುತ್ತದೆ ಎಂದರೆ EC ಇರುವುದೇ ಇಲ್ಲ ಇದನ್ನು Nil EC ಎಂದು ಕರೆಯುತ್ತಾರೆ. ಹೇಗೆಂದರೆ ರಾಜರ ಆಡಳಿತ ಬ್ರಿಟಿಷ್ ಆಡಳಿತ ಇದ್ದಾಗಲೂ ಕೂಡ ಈ ರೀತಿ ಬಡವರಿಗಾಗಿ ಆಸ್ತಿ ಹಂಚಿಕೆ ಮಾಡಲಾಗುತ್ತಿತ್ತು, ಬಡವರು ಕೈಲಾದಷ್ಟು ಕಿಮ್ಮತ್ತು ಹಣವನ್ನು ಕೊಟ್ಟು ಆ ಆಸ್ತಿಯನ್ನು ಅನುಭೋಗಿಸಿಕೊಂಡು ಬರುತ್ತಿದ್ದರು ಹೊರತು ರಿಜಿಸ್ಟರ್ ಮಾಡಿಸಿಕೊಂಡಿರ‌ದೇ ಇರಬಹುದು.

ಯಾಕೆಂದರೆ ಆಗ ರೂ.100 ಗಿಂತ ಹೆಚ್ಚಿಗೆ ಬೆಲೆ ಬಾಳುವ ಪ್ರಾಪರ್ಟಿಗೆ ಮಾತ್ರ ರಿಜಿಸ್ಟರ್ ಕಡ್ಡಾಯ, ರೂ.100 ಗಿಂತ ಕಡಿಮೆ ಬೆಲೆಬಾಳುವ ಪ್ರಾಪರ್ಟಿಗಳಿಗೆ ಯಾವುದೇ ರಿಜಿಸ್ಟರ್ ಅಗತ್ಯವಿಲ್ಲ ಎನ್ನುವ ಸ್ಟ್ಯಾಂಪ್ ಡ್ಯೂಟಿ ಆಕ್ಟ್ ಇದ್ದಿರಬಹುದು. ತಾತ ಮುತ್ತಾತ ಈ ರೀತಿ ಹಾಗೇ ಸರ್ಕಾರದಿಂದ ಅಥವಾ ಜೋಡಿ ಜಮೀನ್ದಾರರಿಂದ ಆಸ್ತಿ ಪಡೆದಿರುತ್ತಾರೆ ಆದರೆ ರಿಜಿಸ್ಟರ್ ಆಗಿರುವುದಿಲ್ಲ.

ಈ ಸುದ್ದಿ ಓದಿ:- ಇಂಡಿಯನ್‌ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ, ವೇತನ 89,000 ಆಸಕ್ತರು ಅರ್ಜಿ ಸಲ್ಲಿಸಿ.!

ಆ ಬಳಿಕ ಅದು ಅವರ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೀಗೆ ಹಂಚಿಕೆಯಾಗಿ ಒಂದು ವೇಳೆ ಆ ಸಮಯದಲ್ಲಿ ಕುಟುಂಬದಲ್ಲಿ ವಿಭಾಗ ಆದಾಗ ರಿಜಿಸ್ಟರ್ ಆಗಿದ್ದರು ಇದು EC ಆಗಿರುತ್ತಿತ್ತು ಅವರು ಬರೀ ಬಾಯಿ ಮಾತಿನಲ್ಲಿ ಅದನ್ನು ಭಾಗ ಮಾಡಿಕೊಂಡು ಅನುಭವಿಸಿಕೊಂಡು ಬಂದು ಈಗ ಬೇರೆ ವ್ಯಕ್ತಿಗೆ ಮಾರಾಟ ಮಾಡುವ ಸಂದರ್ಭದಲ್ಲಿ EC ಕೇಳಿದರೆ Nil EC ಎಂದು ತೋರಿಸುತ್ತಿರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now