ಮನೆ ಎಂದ ಮೇಲೆ ನೀರಿನ ವ್ಯವಸ್ಥೆ ಕೂಡ ಇರಬೇಕ. ಈ ರೀತಿ ನೀರು ಸ್ಟೋರ್ ಮಾಡಿ ಇಟ್ಟುಕೊಳ್ಳುವುದಕ್ಕೆ ಈಗಿನ ಕಾಲದಲ್ಲಿ ಆಧಾರ ಅಂದರೆ ಸಂಪ್. ಸಂಪ್ ಯಾವ ಸೈಜ್ ನಲ್ಲಿ ಇರಬೇಕು ಎನ್ನುವುದೇ ಒಂದು ಗೊಂದಲ ಇದಕ್ಕೆ ಯಾವುದಾದರೂ ಸ್ಟ್ಯಾಂಡರ್ಡ್ ಮೆಜರ್ಮೆಂಟ್ ಇದಿಯಾ ಎಂದರೆ ಆ ರೀತಿ ಹೇಳಲಾಗುವುದಿಲ್ಲ.
ಒಂದು ಅಂದಾಜಿನಲ್ಲಿ ಐಡಿಯಾ ಮಾಡಬಹುದು ಒಂದು ದಿನಕ್ಕೆ ಒಬ್ಬರು 130 ಲೀಟರ್ ಬಳಸುತ್ತಾರೆ ಎಂದರೆ ಒಂದು ಮನೆಯಲ್ಲಿ ನಾಲ್ಕು ಜನರು ಇದ್ದರೆ ಒಂದು ವಾರಕ್ಕೆ ಎಷ್ಟು ಬೇಕು ಅಷ್ಟು ಅಳತೆ ಮೇಲೆ ಆ ಮನೆಗೆ ಎಷ್ಟು ಲೀಟರ್ ಹಿಡಿಯುವ ಸಂಪ್ ಬೇಕು ಎಂದು ನಿರ್ಧರಿಸಬಹುದು. ಆದರೆ ಮುಂದೆ ಮನೆ ಜನರ ಸಂಖ್ಯೆ ಹೆಚ್ಚಾಗಬಹುದು ಅಥವಾ ಮನೆ ಮೇಲೆ ಮತ್ತೊಂದು ಮನೆ ಕಟ್ಟುವ ಪ್ಲಾನಿಂಗ್ ಇರಬಹುದು.
ಈ ರೀತಿ ಮುಂದಾಲೋಚನೆಯಿಂದಲೇ ಮಾಡಬೇಕಾಗುತ್ತದೆ. 1000ltr ದಿಂದ 4000ltr ವರೆಗೂ ಮಾಡಿಸುತ್ತಾರೆ. ಆದರೆ ಸಂಪ್ ಬಗ್ಗೆ ಕೊಡಬಹುದಾದ ಒಂದು ಟಿಪ್ ಏನು ಎಂದರೆ ಆಳವಾಗಿ ಮಾಡುವುದಕ್ಕಿಂತ ಉದ್ದ ಮತ್ತು ಅಗಲ ಮಾಡುವುದು ಬೆಸ್ಟ್. ಯಾಕೆಂದರೆ ಆರು ಅಥವಾ ಏಳು ಅಡಿಗಿಂತ ಆಳ ಇದ್ದರೆ ಅಕಸ್ಮಾತ್ ಆಗಿ ಯಾರಾದರೂ ಬಿದ್ದರು ಕಷ್ಟವಾಗುತ್ತದೆ.
ಈ ಸುದ್ದಿ ಓದಿ:- ಮರಳು ಬೇಡ ಸಿಮೆಂಟ್ ಬೇಡ ಈ ಪ್ಲಾಸ್ಟರ್ ಮಾಡಿಸಿದರೆ ನಿಮ್ಮ ಮನೆ ಧಗ ಧಗಿಸುವ ಬೇಸಿಗೆಯಲ್ಲೂ ತಂಪಾಗಿರುತ್ತದೆ.!
ಹೀಗಾಗಿ ಈ ಅಳತೆಗಿಂತ ಆಳಬೇಡ, ಇನ್ನು ಬಾಳಿಕೆ ಹೇಗೆ ಹಾಗೂ ಎಷ್ಟು ಬಜೆಟ್ ತಗುಲುತ್ತದೆ ಯಾವುದಕ್ಕೆ ಎಷ್ಟು ಟೈಮ್ ಹಿಡಿಯುತ್ತದೆ, ಯಾವ ಯಾವ ರೀತಿಯ ಸಂಪ್ ಇದೆ ಎನ್ನುವ ವಿಚಾರದ ಬಗ್ಗೆ ವಿವರ ಹೀಗಿದೆ ನೋಡಿ. RCC, ಬ್ಲಾಕ್ ಹಾಗೂ ಬ್ರಿಕ್ ಗಳಿಂದ ಸಂಪ್ ಗಳನ್ನು ಮಾಡಬಹುದು.
RCC ಸಂಪ್ ಮಾಡುವಾಗ ಬಜೆಟ್ ಜಾಸ್ತಿಯಾದರೂ ಒಳ್ಳೆಯ ಬಾಳಿಕೆ ಬರುತ್ತದೆ ಮತ್ತು ಇದನ್ನು ಮಾಡುವುದಕ್ಕೆ ಉಳಿದೆರಡು ಬಗೆಯ ಸಂಪ್ ಮಾಡುವುದಕ್ಕಿಂತ ಹೆಚ್ಚಿನ ಸಮಯ ಹಿಡಿಯುತ್ತದೆ. 6 ಇಂಚಿನ ಬ್ಲಾಕ್ ಗಳನ್ನು ಕೂಡ ಬಳಸಿ ಸಂಪ್ ಮಾಡುತ್ತಾರೆ ಬ್ರಿಕ್ ಗಳ ಸಂಪ್ ಇದಕ್ಕಿಂತ ಉತ್ತಮ. ಬ್ಲಾಕ್ ಗಳಿಗಿಂತ ಬ್ರಿಕ್ ಸಂಪ್ ಹೆಚ್ಚು ಸಮಯ ಹಿಡಿಯುತ್ತದೆ ಹಾಗೂ ಹೆಚ್ಚು ಬಜೆಟ್ ಕೂಡ.
ಉದಾಹರಣೆಗೆ RCC ಸಂಪ್ ಗೆ ರೂ 20 ಖರ್ಚಾಗುವ ರೀತಿ ಇದ್ದರೆ ಅದನ್ನೇ ನೀವು ಬ್ರಿಕ್ ನಲ್ಲಿ ಮಾಡಿಸಿದರೆ 12 ರಿಂದ 15ರೂ. ಖರ್ಚಿನಲ್ಲಿ ಬ್ಲಾಕ್ ಗಳಿಂದ ಮಾಡಿಸಿದರೆ 10 ರಿಂದ 12 ರೂಪಾಯಿ ಖರ್ಚು ಬೀಳುತ್ತದೆ ಯಾವುದು ಹೆಚ್ಚು ಗಟ್ಟಿ ಮತ್ತು ಬಾಳಿಕೆ ಎಂದು ಹೇಳುವ ವಿಚಾರದಲ್ಲಿ ಬ್ರಿಕ್ ಮತ್ತು ಬ್ಲಾಕ್ ಗಳಿಂದ ಮಾಡಿದ್ದ ಸಂಪ್ ಒಂದೇ ರೀತಿಯ ಸ್ಟ್ರೆಂತ್ ಹೊಂದಿರುತ್ತವೆ, ಇದರಲ್ಲೂ RCC ಸಂಪ್ ಬೆಸ್ಟ್.
ಈ ಸುದ್ದಿ ಓದಿ:-ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
RCC ಸಂಪ್ ನಲ್ಲಿ ವಾಟರ್ ಸೀಪೇಜ್ ಪ್ರಾಬ್ಲಮ್ ಬರುವುದಿಲ್ಲ, ಬ್ರಿಕ್ ಮತ್ತು ಬ್ಲಾಕ್ ಗಳಲ್ಲಿ ಮಾಡಿದ ಸಂಪ್ ಆರು ತಿಂಗಳಿಗೊಮ್ಮೆ ಗಮನಿಸಿ ಮೇನ್ಟೇನ್ ಮಾಡಬೇಕು. ಸಂಪ್ ಮಾಡಲು ಸ್ಪೇಸ್ ನಮಗೆ ಒಂದು ಸರಿಯಾದ ಕಡೆ ಸಿಗದೇ ಇದ್ದಾಗ ಇರುವ ಸ್ಪೇಸ್ ನಲ್ಲಿಯೇ ಅಡ್ಡದಿಡ್ಡಿ ಶೇಪ್ ನಲ್ಲಿ ಸಂಪ್ ಮಾಡಬೇಕು ಎಂದರೆ ಬ್ರಿಕ್ ಹಾಗೂ ಬ್ಲಾಕ್ಸ್ ನಿಂದ ಮಾಡಲು ಆಗುವುದಿಲ್ಲ ಆಗ RCC ಸಂಪ್ ನೇ ಮಾಡಬೇಕಾಗುತ್ತದೆ.
ತುಂಬಾ ಎಡ್ಜ್ ನಲ್ಲಿ ಮಾಡಿಸುವುದರಿಂದ ಡ್ರೈನೇಜ್ ಕನೆಕ್ಟ್ ಆಗಿ ಮುಂದಿನ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಮನೆಯ ತುತ್ತ ತುದಿ ಬಾರ್ಡರ್ ಬದಲು ಸ್ವಲ್ಪ ಒಳಗೆ ಇದೆಲ್ಲದರ ಬಗ್ಗೆ ವಿಚಾರ ಮಾಡಿ ಮಾಡಿಸುವುದು ಬೆಸ್ಟ್ ಎಂದು ಕೂಡ ಹೇಳಲಾಗುತ್ತದೆ ಈ ವಿಚಾರವಾಗಿ ಹೆಸರಾಂತ ಕನ್ಸ್ಟ್ರಕ್ಷನ್ ಕಂಪನಿ ಮಾಲೀಕರು ಹೇಳಿದ ಸಲಹೆಗಳ ಬಗ್ಗೆ ಕೇಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.