ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi) 2000ರೂ. ಸಹಾಯಧನವು ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಖಾತೆಗೆ ಆಗಸ್ಟ್ 28ರಂದು ವರ್ಗಾವಣೆ ಆಗುವುದು ಬಹುತೇಕ ಖಚಿತ ಆಗಿದೆ. ಈ ಬಗ್ಗೆ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DCM D.K Shivakumar) ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ (Belagavi) ಆಗಸ್ಟ್ 27ರಂದು ಬೃಹತ್ ಕಾರ್ಯಕ್ರಮ ನಡೆಸಿ ಯೋಜನೆ ಲಾಂಚ್ (launch) ಮಾಡಲಾಗುವುದು. ಅದೇ ಕಾಲಕ್ಕೆ ರಾಜ್ಯದಲ್ಲಿ ಆಯಾ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ಕಾರ್ಯಕ್ರಮಗಳನ್ನು ನಡೆಸಿ ಮಹಿಳಾ ಫಲಾನುಭವಿಗಳಿಗೆ ಯೋಜನೆ ಉದ್ದೇಶವನ್ನು ತಿಳಿಸಿ ಈ ಕಾರ್ಯಕ್ರಮದ ಮೂಲಕ ದೇಶಕ್ಕೆ ಸಂದೇಶ ನೀಡಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ (Guests) AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjuna Kharge) , ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ (Soniya Gandhi), ರಾಹುಲ್ ಗಾಂಧಿ (Rahul Gandhi) ಹಾಗೂ ಪ್ರಿಯಾಂಕವಾದ್ರ (Priyanka Wadra) ಅವರು ಆಗಮಿಸಿದ್ದಾರೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರಿಗೂ ಕೂಡ ಪ್ರತಿ ತಿಂಗಳು ರೂ. 2000 ಸಹಾಯಧನ ನೀಡುವ ಈ ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ (Head of tha family in Ration Card), ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವ ಎಲ್ಲಾ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.
( ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಸ್ಥರು, ಆದಾಯ ತೆರಿಗೆ ಮತ್ತು GST ಪಾವತಿ ಮಾಡುವ ಕುಟುಂಬಗಳು ಹೊರತುಪಡಿಸಿ). ಈವರೆಗೆ 1.05 ಕೋಟಿ ಪಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎನ್ನುವ ಅಂಕಿ ಅಂಶ ಸರ್ಕಾರದ ಕೈ ಸೇರಿದೆ. ಇನ್ನೂ ಬಹಳಷ್ಟು ಮಹಿಳೆಯರು ಅರ್ಜಿ ಸಲ್ಲಿಸುವುದು ಬಾಕಿ ಇದೇ ಎನ್ನುವುದು ತಿಳಿದು ಬಂದಿದೆ.
ಇದರಲ್ಲಿ ಕೆಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದರೂ ಕೂಡ ರೇಷನ್ ಕಾರ್ಡ್ ಇಲ್ಲದ ಕಾರಣ ಅನೇಕ ಮಹಿಳೆಯರು ಅರ್ಜಿ ಸಲ್ಲಿಸುವಿಕೆಯಿಂದ ವಂಚಿತರಾಗಿದ್ದಾರೆ. ಕೆಲವರ ರೇಷನ್ ಕಾರ್ಡ್ ಸ್ಥಗಿತಗೊಂಡಿದ್ದರೆ ಮತ್ತೆ ಕೆಲವರು ತಿದ್ದುಪಡಿ ಮಾಡಿಸಬೇಕಾಗಿದೆ (New Ration card apply and correction permission).
ಶಕ್ತಿ ಯೋಜನೆಯ ಉಚಿತ ಬಸ್ ಪಾಸ್ ವಿತರಣೆ ಆರಂಭ, ಪಾಸ್ ಪಡೆಯುವುದು ಹೇಗೆ ನೋಡಿ.!
ಈ ಸಮಸ್ಯೆಗೆ ಸ್ಪಂದಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದರ ಕೆ.ಎಚ್ ಮುನಿಯಪ್ಪರವರು (K.H Muniyappa) ಚುನಾವಣೆ ನೀತಿ ಸಂಹಿತ ಜಾರಿಯಾಗಿದ್ದ ಕಾರಣ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೂ ರೇಷನ್ ಕಾರ್ಡ್ ವಿತರಣೆಯಾಗಿಲ್ಲ. ಶೀಘ್ರದಲ್ಲೇ ಇದಕ್ಕೆ ಅನುಮತಿ ನೀಡಲಾಗುವುದು ಹಾಗೂ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ತಿದ್ದುಪಡಿಗೂ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಹಾಗಾಗಿ ರೇಷನ್ ಕಾರ್ಡ್ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲಾಗದಿರುವ ಯಾವುದೇ ಫಲಾನುಭವಿಗಳು ಬೇಸರಗೊಳ್ಳುವ ಅಗತ್ಯ ಇಲ್ಲ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಡೆ ದಿನಾಂಕ ಇಲ್ಲ, ಇದು ನಿರಂತರ ಪ್ರಕ್ರಿಯೆ. ಯಾರೆಲ್ಲಾ ರೇಷನ್ ಕಾರ್ಡ್ ಹೊಂದಿಲ್ಲ ಅಥವಾ ರೇಷನ್ ಕಾರ್ಡ್ ನಲ್ಲಿ ಸಮಸ್ಯೆ ಇರುವ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಅವರೆಲ್ಲ ಇದನ್ನು ಸರಿಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಬಹುದು.
ಶಕ್ತಿ ಯೋಜನೆಯ ಉಚಿತ ಬಸ್ ಪಾಸ್ ವಿತರಣೆ ಆರಂಭ, ಪಾಸ್ ಪಡೆಯುವುದು ಹೇಗೆ ನೋಡಿ.!
ಅರ್ಜಿ ಸಲ್ಲಿಸಿದ ನಂತರದ ತಿಂಗಳಿನಿಂದ ಸಹಾಯಧನವು ಪ್ರತಿ ತಿಂಗಳು ಅವರು ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ಸೇರಲಿದೆ ಎಂದು ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಭರವಸೆ ನೀಡಿದ್ದಾರೆ.