ಮನೆ ಕಟ್ಟುವಾಗ ಪ್ರತಿಯೊಂದು ವಿಷಯವು ಕೂಡ ಮುಖ್ಯವೇ. ದೇವರಕೋಣೆ ಮಾಡುವ ಡಿಸೈನ್, ಅಡುಗೆ ಮನೆಯಲ್ಲಿ ಮಾಡ್ಯುಲರ್ ಕಿಚನ್, ಲಿವಿಂಗ್ ಏರಿಯಾದಲ್ಲಿ ಸ್ಪೇಸ್, ಬೆಡ್ರೂಮ್ ವಾಸ್ತು ಹೀಗೆ ಶೌಚಾಲಯದ ವಿಚಾರ ಎಲ್ಲವೂ ಕೂಡ ಅಷ್ಟೇ ಮುಖ್ಯ. ಹಾಗೆಯೇ ಕಲರ್ ಸೆಲೆಕ್ಟ್ ಮಾಡುವಾಗ, ಡಿಸೈನ್ಸ್ ಸೆಲೆಕ್ಟ್ ಮಾಡುವಾಗ, ಮಾಡೆಲ್ ಸೆಲೆಕ್ಟ್ ಮಾಡುವಾಗ ಅಷ್ಟೇ ಕನ್ಫ್ಯೂಷನ್ ಕ್ರಿಯೇಟ್ ಮಾಡುವ ವಿಷಯವಾಗಿದೆ.
ಹೀಗಾಗಿ ಈ ವಿಚಾರದ ಬಗ್ಗೆ ಅನುಭವಸ್ಥರಿಂದ ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಅಥವಾ ಈ ವಿಚಾರದ ಬಗ್ಗೆ ಮೊದಲೇ ಸ್ವಲ್ಪ ತಿಳಿದುಕೊಂಡಿರುವುದು ಉತ್ತಮ. ಹಾಗಾಗಿ ಇಂದು ಈ ಅಂಕಣದಲ್ಲಿ ಇದರ ಬಗ್ಗೆ ಮಾಹಿತಿ ತಿಳಿಸಿದ್ದೇವೆ. ಅದರಲ್ಲೂ ಶೌಚಾಲಯದ ವಿಚಾರ ಬಂದಾಗ ಯಾವುದು ಬೆಸ್ಟ್ ಯಾವುದು ಎಷ್ಟು ಬಾಳಿಕೆ ಬರುತ್ತದೆ ಯಾವುದು ಸೆಲೆಕ್ಟ್ ಮಾಡುವುದು ಒಳ್ಳೆಯದು ಎನ್ನುವ ವಿಚಾರದ ಬಗ್ಗೆ ಹೇಳುತ್ತಿದ್ದೇವೆ.
ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
ವಾಲ್ ಮೌಂಟೆಡ್ ಕಮೋಡ್ ವಿಥ್ ಪುಷ್ ವಾಲ್ :- ಇದರ ವಿನ್ಯಾಸ ಹೇಗಿರುತ್ತದೆ ಎಂದರೆ ಸಿಂಗಲ್ ಕಮೋಡ್ ನ್ನು ವಾಲ್ ಗೆ ಫಿಟ್ ಮಾಡಿರುತ್ತಾರೆ. ಪುಷ್ ವಾಲ್ ಒಳಗೊಂಡ ಟ್ಯಾಂಕ್ ನ್ನು ಗೋಡೆ ಒಳಗೆ ಕನಸೀಲ್ಡ್ ಮಾಡಿರುತ್ತಾರೆ. ನೋಡುವುದಕ್ಕೆ ಬಹಳ ಅಚ್ಚುಕಟ್ಟಾಗಿ ಎಲಗೆಂಟ್ ಲುಕ್ ಕೊಡುತ್ತದೆ ಬೇರೆ ವಿನ್ಯಾಸದ ಕಮೋಡ್ ಗಳಿಗೆ ಕಂಪೇರ್ ಮಾಡಿದರೆ ಸಾಕಷ್ಟು ಜಾಗ ಉಳಿತಾಯ ಆಗುತ್ತದೆ.
ಕ್ಲಾಸಿ ಲುಕಿಂಗ್ ಜೊತೆ ಮೆಂಟೇನೆನ್ಸ್ ಮತ್ತು ಯೂಸಿಂಗ್ ಕೂಡ ಈಸಿ. 2 ಪ್ರೆಸ್ಸಿಂಗ್ ಬಟನ್ ಇರುತ್ತದೆ, 1 ನೇ ದು ಸ್ಮೂತ್ ಪ್ರೆಸ್ಸಿಂಗ್ (3ltr) ಎರಡನೆಯದು ಲಾಂಗ್ ಪ್ರೆಸ್ಸಿಂಗ್ (6ltr) ನೀರಿನ ಬಳಕೆಯಾಗುತ್ತದೆ. ಬೆಲೆಯ ವಿಚಾರವಾಗಿ ಹೇಳುವುದಾದರೆ ಕಮೋಡ್ ಗೆ ರೂ.5,000 ದಿಂದ ಶುರುವಾಗಿ ರೂ.20,000 ವರೆಗೂ ಕೂಡ ವೆರೈಟಿ ಇರುತ್ತದೆ, ಇದರ ಜೊತೆಗೆ ಗೋಡೆಗೆ ಫಿಕ್ಸ್ ಮಾಡಿದಾಗುವ ಫ್ಲೆಶ್ ಟ್ಯಾಂಕ್ ಗೂ ಕೂಡ ರೂ.5000 ಖರ್ಚು ಮಾಡಬೇಕಾಗುತ್ತದೆ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಇರುವ ಮಹಿಳೆಯರಿಗೆ ಒಂದೇ ತಿಂಗಳಿಗೆ 2 ಬಾರಿ ಗೃಹಲಕ್ಷ್ಮಿ ಯೋಜನೆ 4000 ಹಣ ಬಂದಿದೆ.! ನೀವು ಚೆಕ್ ಮಾಡಿ
ಮೊದಲೇ ಹೇಳಿದಂತೆ ವಾಲ್ ಮೌಂಟೆಡ್ ಆಗಿರುವುದರಿಂದ ಟ್ಯಾಂಕ್ ಫಿಕ್ಸ್ ಮಾಡುವ ಗೋಡೆಗೆ ಹಿಂದೆ ಅಡುಗೆ ಮನೆ ಅಥವಾ ದೇವರ ಕೋಣೆ ಇದ್ದರೆ 4 ಇಂಚಸ್ ವಾಲ್ ಇದ್ದರೆ ಸಪರೇಟ್ ಆದ 3ft ಅಗಲ 4ft ಉದ್ದ ಇರುವ ವಾಲ್ ಹಾಕಿಸುವುದು ಉತ್ತಮ ಇನ್ಸ್ಟಾಲೇಶನ್ ವಿಚಾರದಲ್ಲಿ ಕೂಡ ಎಚ್ಚರಿಕೆಯಿಂದ ಇರಬೇಕು.
ಯಾಕೆಂದರೆ ಇದನ್ನು ಪ್ರೊಫೆಷನಲ್ ವರ್ಕರ್ಸ್ ಮಾತ್ರ ಇನ್ಸ್ಟಾಲ್ ಮಾಡಲು ಸಾಧ್ಯ ಇಲ್ಲ ಸಿವಿಲ್ ವರ್ಕರ್ ಕಳು ಪ್ಲಂಬರ್ ಗಳು ಇದನ್ನು ಸರಿಯಾಗಿ ಫಿಕ್ಸ್ ಮಾಡಲು ಕಲಿತಿರುವುದಿಲ್ಲ, ಗೋಡೆ ಒಳಗೆ ಟ್ಯಾಂಕ್ ಫಿಕ್ಸ್ ಮಾಡುವುದರಿಂದ ಒಂದು ಬಾರಿ ರಿಪೇರಿಗೆ ಬಂದರೆ ರಿಪೇರಿ ಮಾಡುವುದು ಬಹಳ ಕಷ್ಟವಾಗುತ್ತದೆ.
ರೆಗ್ಯುಲರ್ ಬಳಕೆ ಮಾಡುವಂತಹ ವಸ್ತುವಾಗಿರುವುದರಿಂದ 3-4 ವರ್ಷಗಳಿಗಾದರೂ ಬಟನ್ ಹಾಳಾಗಿ ಹೋಗುತ್ತದೆ ಆದ್ದರಿಂದ ಯೋಚನೆ ಮಾಡಿ ನಿರ್ಧಾರ ಮಾಡಿ. ಸಾಮಾನ್ಯವಾಗಿ ಜನರು ಫ್ಲೋರ್ ಮೌಂಟೆಡ್ ಕಮೋಡ್ ಗಳನ್ನೇ ಹಾಕಿಸಲು ಬಯಸುತ್ತಾರೆ.
ಈ ಸುದ್ದಿ ಓದಿ:- ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದವರಿಗೆ ಗುಡ್ ನ್ಯೂಸ್
ಈ ಫ್ಲೋರ್ ಮೌಂಟೆಡ್ ಕಮೋಡ್ ಅಥವಾ ಒನ್ ಪೀಸ್ ಕಮೋಡ್ ಇವುಗಳಲ್ಲಿ ಯಾವುದು ಸೂಕ್ತ ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಹಂಚಿಕೊಳ್ಳಿ.