2009 ರಿಂದ ಈ ತಾಯಿ ಕಾರ್ಡ್ ನೀಡುವ ಯೋಜನೆ ಆರಂಭವಾಗಿದೆ. ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಿಗಾಗಿ, ನವಜಾತ ಶಿಶುವಿನಿಂದ ಹಿಡಿದು ಮಗುವಿಗೆ ಐದು ವರ್ಷ ತುಂಬಿದವರೆಗೂ ಕೂಡ ಈ ತಾಯಿ ಕಾರ್ಡ್ ಬಹಳ ಅನುಕೂಲಕ್ಕೆ ಬರುವ ದಾಖಲೆಯಾಗಿದೆ.
ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದ್ದು ಇದನ್ನು ಹೇಗೆ ಪಡೆಯಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಾಗಿ ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ನಂತರ ಸಿಗುವ ಪ್ರಯೋಜನಗಳೇನು? ಹಾಗೂ ಇದರ ಅಗತ್ಯತೆ ಎಷ್ಟು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!
ಪ್ರತಿಯೊಬ್ಬ ಮಹಿಳೆಗೂ ಕೂಡ ಗೊತ್ತಿರಲೇಬೇಕಾದ ಮಾಹಿತಿ ಇದಾಗಿತ್ತು ಈ ಕಾರಣದಿಂದಾಗಿ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಸಹೋದರಿಯರು ಹಾಗೂ ಸ್ನೇಹಿತೆಯರ ಜೊತೆಗೂ ಹಂಚಿಕೊಳ್ಳಿ. ಮಹಿಳೆಯರು ಗರ್ಭಿಣಿಯಾದಾಗ ಆಕೆಗೆ ಮೂರು ತಿಂಗಳು ತುಂಬಿದ ತಕ್ಷಣ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನೋಂದಾಯಿಸಿ ತಾಯಿ ಕಾರ್ಡ್ ಪಡೆಯಬಹುದು.
ಕೆಲವೊಂದು ಕಡೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಂದ ಕೂಡ ಈ ತಾಯಿ ಕಾರ್ಡ್ ಪಡೆಯಬಹುದು. ಗರ್ಭಿಣಿ ಮಹಿಳೆಯರು ಕಡ್ಡಾಯವಾಗಿ ತಾಯಿ ಕಾರ್ಡ್ ಪಡೆಯಲೇಬೇಕು. ಯಾಕೆಂದರೆ, ತಾಯಿ ಕಾರ್ಡ್ ಒಂದು ಅಗತ್ಯ ದಾಖಲೆ. ಗರ್ಭಿಣಿ ಮಹಿಳೆ ಸರ್ಕಾರದ ಸಿಗುವ ಎಲ್ಲಾ ಅನುಕೂಲತೆಗಳನ್ನು ಪಡೆಯುವ ಸಂದರ್ಭದಲ್ಲಿ ಇತರೆ ದಾಖಲೆಗಳಂತೆ ಆಕೆಯ ತಾಯಿ ಕಾರ್ಡ್ ದಾಖಲೆಯನ್ನು ಕೂಡ ಕೇಳುತ್ತಾರೆ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ.!
ಇಷ್ಟು ಮಾತ್ರವಲ್ಲದೆ ಗರ್ಭಿಣಿ ಮಹಿಳೆಗೆ 9 ತಿಂಗಳವರೆಗೆ ಕೂಡ ಆಕೆಯ ಆರೋಗ್ಯಕ್ಕೆ ಸಂಬಂಧಿಸಿದ ವರದಿ ಮತ್ತು ಹೆರಿಗೆಯಾದ ನಂತರ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಮಾಹಿತಿಯು ಕೂಡ ಈ ತಾಯಿ ಕಾರ್ಡ್ ನಲ್ಲಿರುತ್ತದೆ.
ಬೇಕಾಗುವ ದಾಖಲೆಗಳು:-
* ಪತಿ ಹಾಗೂ ಪತ್ನಿಯ ಆಧಾರ್ ಕಾರ್ಡ್ ಜೆರಾಕ್ಸ್
* ಕುಟುಂಬದ ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
* ಪಾಸ್ ಪೋರ್ಟ್ ಸೈಜ್ ಫೋಟೋಸ್
* ಇನ್ನಿತರ ದಾಖಲೆಗಳು
ತಾಯಿ ಕಾರ್ಡ್ ಪಡೆಯುವುದು ಹೇಗೆ?
* ಈ ಮೇಲೆ ತಿಳಿಸಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ವ್ಯಾಪ್ತಿಗೆ ಸೇರುವ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು
* ಅಂಗನವಾಡಿ ಕಾರ್ಯಕರ್ತೆ ದಾಖಲೆಗಳನ್ನು ಪರಿಶೀಲಿಸಿ 1 ವಾರ ಅಥವಾ 15 ದಿನಗಳು ಆದ ನಂತರ ತಾಯಿ ಕಾರ್ಡ್ ನೀಡುತ್ತಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನೆ.! 26,000 ಮಹಿಳೆಯರಿಗೆ ಸಿಗಲ್ಲ 6ನೇ ಕಂತಿನ ಹಣ.!
ಸಿಗುವ ಪ್ರಯೋಜನಗಳು:-
* ಪ್ರಸೂತಿ ಆರೈಕೆ
* ಹೆರಿಗೆ ಆದ ತಕ್ಷಣ ಮಡಿಲು ಯೋಜನೆಯಡಿ ಕಿಟ್ (ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದವರಿಗೆ ಮಾತ್ರ)
* ಹೆರಿಗೆಯಾದ ನಂತರ ಮಗುವಿಗೆ 5 ವರ್ಷ ತುಂಬುವವರೆಗೂ ಕೂಡ ಚುಚ್ಚುಮದ್ದುಗಳನ್ನು ಕೊಡಿಸುವುದಕ್ಕೆ ಮಾಹಿತಿ ಮತ್ತು ಚುಚ್ಚುಮದ್ದುಗಳನ್ನು ನೀಡಿರುವ ಬಗ್ಗೆ ಮಾಹಿತಿ
* ಮಹಿಳೆಯು ಗರ್ಭಿಣಿಯಾದಾಗ 3 ತಿಂಗಳಿನಿಂದ 9 ತಿಂಗಳವರೆಗೂ ಕೂಡ ಸರ್ಕಾರದ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಕೊಡುತ್ತಾರೆ
* 9 ತಿಂಗಳವರೆಗೂ ಗರ್ಭಿಣಿ ಮಹಿಳೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚೆಕಪ್ ಮತ್ತು ಔಷಧಿಗಳು ಸಿಗುತ್ತವೆ.
ಈ ಸುದ್ದಿ ಓದಿ:- ಆಡು, ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ರೈತರಿಗೆ PMEGP ಯೋಜನೆಯಡಿ 20 ದಿನಗಳಲ್ಲಿ ಸಿಗಲಿದೆ 20 ಲಕ್ಷ ಲೋನ್ 7 ಲಕ್ಷ ಸಬ್ಸಿಡಿ ಸಿಗುತ್ತೆ.!
* ಕೆಲವೊಂದು ಸಂದರ್ಭದಲ್ಲಿ ಮಗುವಿಗೆ ಶಾಲೆಗೆ ದಾಖಲಿಸುವಾಗ ಅಥವಾ ಅದಕ್ಕೂ ಮುನ್ನ ಮಗುವನ್ನು ಅಂಗನವಾಡಿಗೆ ದಾಖಲಿಸುವಾಗ ವಯಸ್ಸಿನ ದೃಢೀಕರಣಕ್ಕಾಗಿ ಈ ತಾಯಿ ಕಾರ್ಡ್ ಕೇಳಬಹುದು ಅಥವಾ ಮಗುವಿಗೆ ಜನನ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲಿಯೂ ಕೂಡ ಕೇಳಬಹುದು
* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗರ್ಭಿಣಿ ಮಹಿಳೆಗೆ ಮತ್ತು ನವಜಾತ ಶಿಶುವಿನ ಆರೈಕೆಗಾಗಿ ಸಹಾಯಧನವನ್ನು ಕೂಡ ನೀಡುತ್ತವೆ, ಆ ನೆರವನ್ನು ಪಡೆಯಲು ಕೂಡ ದಾಖಲೆಯಾಗಿ ತಾಯಿ ಕಾರ್ಡ್ ನೀಡಬೇಕಾಗುತ್ತದೆ.