ನಮ್ಮ ದೇಶದಲ್ಲಿ ನಿರುದ್ಯೋಗ (Unemployment) ಎನ್ನುವುದು ಯುವಜನತೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಕೆಲಸ ಮಾಡಲು ಶಕ್ತಿ ಹಾಗೂ ಸಾಮರ್ಥ್ಯವಿದ್ದರೂ ಅವಕಾಶಗಳೇ ಇಲ್ಲದ ಪರಿಸ್ಥಿತಿ ಸರ್ಕಾರಿಗಳಿಗೂ ಕೂಡ ತಲೆ ನೋವಾಗಿದೆ. ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು (Government) ಸಾಧ್ಯವಾದಷ್ಟು ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಮುಂದಾಗಿವೆ.
ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರದಿಂದ ಹೊಸದೊಂದು ಪ್ರಯೋಗ ನಡೆಯುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಸುಲಭವಾಗಿ ಜನರ ಪಡೆಯುವಂತೆ ಆಗಲು ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವಂತಹ ಜನಮಿತ್ರರು (Jana Mithra) ಎನ್ನುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದೆ.
ಈ ಸುದ್ದಿ ಓದಿ:- ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!
ಸರ್ಕಾರ ಇ- ಆಡಳಿತ ಇಲಾಖೆಯನ್ನು ( E-Administration Department ) ಬಳಸಿಕೊಂಡು ತಾಲೂಕು ಕಚೇರಿಗಳಲ್ಲಿ ( Taluk Office ) ಮಧ್ಯವರ್ತಿಗಳು ಜನಸಾಮಾನ್ಯರನ್ನು ಸುಲಿಗೆ ಮಾಡುವುದನ್ನು ತಪ್ಪಿಸಲು ಜನ ಮಿತ್ರ ಎನ್ನುವ ಹೊಸ ಯೋಜನೆ ರೂಪಿಸಿ ಅನುಕೂಲತೆ ಮಾಡಿಕೊಡಲಾಗುತ್ತಿದೆ.
ಜನಮಿತ್ರರು ಸರ್ಕಾರಿ ಕಚೇರಿಗಳ ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ತಲುಪಿಸಲಿದ್ದಾರೆ. ಇದರಿಂದ ಆಗುವ ಅನುಕೂಲತೆಗಳೇನು? ಯಾವೆಲ್ಲ ಸೇವೆ ಪಡೆಯಬಹುದು ಮತ್ತು ಈ ಜನಮಿತ್ರ ನೇಮಕಾತಿ ಹೇಗೆ ಆಗುತ್ತದೆ ಎನ್ನುವುದರ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ.!
ಅನುಕೂಲತೆಗಳು :-
* ಜನಮಿತ್ರರಿಗೆ ಕರೆ ಮಾಡಿ ತಮ್ಮ ಮನೆಯಲ್ಲಿ ಬೇಕಾದ ಸೇವೆ ಪಡೆಯಬಹುದು ಇದರಿಂದ ಪದೇ ಪದೇ ಕಚೇರಿಗಳಿಗೆ ಅಲೆದಾಡುವ ಅಗತ್ಯವಿರುವುದಿಲ್ಲ, ಈ ಮೂಲಕ ಸಮಯ, ಹಣ ಮತ್ತು ಶ್ರಮದ ಉಳಿತಾಯವಾಗುತ್ತದೆ.
* ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಿದಂತಾಗುತ್ತದೆ
* ಸರ್ಕಾರಿ ಕಚೇರಿಯಲ್ಲಿ ಆಗುತ್ತಿರುವ ಜನದಟ್ಟಣೆಯ ತಡೆಯಬಹುದು.
* ನಿಗದಿತ ಅವಧಿಯಲ್ಲಿ ಸರಳವಾಗಿ ಸೇವೆ ಲಭ್ಯವಾಗುತ್ತದೆ.
ಯಾವೆಲ್ಲಾ ಸೇವೆ ಪಡೆಯಬಹುದು:-
* ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಅರ್ಜಿ
* ರಸಗೊಬ್ಬರಕ್ಕೆ ಅರ್ಜಿ
* ವಿವಿಧ ಲೈಸನ್ಸ್‌ಗಳ ನವೀಕರಣ
* ಪರಿಹಾರ ನಿಧಿಗೆ ಅರ್ಜಿ
* ಟ್ರೇಡರ್ ಲೈಸನ್ಸ್
* ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಅರ್ಜಿ ಸಲ್ಲಿಕೆ
* ಮೀನು ಸಾಗಣೆ ಅರ್ಜಿ ಸಲ್ಲಿಕೆ
* ಅಂಕಪಟ್ಟಿ
* ಪೊಲೀಸರಿಗೆ ದೂರು ದಾಖಲು
* ಮರಣ ಪ್ರಮಾಣಪತ್ರ ಪಡೆಯಲು ಅರ್ಜಿ
* ವಿವಿಧ ಸಾಮಾಜಿಕ ಪಿಂಚಣಿಗಳಿಗೆ ಅರ್ಜಿ ಸಲ್ಲಿಕೆ, ಇತ್ಯಾದಿ…
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನೆ.! 26,000 ಮಹಿಳೆಯರಿಗೆ ಸಿಗಲ್ಲ 6ನೇ ಕಂತಿನ ಹಣ.!
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-
* ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸಬೇಕು
* ಕನಿಷ್ಠ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರಬೇಕು
* ಕಂಪ್ಯೂಟರ್ ಕೌಶಲ ಇರಬೇಕು
* ಚಾಲನಾ ಪರವಾನಗಿ, ಸ್ವಂತ ದ್ವಿಚಕ್ರ ವಾಹನದ ಹೊಂದಿರಬೇಕು
* ಯಾವುದೇ ಬಗೆಯ ಅಪರಾಧ ಪ್ರಕರಣಗಳಿಂದ ಮುಕ್ತವಾಗಿರಬೇಕು.
ಆಯ್ಕೆ ಪ್ರಕ್ರಿಯೆ:-
* ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ 2 ರಿಂದ 4 ಜನಮಿತ್ರರನ್ನು ನೇಮಿಸಲಾಗುತ್ತದೆ, ಒಟ್ಟಾರೆ ರಾಜ್ಯಾದ್ಯಂತ ಅಂದಾಜು 25 ಸಾವಿರ ಜನಮಿತ್ರರನ್ನು ಈ ಸೇವೆಗೆ ನೇಮಕ ಮಾಡಲು ನಿರ್ಧರಿಸಲಾಗಿದೆ
* ಆನ್‌ಲೈನ್ ನಲ್ಲಿ ಅರ್ಜಿ ಸ್ವೀಕರಿಸಲಾಗುವುದು
* ಆನ್‌ಲೈನ್‌ನಲ್ಲಿಯೇ ಪರಿಶೀಲನೆ ಹಾಗೂ ಆಯ್ಕೆ ಮಾಡಿಕೊಂಡು, ಆನ್‌ಲೈನ್ ಮೂಲಕವೇ ತರಬೇತಿ ಕೂಡ ನೀಡಲಾಗುತ್ತದೆ.
ಈ ಸುದ್ದಿ ಓದಿ:- ಆಡು, ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ರೈತರಿಗೆ PMEGP ಯೋಜನೆಯಡಿ 20 ದಿನಗಳಲ್ಲಿ ಸಿಗಲಿದೆ 20 ಲಕ್ಷ ಲೋನ್ 7 ಲಕ್ಷ ಸಬ್ಸಿಡಿ ಸಿಗುತ್ತೆ.!
ಜನ ಮಿತ್ರರ ಸೇವೆಯ ಬಳಕೆಯ ವಿಧಾನ:-
ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಕಂದಾಯ ವಿಭಾಗಗಳ ತಲಾ ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಿ ನಂತರ ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ
* ಯೋಜನೆ ಜಾರಿಯಾದ ಮೇಲೆ ಸರ್ಕಾರದಿಂದ ಆಯ ಜಿಲ್ಲೆಗಳಿಗೆ ಸಂಬಂಧಪಟ್ಟ ಹಾಗೆ ಪ್ರತ್ಯೇಕವಾಗಿ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ.
* ಜನಮಿತ್ರರ ಸೇವೆ ಬೇಕು ಎಂಬುವವರು ಮೊಬೈಲ್‌ಗೆ ಮಿಸ್ ಕಾಲ್ ( Miss call ) ನೀಡಬೇಕು. ಅವರ ಹೆಸರು ಎಂಟ್ರಿ ಮಾಡಿ ಪಿನ್‌ಕೋಡ್ ( Pincode ) ಪಡೆದುಕೊಳ್ಳಬೇಕು. ನೋಂದಣಿ ಸಂಖ್ಯೆಯನ್ನು SMS ಮೂಲಕ ಕೂಡ ಕಳುಹಿಸಲಾಗುತ್ತದೆ. ನಂತರ ಜನಮಿತ್ರ ಆಪ್ ( Janamithra App ) ಮೂಲಕ ಜನಮಿತ್ರನಿಗೆ ಮಾಹಿತಿ ಕಳುಹಿಸಲಾಗುತ್ತದೆ.
* ಒಂದು ಗಂಟೆಯೊಳಗೆ ಸಂಬಂಧಿಸಿದ ನಾಗರಿಕರನ್ನು ಜನಮಿತ್ರ ಭೇಟಿ ಮಾಡುತ್ತಾರೆ.
ಈ ಸುದ್ದಿ ಓದಿ:- ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?
* ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ಆ ದಿನದ ನೋಂದಣಿಗೆ ಅವಕಾಶ ನೀಡಲಾಗುತ್ತದೆ. ರಾತ್ರಿ 8 ಗಂಟೆಯ ನಂತರದ ಅವಧಿಯನ್ನು ಮಾರನೇ ದಿನಕ್ಕೆ ಲೆಕ್ಕ ಹಾಕಲಾಗುತ್ತದೆ.
* ಅರ್ಜಿ ಸಲ್ಲಿಕೆ ಮತ್ತು ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಅರ್ಜಿ ಶುಲ್ಕದ ಜೊತೆಗೆ 50 ರೂ. ಮತ್ತು ಪ್ರಮಾಣ ಪತ್ರ ವಿತರಣೆಗೆ ಶುಲ್ಕವಾಗಿ 25 ರೂ. ನಿಗದಿ ಮಾಡಲಾಗುವುದು. ಶುಲ್ಕ ಸರ್ಕಾರಕ್ಕೆ ಬಂದರೆ ಉಳಿದ ಮೊತ್ತ ಜನಮಿತ್ರರಿಗೆ ಸಿಗಲಿದೆ.