ಈಗಿನ ಕಾಲದಲ್ಲಿ ಆಧಾರ್ ಕಾರ್ಡ್ ಅತಿ ಮುಖ್ಯ ದಾಖಲೆ ಮತ್ತು ಮೊಬೈಲ್ ಗೆ ಸಿಮ್ ಕಾರ್ಡ್ ಖರೀದಿಸುವುದರಿಂದ ಹಿಡಿದು ಅಪ್ಲಿಕೇಶನ್ ಹಾಕುವವರಿಗೆ, ಸರ್ಕಾರದಿಂದ ಉಚಿತ ರೇಷನ್ ಪಡೆಯಲು ಇನ್ನೂ ನೂರಾರು ಕಾರಣಗಳಿಗೆ ನಾವು ಇದನ್ನು ಬಳಸುತ್ತೇವೆ.
ಒಮ್ಮೊಮ್ಮೆ ಇದು ಮಿಸ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಆಗಾಗ ನಾವು ಯಾವುದಕ್ಕೆಲ್ಲ ಆಧಾರ್ ಬಳಕೆ ಮಾಡಿದ್ದೇವೆ ಎಂದು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಇದನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ನೋಡಿ:- ಗ್ರಾಮ ಪಂಚಾಯಿತಿಯಲ್ಲಿ ಭರ್ಜರಿ ನೇಮಕಾತಿ, ಬರೋಬ್ಬರಿ 25,000 ಜನ ಮಿತ್ರ ಹುದ್ದೆಗಳು.! ಆಸಕ್ತರು ಅರ್ಜಿ ಸಲ್ಲಿಸಿ.!
* https://uidai.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
* ಬಲ ಭಾಗದಲ್ಲಿರುವ 3 dot ಮೇಲೆ ಕ್ಲಿಕ್ ಮಾಡಿ ಹಲವಾರು ಆಯ್ಕೆಗಳ ಆಪ್ಷನ್ ಕಾಣುತ್ತದೆ ಅದರಲ್ಲಿ desktop site ಆನ್ ನಲ್ಲಿ ಇಡಿ
* ಮುಖಪುಟದಲ್ಲಿ ನಿಮ್ಮ ಭಾಷೆ ಆಯ್ದುಕೊಳ್ಳಲು ಆಯ್ಕೆ ಇರುತ್ತದೆ, ಇಂಗ್ಲಿಷ್ ಅಥವಾ ಕನ್ನಡ ಕ್ಲಿಕ್ ಮಾಡಿ.
* ನಂತರ Aadhar Services ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ, Authentication History ಎನ್ನುವ ಲಿಂಕ್ ಕ್ಲಿಕ್ ಮಾಡಿ
* Welcome to My Aadhar ಎನ್ನುವ ಪೇಜ್ ಓಪನ್ ಆಗುತ್ತದೆ ಈ ಪುಟಕ್ಕೆ ನೀವು Log in ಆಗಿ ಪರಿಶೀಲಿಸಬಹುದು.
* thumb impression Mark ಕೆಳಗೆ log in ಎನ್ನುವ ಆಪ್ಷನ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿ.
ಈ ಸುದ್ದಿ ನೋಡಿ:- ತಾಯಿ ಕಾರ್ಡ್ ಎಲ್ಲಿ ಮಾಡಿಸಬೇಕು.? ಏನೇನು ದಾಖಲೆ ಬೇಕು.? ತಾಯಿ ಕಾರ್ಡ್ ಉಪಯೋಗವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* Aadhar No. ಎಂಟ್ರಿ ಮಾಡಿ ಮತ್ತು ನೀಡಲಾಗಿರುವ text verification ನಮೂದಿಸಿ Send OTP ಕ್ಲಿಕ್ ಮಾಡಿ, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ಹಾಕಿ Login ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಹಲವಾರು ಆಯ್ಕೆಗಳು ಇರುತ್ತದೆ. ನೀವು ಮತ್ತೊಮ್ಮೆ Authentication History ಆಪ್ಷನ್ ಕ್ಲಿಕ್ ಮಾಡಿ.
* Select Modality ಆಪ್ಷನ್ ಮುಂದೆ down arrow mark ಇರುತ್ತದೆ, ಕ್ಲಿಕ್ ಮಾಡಿ.
* All, Biometric, Biometric & OTP, Demographic, Demographic & Biometric, Demographic & OTP, OTP ಇಷ್ಟು ಆಪ್ಷನ್ ಇರುತ್ತದೆ. ಇದರಲ್ಲಿ ನೀವು ಯಾವುದನ್ನು ಸೆಲೆಕ್ಟ್ ಮಾಡುತ್ತಿರೋ ಆ ರೂಪದಲ್ಲಿ ಕೊಟ್ಟು ಎಲ್ಲೆಲ್ಲಿ ಬಳಕೆ ಮಾಡಿದ್ದೀರಿ ಎನ್ನುವುದು ತಿಳಿಯುತ್ತದೆ.
ಈ ಸುದ್ದಿ ನೋಡಿ:- ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!
ಉದಾಹರಣೆಗೆ ನೀವು OTP ಕ್ಲಿಕ್ ಮಾಡಿದರೆ OTP ಹೇಳಿ ಎಲ್ಲೆಲ್ಲಿ ಮೊಬೈಲ್ ಬಳಕೆ ಆಗಿದೆ ಎನ್ನುವುದು ತಿಳಿಯುತ್ತದೆ, Biometric ಅಂದರೆ ಹೆಬ್ಬೆರಳು ಕೊಟ್ಟು ಎಲ್ಲೆಲ್ಲಿ ಬಳಕೆ ಆಗಿದೆ ಎನ್ನುವುದು ತಿಳಿಯುತ್ತದೆ. Demographic ಎಂದರೆ ಮುಖ ಚಹರೆ ಸ್ಕ್ಯಾನ್ ಮಾಡಿ ಎಲ್ಲೆಲ್ಲಿ ಬಳಕೆ ಮಾಡಲಾಗಿದೆ ಎನ್ನುವುದು ತಿಳಿಯುತ್ತದೆ. ALL ಎನ್ನುವ ಆಪ್ಷನ್ ಕ್ಲಿಕ್ ಮಾಡುವುದು ಬೆಸ್ಟ್ ಯಾಕೆಂದರೆ ಇದರಲ್ಲಿ ಕಂಪ್ಲೀಟ್ ಮಾಹಿತಿ ತಿಳಿಯುತ್ತದೆ.
* All ಆಪ್ಷನ್ ಕ್ಲಿಕ್ ಮಾಡಿದ ಮೇಲೆ ಅದರ ಕೆಳಗೆ Enter Start date ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಕ್ಯಾಲೆಂಡರ್ ಬರುತ್ತದೆ ಇದರಲ್ಲಿ ಕೊನೆಯ ಆರು ತಿಂಗಳ ಹಿಂದಿನ ದಿನಾಂಕವನ್ನು ಸೆಲೆಕ್ಟ್ ಮಾಡಿ set ಮಾಡಿ. (ಕೊನೆಯ ಆರು ತಿಂಗಳವರೆಗೆ ಮಾತ್ರ ಎಲ್ಲೆಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಕೆ ಆಗಿದೆ ಎನ್ನುವ ಮಾಹಿತಿ ಮಾತ್ರ ಈ ವಿಧಾನದ ಮೂಲಕ ತಿಳಿಯುತ್ತದೆ), Enter End date ನಲ್ಲಿ ಇಂದಿನ ದಿನಾಂಕವನ್ನು ಸೆಲೆಕ್ಟ್ ಮಾಡಿ Set ಕ್ಲಿಕ್ ಮಾಡಿ.
ಈ ಸುದ್ದಿ ನೋಡಿ:- ರೇಷನ್ ಕಾರ್ಡ್ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ.!
* ಬಲಭಾಗದಲ್ಲಿ fetch Authentication History ಎನ್ನುವುದನ್ನು ಕ್ಲಿಕ್ ಮಾಡಿದರೆ ಕಳೆದ ಆರು ತಿಂಗಳಿನಲ್ಲಿ ಅಥವಾ ನೀವು Start date ನಲ್ಲಿ ಸೆಲೆಕ್ಟ್ ಮಾಡಿಕೊಂಡ ದಿನಾಂಕ ದಿಂದ ಇಲ್ಲಿಯವರೆಗೆ ಎಲ್ಲೆಲ್ಲಿ ಆಧಾರ್ ಕಾರ್ಡ್ ಬಳಕೆ ಆಗಿದೆ ಮತ್ತು OTP, Biometric, demographic + OTP ಹೀಗೆ ಯಾವ ವಿಧಾನದಲ್ಲಿ ಬಳಕೆ ಆಗಿದೆ date & time ಸಮೇತ Status ಏನಾಗಿದೆ ಎನ್ನುವುದರ ಸ್ಪಷ್ಟ ಮಾಹಿತಿ ಲಿಸ್ಟ್ ಕೂಡ ಸಿಗುತ್ತದೆ, Pdf ಫಾರ್ಮೆಟ್ ನಲ್ಲಿ ಡೌನ್ಲೋಡ್ ಕೂಡ ಮಾಡಿ ಇಟ್ಟುಕೊಳ್ಳಬಹುದು.