Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
RBI ತನ್ನ ನಿಯಂತ್ರಣದಲ್ಲಿರುವ ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಲವಾರು ನಿಯಮಗಳನ್ನು ಸೇರಿದೆ. ಗ್ರಾಹಕರುಗಳ ಹಿತ ದೃಷ್ಟಿಯಿಂದ ಅವರ ಕೋರಿಕೆಗಳಂತೆ ಹೊಸ ನಿಯಮಗಳ ಸೇರ್ಪಡೆ ಹಾಗು ತಿದ್ದುಪಡಿ ಕೂಡ ಆಗುತ್ತಿರುತ್ತದೆ.
ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಅಥವಾ ಬಜೆಟ್ ಮಂಡನೆ ಸಮಯದಲ್ಲಿ RBI ನಿಂದ ಏನಾದರೂ ಬದಲಾವಣೆಯಾಗಿದೆಯೇ ಎಂದು ಕುತೂಹಲದ ಕಣ್ಣುಗಳಿಂದ ವೀಕ್ಷಿಸುವುದು ಸಹಜ. ಅದೇ ಪ್ರಕಾರವಾಗಿ ಬ್ಯಾಂಕ್‌ನಿಂದ ಸಾಲ ಪಡೆಯುವವರಿಗೆ RBI ಕಡೆಯಿಂದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಇದೆ.
ಈ ಸುದ್ದಿ ನೋಡಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಕೇವಲ 2 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಿ.!
RBI ನ ಈ ಸಾಲ ಮರುಪಾವತಿಗೆ ಸಂಬಂಧಿಸಿದ ಪರೀಷ್ಕೃತ ಹೊಸ ನಿಯಮವು ಈ ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ಇದೆ. ಕಳೆದು ತಿಂಗಳು ಜನವರಿ 26ರಂದು ನಡೆದ ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಷ್ಕೃತ ನ್ಯಾಯೋಚಿತ ಸಾಲ ವ್ಯವಸ್ಥೆ ಕುರಿತು ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡಿತು.
ಇಂದು ಬ್ಯಾಂಕ್ ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಕೂಡ ತಮ್ಮ ಆದಾಯದ ಬೆಳವಣಿಗೆಗಾಗಿ ಸಾಲದ ಡೀಫಾಲ್ಟ್‌ಗೆ ದಂಡದ ಶುಲ್ಕಗಳನ್ನು ವಿಧಿಸುತ್ತಿವೆ. ಇದು ಸಾಲ ಪಡೆದ ಗ್ರಾಹಕರಿಗೆ ಬಹಳ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಲಾಗದ ಗ್ರಾಹಕನಿಗೆ ಸಾಲದ ಹೊರೆ ಜೊತೆಗೆ ಈ ಹೆಚ್ಚಿನ ಹೊರೆಯನ್ನು ಹೊರುವುದು ಅಸಂಮಂಜಸ ಎನಿಸಿ RBI ಇದರಲ್ಲಿ ಬಗ್ಗೆ ಗಮನ ಹರಿಸಿದೆ.
ಈ ಸುದ್ದಿ ನೋಡಿ:- ಗ್ರಾಮ ಪಂಚಾಯಿತಿಯಲ್ಲಿ ಭರ್ಜರಿ ನೇಮಕಾತಿ, ಬರೋಬ್ಬರಿ 25,000 ಜನ ಮಿತ್ರ ಹುದ್ದೆಗಳು.! ಆಸಕ್ತರು ಅರ್ಜಿ ಸಲ್ಲಿಸಿ.!
ಕಳೆದ ವರ್ಷ ಆಗಸ್ಟ್ 18 ರಂದು RBI ಡಿಫಾಲ್ಟ್ ದಂಡ ಶುಲ್ಕಗಳ ನಿಯಮಗಳನ್ನು ತಿದ್ದುಪಡಿ ಮಾಡಿದೆ, ಇದರ ಅಡಿಯಲ್ಲಿ ಇನ್ನು ಮುಂದೆ ಬ್ಯಾಂಕುಗಳು ಅಥವಾ NBFC ಗಳು ನ್ಯಾಯ ಬದ್ಧವಾದ ಡೀಫಾಲ್ಟ್ ಶುಲ್ಕಗಳನ್ನು ಮಾತ್ರ ವಿಧಿಸಲು ಸಾಧ್ಯವಾಗುತ್ತದೆ. ಈ ಬದಲಾದ ನಿಯಮಗಳನ್ನು ಅಳವಡಿಸಿಕೊಳ್ಳಲು ಆರ್‌ಬಿಐ ಹಣಕಾಸು ಸಂಸ್ಥೆಗಳಿಗೆ ಏಪ್ರಿಲ್ ವರೆಗೆ ಕಾಲಾವಕಾಶವನ್ನು ಕೂಡ ನೀಡಿದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQs) ಗುಂಪಿನಲ್ಲಿ, ಅಸ್ತಿತ್ವದಲ್ಲಿರುವ ಸಾಲಗಳ ಸಂದರ್ಭದಲ್ಲಿಯೂ ಸಹ ಅತಿ ಹೆಚ್ಚು ಬಾರಿ ಕೇಳಲ್ಪಡುತ್ತಿದ್ದ ಪ್ರಶ್ನೆ ಇದೆ ಆಗಿತ್ತು. ಈ ಸೂಚನೆಗಳು ಏಪ್ರಿಲ್ 1, 2024 ರಿಂದ ಅನ್ವಯವಾಗುತ್ತವೆ ಎಂದು RBI ಉತ್ತರಿಸುತ್ತಿದೆ.
ಈ ಸುದ್ದಿ ನೋಡಿ:- ತಾಯಿ ಕಾರ್ಡ್ ಎಲ್ಲಿ ಮಾಡಿಸಬೇಕು.? ಏನೇನು ದಾಖಲೆ ಬೇಕು.? ತಾಯಿ ಕಾರ್ಡ್ ಉಪಯೋಗವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಏಪ್ರಿಲ್ ಒಂದರಿಂದ ನಿಯಮ ಜಾರಿಯಾದರೂ ಮೂರು ತಿಂಗಳ ವಿಸ್ತರಣೆ ಮಾಡಿ ಜೂನ್ ವೇಳೆಗೆ ಬರುವ ನವೀಕರಣ ದಿನಾಂಕದಂದು ಹೊಸ ದಂಡ ಶುಲ್ಕ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಖಚಿತ ಮಾಡಲಾಗುವುದು. ಸಾಲ ಮರುಪಾವತಿಯಲ್ಲಿ ಡೀಫಾಲ್ಟ್‌ನ ಸಂದರ್ಭದಲ್ಲಿ ಆಗಸ್ಟ್ 2023 ರ ಮಾರ್ಗಸೂಚಿಗಳು ಸಹ ಅನ್ವಯಿಸುತ್ತವೆ ಎಂದು RBI ಹೇಳಿದೆ.
ಅಂತಹ ಡೀಫಾಲ್ಟ್ ಮರುಪಾವತಿ ಒಪ್ಪಂದದ ಪ್ರಮುಖ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಾಗಿದ್ದರೆ ದಂಡ ಶುಲ್ಕವನ್ನು ವಿಧಿಸಬಹುದು. ಆದರೆ ಈ ದಂಡದ ಶುಲ್ಕವನ್ನು ಡೀಫಾಲ್ಟ್ ಮೊತ್ತಕ್ಕೆ ಮಾತ್ರ ವಿಧಿಸಬಹುದು ಮತ್ತು ಅದು ನ್ಯಾಯಬದ್ಧವಾಗಿರಬೇಕು ಎಂದು ಸೂಚನೆ ಕೊಟ್ಟಿದೆ.
ಈ ಸುದ್ದಿ ನೋಡಿ:- ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!
IBA ಮತ್ತು NESL ಗಳು ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದರ ಸಹಾಯದಿಂದ ಸಾಲದ ಸುಸ್ತಿದಾರರನ್ನು ಫಾಸ್ಟ್ ಟ್ರ್ಯಾಕ್ ರೀತಿಯಲ್ಲಿ ಡಿಫಾಲ್ಟರ್ ಎಂದು ಘೋಷಿಸಲು ಸುಲಭ. ವಂಚನೆ ಎಂದು ಗುರುತಿಸಲಾದ ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಮಾಹಿತಿ.
ಇದಕ್ಕೆ ಸಂಬಂಧಿಸಿದಂತೆ ಗ್ರಾಹಕನಿಗೆ ಬೇಕಾಗಿರುವ ಸೇವೆಗಳ ವಿವರವನ್ನು ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯಿಂದ ಒದಗಿಸುವುದು ಸರಳ. NESL ನೀಡುತ್ತಿರುವ ಡೇಟಾ ಪ್ರಕಾರ, ದೇಶದಲ್ಲಿ ವಿವಿಧ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಸೇರಿ ಢಿಫಾಲ್ಟ್ ಎಂದು ಘೋಷಿಸಿಕೊಂಡಿರುವ ಸಾಲದ ಮೊತ್ತ 100 ಕೋಟಿ ವರೆಗಿದೆ.