ಡಯಾಬಿಟಿಸ್ ಎಂದರೆ ಸಕ್ಕರೆ ಕಾಯಿಲೆ, ಸಕ್ಕರೆ ಕಾಯಿಲೆಯು ದೇಹದಲ್ಲಿ ಹೆಚ್ಚಾಗುವ ಕಾರಣದಿಂದ ಬರುತ್ತದೆ ಎನ್ನುವುದು ಜನರು ತಿಳಿದುಕೊಂಡಿರುವ ಮಾಹಿತಿ. ಆದರೆ ಇದೇ ಪೂರ್ತಿ ಸತ್ಯವಲ್ಲ, ಡಯಾಬಿಟಿಸ್ ನಲ್ಲಿ ಎರಡು ವಿಧ ಇದೆ.
ಟೈಪ್ ಒನ್ ಡಯಾಬಿಟಿಸ್ (Type 1) ಮತ್ತು ಟೈಪ್ ಟು ಡಯಾಬಿಟೀಸ್ (Type 2). ಇದರಲ್ಲಿ ಟೈಪ್ 1 ಡಯಾಬಿಟಿಸ್ ನಾವು ತಿನ್ನುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚಾಗಿದ್ದಾಗ ದೇಹದಲ್ಲಿ ಗ್ಲುಕೋಸ್ ಶೇಖರಣೆಯಾಗಿ ಗ್ಲೈಕೋಸ್ ಆಗದೆ ಇದ್ದಾಗ ಉಂಟಾಗುವ ದೇಹದ ಅಬ್ ನಾರ್ಮಲಿಟಿ ಆಗಿದೆ.
ಈ ಟೈಪ್ 1 ಡಯಾಬಿಟೀಸ್ ಗೆ ಇನ್ಸುರೆನ್ಸ್ ಕೊಡಬೇಕಾಗಿರುವುದು, ಮತ್ತು ಇದು ಈಗಿನ ಕಾಲದಲ್ಲಿ ಹತ್ತಿಪ್ಪತ್ತು ವರ್ಷದವರಲ್ಲೂ ಕೂಡ ಕಾಣಿಸಿಕೊಂಡು ಗಾಬರಿಗೊಳಿಸುತ್ತದೆ. ಇದು ಅನುವಂಶಿಯವಾಗಿ ಬರುವ ಸಾಧ್ಯತೆ 3% – 4% ಮಾತ್ರ ಇರುತ್ತದೆ.
ಈ ಸುದ್ದಿ ಓದಿ:- ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
ಇದರ ಲಕ್ಷಣಗಳು ಅಷ್ಟೇನು ಗೊತ್ತೇ ಆಗುವುದಿಲ್ಲ ಅದರಲ್ಲೂ ಮಕ್ಕಳ ವಿಚಾರವಾಗಿ ಅನೇಕ ಬಾರಿ ಮಕ್ಕಳಿಗೆ ಯಾವ ಕಾಯಿಲೆ ಬಂದಿದೆ ಎಂದು ಗೊತ್ತಾಗಲಿಲ್ಲ ಎನ್ನುವ ಸಂದರ್ಭದಲ್ಲಿ ಶುಗರ್ ಟೆಸ್ಟ್ ಮಾಡಿಸುವುದು ಕೂಡ ಒಳ್ಳೆಯದು. ದೊಡ್ಡವರಿಗೆ ಕೂಡ ಬಹಳ ನಿಧಾನವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಹಾಗೆಯೇ ಈ ಟೈಪ್ ಟು ಡಯಾಬಿಟಿಸ್ ಕಾರ್ಬೋಹೈಡ್ರೇಟ್ಸ್ ನಂತೆಯೇ ದೇಹಕ್ಕೆ ಬೇಕಾದ ಮತ್ತೊಂದು ಪೋಷಕಾಂಶವಾದ ಫ್ಯಾಟ್ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ನಂತರ ಉಂಟಾಗುವ ಡಯಾಬಿಟಿಸ್ ಆಗಿದೆ. ಇದು ಅನುವಂಶೀಯವಾಗಿ ಬರುವ ಸಾಧ್ಯತೆ 50% – 60% ಇರುತ್ತದೆ ಮತ್ತು ನಿಮ್ಮ ತಂದೆ ಹಾಗೂ ತಾಯಿ ಎರಡು ಕಡೆಯವರಿಗೆ ಶುಗರ್ ಇದ್ದರೆ ಈ ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇರಲೇಬೇಕು.
ತಂದೆಗೆ 60 ವಯಸ್ಸಿಗೆ ಡಯಾಬಿಟಿಕ್ ಬಂದಿದ್ದರೆ ನಿಮಗೆ 45ನೇ ವಯಸ್ಸಿಗೆ ಬರುವ ಸಾಧ್ಯತೆಯೂ ಕೂಡ ಇರುತ್ತದೆ. ನಮ್ಮ ದೇಶದಲ್ಲಿ ನಡೆದ ಸರ್ವೆ ಒಂದರ ಪ್ರಕಾರವಾಗಿ ಭಾರತ ಡಯಾಬಿಟಿಸ್ ನಲ್ಲಿ ಎರಡನೇ ಸ್ಥಾನದಲ್ಲಿದೆ ಆದರೆ ಈ ಸರ್ವೆಗೆ ಎಷ್ಟು ಜನ ಒಳಗಾಗುತ್ತಾರೆ ಎನ್ನುವುದು ಪ್ರಶ್ನೆ.
ಈ ಸುದ್ದಿ ಓದಿ:- ಅಂತಿಮ ಮತದಾರರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ವೋಟ್ ಹಾಕಲು ಅವಕಾಶ.! ನಿಮ್ಮ ಹೆಸರು ಇದೆಯೇ ಹೀಗೆ ಚೆಕ್ ಮಾಡಿ.!
ಯಾಕೆಂದರೆ ಹಲವು ಜನರು ತಮಗೆ ಲಕ್ಷಣಗಳು ಗೊತ್ತಾಗುವವರೆಗೂ ಅಥವಾ ಡಾಕ್ಟರ್ ಹೇಳುವವರೆಗೂ ಇದರ ಪರೀಕ್ಷೆಗೆ ಒಳಪಡುವುದೇ ಇಲ್ಲ ತುಂಬಾ ಕಾನ್ಫಿಡೆಂಟ್ ಆಗಿ ಇರುತ್ತಾರೆ. ಹಾಗಾಗಿ ನಿಜವಾಗಿ ಏನಾದರೂ ನಡೆದರೆ ಭಾರತವು ಡಯಾಬಿಟಿಕ್ ರಾಜಧಾನಿ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇರಲಾರದು.
ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಡಯಾಬಿಟಿಕ್ ಪೇಷಂಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇದಕ್ಕೆ ಕಾರಣ ಏನಿರಬಹುದು ಎನ್ನುವುದಕ್ಕೆ ಕಂಡುಕೊಂಡಿರುವ ಉತ್ತರ ಹೀಗಿದೆ. 500 ವರ್ಷಗಳ ಹಿಂದಿನ ನಮ್ಮ ಪೂರ್ವಿಕರ ಲೈಫ್ ಸ್ಟೈಲ್ ಹಾಗೂ ಫುಡ್ ಹ್ಯಾಬಿಟ್ ಹೇಗಿತ್ತೆಂದರೆ ಅವರು ಆಹಾರ ಸಿಕ್ಕಿದಾಗ ತಿಂದು ಇಲ್ಲದೆ ಇದ್ದಾಗ ವಾರಗಟ್ಟಲೇ ಹಸಿದು ಇರುತ್ತಿದ್ದರು ಜೊತೆಗೆ ಬರುತ್ತಾ ಇದು ಹೇಗಾಯಿತು ಎಂದರೆ.
ಮಳೆ ಬಿದ್ದ ವರ್ಷದಲ್ಲಿ ಸುಭೀಕ್ಷವಾಗಿ ಮತ್ತು ಮಳೆ ಇಲ್ಲದ ವರ್ಷದಲ್ಲಿ ಸ್ವಲ್ಪ ಕಡಿಮೆ ಆಹಾರದಲ್ಲೇ ಹೊಂದಿಕೊಂಡು ಬದುಕುತ್ತಿದ್ದರು. ಆದರೀಗ ನಾವು 3 ಹೊತ್ತು ಕೂಡ ಒಳ್ಳೇ ಆಹಾರವನ್ನೇ ತಿನ್ನುತ್ತಿದ್ದೇವೆ, ಆದರೆ ನಮ್ಮ ದೇಹ ಪ್ರಕೃತಿ ಹೇಗಿದೆ ಎಂದರೆ ನಾವು ಕಡಿಮೆ ಊಟ ತಿಂದರೂ ನಮ್ಮ ದೇಹ ಅದನ್ನು ಬೊಜ್ಜಿಗೆ ಪರಿವರ್ತಿಸಿ ಕೊಳ್ಳುತ್ತಿರುವುದರಿಂದ ಶುಗರ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!
ಇದು ಹೆಚ್ಚಾದರೆ ಮೊದಲು ಹಾನಿ ಮಾಡುವುದೇ ಸಣ್ಣ ರಕ್ತ ಕಣಗಳಿಗೆ ಹೀಗಾಗಿ ಶುಗರ್ ಬಂದವರಿಗೆ ಕಣ್ಣಿನ ಸಮಸ್ಯೆ, ಹೃದಯದ ಸಮಸ್ಯೆ, ನಿಧಾನವಾಗಿ BP ಕಂಟ್ರೋಲ್ ತಪ್ಪುವುದು. ಇತ್ಯಾದಿ ಇತ್ಯಾದಿಯಾಗಿ ಎಲ್ಲ ಆರೋಗ್ಯ ಸಮಸ್ಯೆಗಳು ಬರುತ್ತವೆ ಇದಕ್ಕೆ ಕಾರಣ ಪರಿಹಾರ ಏನು? ಮತ್ತು ಈ ವಿಚಾರವಾಗಿ ಇನ್ನಷ್ಟು ಮಾಹಿತಿ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.