ದೇವಸ್ಥಾನಕ್ಕೆ ಅನೇಕರು ತಮ್ಮ ಆಸ್ತಿಗಳನ್ನು ದಾನ ಕೊಡುತ್ತಾರೆ ಮತ್ತು ಸರ್ಕಾರಗಳಿಂದ ಕೂಡ ದೇವಸ್ಥಾನಕ್ಕೆ ಅನುದಾನಗಳು ಹೋಗುತ್ತವೆ. ಈ ಸಮಯದಲ್ಲಿ ಆಸ್ತಿ, ಜಾಗಗಳು ದೇವಸ್ಥಾನಕ್ಕೆ ಹೋಗುತ್ತವೆ. ಆದರೆ ಕಲ್ಲಿನ ವೀಗ್ರಹದ ರೂಪದಲ್ಲಿರುವ ದೇವರು ಇವುಗಳ ಒಡೆಯನಾಗಿ ಅದನ್ನು ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ಅದಕ್ಕೊಂದು ಮಂಡಳಿ ಅಥವಾ ವ್ಯಕ್ತಿಯ ನೇಮಕ ಆಗಿರುತ್ತದೆ.
ದೇವರ ಹೆಸರಿನಲ್ಲಿರುವ ಆಸ್ತಿಯ ಪರಭಾರೆ ನೋಡಿಕೊಂಡು ಆ ಆಸ್ತಿಯ ಮೂಲದಿಂದ ಬಂದ ಹಣದಿಂದ ಮೂಲಕ ದೇವಸ್ಥಾನ ಅಭಿವೃದ್ಧಿ ಕೆಲಸ ಮುಂತಾದವುಗಳನ್ನು ಮಾಡಿಕೊಂಡು ಹೋಗಲು ಅವರನ್ನು ನೇಮಿಸಲಾಗಿರುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಈ ರೀತಿ ದೇವಸ್ಥಾನದ ಆಸ್ತಿಗಾಗಿ ತಮ್ಮ ತಮ್ಮಲ್ಲೇ ಕಿತ್ತಾಟಗಳು ನಡೆದುಕೊಂಡು ದೇವಸ್ಥಾನದ ಮಂಡಳಿಯವರೇ ಪರಸ್ಪರ ಹೊಡೆದಾಟ ಮಾಡಿಕೊಂಡಿರುವುದನ್ನು ಕೂಡ ನೋಡಿದ್ದೇವೆ.
ಹಾಗಾದರೆ ದೇವರ ಹೆಸರಿನಲ್ಲಿ ಇರುವ ಆಸ್ತಿಯ ನಿಜವಾದ ಹಕ್ಕುದಾರರು ಯಾರು? ಇದೆಲ್ಲ ಪೂಜಾರಿಗೆ ಸೇರಬೇಕಾ ಎನ್ನುವುದ ಕುರಿತು ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ? ಈ ರೀತಿ ಯಾವುದೇ ಆಸ್ತಿ ಕುರಿತು ಸಮಸ್ಯೆ ಉಂಟಾದಾಗ ಎಲ್ಲರೂ ನ್ಯಾಯಾಲಗಳ ಮೊರೆ ಹೋಗುತ್ತಾರೆ ಮತ್ತು ಅಂತಿಮವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ಕೊಡುವ ತೀರ್ಪೇ ಸುಪ್ರೀಂ ಆಗಿರುತ್ತದೆ, ಅದಕ್ಕೆ ಎಲ್ಲರೂ ತಲೆಬಾಗಬೇಕು.
ದೇವಸ್ಥಾನದ ಆಸ್ತಿಯ ಕುರಿತು ಏನು ಹೇಳಿದೆ ಎಂದು ನೋಡುವುದಾದರೆ ದೇವರ ಆಸ್ತಿಗಳಿಗೆ ಪೂಜಾರಿ ಸ್ವಾಮಿ ಅಲ್ಲ ಎನ್ನುವುದನ್ನು ಹೇಳಿದೆ. ಇದರ ಅರ್ಥ ದೇವರ ಹೆಸರಿನಲ್ಲಿ ಯಾವುದೇ ಆಸ್ತಿ ಭಕ್ತಾದಿಗಳಿಂದ ದಾನವಾಗಿ ಬಂದರು ಅಥವಾ ಸರ್ಕಾರದಿಂದ ಅನುದಾನದ ರೂಪದಲ್ಲಿ ಸಿಕ್ಕಿದ್ದರೂ ಕೂಡ ಇದಕ್ಕೆ ಬರುವ ಎಲ್ಲಾ ಆಸ್ತಿಗೂ ದೇವರೇ ಒಡೆಯರಾಗಿರುತ್ತಾರೆ.
ಅದರ ನಿರ್ವಹಣೆ ಅಷ್ಟೇ ಬೇರೆಯವರಿಗೆ ಕೊಡಲಾಗಿರುತ್ತದೆ ಅದು ಶಾಶ್ವತವಾಗಿ ಅಲ್ಲ ತಾತ್ಕಾಲಿಕವಾಗಿ. ಎಂದಿಗೂ ಅ ಆಸ್ತಿಗಳಿಗೆ ದೇವರೇ ಅದರ ಶಾಶ್ವತ ಒಡೆಯ ಎನ್ನುವ ತೀರ್ಪನ್ನು ನೀಡಿದೆ. ದೇವಸ್ಥಾನದ ಆರ್ಥಿಕ ವಿಚಾರಗಳ ಪರಾಬಾರೆ ನಡೆಸಿಕೊಂಡು ಹೋಗಲು, ದೇಗುಲದ ನಿರ್ವಹಣೆಯನ್ನು ನಡೆಸಿಕೊಂಡು ಹೋಗಲು ಸೇವಕನಂತೆ ಒಬ್ಬರ ಅವಶ್ಯಕತೆ ಇರುತ್ತದೆ.
ಹಾಗಾಗಿ ದೇವರ ಸೇವಕನಂತೆ ಪೂಜಾರಿಗಳು ಇರುತ್ತಾರೆ ಹೊರತು ಅವರು ಎಂದು ದೇವರ ಆಸ್ತಿಗಳಿಗೆ ಒಡೆಯರಾಗಲು, ಅಧಿಕಾರ ಹೊಂದಲು ಸಾಧ್ಯವಿಲ್ಲ. ಜೊತೆಗೆ ಭೂ ಮಾಲೀಕತ್ವದ ಸಂದರ್ಭದಲ್ಲಿ ಕೂಡ ದೇವರ ಹೆಸರನ್ನೇ ಉಲ್ಲೇಖಿಸಿ ಪತ್ರಗಳನ್ನು ಮಾಡಬೇಕು ಹೊರತು ದೇವಾಲಯದಲ್ಲಿ ಕೆಲಸ ನಿರ್ವಹಿಸುವ ಪೂಜಾರಿಗಳ ಹೆಸರನ್ನಾಗಲಿ ಮತ್ತು ಇನ್ನಿತರರ ಹೆಸರನ್ನಾಗಲಿ ಉಲ್ಲೇಖಿಸುವಂತಿಲ್ಲ.
ಯಾಕೆಂದರೆ ಒಂದು ವೇಳೆ ಆ ವ್ಯಕ್ತಿಯ ಹೆಸರಿನಲ್ಲಿ ದಾಖಲೆಗಳಾದರೆ ಮುಂದೆ ಒಂದು ದಿನ ಇದಕ್ಕಾಗಿ ವ್ಯಕ್ತಿಯ ಕುಟುಂಬದ ವಾರಸ್ದಾರರು ತಕರಾರು ತೆಗೆಯುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಎಲ್ಲಾ ದಾಖಲೆಗಳನ್ನು ಆಸ್ತಿ ಯಾವ ದೇವಾಲಯಕ್ಕೆ ಸೇರಿದೆಯೋ ಆ ದೇವಾಲಯದ ಪ್ರಧಾನ ದೇವರ ಹೆಸರಿನಲ್ಲಿಯೇ ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಆಸ್ತಿಗಳನ್ನು ಬಳಸಿಕೊಂಡು ಅದನ್ನು ಬಾಡಿಗೆ ಕೊಟ್ಟು ಅಥವಾ ಉಪ ಬಾಡಿಗೆ ಕೊಟ್ಟು ಬಂದ ಹಣವನ್ನು ಕೂಡ ದೇವಸ್ಥಾನದ ಏಳಿಗೆಗಾಗಿ ಬಳಸದೆ ಸ್ವಂತ ಖರ್ಚಿಗಾಗಿ ಬಳಸಿಕೊಂಡು ಮೋಸ ಮಾಡುವವರನ್ನು ಕಂಡಿದ್ದೇವೆ. ಹಾಗಾಗಿ ಭೂಮಿ ಒಡೆತನವನ್ನು ಕೂಡ ಈ ರೀತಿ ವ್ಯಕ್ತಿ ಒಬ್ಬರ ಹೆಸರಿಗೆ ಬಿಟ್ಟುಕೊಟ್ಟರೆ ಅವರು ಮುಂದೆ ಒಂದು ದಿನ ಅದನ್ನು ಕಸಿದುಕೊಳ್ಳಬಹುದು ಎನ್ನುವ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ನ ದ್ವಿ ಪೀಠ ಸದಸ್ಯ ಇಂತಹದೊಂದು ಐತಿಹಾಸಿಕ ತೀರ್ಪನ್ನು ಹೊರಡಿಸಿ ದೇವಾಲಯದ ಆಸ್ತಿ ಹಕ್ಕುಗಳನ್ನು ರಕ್ಷಿಸಿದೆ.