ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಆರೋಗ್ಯವಂತವಾಗಿ ಜೀವಿಸಬೇಕು ಎನ್ನುವ ಇಚ್ಛೆ ಇದೆ. ಆದರೆ ನಾನಾ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅನುವಂಶಿಯ ಖಾ’ಯಿ’ಲೆಗಳು ಅಥವಾ ವಾತಾವರಣದ ವ್ಯತ್ಯಾಸ ಹೊರತುಪಡಿಸಿ ಅನೇಕ ಡಿಸ್ ಆರ್ಡರ್ ಗಳಿಗೆ ನಮ್ಮ ಸ್ವಯಂ ಕೃತ್ಯ ಅಪರಾಧಗಳೇ ಕಾರಣವಾಗಿದೆ ಎನ್ನಬಹುದು.
ಯಾಕೆಂದರೆ ಆಧುನಿಕ ಜೀವನಶೈಲಿ ಅಬ್ಬರದಲ್ಲಿ ನಾವು ಬದುಕಿನ ರೀತಿಯನ್ನು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಯದ್ವಾ ತದ್ವಾ ರೂಪಿಸಿಕೊಂಡಿದ್ದೇವೆ ಇವುಗಳ ಪರಿಣಾಮವಾಗಿ ನಮ್ಮ ಆರೋಗ್ಯ ಮಟ್ಟ ಕುಸಿಯುತಿದ್ದು ಜೀವಿತಾವಧಿ ಕಡಿಮೆ ಆಗುತ್ತಿದೆ. ಎಲ್ಲಾ ದೇಶಗಳಿಗೂ ಹೋಲಿಸಿಕೊಂಡರೆ ಮಲೇಷಿಯಾ ದೇಶದವರು ಬಹಳ ಆರೋಗ್ಯವಾಗಿ ಬದುಕುತ್ತಿದ್ದಾರೆ ಇದು ಹೇಗೆ ಸಾಧ್ಯ ಎನ್ನುವುದರ ಕೆಲ ಪ್ರಮುಖ ವಿಷಯಗಳನ್ನು ಈ ಅಂಕಣದಲ್ಲಿ ಪ್ರಸ್ತಾಪಿಸುತ್ತಿದ್ದೇವೆ.
ಮಲೇಶಿಯಾ ದೇಶದವರು ಎಷ್ಟು ಫಿಟ್ ಅಂಡ್ ಫೈನ್ ಆಗಿದ್ದಾರೆ ಎಂದರೆ ಮಲೇಷಿಯಾ ದೇಶದ ಪೂರ್ತಿ ಓಡಾಡಿದರು XXL ಬಟ್ಟೆಗಳು ಸಿಗುವುದಿಲ್ಲ. ಯಾಕೆಂದರೆ ಅಲ್ಲಿರುವ ಎಲ್ಲಾ ಪುರುಷ ಹಾಗೂ ಮಹಿಳೆಯರು L ಸೈಜ್ ನ ಒಳಗೆ ಇದ್ದಾರೆ. ಹಾಗಾಗಿ XXL ಮಾತ್ರವಲ್ಲ XL ಸೈಜ್ ಸಿಗುವುದು ಕ’ಷ್ಟ’ವೇ ಜೊತೆಗೆ ಮಲೇಷಿಯಾ ದೇಶದಲ್ಲಿ ಎಷ್ಟೇ ಹುಡುಕಾಡಿದರೂ ಒಂದು ಹನಿ ನೀರು ಕೂಡ ಫ್ರೀ ಆಗಿ ಸಿಗುವುದಿಲ್ಲ.
300ml ನೀರಿಗೆ ಭಾರತದ ಬೆಲೆಯಲ್ಲಿ 30 ರಿಂದ 40 ರೂಪಾಯಿ ಕೊಡಬೇಕು. ಇದರ ಅರ್ಥ ಅವರ ಬದುಕು ದುಬಾರಿ ಎಂದಲ್ಲ ಅವರು ಬೆಲೆ ಕೊಟ್ಟರು ಶುದ್ಧವಾದದನ್ನೇ ತೆಗೆದುಕೊಳ್ಳುತ್ತಿದ್ದಾರೆ ಆದರೆ ನಾವು ನಮ್ಮ ದೇಶದಲ್ಲಿ ಫ್ರೀಯಾಗಿ ಕೊಟ್ಟರೆ ಸಿಕ್ಕ ಸಿಕ್ಕದನ್ನೆಲ್ಲ ತಿನ್ನಲು ಕುಡಿಯಲು ಶುರು ಮಾಡುತ್ತೇವೆ, ಅವರು ಅಷ್ಟೊಂದು ಹೆಲ್ತ್ ಕಾನ್ಶಿಯಸ್ ಆಗಿ ಬದುಕುತ್ತಿದ್ದಾರೆ.
ಮಲೇಷಿಯ ದೇಶದವರ ಆಹಾರ ಪದ್ಧತಿ ಕೂಡ ಅವರ ಹಿಂದಿನ ರವರು ರೂಡಿಸಿಕೊಂಡಿದ್ದ ಆಹಾರ ಪದ್ಧತಿಯಲ್ಲಿ ಇದ್ದು ಬಹಳ ಅವೈಜ್ಞಾನಿಕವಾಗಿ ಬದಲಾಗಿಲ್ಲ, ಅವರು ಈಗಲೂ ಅಡುಗೆ Palm oil ಬಳಸುತ್ತಾರೆ ಆದರೆ ಆ Palm oil ಕೂಡ ಶುದ್ಧವಾದ Palm oil ಆಗಿರುವುದರಿಂದ ಹೆಚ್ಚು ಹೆಲ್ತ್ ಇಶ್ಯೂಸ್ ಆಗುತ್ತಿಲ್ಲ.
ಮಲೇಶಿಯಾ ದೇಶದಲ್ಲಿ ಇರುವ ಟಿವಿ ಚಾನೆಲ್ ಗಳು ಕೇವಲ ಐದರಿಂದ ಆರು ಅಷ್ಟೇ, ಹೀಗಾಗಿ ಹೆಚ್ಚಿನ ಜನರು ಪರಸ್ಪರ ಒಬ್ಬರಿಗೊಬ್ಬರು ಮಾತನಾಡುತ್ತಾ ಸಮಯ ಕಳೆಯಲು ಇಚ್ಚಿಸುತ್ತಾರೆ. ಜೊತೆಗೆ ಅಲ್ಲಿ ಬರುವ ದಿನಪತ್ರಿಕೆ 40ರಿಂದ 50 ಪುಟ ಇರುತ್ತದೆ. ಹೀಗಾಗಿ ಅವರಲ್ಲಿ ಓದುವ ಅಭ್ಯಾಸ ಇರುವುದರಿಂದ ಅವರು ಮಾನಸಿಕವಾಗಿ ಹೆಚ್ಚು ಖುಷಿಯಾಗಿರುತ್ತಾರೆ ಮತ್ತು ಹೆಚ್ಚು ಒಳ್ಳೆಯ ವಿಷಯಗಳನ್ನು ಓದುತ್ತಾರೆ ಅಳವಡಿಸಿಕೊಳ್ಳುತ್ತಾರೆ.
ಅಲ್ಲಿನ ಜನರ ವಸ್ತ್ರಶೈಲಿಯೂ ಕೂಡ ಬಹಳ ಸಿಂಪಲ್ ಆಗಿ ಇರುತ್ತದೆ. ಮುಸ್ಲಿಂ ದೇಶ ಆಗಿರುವುದರಿಂದ ಪುರುಷರು ಬಿಳಿ ಅಥವಾ ಬ್ರೌನ್ ಬಟ್ಟೆ ಮಾತ್ರ ಧರಿಸುತ್ತಾರೆ. ಮಹಿಳೆಯರು ಬಣ್ಣದ ಬಟ್ಟೆಗಳನ್ನು ಧರಿಸಿದರು ಕೂಡ ಅದು ಹೆಚ್ಚು ಗಾಢವಾಗಿರುವುದಿಲ್ಲ, ಒಟ್ಟಾರೆಯಾಗಿ ಎಲ್ಲರೂ ಕೂಡ ನೋಡುವುದಕ್ಕೆ ಸಿಂಪಲ್ ಲಿವಿಂಗ್ ಹೈ ಥಿಂಕಿಂಗ್ ಎನಿಸುತ್ತಾರೆ ಹೆಚ್ಚಿನ ಜನರು ವಾಕಿಂಗ್ ಮಾಡುತ್ತಾರೆ.
ಯಾಕೆಂದರೆ ಅಲ್ಲಿ ಲೇಬರ್ ಬಿಟ್ಟರೆ ಬೇರೆ ಅವರಿಗೆ ಟೂ ವೀಲರ್ ಅನುಮತಿ ಇಲ್ಲ. ಸ್ವಂತ ಕಾರಿನಲ್ಲಿ ಪ್ರಯಾಣಿಸಬೇಕು ಅಥವಾ ಪಬ್ಲಿಕ್ ಟ್ರಾನ್ಸ್ಪೋರ್ಟ್ ನಲ್ಲಿ ಪ್ರಯಾಣಿಸಬೇಕು. ಪ್ರತಿ ಶನಿವಾರ ಹಾಗೂ ಭಾನುವಾರ ಮಲೇಶಿಯಾ ದೇಶದ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡುವುದೇ ಒಂದು ಖುಷಿ. ಯಾಕೆಂದರೆ, ವಾರಪೂರ್ತಿ ತನ್ನ ಜೀವನ ನಿರ್ವಹಣೆಗಾಗಿ ನಾನಾ ಜಂಜಾಟಗಳಲ್ಲಿ ತೊಡಗಿದ್ದ ಜನರು ವಾರಂತ್ಯಗಳಲ್ಲಿ ತಮ್ಮ ಇಷ್ಟದ ವಿಷಯಗಳಲ್ಲಿ ತೊಡಗಿಕೊಂಡಿರುತ್ತಾರೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯು ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು ಆತನ ಕುಟುಂಬವು ಸಂಗೀತದ ಹಿನ್ನೆಲೆ ಹೊಂದಿದೆ ಎಂದರೆ ತನ್ನ ದುಡಿಮೆ ಮುಗಿದ ತಕ್ಷಣ ವ್ಯಕ್ತಿ ಸಂಗೀತ ಅಭ್ಯಾಸದಲ್ಲಿ ತೊಡಗುತ್ತಾನೆ. ಯಾರು ಕೇಳಿಸಿಕೊಳ್ಳಲಿ, ಬಿಡಲಿ, ಬೆಲೆ ಕೊಡಲಿ, ಕೊಡದೆ ಇರಲಿ ವಾರಾಂತ್ಯದಲ್ಲಿ ಅದನ್ನು ಎಲ್ಲರ ಮುಂದೆ ಪ್ರದರ್ಶಿಸಿ ತಾನು ಆನಂದ ಪಡುತ್ತಾನೆ Soul Satisfaction ಗಾಗಿ ಅವರು ಹೀಗೆ ಮಾಡುತ್ತಾರೆ ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಈ ಮೂಲಕ ದೈಹಿಕ ಆರೋಗ್ಯವೂ ಕೂಡ ಚೆನ್ನಾಗಿ ಇರುತ್ತದೆ.