ಬಡವರ ಅಭ್ಯುದಯಕ್ಕಾಗಿ ಕೇಂದ್ರವು ಈವರೆಗೆ ಅನೇಕ ಅಭಿವೃದ್ಧಿ ಕಲ್ಯಾಣ ಇಲಾಖೆ ಯೋಜನೆಗಳನ್ನು ಜಾಹಿಗೊಳಿಸುತ್ತಿದೆ. ದೇಶದ ಮಹಿಳೆಯರು ಈಗ ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ರಾಜಕೀಯ ಶಿಕ್ಷಣ ವೈದ್ಯಕೀಯ ಮತ್ತು ವ್ಯಾಪರ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಇದೀಗ ವ್ಯಾಪಾರ ವಲಯದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿ ಸಲು ಕೇಂದ್ರವು ಅತ್ಯುತ್ತಮವಾದ ಅವಕಾಶವನ್ನು ಒದಗಿಸುತ್ತದೆ. 88 ಬಗೆಯ ವ್ಯಾಪಾರ ಮಾಡುವವರಿಗೆ 3 ಲಕ್ಷ ದರದಲ್ಲಿ ಹಣ ನೀಡುತ್ತದೆ. ಇದರಲ್ಲಿ ಶೇಕಡ 50ರಷ್ಟು ಪ್ರತಿಶತ ಹಣ ಸಬ್ಸಿಡಿಯಾಗಿರುತ್ತದೆ. ಹೀಗೆ ಇಷ್ಟೆಲ್ಲಾ ಪ್ರಯೋಜನವನ್ನುಂಟು ಮಾಡುತ್ತಿರುವಂತಹ ಯೋಜನೆ ಯಾವುದು ಎಂದು ನೋಡುವುದಾದರೆ ಉದ್ಯೋಗಿನಿ ಯೋಜನೆ.
ಇದು ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಹಣ ಸಹಾಯಧನ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಹಾಗೂ ಈ ಅರ್ಜಿ ಸಲ್ಲಿಸಬೇಕಾದರೆ ಯಾವುದೆಲ್ಲ ದಾಖಲಾತಿಗಳನ್ನು ಮಹಿಳೆಯರು ಹೊಂದಿರಬೇಕಾಗುತ್ತದೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಮನೆ ಕಟ್ಟುವಾಗ ಎಷ್ಟೆಲ್ಲಾ ಮೋ’ಸಗಳು ನಡೆಯುತ್ತೆ ಗೊತ್ತಾ? ಮೊದಲೇ ತಿಳಿದುಕೊಂಡರೆ ನಂತರ ಶ್ರಮ ಪಡುವುದು ತಪ್ಪುತ್ತದೆ.!
ಕೇಂದ್ರ ಸರ್ಕಾರವು ಮಹಿಳೆಯರ ಅಭಿವೃದ್ಧಿಗೆ ಇದುವರೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಉದ್ಯಮ ವಲಯದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಲು ಉದ್ಯೋಗಿನಿ ಯೋಜನೆ ಎನ್ನುವುದು ಜಾರಿಯಲ್ಲಿದ್ದು. ಈ ಯೋಜನೆಯು ದೇಶದ ಮಹಿಳೆಯರು ವ್ಯಾಪಾರ ಕ್ಷೇತ್ರದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಉತ್ತೇಜಿಸಲು ತಂದ ಯೋಜನೆಯಾಗಿದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರ ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ವಹಿಸಲಾಗುತ್ತಿದೆ ಯಾವುದೇ ಗ್ಯಾರಂಟಿ ಇಲ್ಲದೆ 3 ಲಕ್ಷ ರೂಪಾಯಿ ವರೆಗೆ ಸಾಲ ನೀಡಲಾಗುತ್ತದೆ. ಇದರಲ್ಲಿ ಫ್ರೀ 50 % ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಈ ಯೋಜನೆಯು ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವಂತಹ ಮಹಿಳೆಯರಿಗೆ ಆದ್ಯತೆ ನೀಡುತ್ತದೆ.
ಈ ಹಣವನ್ನು ಕೇಂದ್ರ ಉಚಿತವಾಗಿ ನೀಡುತ್ತಿಲ್ಲ ಬಡ್ಡಿರಹಿತ ಸಾಲವಾಗಿ ನೀಡುತ್ತಿದೆ. ಆ ಹಣದಲ್ಲಿ ವ್ಯಾಪಾರ ಮಾಡಿ 50% ನಷ್ಟು ಹಣವನ್ನು ಮಾತ್ರ ವಾಪಸ್ ನೀಡಬೇಕು ಹಾಗಾದರೆ ಈ ಒಂದು ಯೋಜನೆಯಲ್ಲಿ ಹಣವನ್ನು ಪಡೆದುಕೊಳ್ಳುವು ದಕ್ಕೆ ಮಹಿಳೆಯರು ಯಾವುದೆಲ್ಲ ರೀತಿಯ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:-ವರ್ಷಕ್ಕೆ ಅರ್ಧ ಕೋಟಿ ಲಾಭ ಕೊಡುತ್ತದೆ ಈ ಮುತ್ತಿನ ಕೃಷಿ, ಒಂದು ಮುತ್ತಿನ ಬೆಲೆ ರೂ.300 ರಿಂದ ರೂ.1000, ಸರ್ಕಾರದಿಂದ 50% ಸಬ್ಸಿಡಿ ಕೂಡ ಸಿಗುತ್ತದೆ.!
* ಈ ಯೋಜನೆಯ ಅಡಿಯಲ್ಲಿ ಸಾಲ ಪಡೆಯಲು ಬಯಸುವ ಉದ್ಯೋಗಿಯ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
* ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಯಾವುದೇ ರೀತಿಯ ಆದಾಯದ ಮಿತಿ ಇರುವುದಿಲ್ಲ.
* ಈ ಸಾಲ ನೀಡುವಾಗ sc ಮತ್ತು st ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
* ಮಹಿಳೆಯರ ವಯಸ್ಸು 18 ರಿಂದ 55 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
* ಈಗಾಗಲೇ ಯಾವುದಾದರೂ ವ್ಯಾಪಾರ ಮಾಡುತ್ತಿರುವಂತಹ ಮಹಿಳೆಯರು ಈ ಸಾಲವನ್ನು ಪಡೆಯಲು ಅರ್ಹರಿರುತ್ತಾರೆ. ಜೊತೆಗೆ ಆ ಒಂದು ವ್ಯಾಪಾರಕ್ಕಾಗಿ ಯಾವುದಾದರು ಸಾಲವನ್ನು ಪಡೆದುಕೊಂಡಿ ದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಿರಬೇಕಾಗುತ್ತದೆ.
ಈ ಸುದ್ದಿ ಓದಿ:-ಹಳ್ಳಿ ಜನರು ಕೂಡ ಸುಲಭವಾಗಿ ಮಾಡಬಹುದಾದ ಬಿಸಿನೆಸ್ ಇದು, ಖಾಲಿ ಬಿಯರ್ ಬಾಟಲ್ ನಿಂದ ಲಕ್ಷ ಲಕ್ಷ ಸಂಪಾದನೆ.!
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :-
* ಫೋಟೋ
* ಬ್ಯಾಂಕ್ ಪಾಸ್ ಬುಕ್
* ಆಧಾರ್ ಕಾರ್ಡ್
* ಜನ್ಮ ದಿನಾಂಕ ಪ್ರಮಾಣ ಪತ್ರ
* ವಿಳಾಸ ಪುರಾವೆ
* ಆದಾಯ ಪ್ರಮಾಣ ಪತ್ರ
* ಬಿಪಿಎಲ್ ರೇಷನ್ ಕಾರ್ಡ್
ಹೀಗೆ ಇತರೆ ಯಾವುದೇ ದಾಖಲಾತಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ನಿಮ್ಮ ಹತ್ತಿರದ ಜಿಲ್ಲೆ ಅಥವಾ ತಾಲೂಕಿನ ಮಹಿಳಾ ಅಭಿವೃದ್ಧಿ ಇಲಾಖೆಗೆ ಭೇಟಿ ಮಾಡಿ ಹಾಗೂ ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸಿ ಅವರು ಕೇಳುವ ದಾಖಲಾತಿಗಳನ್ನು ಸಲ್ಲಿಸಬೇಕು. ಅವುಗಳನ್ನು ಸಲ್ಲಿಸಲು ನಿಮಗೆ ನಮೂನೆಯನ್ನು ನೀಡಲಾಗುವುದು. ಈ ಎಲ್ಲಾ ಹಂತ ಸಂಪೂರ್ಣವಾದ ಮೇಲೆ ನಿಮ್ಮ ಆ ಒಂದು ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ಸಾಲವನ್ನು ನೀಡುತ್ತಾರೆ.