ಈಗಿನ ಕಾಲದಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ ಪ್ರತಿ ಮನೆಯಲ್ಲಿ ಇದ್ದೇ ಇದೆ ಮತ್ತು ಅವಿಭಕ್ತ ಕುಟುಂಬದಲ್ಲಿ ಆಸ್ತಿ ವಿಭಾಗ ವಿಚಾರವಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ನಡುವೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತವೆ. 2006ರಲ್ಲಿ ತಿದ್ದುಪಡಿಯಾದ ಹಿಂದು ಉತ್ತರಾದಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ತಂದೆಯ ಆಸ್ತಿಯ ಪಾಲಿನಲ್ಲಿ ಸಮಾನ ಹಕ್ಕು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಹಾಗಾಗಿ ಕೂಡು ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೂ ಕೂಡ ಆ ಮನೆಯ ಗಂಡು ಮಗನಿಗೆ ಕೊಡುವಷ್ಟೇ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕು. ಆದರೆ ಗಂಡು ಮಕ್ಕಳು ಒಪ್ಪುವುದಿಲ್ಲ ಹೆಣ್ಣು ಮಕ್ಕಳನ್ನು ಓದಿಸುತ್ತೇವೆ ಮದುವೆ ಮಾಡಿಕೊಟ್ಟಿದ್ದೇವೆ ಮತ್ತು ತವರು ನಡೆಸುತ್ತಿದ್ದೇವೆ ಇಷ್ಟೆಲ್ಲ ಖರ್ಚು ಇದೆ ಇದರ ಮೇಲೆ ಆಸ್ತಿ ಯಾಕೆ ಕೊಡಬೇಕು ಎನ್ನುವ ಪ್ರಶ್ನೆ ಎತ್ತುತ್ತಾರೆ.
ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಎಷ್ಟೋ ಪ್ರಕರಣಗಳಲ್ಲಿ ಗಂಡು ಮಕ್ಕಳು ಕೊಡಲು ರೆಡಿ ಇದ್ದರು ಗಂಡು ಮಕ್ಕಳ ಪತ್ನಿಯರು ಒಪ್ಪುವುದೇ ಇಲ್ಲ ಹೀಗಾಗಿ ತಮ್ಮ ಸಂಸಾರ ಹಾಳಾಗುತ್ತದೆ ಎಂದು ಪತ್ನಿ ಮಾತು ಕೇಳದೆ ವಿಧಿ ಇರುವುದಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲಿ ಹೇಗಾಗಿರುತ್ತದೆ ಎಂದರೆ ಹಕ್ಕು ಖುಲಾಸೆ ಪತ್ರ ಮಾಡಿಸಿಕೊಂಡಿರುತ್ತಾರೆ, ಆ ಪತ್ರದಲ್ಲಿ ಏನಿದೆ ಎನ್ನುವುದನ್ನು ತಿಳಿಸಿರುವುದಿಲ್ಲ.
ಹೆಣ್ಣು ಮಕ್ಕಳೂ ಕೂಡ ಅಣ್ಣ-ತಮ್ಮಂದಿರ ಮೇಲಿನ ಪ್ರೀತಿಯಿಂದ ನಂಬಿಕೆಯಿಂದ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಏನು ಕೇಳದೆ ಸಹಿ ಮಾಡಿರುತ್ತಾರೆ. ಸಾಲ ತೆಗೆದುಕೊಳ್ಳುವುದಕ್ಕೆ ಎಂದು ಹೇಳಿ ಸೇಲ್ ಡೀಡ್ ಗೆ ಹಕ್ಕು ಕುಲಾಸೆ ಪತ್ರಕ್ಕೆ ಸಹಿ ಮಾಡಿಸಿಕೊಂಡಿರುವಂತಹ ಪ್ರಕರಣಗಳು ಇವೆ ಮತ್ತು ಕೆಲವೊಮ್ಮೆ ಒಪ್ಪಿಯು ಸಹಿ ಮಾಡಿ ಕೊಟ್ಟಿದ್ದರು.
ಈ ಸುದ್ದಿ ಓದಿ:-ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!
ಆ ಒಪ್ಪಿಗೆಯ ಪ್ರಕಾರವಾಗಿ ಅಣ್ಣ ತಮ್ಮಂದಿರು ನಡೆದುಕೊಳ್ಳದೆ ಇರಬಹುದು ಈ ರೀತಿ ಒಂದೊಂದು ಪ್ರಕರಣದಲ್ಲಿ ಒಂದೊಂದು ವಿಚಿತ್ರ ಕಥೆ ಇರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಯ ಹೇಗೆ ಸಿಗುತ್ತದೆ ಅದನ್ನು ಯಾವ ರೀತಿ ಚಾಲೆಂಜ್ ಮಾಡಬೇಕು ಎನ್ನುವ ಕಾನೂನಾತ್ಮಕ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ಸ್ವಲ್ಪ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಹೆಣ್ಣು ಮಕ್ಕಳು ಈ ರೀತಿ ಅಣ್ಣ-ತಮ್ಮಂದಿರ ಮಾತು ನಂಬಿ ಮೋ’ಸ ಹೋಗಿದ್ದರೆ ಹಕ್ಕು ಖುಲಾಸೆ ಪತ್ರಕ್ಕೆ ಸಹಿ ಮಾಡಿರುವ ವಿಚಾರವೇ ಅವರಿಗೆ ತಿಳಿಯದೆ ಇದ್ದರೆ ಅಥವಾ ಅದರಲ್ಲಿ ಬರೆಸಿರುವ ವಿಚಾರವನ್ನು ತಿಳಿಸದೆ ಸಹಿ ಮಾಡಿಸಿಕೊಂಡಿದ್ದರೆ ಖಂಡಿತವಾಗಿಯೂ ಕಾನೂನಿನಲ್ಲಿ ಇದನ್ನು ಚಾಲೆಂಜ್ ಮಾಡುವುದಕ್ಕೆ ಅವಕಾಶ ಇದೆ, ಈಗಾಗಲೇ ಹಲವಾರು ಕೇಸ್ ಗಳಲ್ಲಿ ಈ ರೀತಿ ಚಾಲೆಂಜ್ ಮಾಡಿ ಗೆದ್ದಿರುವ ತೀರ್ಪುಗಳು ಕೂಡ ಇದೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಧೈರ್ಯವಾಗಿರಬಹುದು.
ಈ ಸುದ್ದಿ ಓದಿ:-ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಒಂದು ವೇಳೆ ಹತ್ತು ಕೋಟಿ ಬೆಲೆ ಬಾಳುವ ಪ್ರಾಪರ್ಟಿಗೆ 10 ಲಕ್ಷ ಕೊಟ್ಟು ಹಕ್ಕು ಮಾಡಿಸಿಕೊಂಡಿದ್ದರು ಕೂಡ ನೀವು ಅದನ್ನು ಚಾಲೆಂಜ್ ಮಾಡಿ ಮೋ’ಸದ ಬಗ್ಗೆ ಪ್ರತಿಪಾದಿಸಬಹುದು. ನೀವು ಮೊದಲಿಗೆ ಒಳ್ಳೆಯ ಲಾಯರ್ ಬಳಿ ಹೋಗಿ ನಿಮಗಾಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬೇಕು ಮತ್ತು ಅದನ್ನು ವಿವರವಾಗಿ ದಾವೆ ಹೂಡುವ ಸಮಯದಲ್ಲಿ ತಿಳಿಸಿ ಕೋರ್ಟ್ ನಲ್ಲಿ ಮನವಿ ಸಲ್ಲಿಸಬೇಕು.
ಈ ರೀತಿ ಮಾಡಿದರೆ ಖಂಡಿತವಾಗಿಯೂ ನೀವು ಗೆಲ್ಲಬಹುದು. ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಅಥವಾ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೂ ಈ ವಿಡಿಯೋವನ್ನು ನೋಡಿ. ನಿಮಗೆ ಇನ್ನಷ್ಟು ಸಂಗತಿಗಳು ತಿಳಿಯುತ್ತವೆ.