ಬಾಡಿಗೆ ಕಟ್ಟಲು ಹಣ ಇರಲಿಲ್ಲ ಆದ್ರೆ ಈಗ ಸ್ವಂತ ಮನೆ ಕಟ್ಟಿದ್ದಾರೆ. ಸ್ವಂತ ಮನೆ ಖರೀದಿಸುವ ಆಸೆ ಇದ್ದರೆ ಈ ಅದ್ಭುತ ತಂತ್ರ ಪ್ರಯೋಗ ಮಾಡಿ ನೋಡಿ, 48 ದಿನಗಳ ಒಳಗೆ ನಿಮ್ಮ ಆಸೆ ಈಡೇರುತ್ತದೆ.!

 

ತನ್ನ ಜೀವಿತಾವಧಿಯಲ್ಲಿ ಒಂದು ಮನೆಯನ್ನು ಕಟ್ಟಬೇಕು ಅಥವಾ ಕಟ್ಟಿರುವ ಒಂದು ಮನೆಯನ್ನು ಖರೀದಿಸಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಆಸೆ. ಇದಕ್ಕಾಗಿ ಎಷ್ಟೇ ಶ್ರಮಪಟ್ಟರು ಕೂಡ ಎಲ್ಲರಿಗೂ ಈ ಯೋಗ ಇರುವುದಿಲ್ಲ. ನೀವು ಸಹ ಈ ರೀತಿ ಮನೆ ಕಟ್ಟುವ ಕನಸಲು ಕಂಡಿದ್ದರೆ ಒಂದು ಸರಳ ತಂತ್ರ ಇದೆ. ಇದೊಂದು ಸಾತ್ವಿಕ ಆಚರಣೆ ಆಗಿದ್ದು ಬಹಳ ಪರಿಣಾಮಕಾರಿಯಾಗಿ ಫಲಿತಾಂಶ ನೀಡುತ್ತದೆ.

ಈ ಒಂದು ಆಚರಣೆಯನ್ನು 21 ದಿನಗಳು ಮಾಡಿದರೆ ಸಾಕು 48 ದಿನಗಳ ಒಳಗೆ ನೀವು ಮನೆ ಖರೀದಿಸುವ ಬಗ್ಗೆ ಅಥವಾ ಹಣಕಾಸಿನ ತೊಡಕು ನಿವಾರಣೆಯಾಗಿ ಹಣ ಹೊಂದುವ ಬಗ್ಗೆ ಅಥವಾ ಮನೆ ಕಟ್ಟಲು ಸೈಟ್ ಹುಡುಕುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಹಾಗೆ ಶುಭ ಸುದ್ದಿಯನ್ನು ಕೇಳುತ್ತೀರಿ.

ಈ ತಂತ್ರವನ್ನು ಮನೆಯ ಹಿರಿಯರು ಮಾಡಿದರೆ ಶ್ರೇಯಸ್ಸು. ಒಂದು ವೇಳೆ ಸಾಧ್ಯವಿರದೆ ಇದ್ದರೆ ಆ ಮನೆಯ ಗೃಹಿಣಿ ಮಾಡಬಹುದು. ವಾರದ ಯಾವ ದಿನ ಬೇಕಾದರೂ ಇದನ್ನು ಆರಂಭಿಸಬಹುದು. ಒಮ್ಮೆ ಆರಂಭಿಸಿದರೆ 21 ದಿನಗಳು ತಪ್ಪದೆ ಮಾಡಬೇಕು. ಆದರೆ ಮಹಿಳೆಯರಿಗೆ ಮಧ್ಯೆ ತಿಂಗಳ ಸಮಸ್ಯೆ ಆದರೆ ಐದು ದಿನಗಳ ನಿಲ್ಲಿಸಿ ನಂತರ ಐದು ದಿನಗಳು ಹೆಚ್ಚಿಸಿಕೊಳ್ಳಬಹುದು.

ಮನೆಯ ಯಾವುದಾದರೂ ಒಬ್ಬರು ಸದಸ್ಯರು ಮಾತ್ರ ಇದನ್ನು ಮಾಡಬೇಕು. ಪ್ರತಿದಿನ ಬೆಳಗ್ಗೆ 9:00 ಒಳಗೆ ಈ ಆಚರಣೆಯನ್ನು ಮಾಡಬೇಕು. ಬೆಳಿಗ್ಗೆ ಮುಂಜಾನೆ ಬೇಗ ಎದ್ದು ದೇವರಿಗೆ ಪೂಜೆ ಮಾಡಿ ಮನೆ ಹತ್ತಿರ ಇರುವ ಯಾವುದಾದರೂ ಇರುವೆ ಗೂಡಿಗೆ ಹೋಗಿ ಒಂದು ಹಿಡಿ ಸತನಜ ಹಾಕಬೇಕು.

ಪೂಜಾ ಸಾಮಗ್ರಿ ಕೊಡುವ ಅಂಗಡಿಯಲ್ಲಿ ಅಥವಾ ಕಿರಾಣಿ ಅಂಗಡಿಗಳಲ್ಲಿ ಕೇಳಿದರೆ ಸತನಜ ಕೊಡುತ್ತಾರೆ. ಸತನಜ ಎಂದರೆ ನವಧಾನ್ಯಗಳನ್ನು ಸೇರಿಸಿ ಮಾಡಿರುವ ಪುಡಿ. ಒಂದುವೇಳೆ ಇದು ಸಿಗಲಿಲ್ಲ ಎಂದರೆ ನೀವೇ ಒಂದು ಕೆಜಿ ಅಥವಾ ಎರಡು ಕೆಜಿ ಅಷ್ಟು ನವಧಾನ್ಯಗಳನ್ನು ತೆಗೆದುಕೊಂಡು ಅದನ್ನು ನುಚ್ಚಾಗುವ ರೀತಿ ಗ್ರೈಂಡ್ ಮಾಡಿಕೊಳ್ಳಬೇಕು.

ನಂತರ ಇದನ್ನು ಒಂದು ಕಡೆ ಸ್ಟೋರ್ ಮಾಡಿ ಇಟ್ಟುಕೊಂಡು ಪ್ರತಿದಿನ ಒಂದು ಹಿಡಿ ತೆಗೆದುಕೊಂಡು ಹೋಗಿ ಮನೆ ಹತ್ತಿರ ಇರುವ ಪರ್ಮನೆಂಟ್ ಇರುವೆ ಗೂಡಿಗೆ ಹಾಕಬೇಕು. 21 ದಿನ ಇದನ್ನು ಮಾಡಿದ ಮೇಲೆ 22ನೇ ದಿನ ಮನೆಯಲ್ಲಿ ದೇವರಿಗೆ ಕಾಯಿ ಹೊಡೆದು ನೈವೇದ್ಯ ಮಾಡಿ ಒಂದು ಹೊಳನ್ನು ಮನೆಯಲ್ಲಿ ಇಟ್ಟು ಮತ್ತೊಂದು ಹೋಳಿನಲ್ಲಿ ಒಂದು ಹಿಡಿ ಸತನಜ ಅಥವಾ ನವಧಾನ್ಯದ ನುಚ್ಚನ್ನು ಹಾಕಿ ಒಂದು ರೂಪಾಯಿ ನಾಣ್ಯ ಹಾಕಿ ಆ ಇರುವೆ ಗೂಡಿನ ಬಳಿ ಇಟ್ಟು ಬರಬೇಕು.

ಮನೆಯಲ್ಲಿರುವ ಹೋಳಿನಲ್ಲಿ ಸಿಹಿ ಪದಾರ್ಥ ಮಾಡಿ ಮನೆಯಲ್ಲಿರುವ ಎಲ್ಲಾ ಸದಸ್ಯರು ಸೇವಿಸಬೇಕು. 22ನೇ ದಿನದಂದೇ ಈ ಕೆಲಸವನ್ನು ಮಾಡಬೇಕು. ಹೇಗೆ ನೀವು ಕೊಟ್ಟ ಆಹಾರವನ್ನು ಇರವೆಗಳು ಸ್ವೀಕರಿಸುತ್ತವೊ ಅದೇ ರೀತಿ ನಿಮ್ಮ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ. ಒಂದು ವೇಳೆ ಇರುವೆ ಗೂಡು ಇಲ್ಲವೇ ಇಲ್ಲ ಎಂದರೆ ಮನೆ ಹತ್ತಿರ ಇರುವ ಯಾವುದಾದರೂ ಅರಳಿ ಮರದ ಕಟ್ಟೆಗೆ ಹೋಗಿ ನಾಲ್ಕು ಮೂಲೆಗೂ ಒಂದೊಂದು ಹಿಡಿ ಸತನಜ ಅಥವಾ ನವಧಾನ್ಯದ ನುಚ್ಚನ್ನು ಹಾಕಿ ಬರಬಹುದು. ಅಲ್ಲಿಯೂ ಕೂಡ 22ನೇ ದಿನದಂದು ಇದೆ ರೀತಿ ಕಾಯಿ ಹೋಳನ್ನು ಇಟ್ಟು ಬರಬೇಕು ಇದನ್ನು ಮಾಡಿ 48 ದಿನಗಳಲ್ಲಿ ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ.

Leave a Comment

%d bloggers like this: