ಸಾಲ ತೀರುತ್ತಿಲ್ಲ, ಸಾಲದಿಂದ ಮುಕ್ತಿ ಬೇಕು, ಹಣಕಾಸಿನ ಸಮಸ್ಯೆಯಿಂದ ಹೊರ ಬರಬೇಕು ಅನ್ನುವವರು ಕಪ್ಪು ದಾರದಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

 

ಜೀವನದಲ್ಲಿ ಹಣ ಎಷ್ಟು ಅವಶ್ಯಕತೆ ಇದೆ ಎಂದರೆ ಬದುಕಿನ ಶೇಕಡ 90% ಸಮಸ್ಯೆಗಳನ್ನು ನಾವು ಹಣದಿಂದ ಪರಿಹಾರ ಮಾಡಿಕೊಳ್ಳಬಹುದು. ಆದರೆ ಈ ಹಣ ಎಷ್ಟು ಚಂಚಲ ಎಂದರೆ ಒಮ್ಮೆ ಧನಿಕನಾಗಿದ್ದವನನ್ನು ಮರುದಿನ ಬಡವನನಾಗಿಸುತ್ತದೆ, ಬಿಕ್ಷುಕನನ್ನು ಶ್ರೀಮಂತನಾಗಿಸುತ್ತದೆ. ಜೀವನದಲ್ಲಿ ಯೋಗವು ಒಂದೇ ಬಾರಿ ಬರುವುದರಿಂದ ನಮ್ಮ ಕೈಯಲ್ಲಿ ಹಣಕಾಸು ಚೆನ್ನಾಗಿ ಓಡುತ್ತಾಡುತ್ತಿದೆ ಎಂದರೆ ಅದು ಹಾಗೆ ಉಳಿದುಕೊಳ್ಳಲು ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು.

ಹಾಗೆಯೆ ಹಣಕಾಸಿನ ಸಮಸ್ಯೆ ಬಂದಿದೆ ಇದರಿಂದ ಪಾರಾಗಬೇಕು ಎಂದರೆ ಅದಕ್ಕೂ ಕೂಡ ಕೆಲ ಉಪಾಯಗಳು ಇದ್ದು ಅದನ್ನು ಪಾಲಿಸಬೇಕು ಜೀವನದಲ್ಲಿ ಹಣಕಾಸಿನ ಸಮಸ್ಯೆ ಬರಬಾರದು ಎಂದರೆ ಸದಾ ಎಚ್ಚರಿಕೆಯಿಂದ ಇದ್ದು ದುಡಿದ ಹಣವನ್ನು ವ್ಯರ್ಥವಾಗದಂತೆ ಲೆಕ್ಕಾಚಾರ ಹಾಕಿ ಬದುಕನ್ನು ಸಾಗಿಸಬೇಕು.

ಹೀಗಿದ್ದರೂ ಸಹ ಕೆಲವೊಮ್ಮೆ ಜೀವನದಲ್ಲಿ ಅನಿರೀಕ್ಷಿತ ಘಟನೆಗಳ ಕಾರಣದಿಂದ ಇನ್ನೊಬ್ಬರ ಬಳಿ ಕೈ ಚಾಚುವ ಸಂದರ್ಭದಲ್ಲಿ ಬರುತ್ತದೆ. ಆಗ ನಾವು ಎಷ್ಟೇ ಪ್ರಯತ್ನ ಪಡುತ್ತಿದ್ದರು ಕೂಡ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗುವುದೇ ಇಲ್ಲ. ಅಂತಹ ಸಮಯದಲ್ಲೂ ಕೂಡ ಕೆಲ ಉಪಾಯಗಳನ್ನು ಮಾಡುವುದರಿಂದ ಈ ಸಮಸ್ಯೆಯಿಂದ ಹೊರ ಬರಬಹುದು.

ಹಣವನ್ನು ಲಕ್ಷ್ಮಿಗೆ ಹೋಲಿಸುತ್ತೇವೆ ಹಾಗಾಗಿ ಮಂಗಳವಾರ ಮತ್ತು ಶುಕ್ರವಾರವನ್ನು ಲಕ್ಷ್ಮಿಯ ವಾರ ಎಂದು ಕರೆಯುತ್ತೇವೆ ಇದರ ಜೊತೆಗೆ ಬುಧವಾರವೂ ಕೂಡ ಹಣಕಾಸಿಗೆ ಹೆಚ್ಚು ಪ್ರಾಮುಖ್ಯತೆ ಇರುವ ದಿನವಾಗಿದೆ. ನೀವು ಯಾವುದೇ ಕಾರಣಕ್ಕೂ ಮಂಗಳವಾರ ಹಾಗೂ ಬುಧವಾರದಂದು ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ ಯಾಕೆಂದರೆ ಈ ರೀತಿ ತೆಗೆದುಕೊಂಡ ಸಾಲ ಎಂದು ಕೂಡ ತೀರುವುದೇ ಇಲ್ಲ.

ನೀವು ಎಷ್ಟು ಪ್ರಯತ್ನಪಟ್ಟರೂ ಆ ಋಣದಿಂದ ಹೊರಬರಲು ಕಷ್ಟವಾಗುತ್ತಿರುತ್ತದೆ. ಆದ್ದರಿಂದ ಮಂಗಳವಾರ ಮತ್ತು ಬುಧವಾರದಂದು ಸಾಲ ಮಾಡಬೇಡಿ. ಮಂಗಳವಾರ ಮತ್ತು ಬುಧವಾರದಂದು ಸಾಲ ಕೊಡಲು ಬಾರದು ಇದನ್ನು ಸಹ ಶಾಸ್ತ್ರ ಹೇಳುತ್ತದೆ. ಯಾಕೆಂದರೆ ಈ ದಿನಗಳು ಹಣಕ್ಕೆ ಮಹತ್ವ ಇರುವ ದಿನವಾಗಿರುವುದರಿಂದ ಈ ದಿನಗಳಲ್ಲಿ ಹಣಕೊಟ್ಟರೆ ಕೊಟ್ಟವರಿಗೆ ಹಣಕಾಸಿನ ಸಮಸ್ಯೆ ಬರಬಹುದು ಎನ್ನುವ ನಂಬಿಕೆ ಇದೆ.

ಹಾಗಾಗಿ ಸಾಧ್ಯವಾದಷ್ಟು ಸಾಲ ಕೊಡುವುದು ಹಾಗೂ ಸಾಲ ತೆಗೆದುಕೊಳ್ಳುವುದನ್ನು ಮಂಗಳವಾರ ಮತ್ತು ಬುಧವಾರದಂದು ತಪ್ಪಿಸಿ. ಇದರ ಜೊತೆಗೆ ಸಾಲ ಭಾದೆಯಿಂದ ಮುಕ್ತರಾಗಲು ಮಂಗಳವಾರದಂದು ಶಿವನ ದೇವಾಲಯಕ್ಕೆ ಹೋಗಿ ಶಿವನನ್ನು ಪ್ರಾರ್ಥಿಸಿ ಸ್ವಲ್ಪ ಸಮಯ ಕಳೆದು ಧಾನ್ಯವನ್ನು ಕೊಟ್ಟು ನಂತರ ಓಂ ಶ್ರೀ ಋಣಮುಕ್ತೇಶ್ವರಾಯ ನಮಃ ಎನ್ನುವ ಈ ಮಂತ್ರವನ್ನು ಭಕ್ತಿಯಿಂದ ನಂಬಿಕೆಯಿಂದ 108 ಬಾರಿ ಜಪಿಸಿ ಬನ್ನಿ.

ಈ ರೀತಿ ಮಾಡುವುದರಿಂದ ಆದಷ್ಟು ಬೇಗ ನಿಮ್ಮ ಸಾಲ ತರುತ್ತದೆ. ಶನಿವಾರದಂದು ಬೆಳಂ ಬೆಳಗ್ಗೆ ಮನೆಯಲ್ಲಿ ದೇವರ ಪೂಜೆಯನ್ನು ಮಾಡಿ ಅದೇ ಸಮಯದಲ್ಲಿ ಒಂದು ತೆಂಗಿನಕಾಯಿಯನ್ನು ತೆಗೆದುಕೊಳ್ಳಿ ನೀವು ಎಷ್ಟು ಎತ್ತರ ಇದ್ದೀರಾ ಅಷ್ಟು ಎತ್ತರಕ್ಕೆ ಒಂದು ಕಪ್ಪು ದಾರ ತೆಗೆದುಕೊಳ್ಳಿ. ಈ ಕಪ್ಪು ದಾರವನ್ನು ತೆಂಗಿನಕಾಯಿ ಚೆನ್ನಾಗಿ ಸುತ್ತಿ ಮತ್ತು ಅದನ್ನು ಸಹ ದೇವರ ಕೋಣೆಯಲ್ಲಿ ಪೂಜೆ ಮಾಡಿ ನಂತರ ಅದನ್ನು ಯಾವುದಾದರೂ ಹರಿಯುವ ನೀರಿಗೆ ತೆಗೆದುಕೊಂಡು ಹೋಗಿಬಿಡಿ.

ಈ ರೀತಿ ಮಾಡುವುದರಿಂದ ಕೂಡ ಆದಷ್ಟು ಬೇಗ ನೀವು ಋಣಭಾರಗಳಿಂದ ಹೊರ ಬರಬಹುದು. ನಿಮ್ಮ ಸಾಲವನ್ನು ತೀರಿಸಲು ಹಣದ ಮೂಲ ನಿಮಗೆ ತೋಚುತ್ತದೆ ಈ ಉಪಾಯಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ. ನಂಬಿಕೆ ಇಟ್ಟು ಈ ಕೆಲಸವನ್ನು ಮಾಡಿ ಖಂಡಿತವಾಗಿಯೂ ಕೂಡ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ

Leave a Comment

%d bloggers like this: