ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ವೇಳೆ ಕಾಂಗ್ರೆಸ್ ಪಕ್ಷವು (Congres Party) ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು (Gyaranty Schemes) ಅಸ್ತ್ರವಾಗಿ ಪ್ರಯೋಗಿಸಿ ಗೆದ್ದು ಬೀಗಿದೆ.
ಈಗ ಇಡಿ ದೇಶಕ್ಕೆ ಮಾದರಿ ಯೋಜನೆಗಳು ಎಂದು ಸಮರ್ಥಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ (CM Siddaramaih) ನೇತೃತ್ವದ ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದು, ನುಡಿದಂತೆ ನಡೆದಿದೆ ಕರ್ನಾಟಕದ ನಾಗರಿಕರು ಈ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ (Gruhalakshmi) ಕುಟುಂಬದ ಮುಖ್ಯಸ್ಥೆ ಮಹಿಳೆಗೆ ಪ್ರತಿ ತಿಂಗಳು ರೂ.2000 ಸಹಾಯಧನ, ಅನ್ನ ಭಾಗ್ಯ ಯೋಜನೆಯಡಿ (Annabhagya) 10Kg ಉಚಿತ ಪಡಿತರ, ಗೃಹ ಜ್ಯೋತಿ ಯೋಜನೆಯಡಿ (Gruhajyothi) ಕುಟುಂಬ ಒಂದಕ್ಕೆ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್.
ಈ ಸುದ್ದಿ ಓದಿ:- ಅಂಗನವಾಡಿ ಟೀಚರ್ ಹುದ್ದೆ ನೇರ ನೇಮಕಾತಿ, SSLC ಆದವರೂ ಅರ್ಜಿ ಹಾಕಿ..
ಶಕ್ತಿ ಯೋಜನೆಯಡಿ (Shakthi Yojane) ಕರ್ನಾಟಕ ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಗಡಿಯೊಳಗೆ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಯುವನಿಧಿ ಯೋಜನೆಯಡಿ (Yuvanidhi) ಪದವಿ ಮುಗಿಸಿ ಆರು ತಿಂಗಳರಾದರೂ ಉದ್ಯೋಗ ಸಿಗದ ಪದವೀದರರಿಗೆ ರೂ.3000 ಡಿಪ್ಲೋಮಾ ಪದವೀದರರಿಗೆ 1500 ನಿರುದ್ಯೋಗ ಭತ್ಯೆಯನ್ನು ಸಿಗುತ್ತಿದೆ.
ಈಗ ಲೋಕಸಭಾ ಚುನಾವಣೆ (Parliment Election – 2024) ವೇಳೆಯಲ್ಲಿ ಯಲ್ಲಿ ಕೂಡ ಇದೇ ತಂತ್ರವನ್ನು ಉಪಯೋಗಿಸಲು ಕಾಂಗ್ರೆಸ್ ಪಕ್ಷವು ಸಿದ್ಧವಾಗಿದ್ದು ಬುಧವಾರ ರಾಹುಲ್ ಗಾಂಧಿಯವರೇ (Rahul Gandhi) ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ (Manifesto) 5 ಗ್ಯಾರಂಟಿ ಭರವಸೆಗಳನ್ನು ಘೋಷಿಸಿದ್ದಾರೆ.
ಇವುಗಳನ್ನು ಮಹಿಳಾ ನ್ಯಾಯ ಗ್ಯಾರಂಟಿ (Mahila Nyaya Gyaranty) ಎಂದು ಕರೆಯಲಾಗಿದೆ ಯಾಕೆಂದರೆ ಈ 5 ಗ್ಯಾರಂಟಿಗಳನ್ನು ಕೂಡ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಆ ಪ್ರಕಾರವಾಗಿ ಕಾಂಗ್ರೆಸ್ ಸರ್ಕಾರವು ಭರವಸೆ ನೀಡುತ್ತಿರುವ ಆ ಐದು ಯೋಜನೆಗಳು ಯಾವುವು ಗೊತ್ತಾ? ವಿವರ ಇಲ್ಲಿದೆ ನೋಡಿ.
ಈ ಸುದ್ದಿ ಓದಿ:- 1 BHK 3.5 ಲಕ್ಷದಲ್ಲಿ, 2BHK 6 ಲಕ್ಷದಲ್ಲಿ ಕೇವಲ 7 ದಿನಕ್ಕೆ ರೆಡಿ ಆಗುತ್ತದೆ ನಿಮ್ಮ ಕನಸಿನ ಸ್ವಂತ ಮನೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
1. ಮಹಾಲಕ್ಷ್ಮಿ ಗ್ಯಾರಂಟಿ (Mahalakshmi Gyaranty):- ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಹಿಳೆಯರಿಗೆ (BPL) ಪ್ರತಿ ವರ್ಷವೂ ಕೂಡ 1 ಲಕ್ಷ ರೂಪಾಯಿ ಹಣಕಾಸಿನ ನೆರವು ನೀಡುತ್ತೇವೆ ಎಂದು ಭರವಸೆ ನೀಡಲಾಗಿದೆ. ಈ ಲೆಕ್ಕದಲ್ಲಿ ಮಾಸಿಕವಾಗಿ ಹೇಳುವುದಾದರೆ ರೂ.8,330 ನೆರವು ನೀಡಿದಂತಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಂತೆ DBT ಮೂಲಕ ಈ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದಾರೆ.
2. ಆದಿ ಅಬಾಡಿ, ಪೂರಾ ಹಕ್ (Aadhi Aabaadi Poora Haq):- ಈ ಯೋಜನೆಡಿ ದೇಶದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ನೇಮಕಾತಿಗಳಲ್ಲಿ ಮಹಿಳೆಯರಿಗೆ ಅರ್ಧದಷ್ಟು ಮೀಸಲಾತಿ ನೀಡಿ ಮಹಿಳೆಯರಿಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿ:- ಇಂಡಿಯನ್ ಬ್ಯಾಂಕ್ನಲ್ಲಿ ಉದ್ಯೋಗವಕಾಶ, ವೇತನ 89,000 ಆಸಕ್ತರು ಅರ್ಜಿ ಸಲ್ಲಿಸಿ.!
3. ಶಕ್ತಿ ಕಾ ಸಮ್ಮಾನ್ (Shakthi Ka Samman):- ಈ ಯೋಜನೆ ಇಡೀ ದೇಶದಾದ್ಯಂತ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರಾಗಿ ಹಾಗೂ ಮಧ್ಯಾಹ್ನ ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮಾಸಿಕ ವೇತನದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
* ಅಧಿಕಾರ ಮೈತ್ರಿ ಯೋಜನೆ (Adhikaar Maitri):- ಈ ಯೋಜನೆಯಡಿ ದೇಶದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಕಾನೂನು ಸಹಾಯಕರನ್ನು ನೇಮಕ ಮಾಡುವುದಾಗಿ ಭರವಸೆ ನೀಡಲಾಗಿದೆ. ಈ ಯೋಜನೆ ಪ್ರಯೋಜನವೇನೆಂದರೆ ಗ್ರಾಮೀಣ ಭಾಗದ ಮಹಿಳೆಯರಿಗೆ ಕಾನೂನಿನ ಬಗ್ಗೆ ಅರಿವು ಕಡಿಮೆ ಇರುತ್ತದೆ.
ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
ಹಾಗಾಗಿ ಗ್ರಾಮ ಮಟ್ಟದಲ್ಲಿ ಮಹಿಳಾ ಕಾನೂನು ಸಹಾಯಕರನ್ನು ನೇಮಿಸಿಕೊಂಡು ಮಹಿಳೆಯರಿಗೆ ಪ್ರತಿಯೊಂದು ವಿಚಾರವಾಗಿ ಇರುವ ಕಾನೂನಿನ ಹಕ್ಕು ಅಧಿಕಾರಗಳ ಬಗ್ಗೆ ತಿಳುವಳಿಕೆಯ ನೆರವು ನೀಡುವ ಉದ್ದೇಶವಾಗಿದೆ. ಇದರಿಂದ 2.5 ಲಕ್ಷ ಮಹಿಳೆಯರಿಗೆ ಉದ್ಯೋಗ ಸಿಗುತ್ತದೆ ಎಂದು ಕೂಡ ನಿರೀಕ್ಷಿಸಲಾಗಿದೆ
* ಸಾವಿತ್ರಿಬಾಯಿ ಪುಲೆ ಹಾಸ್ಟೆಲ್ಸ್ (Savitri Bai Pule Hostels):- ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಠ ಒಂದಾದರೂ ಮಹಿಳಾ ಹಾಸ್ಟೆಲ್ ಗಳನ್ನು ಸ್ಥಾಪಿಸಿ ಉದ್ಯೋಗಸ್ಥ ಮಹಿಳೆಯರಿಗೆ ಕಡಿಮೆ ದರದಲ್ಲಿ ಉತ್ತಮ ಆಹಾರ ಹಾಗೂ ಸುರಕ್ಷಿತ ಆಶ್ರಯ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ ಮತ್ತು ನಂತರದ ದಿನಗಳಲ್ಲಿ ಈ ಸಾವಿತ್ರಿ ಬಾಯಿ ಪುಲೆ ಹಾಸ್ಟೆಲ್ ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು ಎನ್ನುವ ಭರವಸೆಯನ್ನು ಕೂಡ ನೀಡಿದ್ದಾರೆ.