ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪಕ್ರಿಯೆ ನಡೆಯುತ್ತದೆ. ಅದರಲ್ಲೂ ಮುಖ್ಯವಾಗಿ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಮತ್ತು 357 ಸರ್ವೆಯರ್ ಹುದ್ದೆಗಳ ನೇಮಕಾತಿಗೆ ಕೂಡ ಒಪ್ಪಿಗೆ ಸಿಕ್ಕಿದೆ ಈ ಬಗ್ಗೆ ಕಂದಾಯ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತವಾಗಿ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ 30ಕ್ಕಿಂತ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳ ಅವಶ್ಯಕತೆ ಇದೆ.
2015 ರಿಂದ ಈಚೆಗೆ ಈ ನೇಮಕಾತಿ ನಡೆಯದ ಕಾರಣ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಅಕ್ಕಪಕ್ಕದ ವಿವಿಧ ಗ್ರಾಮಗಳ ಕೆಲಸ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಗಿದೆ. ಈ ಒತ್ತಡದಿಂದ ರೈತರಿಗೆ ಸಕಾಲಕ್ಕೆ ಕೆಲಸಗಳು ಆಗುತ್ತಿಲ್ಲ ಇವುಗಳನ್ನು ಪರಿಹರಿಸಲು ರಾಜ್ಯದ ಯಾವ ಯಾವ ತಾಲೂಕಿನಲ್ಲಿ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಖಾಲಿ ಇದೆ ಎನ್ನುವ ಪಟ್ಟಿಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ.
ಈ ಸುದ್ದಿ ಓದಿ:- ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?
ಇದೇ ಫೆಬ್ರವರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಜೊತೆಗೆ ಸರ್ವೆಯರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ
ಹಾಗೂ ಇದಾದ ಕೂಡಲೇ ಹೆಚ್ಚುವರಿಯಾಗಿ 590 ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗ್ರಾಮ ಲೆಕ್ಕಾಧಿಕಾರಿಯನ್ನು ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಅಥವಾ ತಲಾಟಿ ಎಂದು ಕರೆಯಲಾಗುತ್ತಿತ್ತು ಈಗ ಗ್ರಾಮ ಆಡಳಿತ ಅಧಿಕಾರಿ ಎಂದು ಮರುನಾಮಕರಣ ಮಾಡಲಾಗಿದೆ. ಈ ನೇಮಕಾತಿ ಕುರಿತಾದ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
ಹುದ್ದೆಯ ಹೆಸರು:- ಗ್ರಾಮ ಆಡಳಿತ ಅಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ:-
ಗ್ರಾಮ ಆಡಳಿತ ಅಧಿಕಾರಿ – 1,500 ಹುದ್ದೆಗಳು
ಸರ್ವೆಯರ್ – 357 ಹುದ್ದೆಗಳು
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…
ಈ ಸುದ್ದಿ ಓದಿ:- ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.21,000 ದಿಂದ ರೂ.42,500 ರವರೆಗೆ ವೇತನ ಇರುತ್ತದೆ.
* ಇತರೆ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ
ಅರ್ಜಿ ಸಲ್ಲಿಸುವ ವಿಧಾನ:- ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವು ಅರ್ಜಿ ಸಲ್ಲಿಸುವುದಕ್ಕೆ ವೆಬ್ಸೈಟ್ ತಿಳಿಸಲಿದೆ, ಆಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:-
* ಈ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗಿದೆ
* ಇದುವರೆಗೂ ಕೂಡ ದ್ವಿತೀಯ PUC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಅವರ ಅಂಕಗಳ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತಿತ್ತು, ಆದರೆ ಕೊರೊನಾ ಅವಧಿಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸುವುದರಿಂದ ಈ ವಿಷಯದಲ್ಲಿ ಗೊಂದಲವಾಗಿದೆ.
ಈ ಸುದ್ದಿ ಓದಿ:- ಇಂದಿನಿಂದ ಬ್ಯಾಂಕ್ ಅಕೌಂಟ್, ಸಿಲಿಂಡರ್, ಫಾಸ್ಟ್ ಟ್ಯಾಗ್ ನಿಯಮದಲ್ಲಿ ಬದಲಾವಣೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಈ ಕಾರಣಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಈ ಹುದ್ದೆಗಳಿಗೆ ಅರಿಸಿಕೊಳ್ಳಲು ತೀರ್ಮಾನಿಸಲಾಗಿದೆ
* ಆ ಪ್ರಕಾರವಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ 200 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತದೆ. ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ಕುರಿತಾದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
* ಆಯ್ಕೆ ಆತ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ
* ಕೊನೆಯ ಹಂತದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆರಿಸಿಕೊಳ್ಳಲಾಗುತ್ತದೆ.
ಯಾರೆಲ್ಲ ದ್ವಿತೀಯ PUC ಉತ್ತೀರ್ಣರಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೂಡಲೆ ತಯಾರಿ ಆರಂಭಿಸಿ, ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಹುದ್ದೆ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಕುಟುಂಬದವರು ಸ್ನೇಹಿತರ ಜೊತೆ ಹಂಚಿಕೊಳ್ಳಿ.