Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಪ್ರತಿ ವರ್ಷವೂ ಫೆಬ್ರವರಿ ಆರಂಭದಲ್ಲಿ ಕೇಂದ್ರ ಸರ್ಕಾರವು (Central Government) ಮಧ್ಯಂತರ ಬಜೆಟ್ (Budget) ಘೋಷಣೆ ಮಾಡುತ್ತದೆ. ಈ ಬಜೆಟ್ ದೇಶದ ಎಲ್ಲಾ ನಾಗರಿಕರ ಕಲ್ಯಾಣವನ್ನು ಒಳಗೊಂಡ ಘೋಷಣೆಗಳು ಹಾಗಾಗಿ ಜನಸಾಮಾನ್ಯರಿಂದಲೂ ಸಾಕಷ್ಟು ನಿರೀಕ್ಷೆ ಎಂದು ಹೇಳಬಹುದು.
ಯಾಕೆಂದರೆ ದೇಶದಲ್ಲಿರುವ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕ-ಯುವತಿಯರು, ಉದ್ಯೋಗಸ್ಥರು, ಆದಾಯ ತೆರಿಗೆ ಪಾವತಿದಾರರು, ಗೃಹಿಣಿಯರು, ಹಿರಿಯ ನಾಗರಿಕರು, ರೈತರು, ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಸೇರಿದಂತೆ ಸಂಪೂರ್ಣ ಭಾರತೀಯರ ಪ್ರಗತಿಗಾಗಿ ಮತ್ತು ದೇಶದ ಅಭಿವೃದ್ಧಿಗಾಗಿ.
ಈ ಸುದ್ದಿ ಓದಿ:- 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ, PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!
ರೂಪಿಸುವ ಅನೇಕ ಯೋಜನೆಗಳ ಘೋಷಣೆ ಮತ್ತು ಈಗಾಗಲೇ ಇರುವ ಯೋಜನೆಗಳ ಯಾವುದೇ ತಿದ್ದುಪಡಿ ಅಥವಾ ನೀತಿ ನಿಯಮಗಳ ಬದಲಾವಣೆಗಳ ಬಗ್ಗೆ ಅಂದು ಪ್ರಧಾನ ಮಂತ್ರಿಗಳ (Prime Minister) ಸಮ್ಮುಖದಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (finance Minister Nirmala Sitharaman) ಅವರು ಮಂಡಿಸಲಿದ್ದಾರೆ. ಈ ಪ್ರಕಾರವಾಗಿ ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಯಾವೆಲ್ಲಾ ಘೋಷಣೆ ಸಾಧ್ಯತೆ ಇದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
1. 2019 ರಲ್ಲಿ ಪ್ರಧಾನ ಮಂತ್ರಿಗಳು ಅಂದಿನ ಬಜೆಟ್ ಮಂಡನೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PMKSY) ಘೋಷಿಸಿದ್ದರು. ಆ ಪ್ರಕಾರವಾಗಿ ವಾರ್ಷಿಕವಾಗಿ 3 ಕಂತುಗಳಲ್ಲಿ ರೈತರು ರೂ.6,000 ಯನ್ನು ಸರ್ಕಾರದಿಂದ ಸಹಾಯಧನವಾಗಿ ಪಡೆಯುತ್ತಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ಅದನ್ನು ಇನ್ನಷ್ಟು ಹೆಚ್ಚಿಗೆ ಮಾಡಿ ರೂ.12,000 ಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.
ಈ ಸುದ್ದಿ ಓದಿ:- ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?
2. ಈಗಾಗಲೇ ಪ್ರಧಾನಮಂತ್ರಿಗಳು ಅಡುಗೆ ಅನಿಲದ (LPG Gas) ಬೆಲೆ ಇಳಿಕೆ ಮಾಡಿದ್ದಾರೆ. ಕಳೆದ ವರ್ಷ ರಕ್ಷಾಬಂಧನ ಹಬ್ಬದ ಪ್ರಯುಕ್ತವಾಗಿ 200 ರೂಪಾಯಿಗಳ ಬೆಲೆ ಇಳಿಕೆ ಮಾಡಿದ್ದರು. ಆ ಪ್ರಕಾರವಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ (PMUY) ಸಿಲಿಂಡರ್ ಕನೆಕ್ಷನ್ ಪಡೆದವರಿಗೆ ಪ್ರತಿ ಬುಕ್ಕಿಂಗ್ ಮೇಲೆ ರೂ.400 ಹಾಗೂ ಉಳಿದ ಗ್ರಾಹಕರಿಗೆ ರೂ.200 ಉಳಿತಾಯವಾಗುತ್ತಿತ್ತು. ಈಗ ಅದನ್ನು ಇನ್ನಷ್ಟು ಕಡಿಮೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ
3. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬಗ್ಗೆ ವಾಹನ ಮಾಲೀಕರು ಎದುರು ನೋಡುತ್ತಿದ್ದಾರೆ. ಇದು ದೇಶದ ಅನೇಕರ ನಾಗರಿಕರ ಡಿಮ್ಯಾಂಡ್ ಕೂಡ ಹಾಕಿದ್ದು ಸರ್ಕಾರ ಈ ವರ್ಷ ಈ ಬಗ್ಗೆ ಗಮನಹರಿಸಲಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿ:- ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!
4. ದೇಶದಲ್ಲಿರುವ ನಿರುದ್ಯೋಗ (unemployment) ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಸದಾ ಗಮನ ಕೊಡುವ ಕೇಂದ್ರ ಸರ್ಕಾರವು ದೇಶದ ನಿರುದ್ಯೋಗ ಯುವಕ ಯುವತಿಯವರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸ್ವ ಉದ್ಯೋಗ ಮಾಡಲು ಇಚ್ಛಿಸುವವರಿಗೆ ತರಬೇತಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಿ ನೆರವಾಗುವ ಬಗ್ಗೆ ಕೂಡ ಚಿಂತನೆ ನಡೆಸಿ ಇದಕ್ಕಾಗಿ ವಿಶೇಷವಾದ ಯೋಜನೆಗಳನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
5. ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಬಗ್ಗೆ ಮತ್ತು ಕಲಿಕೆಗೆ ಇನ್ನಷ್ಟು ಸೃಜನಾತ್ಮಕತೆ ಸೇರಿಸಲು ಅನುಕೂಲವಾಗುವ ಯೋಜನೆಗಳ ಬಗ್ಗೆ ಮತ್ತು ಮಹಿಳೆಯರಿಗಾಗಿ ಈ ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ವಿಶೇಷ ಯೋಜನೆ ಜಾರಿಗೊಳಿಸುವ ಬಗ್ಗೆ ಹಾಗೂ ಕಾರ್ಮಿಕರು ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತಹ ಕೆಲ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಬಲವಾದ ಮೂಲಗಳ ಮಾಹಿತಿ ಹೇಳುತ್ತಿದೆ.