ಕಳೆದ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬೆಂಬಲದೊಂದಿಗೆ ರಾಜ್ಯದ ಆಡಳಿತದ ನಿಯಂತ್ರಣ ಹಿಡಿದ ಕಾಂಗ್ರೆಸ್ ಸರ್ಕಾರವು (Congress) ತನ್ನ ಆಶ್ವಾಸನೆಗಿಂತ ಐದು ಗ್ಯಾರಂಟಿ ಯೋಜನೆಗಳ (Gyarantee Scheme) ಜೊತೆಗೆ ಗ್ಯಾರಂಟಿಯೇತರವಾಗಿ ಕೂಡ ಹಲವಾರು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ.
ಇವುಗಳ ಪೈಕಿ ರಾಜ್ಯದ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸ್ವ ಉದ್ಯೋಗಿಗಳನ್ನಾಗಿ ಪರಿವರ್ತಿಸಲು ಕೆಲ ವಿಶೇಷ ಯೋಜನೆಗಳನ್ನು ರೂಪಿಸಿ ದೊಡ್ಡಮಟ್ಟದ ಅನುದಾನವನ್ನು ಮೀಸಲಿಟ್ಟಿದೆ. ಇಂತಹ ಯೋಜನೆಗಳ ಪೈಕಿ ಸ್ವಾವಲಂಬಿ ಸಾರಥಿ ಯೋಜನೆಯ (Swavalambi Sarathi Yojane) ಕೂಡ ಒಂದು. ರಾಜ್ಯದ ವಿವಿಧ ನಿಗಮಗಳಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಆಹ್ವಾನಿಸಿ ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ 3 ಲಕ್ಷದವರೆಗೆ 50% ಸಬ್ಸಿಡಿಯೊಂದಿಗೆ ಸಾಲ ನೀಡಲಾಗುತ್ತಿದೆ.
ಈ ಸುದ್ದಿ ಓದಿ:- ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್.! ಇಂದಿನಿಂದ ಹೊಸ ರೂಲ್ಸ್.!
ಈ ನೆರವಿನಿಂದ ನಿರುದ್ಯೋಗಿ ಯುವ ಜನತೆ ತಮ್ಮ ವ್ಯಾಪಾರ ವ್ಯವಹಾರ ಉದ್ದೇಶದಿಂದ ಹಳದಿ ಬಣ್ಣದ ಬೋರ್ಡ್ ಹೊಂದಿರುವ ಟ್ಯಾಕ್ಸಿ ಅಥವಾ ಟ್ರಕ್ ಅಥವಾ ಮೂರು ಚಕ್ರದ ಆಟೋ ಇವುಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ತಮ್ಮ ಆರ್ಥಿಕತೆಯನ್ನು ಚೇತರಿಸಿಕೊಳ್ಳಬಹುದು.
ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ ಜೊತೆಗೆ ರಾಜ್ಯ ಮತ್ತು ದೇಶದ ಆರ್ಥಿಕತೆಗೂ ಕೊಡುಗೆ ನೀಡಿದಂತೆ ಆಗುತ್ತದೆ ಎನ್ನುವುದು ಸರ್ಕಾರದ ಉದ್ದೇಶವಾಗಿತ್ತು. ಈಗ ಯಶಸ್ವಿಯಾಗಿ ಯೋಜನೆ ಜಾರಿಗೆ ಬಂದಿದ್ದು ಅನೇಕರು ಈ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಕೇವಲ 2 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಿ.!
ಕಳೆದ ಆಗಸ್ಟ್ ನಿಂದ ರಾಜ್ಯದಲ್ಲಿ ಯೋಜನೆ ಜಾರಿಯಲ್ಲಿ ಇದೆ. ಈ ಯೋಜನೆ ಕುರಿತು ಈಗ ಮತ್ತೊಂದು ಮಹತ್ವದ ಸುದ್ದಿ ಇದೆ. ಅದೇನೆಂದರೆ, ಇದುವರೆಗೂ 3 ಲಕ್ಷ ರೂ. ಇದ್ದ ಸಾಲದ ಮೊತ್ತವನ್ನು ಹೆಚ್ಚಿಗೆ ಮಾಡಿ ಇನ್ನು ಮುಂದೆ ಗರಿಷ್ಠ 4 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು ಸರ್ಕಾರ ನಿರ್ಧಾರಕ್ಕೆ ಬಂದಿದೆ. 2023-24ನೇ ಸಾಲಿನಲ್ಲಿ ಜಾರಿಗೆ ಬಂದ ಯೋಜನೆಗಳಲ್ಲಿ.
ರಾಜ್ಯಕ್ಕೆ ಅತಿ ಉಪಯುಕ್ತವಾದ ಯೋಜನೆ ಆಗಿರುವ ಈ ಯೋಜನೆಗೆ ಕಂಡುಬಂದ ಪ್ರತಿಕ್ರಿಯೆಯನ್ನು ಗಮನಿಸಿರುವ ಸರ್ಕಾರವು ಇನ್ನಷ್ಟು ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ. ಆ ಪ್ರಕಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗದ ನಿರುದ್ಯೋಗಿ ಯುವ ಜನತೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅವರಿಗೆ ಹೊಸ ಆದೇಶದ ಪ್ರಕಾರ ಈ ಸಾಲ ಸೌಲಭ್ಯ ಸಿಗುತ್ತದೆ.
ಈ ಸುದ್ದಿ ಓದಿ:- ಗ್ರಾಮ ಪಂಚಾಯಿತಿಯಲ್ಲಿ ಭರ್ಜರಿ ನೇಮಕಾತಿ, ಬರೋಬ್ಬರಿ 25,000 ಜನ ಮಿತ್ರ ಹುದ್ದೆಗಳು.! ಆಸಕ್ತರು ಅರ್ಜಿ ಸಲ್ಲಿಸಿ.!
ಈ ಕುರಿತಾದ ಯಾವುದೇ ಗೊಂದಲಗಳಿದ್ದರೂ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೂ ಸರ್ಕಾರದ ಅಧಿಕೃತ ನೀಡಬಹುದು ಅಥವಾ ಆಯಾ ನಿಗಮಗಳ ಕಚೇರಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು.
ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಲಾಗುವ ಅರ್ಹತೆಗಳು:-
* ಕರ್ನಾಟಕದ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ನಿರುದ್ಯೋಗಿಗಳಾಗಿರುವ ರಾಜ್ಯದ ನಿವಾಸಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮತ್ತು ವಿವಿಧ ನಿಗಮಗಳ ವ್ಯಾಪ್ತಿಗೆ ಸೇರುವ ನಾಗರಿಕರು ಈ ಕಾರ್ಯಕ್ರಮದ ಪ್ರಯೋಜನಗಳನ್ನು ಪಡೆಯಲು ಅರ್ಹರು
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಮತ್ತು ಆಧಾರ್ ಲಿಂಕ್ NPCI ಮ್ಯಾಪಿಂಗ್ ಆಗಿರಬೇಕು
ಬೇಕಾಗುವ ಪ್ರಮುಖ ದಾಖಲೆಗಳು:-
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಚಾಲನಾ ಪರವಾನಗಿ
* ಜಾತಿ ಪ್ರಮಾಣ ಪತ್ರ
* ನಿವಾಸ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ
* ಪಾಸ್‌ಪೋರ್ಟ್ ಗಾತ್ರದ ಫೋಟೋ
* ಮೊಬೈಲ್ ನಂಬರ್
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.