ಹಸು ಖರೀದಿಗೆ 40,000 ರೂಪಾಯಿ ಸಬ್ಸಿಡಿ ಘೋಷಣೆ.!

 

ಕಳೆದ ಭಾನುವಾರ ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ (Bapuji bank community Bhavan) ಜಿಲ್ಲಾ ಸಹಕಾರಿಗಳು ಅಭಿನಂದನ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಸಮಾರಂಭವನ್ನು ಶಾಸಕ ಶಾಮನೂರು ಶಿವಶಂಕರಪ್ಪ (Shyamanooru Shivashankarappa) ಅವರು ಉದ್ಘಾಟಿಸಿ ಸಹಕಾರಿ ಕ್ಷೇತ್ರದ ಮೇಲೆ ಜನರು ಇಟ್ಟಿರುವ ನಿರೀಕ್ಷೆಯ ಕುರಿತು ಕೆಲ ಮಾತುಗಳನ್ನಾಡಿದರು.

ಜನಸಾಮಾನ್ಯರು ಸಹಕಾರಿ ಬ್ಯಾಂಕ್ ಮೇಲೆ ಹೆಚ್ಚು ನಂಬಿಕೆ ವಿಶ್ವಾಸ ಇಟ್ಟಿದ್ದಾರೆ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಈ ಕ್ಷೇತ್ರ ಬಹಳಷ್ಟು ಹಿಂದೆ ಉಳಿದಿದೆ. ಜನರು ಸರಿಯಾಗಿ ಈ ಕ್ಷೇತ್ರದ ಲಾಭವನ್ನು ಉಪಯೋಗಿಸಿಕೊಳ್ಳಬೇಕು, ಸಹಕಾರಿ ಬ್ಯಾಂಕ್ ಗಳ ವಹಿವಾಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾಕೆ ಇನ್ನು ಬಿಡುಗಡೆಯಾಗಿಲ್ಲ ಎನ್ನುವುದಕ್ಕೆ ಕಾರಣ ತಿಳಿಸಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರು ತಪ್ಪದೆ ಇದನ್ನು ನೋಡಿ

ಆ ನಿಟ್ಟಿನಲ್ಲಿ ಹೇಳುವುದಾದರೆ ಬಾಪೂಜಿ ಸಹಕಾರಿ ಬ್ಯಾಂಕ್ 800 ಕೋಟಿ ಠೇವಣಿ ಇದೆ ಎನ್ನುವುದು ತಿಳಿದು ಬಂದಿದೆ ಈ ನಂಬಿಕೆಯನ್ನು ಬ್ಯಾಂಕ್ ಗಳು ಉಳಿಸಿಕೊಳ್ಳಬೇಕು ಎಂದರು. ಬಳಿಕ ಸನ್ಮಾನ ಸ್ವೀಕರಿಸಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ (Dhavanagere District in charge Minister S.S Mallikarjun) ಅವರು ಬಹಳಷ್ಟು ವಿಷಯದ ಬಗ್ಗೆ ಮಾತನಾಡಿದರು.

ದಾವಣಗೆರೆಯನ್ನು ಶಿವಮೊಗ್ಗ (Shimoga Milk Union) ಹಾಲು ಒಕ್ಕೂಟದಿಂದ ಬೇರ್ಪಡಿಸಿ ದಾವಣಗೆರೆ-ಚಿತ್ರದುರ್ಗ (Dhavanagere-Chithradurga) ಪ್ರತ್ಯೇಕ ಹಾಲು ಒಕ್ಕೂಟ ರಚಿಸಿ ರೈತರಿಗೆ ಹಸು ಖರೀದಿಗೆ 40,000 ಸಬ್ಸಿಡಿ ರೂಪದ ಸಹಾಯಧನ ನೀಡಬೇಕು ಎಂದು ಚಿಂತನೆ ನಡೆಸಿದ್ದೇವೆ, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎನ್ನುವ ಸಿಹಿ ಸುದ್ದಿಯನ್ನು ರೈತರಿಗೆ ನೀಡಿದರು.

ಅಂಚೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ,10ನೇ ತರಗತಿ ಪಾಸ್ ಆಗಿದ್ರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-

ಈ ವಿಷಯದ ಕುರಿತು ಇನ್ನಷ್ಟು ವಿಚಾರ ಹಂಚಿಕೊಂಡ ಸಚಿವರು ಈ ರೀತಿ ಹಸು ಖರೀದಿಗೆ ಸಬ್ಸಿಡಿ ಇರುವುದರಿಂದ ಗ್ರಾಮೀಣ ಭಾಗದ ಬಡ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಸಬ್ಸಿಡಿಯನ್ನು ಪಡೆದು ಅವರು ಹಸು ಖರೀದಿ ಮಾಡುವುದರಿಂದ ಹಾಲಿನ ಉತ್ಪಾದನೆ ಜಾಸ್ತಿ ಆಗುತ್ತದೆ ಅದೇ ರೀತಿ ರೈತರ ಆರ್ಥಿಕತೆಯು ಕೂಡ ವೃದ್ಧಿ ಆಗುತ್ತದೆ.

ಹಾಲು ಒಕ್ಕೂಟದ ಸದಸ್ಯರು ಹಾಗೂ ಸಹಕಾರಿ ಬ್ಯಾಂಕುಗಳ ನಿರ್ದೇಶಕರುಗಳು ಜನರಿಗೆ ಅವಶ್ಯಕತೆ ಇರುವ ಸೇವೆಗಳನ್ನು ನೀಡಿದರೆ ಖಂಡಿತ ಇದು ನೆರವೇರುತ್ತದೆ. ಜನರ ಕೈಯಲ್ಲಿ ದುಡ್ಡು ಓಡಾಡುವ ರೀತಿ ಆಗುತ್ತದೆ, ಈ ಮೂಲಕ ಸರ್ಕಾರಕ್ಕೂ ಕೂಡ ಆದಾಯ ಹೆಚ್ಚಾಗುತ್ತದೆ ಎಂದರು.

ಅನ್ನಭಾಗ್ಯ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ಶಾ’ಕ್ ಈ 6 ಮಾನದಂಡಗಳನ್ನಿಟ್ಟುಕೊಂಡು ಆಹಾರ ಇಲಾಖೆ ಸರ್ವೆ ಮಾಡುತ್ತಿದೆ. ಇಂಥವರಿಗೆ ದಂಡದ ಜೊತೆಗೆ ರೇಷನ್ ಕಾರ್ಡ್ ರದ್ದು ಆಗಲಿದೆ.!

ಈ ಹಿಂದೆಯೇ ದಾವಣಗೆರೆಯನ್ನು ಶಿವಮೊಗ್ಗ ಹಾಲು ಒಕ್ಕೂಟದಿಂದ ಬೇರ್ಪಡಿಸಿ ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ ರಚಿಸಲು ಪ್ರಯತ್ನ ಮಾಡಲಾಗಿತ್ತು ಆದರೆ ಅದು ಜಾರಿಯಾಗದಂತೆ ತಡೆ ಹಿಡಿದರು, ಮತ್ತೆ ಆ ಪ್ರಯತ್ನವನ್ನು ಮಾಡುತ್ತಿದ್ದೇವೆ ಈ ಬಾರಿ ಇದು ಯಶಸ್ವಿಯಾಗಲಿದೆ ಎನ್ನುವ ಭರವಸೆಯನ್ನು ನೀಡಿದರು. ಸಹಕಾರಿ ತರಬೇತಿ ಸಂಸ್ಥೆ ನಿರ್ಮಾಣಕ್ಕೆ ಈ ಹಿಂದೆ ನಿವೇಶನ ಓದಗಿಸಿದ್ದೆವು, ಆದರೆ ಅದು ಎಲ್ಲಿಗೆ ತಲುಪಿದೆ ಎಂದು ತಿಳಿದಿಲ್ಲ.

ಇದರ ಬಗ್ಗೆ ಕೂಡ ಗಮನ ಹರಿಸಿ ನೋಡಬೇಕಿದೆ ಎಂದರು. ಸಹಕಾರಿ ಬ್ಯಾಂಕ್ ಗಳ ಪಾತ್ರ ಬಹಳ ದೊಡ್ಡದು ಆದರೆ ಅಲ್ಲಿ ಸರಿಯಾಗಿ ಕೆಲಸಗಳು ನಡೆಯಬೇಕು, ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಅವುಗಳ ಪರಿಶೀಲನೆ ನಡೆದು ಸಾಲ ಅನುಮೋದನೆ ಆಗುವಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು.

ಗೃಹಲಕ್ಷ್ಮೀ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿ ಇರುವವರಿಗೆ 2000 ಸಿಗಲ್ಲ, ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಸಹಕಾರಿ ಬ್ಯಾಂಕ್ ಗಳಲ್ಲೂ ಕೂಡ ವಹಿವಾಟುಗಳ ಗಣಕೀಕೃತವಾದರೆ (computerized) ಒಳ್ಳೆಯದು ಎನ್ನುವ ಸಲಹೆಯನ್ನು ನೀಡಿದರು. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸಹಕಾರಿ (Uththara Karanata co-operatove bank) ವಲಯವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಈಗ ಅವರು 500 ಕೋಟಿ ಲಾಭಗಳಿಸಿದ್ದಾರೆ. ಅದೇ ಮಾದರಿಯಲ್ಲಿ ದಾವಣಗೆರೆ ಬ್ಯಾಂಕ್ ಕೂಡ ಮಾಡಬೇಕು.

ಈಗ ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯಗಳನ್ನು ಕೂಡ ಒದಗಿಸಿಕೊಡಲು ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ ಅವರು ಮುಂದಾಗಿದ್ದಾರೆ ಎನ್ನುವ ವಿಷಯವನ್ನು ಕೂಡ ಹಂಚಿಕೊಂಡರು. ಇವುಗಳ ಬಗ್ಗೆ DCC ಬ್ಯಾಂಕ್ ರೈತರಿಗೆ ಮಾಹಿತಿ ನೀಡಿ ಅನುಕೂಲತೆ ಮಾಡಿಕೊಡಬೇಕು ಎಂದು ಕೂಡ ಮನವಿ ಮಾಡಿಕೊಂಡರು.

Leave a Comment

%d bloggers like this: