ಈ ಫಲನುಭವಿಗಳ ರೇಷನ್ ಕಾರ್ಡ್ ರದ್ದು ಇಂಥವರಿಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ ದುಡ್ಡು ಇಲ್ಲ ಮಾನದಂಡ ಮೀರಿದವರು ದಂಡ ಕೂಡ ಕಟ್ಟಬೇಕು.! ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ.!

 

ಕಳೆದ ವಾರ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and Civil supply Minister K.H Muniyappa) ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿತರಣೆ (ration card distribution) ಕಾರ್ಯಕ್ರಮಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು.

ಹಾಗೆಯೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕರಿಸುವುದು ಮತ್ತು ತಿದ್ದುಪಡಿ ಕಾರ್ಯಕ್ರಮ ಚಾಲನೆ ನೀಡಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಈ ಸಮಯದಲ್ಲಿ ಅವರು ತಿಳಿಸಿದ ಮತ್ತೊಂದು ಮುಖ್ಯವಾದ ಅಂಶ ಏನು ಎಂದರೆ ಯಾರೆಲ್ಲಾ ಹೋಸದಾಗಿ BPL ರೇಷನ್ ಕಾರ್ಡ್ ಬಗ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಅವರು ನಾಲ್ಕು ಚಕ್ರದ ಸ್ವಂತ ಕಾರು ಅಂದರೆ ವೈಟ್ ಬೋರ್ಡ್ ಕಾರ್ (white bord car BPL Card cancel) ಹೊಂದಿದ್ದರೆ ಅವರಿಗೆ BPL ಕಾರ್ಡ್ ಸಿಗುವುದಿಲ್ಲ ಅಂತವರ ಅರ್ಜಿ ತಿರಸ್ಕೃತಗೊಳ್ಳುತ್ತವೆ.

ಹಸು ಖರೀದಿಗೆ 40,000 ರೂಪಾಯಿ ಸಬ್ಸಿಡಿ ಘೋಷಣೆ.!

ಆದರೆ ಉದ್ಯೋಗದ ಕಾರಣಕ್ಕಾಗಿ ಎಲ್ಲೋ ಬೋರ್ಡ್ ಕಾರು (yellow bord car) ಹೊಂದಿರುವವರಿಗೆ ಈ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದ್ದರು. ಇದು ಸರ್ಕಾರದ ಹೊಸ ಆದೇಶವಲ್ಲ ಈ ಹಿಂದೆಯೇ 2016ರ ರೇಷನ್ ಕಾರ್ಡ್ ಮಾನದಂಡಗಳಲ್ಲಿ ಈ ವಿಷಯ ಇತ್ತು. ಆದರೆ ಈಗಾಗಲೇ ರೇಷನ್ ಕಾರ್ಡ್ ಪಡೆದಿದ್ದವರ ಸರ್ವೆ ಕಾರ್ಯ ಆರಂಭವಾಗಿರಲಿಲ್ಲ ಇದರ ಕುರಿತು ಈಗ ಸರ್ಕಾರ ತೀರ್ಮಾನಕ್ಕೆ ಬಂದಿದೆ.

ಸರ್ಕಾರಕ್ಕೆ ಮಾಹಿತಿ ಮರೆಮಾಚಿ ಅಥವಾ ನಕಲಿ ದಾಖಲೆ ಕೊಟ್ಟು ಅನೇಕರು BPL ರೇಷನ್ ಕಾರ್ಡ್ ಪಡೆದಿರುವುದು ಇಲಾಖೆ ಗಮನಕ್ಕೆ ಬಂದಿದೆ ಇದರಿಂದ ನಿಜವಾಗಿಯೂ ಬಡವರಿಗೆ ಸಲ್ಲಬೇಕಾದ ಸವಲತ್ತುಗಳು ಉಳ್ಳವರ ಪಾಲಾಗುತ್ತಿದೆ. ಇದೊಂದು ವಂ’ಚ’ನೆ ಎಂದು ಪರಿಗಣಿಸಿರುವ ಇಲಾಖೆಯು ಸರ್ವೆ ಕಾರ್ಯ (Survey) ಆರಂಭಿಸಿದೆ. ಸದ್ಯಕ್ಕೀಗ 4 ಚಕ್ರ ವಾಹನಗಳನ್ನು ಹೊಂದಿರುವವರ ಮಾಹಿತಿ ಕಲೆ ಹಾಕುತ್ತಿದ್ದು ಇದಕ್ಕೆ RTO ಸಂಸ್ಥೆ ನೆರವಾಗಿದೆ.

ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾಕೆ ಇನ್ನು ಬಿಡುಗಡೆಯಾಗಿಲ್ಲ ಎನ್ನುವುದಕ್ಕೆ ಕಾರಣ ತಿಳಿಸಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರು ತಪ್ಪದೆ ಇದನ್ನು ನೋಡಿ

RTO ಕಚೇರಿಯಿಂದ ದಾಖಲೆಗಳನ್ನು ತರಿಸಿಕೊಂಡು ತಾಳೆ ಹಾಕಿ ನೋಡಿ ಯಾರೆಲ್ಲ ವೈಟ್ ಬೋರ್ಡ್ ಕಾರ್ ಹೊಂದಿದ್ದಾರೆ ಅವರು BPL ಕಾರ್ಡ್ ಹೊಂದಿದ್ದರೆ ಅದನ್ನು ರದ್ದು ಪಡಿಸಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದಲೂ (Incone tax payers BPL card cancel) ಕೂಡ ಮಾಹಿತಿ ಕಲೆಹಾಕಿ ಯಾರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ.

ಆ ಕುಟುಂಬಗಳು ಬಡತನಕ್ಕೆ ರೇಖೆಗಿಂತ ಕೆಳಗೆ ಇರುವ ಕುಟುಂಬಗಳು ಪಡೆಯುವ ರೇಷನ್ ಕಾರ್ಡ್ ಗಳನ್ನು ಪಡೆದಿದ್ದರೆ ಅದನ್ನು ಕೂಡ ಕಸಿದುಕೊಳ್ಳಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎನ್ನುವ ಮಾಹಿತಿಯನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂಚೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ,10ನೇ ತರಗತಿ ಪಾಸ್ ಆಗಿದ್ರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-

ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳು ಜಾರಿಯಾದ ಮೇಲೆ ರೇಷನ್ ಕಾರ್ಡ್ ಗೆ ವಿಪರೀತವಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೇಷನ್ ಕಾರ್ಡ್ ಪಡೆಯಬೇಕಾದವರು, ತಿದ್ದುಪಡಿ ಮಾಡಿಸಬೇಕಾದವರು ಅನುಮತಿಗಾಗಿ ಕಾಯುತ್ತಿದ್ದಾರೆ ಇದೇ ಸಂದರ್ಭದಲ್ಲಿ ರೇಷನ್ ಕಾರ್ಡ್ ಸರ್ವೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತ ಸಮಯ ಎಂದು ಆಹಾರ ಇಲಾಖೆ ನಿರ್ಧರಿಸಿ ಈ ಕ್ರಮ ಕೈಗೊಳ್ಳುತ್ತಿದೆ.

ಹಾಗೆಯೇ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗದ ಸಮಸ್ಯೆಗಳಿಂದಾಗಿ ಜುಲೈ ತಿಂಗಳಿನಲ್ಲಿ ಅನ್ನ ಭಾಗ್ಯ ಯೋಜನೆಯ ಹಣದಿಂದ (Annabhagya Scheme amount) ವಂಚಿತರಾದವರು ಈ ಸಮಸ್ಯೆ ಬಗೆಹರಿಸಿಕೊಂಡ ನಂತರ ಅವರ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎನ್ನುವ ಭರವಸೆಯನ್ನು ಕೂಡ ಇಲಾಖೆ ನೀಡಿದೆ.

Leave a Comment

%d bloggers like this: